Last modified at 26/10/2018 12:17 by System Account

​​​​

ಬಂಡೂ​ರು ತಳಿ

bandur.jpg

  • ಇವು ಮಂಡ್ಯ, ಮೈಸೂರು ಚಾಮರಾಜನಗರ, ಬೆಂಗಳೂರು, ಕೋಲಾರ, ತುಮಕೂರು ಜಿಲ್ಲೆಯ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
  • ಈ ತಳಿಯ ಮೂಲ ಸ್ಥಳ ಮಂಡ್ಯ ಜಿಲ್ಲೆಯ ಮಳವಳ್ಳಿ, ತಾಲ್ಲೂಕಿನ ಬಂಡೂರು ಎಂಬ ಗ್ರಾಮವಾಗಿದ್ದು ಈ ತಳಿಗೆ "ಬಂಡೂರು ತಳಿ" ಎಂತಲು ಕರೆಯುತ್ತಾರೆ.
  • ಈ ತಳಿಯ ಮಾಂಸ ಉತ್ಕೃಷ್ಟವಾಗಿದ್ದು, ಮಾಂಸದ ಎಳೆಗಳ ನಡುವಿನ ಕೊಬ್ಬು ಶೇಖರಣೆಯಿಂದಾಗಿ ಮಾಂಸವು ರಸಭರಿತ ಹಾಗೂ ಸುವಾಸನೆ ಗುಣ ಹೊಂದಿದೆ.
  • ಈ ತಳಿಯು ಗಡುಸಾದ ಕತ್ತು, ಕತ್ತಿನ ಕೆಳಗೆ ಎರಡು ಕೂದಲಿನಿಂದ ಕೂಡಿದ ಎರಡು ಕೊರಳು ಮೊಲೆಗಳು (ವ್ಯಾಟಲ್ಸ್) ನೇತಾಡುತ್ತಿದ್ದು ವಿಶಾಲವಾದ ಎದೆಯಿಂದ ಕೂಡಿದೆ. ಕೆಲವೊಮ್ಮೆ ಕಂದುಬಣ್ಣದ ಮಚ್ಚೆಯು ಮುಖದಿಂದ ಕತ್ತು ಮತ್ತು ಭುಜದವರೆಗೆ ಹರಡಿರುತ್ತದೆ.
  • ಕಿವಿಯು ಎಲೆಯಾಕಾರದಲ್ಲಿದ್ದು ಜೋತಾಡುತ್ತಿರುತ್ತದೆ. ಮೊಟಕು ಬಾಲ ಹಾಗೂ ತುಂಡು ಕಾಲುಗಳು ಈ ತಳಿಯ ವಿಶೇಷ ಗುಣಗಳು.
  • ಈ ತಳಿಯ ಹೆಣ್ಣು ಕುರಿಗಳು 30-35 ಕಿ.ಗ್ರಾಂ ಹಾಗೂ ಗಂಡು ಕುರಿಗಳು 30-45 ಕಿ.ಗ್ರಾಂ ತೂಗುವುದುಂಟು. ಕೆಲವು ಟಗರುಗಳು 60 ಕಿ.ಗ್ರಾಂ ವರೆಗೂ ತೂಗಿದ ಉದಾಹರಣೆಗಳುಂಟು.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top