ಕರ್ನಾಟಕ ರಾಜ್ಯದ ‘ರಾಜ್ಯ ದತ್ತಾಂಶ ಕೇಂದ್ರ’ವು 2004-05ರಲ್ಲಿ ತಾಂತ್ರಿಕ ಮೂಲಸೌಕರ್ಯವೆಂದು ಸ್ಥಾಪನೆಯಾಯಿತು. ರಾಜ್ಯ ದತ್ತಾಂಶ ಕೇಂದ್ರವು ರಾಜ್ಯ ಮಟ್ಟದ ಅನ್ವಯಿಕೆಗಳನ್ನು ಕೇಂದ್ರೀಕೃತವಾಗಿ ಕ್ರೋಡೀಕರಿಸಿ ಅವಶ್ಯ ಮೂಲಸೌಕರ್ಯವನ್ನು ಒದಗಿಸುತ್ತದೆ.
ಭಾರತ ಸರ್ಕಾರವು ರಾಷ್ಟ್ರವ್ಯಾಪಿ ಇ-ಆಡಳಿತ ಯೋಜನೆಯನ್ನು (ಎನ್.ಇ.ಜಿ.ಪಿ) ಪ್ರಾರಂಭಿಸಿದ್ದು, ಕೇಂದ್ರದ ಮಾಹಿತಿ ತಂತ್ರಜ್ಞಾನ ಇಲಾಖೆಯು ರಾಜ್ಯ ದತ್ತಾಂಶ ಕೇಂದ್ರವನ್ನು (ಎಸ್.ಡಿ.ಸಿ) ಸ್ಥಾಪಿಸಲು ರಾಜ್ಯಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ. ಈ ಆರ್ಥಿಕ ಸಹಾಯವು ಬಂಡವಾಳ ಹಾಗೂ ನಿರ್ವಹಣಾ ವೆಚ್ಚವನ್ನು 5 ವರ್ಷಗಳಷ್ಟು ಅವಧಿಯಲ್ಲಿ ಭರಿಸುತ್ತದೆ. ಮೆಸರ್ಸ್. ಟಿ.ಸಿ.ಎಸ್. ಸಂಸ್ಥೆಯನ್ನು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ದತ್ತ ಕೇಂದ್ರದ ನಿರ್ವಾಹಕವಾಗಿ ಆಯ್ಕೆ ಮಾಡಲಾಗಿತ್ತು. ಕರ್ನಾಟಕ ರಾಜ್ಯ ದತ್ತ ಕೇಂದ್ರದ ಕಾರ್ಯಚಟುವಟಿಕೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮೂರನೇ ಕಕ್ಷಿದಾರರಾಗಿ ಕೆ.ಪಿ.ಎಂ.ಜಿಯಿಂದ ಲೆಕ್ಕಪರಿಶೋಧನೆಗೊಳಪಡಿಸಿ, ಎಸ್.ಟಿ.ಕ್ಯೂ.ಸಿ.ಯಿಂದ ಅರ್ಧವಾರ್ಷಿಕ ಲೆಕ್ಕಪರಿಶೋಧನೆ ಮಾಡಿಸಲಾಗುವುದು,
ಕರ್ನಾಟಕ ರಾಜ್ಯ ದತ್ತ ಕೇಂದ್ರವು ವಿವಿಧ ಸರ್ಕಾರಿ ಇಲಾಖೆಗಳ 119 ಅನ್ವಯಿಕೆಗಳನ್ನು ಹೋಸ್ಟ್ ಮಾಡಿದ್ದು 260 ಸರ್ವರುಗಳನ್ನು ಹೊಂದಿದೆ.
1. ಕರ್ನಾಟಕ ರಾಜ್ಯ ದತ್ತ ಕೇಂದ್ರಕ್ಕೆ ಮಾನ್ಯತೆ.
2. ಕರ್ನಾಟಕ ರಾಜ್ಯ ದತ್ತ ಕೇಂದ್ರಕ್ಕೆ ಐ.ಎಸ್.ಓ.27001 – 2013ರ ಪ್ರಮಾಣೀಕರಣ.
3. ಕರ್ನಾಟಕ ರಾಜ್ಯ ದತ್ತ ಕೇಂದ್ರಕ್ಕೆ ಐ.ಎಸ್.ಓ.- 2000 ರ ಪ್ರಮಾಣೀಕರಣ.