ಪರಿಚಯ
ಕೈಗಾರಿಕೆಗಳ
ಸ್ಥಾಪನೆಗೆ
ಕರ್ನಾಟಕವು
ಒಂದು
ಪ್ರಶಸ್ಥವಾದ
ಸ್ಥಳ
ಎಂದು
ಹೆಸರು
ಪಡೆದಿದೆ.
ರಾಜ್ಯವು
ಹಲವಾರು
ವರ್ಷಗಳಿಂದ
ಬದಲಾದ
ಅವಶ್ಯಕತೆಗಳಿಗೆ
ತಕ್ಕಂತೆ
ಪ್ರಗತಿಪರ
ದೃಷ್ಟಿಕೋನವನ್ನಿಟ್ಟುಕೊಂಡು
ದೇಶದ
ಆರ್ಥಿಕ
ಹಾಗೂ
ಕೈಗಾರಿಕಾ
ಬೆಳವಣಿಗೆಗೆ
ಒತ್ತು
ನೀಡುವತ್ತ
ಗಮನಹರಿಸಿದೆ.
ಬೃಹತ್
ಸಾರ್ವಜನಿಕ
ಉದ್ದಿಮೆಗಳು/ಖಾಸಗಿ
ಸ್ವಾಮ್ಯದ
ಕೈಗಾರಿಕೆಗಳು
ಹಾಗೂ
ಬಹಳಷ್ಟು
ಅತಿ
ಸಣ್ಣ
ಹಾಗೂ
ಸಣ್ಣ
ಕೈಗಾರಿಕೆಗಳನ್ನು
ರಾಜ್ಯವು
ಹೊಂದಿದೆ.
ಇತ್ತೀಚಿನ
ವರ್ಷಗಳಲ್ಲಿ
ಕರ್ನಾಟಕವು
ಮಾಹಿತಿ
ತಂತ್ರಜ್ಞಾನ,
ಜೈವಿಕ
ತಂತ್ರಜ್ಞಾನ
ಹಾಗೂ
ಇತರ
ಮೌಲ್ಯಾಧಾರಿತ
ಜ್ಞಾನವುಳ್ಳ
ಕೈಗಾರಿಕಾ
ವಲಯಗಳನ್ನು
ಸ್ಥಾಪಿಸಿದ್ದು
ಇದರಿಂದಾಗಿ
ಮಾಹಿತಿ
ತಂತ್ರಜ್ಞಾನ,
ಜೈವಿಕ
ತಂತ್ರಜ್ಞಾನ
ಮುಂತಾದ
ವಲಯಗಳಲ್ಲಿ
ಸಂಶೋಧನೆ
ಅಭಿವೃದ್ಧಿ
ಸೌಲಭ್ಯವನ್ನು
ಹೊಂದುವಲ್ಲಿ
ಸಮರ್ಥವಾಗಿದೆ.
ಕರ್ನಾಟಕ
ರಾಜ್ಯವು
ವಂಶ
ಪಾರಂಪರ್ಯವಾಗಿ
ನಡೆಸಿಕೊಂಡು
ಬಂದಿರುವ
ಹಲವಾರು ಗುಡಿ
ಕೈಗಾರಿಕೆಗಳನ್ನು,
ಕುಶಲ
ಕೈಗಾರಿಕೆಗಳನ್ನು
ಹಾಗೂ
ಅತಿ
ಸಣ್ಣ
ಉದ್ಯಮಗಳಾದಂತಹ
ಕರಕುಶಲ
ಉದ್ದಿಮೆ,
ಖಾದಿ
ಮತ್ತು
ಗ್ರಾಮೋದ್ಯೋಗ
ಕೈಗಾರಿಕೆಗಳನ್ನು
ಹೊಂದಿದೆ.
ಸರ್ಕಾರದ ಆದೇಶಗಳು, ಕಡತಗಳು, ಪತ್ರಗಳು