ಮೂಲ ಉದ್ದೇಶ
ರಾಜ್ಯದಲ್ಲಿನ
ಪರಿಶಿಷ್ಟ
ಪಂಗಡದವರ
ಸಮಗ್ರ
ಅಭಿವೃದ್ಧಿಯ
ದೃಷ್ಠಿಯಿಂದ
ರಾಜ್ಯ
ಸರ್ಕಾರವು
ಆದೇಶ
ಸಂಖ್ಯೆ:
ಸಕಇ 65
ಎಸ್ಡಿಸಿ 04
ದಿನಾಂಕ:27.05.2006ರ
ಆದೇಶದಲ್ಲಿ
ನಿಗಮವನ್ನು
ಸ್ಥಾಪಿಸಿದ್ದು,
ಈ
ನಿಗಮವು
ದಿನಾಂಕ:26.07.2006
ರಂದು
ಕಂಪೆನಿಗಳ
ಕಾಯ್ದೆ 1956
ರಡಿ
ನೊಂದಾಯಿತಗೊಂಡು
ದಿನಾಂಕ:22.02.2007
ರಿಂದ
ಕಾರ್ಯ
ನಿರ್ವಹಿಸುತ್ತಿದೆ.
ರಾಜ್ಯ
ಸರ್ಕಾರವು
ಆದೇಶ
ಸಂಖ್ಯೆ:
ಸಕಇ 36
ಎಸ್ಡಿಸಿ 2013,
ದಿನಾಂಕ:08.03.2013
ರಲ್ಲಿ
ನಿಗಮವನ್ನು
ಕರ್ನಾಟಕ
ಮಹರ್ಷಿ
ವಾಲ್ಮೀಕಿ
ಪರಿಶಿಷ್ಟ
ಪಂಗಡಗಳ
ಅಭಿವೃದ್ಧಿ
ನಿಗಮವೆಂದು
ಮರು
ನಾಮಕರಣ
ಮಾಡಿರುತ್ತದೆ.
ರಾಜ್ಯದಲ್ಲಿನ
ಪರಿಶಿಷ್ಟ
ಪಂಗಡದವರ
ಆರ್ಥಿಕ
ಅಭಿವೃದ್ಧಿಗಾಗಿ
ವಿವಿಧ
ಯೋಜನೆಗಳನ್ನು
ಅನುಷ್ಟಾನಗೊಳಿಸುವ
ಮೂಲಕ
ಅವರುಗಳನ್ನು
ಲಾಭದಾಯಕ
ಸ್ವಯಂ
ಉದ್ಯೋಗ/ಕೃಷಿ
ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು
ಉತ್ತೇಜಿಸಿ,
ಆ
ಮೂಲಕ
ಅವರುಗಳು
ಆರ್ಥಿಕವಾಗಿ
ಸಧೃಡರನ್ನಾಗಿಸುವುದು
ನಿಗಮದ
ದ್ಯೇಯೋದ್ದೇಶವಾಗಿರುತ್ತದೆ.