ಕರ್ನಾಟಕದಲ್ಲಿ ಕಾನೂನು ಆಯೋಗದ ರಚನೆಯ ಹಿನ್ನಲೆ.

 

 

ಕೇಂದ್ರ ಕಾನೂನು ಆಯೋಗದ ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಅಲ್ಲಿನ ಕಾನೂನಿಗೆ ಅನುಗುಣವಾಗಿ, ಕಾರ್ಯ ನಿರ್ವಹಿಸಲು ರಾಜ್ಯ ಕಾನೂನು ಆಯೋಗಗಳ ಸ್ಥಾಪನೆ ಬಗ್ಗೆ ಪ್ರೋತ್ಸಾಹ ನೀಡುವತ್ತ ಹೆಚ್ಚಿನ ಆಸಕ್ತಿಯನ್ನು ನ್ಯಾಯಮೂರ್ತಿ .ಆರ್.ಲಕ್ಷ್ಮಣ್ ರವರು ಹೊಂದಿದ್ದರು. ಸಮಯಕ್ಕೆ ಕೆಲವು ರಾಜ್ಯಗಳಲ್ಲಿ ಮಾತ್ರ ಕಾನೂನು ಆಯೋಗಗಳನ್ನು ಸ್ಥಾಪಿಸಲಾಗಿತ್ತುನ್ಯಾಯಮೂರ್ತಿ .ಆರ್.ಲಕ್ಷ್ಮಣ್ ರವರು ಇತರೆ, ಅಂದರೆ ಕಾನೂನು ಆಯೋಗಗಳನ್ನು ಸ್ಥಾಪಿಸದೆ ಇದ್ದಂತಹ, ರಾಜ್ಯಗಳಿಗೆ ಪತ್ರಗಳನ್ನು ಬರೆದು ಕಾನೂನು ಆಯೋಗಗಳನ್ನು ಸ್ಥಾಪಿಸುವಂತೆ ಕೋರಿದ್ದರು.  2008ನೇ ಇಸವಿಯಲ್ಲಿ ನ್ಯಾಯಮೂರ್ತಿ .ಆರ್.ಲಕ್ಷ್ಮಣ್ ರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ವಿಧಾನ ಸಭೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿ ಕಾನೂನು ಆಯೋಗ ಸ್ಥಾಪನೆಯ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಯಿರುವ ಕರ್ನಾಟಕ ರಾಜ್ಯದಲ್ಲಿ ಕಾನೂನು ಆಯೋಗದ ಅವಶ್ಯಕತೆಯ ಬಗ್ಗೆ ಅರಿವು ಮಾಡಿದ್ದರು ಎಂದು ತಿಳಿದು ಬಂದಿದೆಇದರಿಂದ ಪ್ರಭಾವಿತರಾದ ವಿಧಾನ ಸಭೆಯ ಗೌರವಾನ್ವಿತ ಅಧ್ಯಕ್ಷರು ದಿನಾಂಕ 06.10.2008 ರಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪೂರ್ಣಾವಧಿಯ ಕಾನೂನು ಆಯೋಗವನ್ನು ರಾಜ್ಯದಲ್ಲಿ ಸ್ಥಾಪಿಸುವ ಬಗ್ಗೆ ಕೋರಿರುತ್ತಾರೆಸದರಿ ಆಯೋಗದ ಮುಖ್ಯಸ್ಥರಾಗಿ ಕರ್ನಾಟಕ ಕಾನೂನುಗಳ ಹಾಗೂ ಸಮಸ್ಯೆಗಳ ಅರಿವಿರುವಂತಹ, ಕಾನೂನು ಸುಧಾರಣೆ ಬಗ್ಗೆ ಅನುಭವವಿರುವಂತಹ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಥವಾ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಇರಬೇಕು ಎಂದು ತಿಳಿಸಿರುತ್ತಾರೆಮಾನ್ಯ ವಿಧಾನ ಸಭೆಯ ಅಧ್ಯಕ್ಷರ ಅನಿಸಿಕೆಗಳಿಗೆ ವಿಧಾನ ಪರಿಷತ್ತಿನ ಅಧ್ಯಕ್ಷರು ಕೂಡ ಸಹಮತ ವ್ಯಕ್ತಪಡಿಸಿರುತ್ತಾರೆ. ಕಾನೂನು ಆಯೋಗದ ಅವಶ್ಯಕತೆಯನ್ನು ರಾಜ್ಯ ಸರ್ಕಾರವು ಪರಿಗಣಿಸಿ ಕರ್ನಾಟಕದಲ್ಲಿ ಕಾನೂನು ಆಯೋಗವನ್ನು ರಚಿಸಲು ನಂತರ ನಿರ್ಣಯ ಕೈಗೊಂಡಿರುತ್ತದೆ.

ಕರ್ನಾಟಕ ಕಾನೂನು ಆಯೋಗದ ಸ್ಥಾಪನೆ.

 

ಆನಂತರ ಸರ್ಕಾರವು ತನ್ನ ನಿಲುವಿಗೆ ಅನುಗುಣವಾಗಿ ಆದೇಶ ಸಂಖ್ಯೆ: ಲಾ 42 ಹೆಚ್ಆರ್ಸಿ 2008 ದಿನಾಂಕ 12.01.2009 ಹೊರಡಿಸಿ ಕಾನೂನು ಆಯೋಗವನ್ನು ರಚಿಸಿರುತ್ತದೆ. ಆಯೋಗದಲ್ಲಿ ಪೂರ್ಣಾವಧಿಯ ಒಬ್ಬರು ಅಧ್ಯಕ್ಷರು, ಪೂರ್ಣಾವಧಿಯ ಒಬ್ಬರು ಸದಸ್ಯರು, ಪೂರ್ಣಾವಧಿಯ ಒಬ್ಬರು ಸದಸ್ಯ ಕಾರ್ಯದರ್ಶಿಗಳು ಹಾಗೂ ಐದು ಜನ ಪದನಿಮಿತ್ತ (Ex-Officio Members) ಗೌರವ ಸದಸ್ಯರುಗಳು ಇರುತ್ತಾರೆ

ಸದರಿ ಆದೇಶದ ಕಲಂ() ಗೆ ಅನುಗುಣವಾಗಿ ರಾಜ್ಯ ಸರ್ಕಾರವು ಕರ್ನಾಟಕ ಕಾನೂನುಗಳ ಹಾಗೂ ಸಮಸ್ಯೆಗಳ ಅರಿವುಳ್ಳಂತಹ ಕಾನೂನಿನ ಉತ್ತಮ ಜ್ಞಾನವುಳ್ಳಂತಹ ಕಾನೂನು ಸುಧಾರಣೆಗಳ ಬಗ್ಗೆ ಆಸಕ್ತಿವುಳ್ಳಂತಹ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನು ಅಥವಾ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು.

 

ಕಲಂ(ಬಿ) ಪ್ರಕಾರ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಸದಸ್ಯರನ್ನಾಗಿ ರಾಜ್ಯ ಸರ್ಕಾರವು ನೇಮಿಸಬೇಕು

 

ನಿವೃತ್ತ ಜಿಲ್ಲಾ ನ್ಯಾಯಾಧೀಶರು ಒಬ್ಬರನ್ನು ಸದಸ್ಯ ಕಾರ್ಯದರ್ಶಿಯವರನ್ನಾಗಿ ಕಲಂ(ಸಿ) ಪ್ರಕಾರ ನೇಮಿಸಬೇಕು

 

ಕಲಂ (ಡಿ) ಪ್ರಕಾರ ಕೆಳಗಿನವರು ಕಾನೂನು ಆಯೋಗದ ಪದನಿಮಿತ್ತ ಸದಸ್ಯರಾಗಿರುತ್ತಾರೆ;

 

1.      ಅಡ್ವೊಕೇಟ್ ಜನರಲ್.

2.     ಕಾನೂನು ಕಾರ್ಯದರ್ಶಿ, ಕರ್ನಾಟಕ ಸರ್ಕಾರ.

3.     ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ/ ಪರಿಷತ್.

4.     ಬೆಂಗಳೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಡೀನ್.

5.     ಕರ್ನಾಟಕ ಸರ್ಕಾರ ಸಂಸಧೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ.

 

ಅಂದಿನ ಗೌರವಾನ್ವಿತ ಅಧ್ಯಕ್ಷರ ಕೋರಿಕೆಯ ಮೇರೆಗೆ ಸರ್ಕಾರವು ಆದೇಶ ಸಂಖ್ಯೆ : ಲಾ 03 ಕೆಎಲ್ಎಂ 2011, ಬೆಂಗಳೂರು ದಿನಾಂಕ 13.05.2011, ಹೊರಡಿಸಿ ಕರ್ನಾಟಕ ಕಾನೂನು ಹಾಗೂ ಸಂಸಧೀಯ ವ್ಯವಹಾರಗಳ ಸುಧಾರಣಾ ಸಂಸ್ಥೆಯ (KILPAR), ನಿರ್ಧೇಶಕರನ್ನು 6ನೇ ಪದನಿಮಿತ್ತ ಸದಸ್ಯರನ್ನಾಗಿ ಆಯೋಗಕ್ಕೆ ಸೇರ್ಪಡೆ ಮಾಡಲಾಗಿದೆ.

ಆಯೋಗದ ಹೆಸರು ಬದಲಾವಣೆ.

 

ಮಾನ್ಯ ಅಧ್ಯಕ್ಷರು ಆಯೋಗದ ಹೆಸರನ್ನುಕರ್ನಾಟಕ ರಾಜ್ಯ ಕಾನೂನು ಆಯೋಗ ಬದಲಾಗಿಕರ್ನಾಟಕ ಕಾನೂನು ಆಯೋಗಎಂದು ಬದಲಾಯಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿರುತ್ತಾರೆ. ಮಾನ್ಯ ಅಧ್ಯಕ್ಷರ ಇಚ್ಛೆಯನ್ನು ದಿನಾಂಕ 16.02.2009 ಪತ್ರದ ಮುಖಾಂತರ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಕಾರ್ಯದರ್ಶಿಯವರಿಗೆ ತಿಳಿಸಲಾಗಿ ಸರ್ಕಾರವು ಸಂಖ್ಯೆ: ಲಾ 19 ಕೆಎಲ್ಎಂ 2009 ದಿನಾಂಕ 03.03.2009 ರಂದು ಒಂದು ಅಧಿಸೂಚನೆಯನ್ನು ಹೊರಡಿಸಿಕರ್ನಾಟಕ ರಾಜ್ಯ ಕಾನೂನು ಆಯೋಗಎಂದು ಇದ್ದ ಹೆಸರನ್ನುಕರ್ನಾಟಕ ಕಾನೂನು ಆಯೋಗಎಂದು ಬದಲಾಯಿಸಿದೆ.