ಉದ್ದೇಶಗಳು
1. ಸಂಗೊಳ್ಳಿ ರಾಯಣ್ಣನ ಜೀವನ ವಿವರ, ಇತಿಹಾಸ, ಹೋರಾಟ ಮತ್ತು ಅವನ ಬಗ್ಗೆ ಬಂದಿರುವ ಜನಪದ ಸಾಹಿತ್ಯದ ಸಂಗ್ರಹಣೆ, ಅಧ್ಯಯನ, ಸಂಶೋಧನೆ ಹಾಗೂ ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳನ್ನು ಕೈಗೊಳ್ಳುವುದು.
2. ಸಂಗೊಳ್ಳಿ ರಾಯಣ್ಣ ಹಾಗೂ ಅವನ ಸಮಕಾಲೀನ ಇತಿಹಾಸದ ಪುನರಾವಲೋಕನ ಹಾಗೂ ಪುನಾರಚನೆ.
3. ಸಂಗೊಳ್ಳಿ ರಾಯಣ್ಣನ ಸಮಕಾಲೀನ ಸ್ವಾತಂತ್ರ್ಯ ಹೋರಾಟಗಾರರ (ರಾಜ್ಯ - ರಾಷ್ಟ್ರಮಟ್ಟದಲ್ಲಿ) ಕುರಿತಂತೆ ತೌಲನಿಕ ಅಧ್ಯಯನ ಮತ್ತು ಪ್ರಕಟಣೆ.
4. ಸಂಗೊಳ್ಳಿ ರಾಯಣ್ಣನ ಬಗೆಗಿನ ಮೌಖಿಕ ಪರಂಪರೆಯ ಸಂಪೂರ್ಣ ಕ್ಷೇತ್ರ ಕಾರ್ಯ ಹಾಗೂ ದಾಖಲೀಕರಣ.
5. ಸಂಗೊಳ್ಳಿ ರಾಯಣ್ಣನ ಆದರ್ಶ, ಸ್ವಾತಂತ್ರ್ಯ ಹೋರಾಟ, ಸಾಹಸ ಹಾಗೂ ನಾಡ ಪ್ರೇಮದ ಕುರಿತಂತೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಾಟು ಮಾಡುವುದು ಹಾಗೂ ಇಂಥ ಸಮಾನ ಉದ್ದೇಶ ಹೊಂದಿರುವ ಸಂಸ್ಥೆಗಳೊಂದಿಗೆ ಸಹಕರಿಸುವುದು.
6. ಸಂಗೊಳ್ಳಿ ರಾಯಣ್ಣನ ಬಗ್ಗೆ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಮತ್ತು ವಾಚನಾಲಯ ಸ್ಥಾಪನೆ.
7. ಶಾಲಾ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಲ್ಲಿ ನಾಡು, ನುಡಿ, ಅಭಿಮಾನ, ಆಸಕ್ತಿ ಮೂಡಿಸುವ ಹಾಗೂ ಸಂಸ್ಕøತಿ ಹಾಗೂ ಸಾಹಸ ಕಲೆಗಳ ಬಗ್ಗೆ ಜಾಗೃತಿ ಉಂಟುಮಾಡುವ ಬಗ್ಗೆ ಕ್ರಿಯಾ ಶಿಬಿರಗಳ, ರಸಗ್ರಹಣ ಶಿಬಿರಗಳ ಏರ್ಪಾಟು ಹಾಗೂ ಅವರಿಗೆ ಚರ್ಚಾಸ್ಪರ್ಧೆ, ಲೇಖನ ಸ್ಪರ್ಧೆ, ಚಿತ್ರಕಲೆ ಹಾಗೂ ನಾಟಕ ಮುಂತಾದ ಶಿಬಿರಗಳನ್ನು ಏರ್ಪಡಿಸುವುದು.
8. ಸಂಗೊಳ್ಳಿ ರಾಯಣ್ಣನ ಬಗ್ಗೆ ಮತ್ತು ಐತಿಹಾಸಿಕ, ಜಾನಪದ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ವಿಶೇಷ ಅಧ್ಯಯನ ಮಾಡುವ ಯುವ ಸಂಶೋಧನಾರ್ಥಿಗಳಿಗೆ ಫೆಲೋಷಿಪ್ ನೀಡುವುದು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಾಧನೆಯ ಸ್ಮರಣಾರ್ಥ 40 ವರ್ಷದೊಳಿಗಿನ ಯುವ ಸಾಹಸಿಗಳಿಗೆ ಹಾಗೂ ಅಂಥ ಸಂಸ್ಥೆಗಳಿಗೆ ಪ್ರಶಸ್ತಿ ಪುರಸ್ಕಾರ ನೀಡುವುದು.
9. ಸಂಗೊಳ್ಳಿ ರಾಯಣ್ಣನ ಜೀವನ, ಸಾಧನೆ ಆಶಯಗಳನ್ನು ಕುರಿತಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಚಾರ ಸಂಕಿರಣ ಹಾಗೂ ಬಹು ಮಾಧ್ಯಮಗಳಲ್ಲಿ ಕಾರ್ಯಕ್ರಮಗಳನ್ನು ಸಿದ್ದಪಡಿಸಿ ಪ್ರದರ್ಶಿಸುವುದು.
10.ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳವಾದ ಸಂಗೊಳ್ಳಿಯನ್ನು ಹಾಗೂ ನಂದಗಡದಲ್ಲಿ ಗಲ್ಲಿಗೇರಿಸಿದ ಸ್ಥಳ ಮತ್ತು ಸಮಾಧಿ ಸ್ಥಳಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಆಕರ್ಷಿಸುವ ಸಲುವಾಗಿ ಈ ಮೂರು ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ ವಾರ್ಷಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು.