SharePoint
Last modified at 24/02/2020 10:29 by System Account

​​​​​​​​​​​​​​

ಕರ್ನಾಟಕದ ಕಾನೂನು ಆಯೋಗದ ಅಧಿಕೃತ ಜಾಲಾತಾಣಾಕ್ಕೆ ಸುಸ್ವಾಗತ

​​​  
imeg74.jpg

ಭಾರತ ಕಾನೂನು ಆಯೋಗಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಗುರುತಿಸಲ್ಪಡುವ ಇತಿಹಾಸವಿದೆ, ಮೊದಲನೆ ಕಾನೂನು ಆಯೋಗವನ್ನು 1833ನೇ ಛಾರ್ಟರ್ ಕಾನೂನು ಕೆಳಗೆ 1834 ನೇ ಇಸವಿಯಲ್ಲಿ ರಚಿಸಲ್ಪಟಿತ್ತು ಕಾನೂನು ಜ್ಞಾನದ ಅತ್ಯಂತ ಮೇಧಾವಿಗಳಲ್ಲಿ ಒಬ್ಬರಾದಂತ ಲಾರ್ಡ್ ಮೆಕಾಲೆ ಅವರು ಮೊದಲನೇ ಕಾನೂನು ಆಯೋಗದ ಅಧ್ಯಕ್ಷರಾಗಿದ್ದರು ಸದರಿ ಕಾನೂನು ಆಯೋಗವು ದಂಡ ಸಂಹಿತೆ ಹಾಗೂ ದಂಡ ಪ್ರಕ್ರಿಯಾ ಸಂಹಿತೆಗಳನ್ನು ಕ್ರೋಡಿಕರಿಸಲು ಶಿಫಾರಸ್ಸು ಮಾಡಿತ್ತು.  1853, 1861, 1879 ರಲ್ಲಿ ರಚಿಸಲಾದ ಕಾನೂನು ಆಯೋಗಗಳು ಅನೇಕ ಕಾನೂನುಗಳ ರಚನೆಗೆ ಕಾರಣೀಕರ್ತರಾಗಿವೆ. ಇವುಗಳಲ್ಲಿ ಪ್ರಮುಖವಾದವು ಸಿವಿಲ್ ಪ್ರಕ್ರಿಯಾ ಸಂಹಿತೆ, ಭಾರತ ಒಪ್ಪಂದ ಅಧಿನಿಯಮ, ಭಾರತ ಸಾಕ್ಷ್ಯ ಅಧಿನಿಯಮ ಹಾಗೂ ಆಸ್ತಿ ವರ್ಗಾವಣೆ ಅಧಿನಿಯಮ.

ಬ್ರಿಟಿಷ್ ಆಡಳಿತ ಕೊನೆಗೊಂಡು 1947ನೇ ಇಸವಿಯಲ್ಲಿ ಭಾರತವು ಸ್ವಾತಂತ್ರ್ಯ ಹೊಂದಿದ ನಂತರ ದೇಶದ ಆಡಳಿತ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಶದ ಶ್ರೇಷ್ಠ ಮೇಧಾವಿಗಳನ್ನು ಹೊಂದಿದ ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲಾಯಿತು. ಅಂತಹ ಮೇಧಾವಿಗಳಿದ್ದಂತ ಸಭೆಯು ನಮಗೆ ಹಾಲಿ ಸಂವಿಧಾನವನ್ನು ಕೊಟ್ಟಿದ್ದು ಅದು 26ನೇ ಜನವರಿ 1950 ನೇ ದಿನಾಂಕದಿಂದ ಚಾಲ್ತಿಯಲ್ಲಿರುತ್ತದೆ.

1955ನೇ ಇಸವಿಯಲ್ಲಿ ಸ್ವಾತಂತ್ರ್ಯೊತ್ತರ ಪ್ರಪ್ರಥಮ ಕಾನೂನು ಆಯೋಗವನ್ನು ರಚಿಸಲಾಯಿತು ಅಂದಿನ ಭಾರತದ ಅಟರ್ನಿ ಜನರಲ್ ಹಾಗೂ ಮೇಧಾವಿ ವಕೀಲರೂ ಆಗಿದ್ದಂತಹ ಮಾನ್ಯ ಎಂ.ಸಿ.ಸೆಟಲ್ವಾಡ್ ಅವರು ಮೊದಲನೇ ಭಾರತ ಕಾನೂನು ಆಯೋಗದ ಅಧ್ಯಕ್ಷರಾಗಿದ್ದರು ಅಂದಿನಿಂದ ಕಾಲ ಕಾಲಕ್ಕೆ ಕಾನೂನು ಆಯೋಗಗಳನ್ನು ರಚಿಸಲಾಗುತ್ತಿದ್ದು, ಬಹುಪಾಲು ಕಾನೂನು ಆಯೋಗದ ಅಧ್ಯಕ್ಷರು ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾಗಿರುತ್ತಾರೆ.  01.09.2006 ರಿಂದ ಭಾರತ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ|| .ಆರ್.ಲಕ್ಷ್ಮಣನ್ ಅವರ ಅಧ್ಯಕ್ಷತೆಯಲ್ಲಿ 18ನೇ ಭಾರತ ಕಾನೂನು ಆಯೋಗವನ್ನು ರಚಿಸಲಾಯಿತು.

​​
webs counters
Total Count
Karnataka Law Commission

©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy
Hyperlinking Policy ¦ Privacy Policy