Last modified at 26/10/2018 12:19 by System Account

​​​ಡೆಕ್ಕನಿ ತಳಿ

Deccani.jpg

  • ಇದು ಒಂದು ದ್ವಿಉಪಯೋಗಿ ತಳಿ (ಮಾಂಸ ಮತ್ತು ಉಣ್ಣೆ) ಇವು ಬೆಳಗಾಂ, ಬಿಜಾಪುರ, ಧಾರವಾಡ, ಬೀದರ್, ಗುಲ್ಬರ್ಗಾ, ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
  • ಈ ತಳಿಯು ಹೆಚ್ಚಾಗಿ ದಕ್ಷಿಣ ಪ್ರಸ್ಥಭೂಮಿಯಲ್ಲಿ ಸಾಕಲ್ಪಡುವುದರಿಂದ ಡೆಕ್ಕನಿ ಎಂದು ಹೆಸರಿಡಲಾಗಿದೆ.
  • ಈ ಕುರಿಗಳು ಕಪ್ಪು ಬಣ್ಣದಿದ್ದು ಅಲ್ಲಲ್ಲಿ ಬಿಳಿಮಚ್ಚೆಗಳಿಂದ ಮತ್ತು ಕಂದು ಬಣ್ಣಗಳಿಂದ ಕೂಡಿರುತ್ತದೆ.
  • ಇದರ ಉಣ್ಣೆ ಕಪ್ಪಾಗಿದ್ದು ಒರಟಾದ ಕಂಬಳಿ, ಹಾಸುಗಂಬಳಿ ​ಮಾಡುವುದಕ್ಕೆ ಸೀಮಿತವಾಗಿದೆ. ವರ್ಷಕ್ಕೆ ಸುಮಾರು 500-700 ಗ್ರಾಂ ಉಣ್ಣೆ ಕೊಡುತ್ತದೆ.
  • ಈ ತಳಿಗಳು ಮಧ್ಯಮ ಗಾತ್ರದ ತಳಿಗಳಾಗಿದ್ದು, ಕಿವಿಗಳು ಸ್ವಲ್ಪ ಉದ್ದವಾಗಿದ್ದು ನೇತಾಡುತ್ತಿರುತ್ತದೆ. ಬಾಲ ಚಿಕ್ಕದ್ದು, ಹೆಣ್ಣುಗಳಲ್ಲಿ ಕೊಂಬುಗಳಿರುವುದಿಲ್ಲ.
  • ವಯಸ್ಕ ಟಗರಿನ ತೂಕ 40 ಕಿ.ಗ್ರಾಂ ಹಾಗೂ ಹೆಣ್ಣು ಕುರಿಯ ತೂಕ ಸುಮಾರು 30.ಕಿ.ಗ್ರಾಂ ಇರುತ್ತದೆ.
  • ಡೆಕ್ಕನಿಯ ಪ್ರಭೇಧದ ಯಳಗ ಕುರಿಗಳು ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಸಾಕಲ್ಪಡುತ್ತವೆ.
  • ಕಡು ಬಿಳಿಬಣ್ಣವಿದ್ದು ಟಗರುಗಳು 50 ಕೆ.ಜಿ ಮತ್ತು ಹೆಣ್ಣು ಕುರಿಗಳು 35 ಕೆ.ಜಿ ತೂಗುತ್ತದೆ. ಕಿವಿಗಳು ಮಧ್ಯಮ ಗಾತ್ರವಿದ್ದು ಇಳಿಬಿಟ್ಟಿರುತ್ತದೆ.
  • (ಕಿವಿ ಮೊಲೆಗಳಿರುವುದಿಲ್ಲ (wattles) ಮಾಂಸದ ಇಳುವರಿ ಪ್ರಮಾಣ 45-47% ತುಪ್ಪಟ ಬಿಳಿಬಣ್ಣವಿದ್ದು ಗಡುಸಾಗಿರುತ್ತದೆ. ಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ತುಪ್ಪಟ ಇರುವುದಿಲ್ಲ. (ತಳಿಯ ಸ್ಥಾನಮಾನ ಇನ್ನೂ ದೊರಕಿಲ್ಲ).


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top