Last modified at 17/02/2016 12:11 by System Account

ಖಜಾನೆ - I

ಯೋಜನೆ ಪರಿಕಲ್ಪನೆ ಹಾಗೂ ಅನುಷ್ಟಾನ :       

ಖಜಾನೆ ಯೋಜನೆಯು ಸರ್ಕಾರದ ಕಾರ್ಯದರ್ಶಿಗಳು (ಆ. & ಸಂ.), ಆರ್ಥಿಕ ಇಲಾಖೆ, ಏಜಾನೆ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಐ.ಐ.ಎಂ.ಬಿ., ಸಂಸ್ಥೆಗಳ ಸಾಫ್ಟ್‍ವೇರ್ ಹಾಗೂ ನೆಟ್‍ವರ್ಕ್ ಪರಿಣಿತರು ಒಳಗೊಂಡಂತೆ ರಚಿಸಲಾದ ಸಮಿತಿಯ ಪರಿಕಲ್ಪನೆಯಾಗಿದೆ. ಇದನ್ನು ಎಸ್.ಟಿ.ಪಿ.ಐ., ಬೆಂಗಳೂರು, ಸಿ.ಎಂ.ಸಿ. ಹಾಗೂ ಕೆ.ಎಲ್.ಎ.ಸಿ. ಸಹಕಾರದೊಂದಿಗೆ 2002ರಿಂದ ಅನುಷ್ಟಾನಗೊಳಿಸಲಾಗಿದೆ. 
“ಖಜಾನೆ” ತಂತ್ರಾಂಶದ ಪ್ರ್ರಮುಖ ಅಂಶಗಳು :

 1. ರಾಜ್ಯಾದ್ಯಂತ ಒಂದೇ ಪದ್ದತಿಯ ಖಜಾನೆ ಕಾರ್ಯವಿಧಾನದ ಜಾರಿ. ಎಲ್ಲಾ ಖಜಾನೆಗಳಲ್ಲಿ ಸಾಮಾನ್ಯ ತಂತ್ರಾಂಶದ ಕಾರ್ಯವಿಧಾನ ದಿಂದ ವೆಚ್ಚ ಹಾಗೂ ಜಮೆಗಳ ವಹಿವಾಟುಗಳಲ್ಲಿ ವ್ಯವಹಾರದಲ್ಲಿ ರಾಜ್ಯಾದ್ಯಂತ ಏಕರೂಪ ಪ್ರಕ್ರಿಯೆ ಜಾರಿ.

 1. ಖಜಾನೆ ವ್ಯವಹಾರಗಳ ಸಂಪೂರ್ಣ ಗಣಕೀಕರಣ. ಪಾರದರ್ಶಕ ಆರ್ಥಿಕ ವಹಿವಾಟುಗಳ ನಿರ್ವಹಣೆ. ವೆಚ್ಚದ ಶಿಸ್ತುಬದ್ಧ ಕಾರ್ಯ ನಿರ್ವಹಣೆ.

 1. ಖಜಾನೆಯೊಂದಿಗೆ ವ್ಯವಹರಿಸುವ ಎಲ್ಲಾ ಅಧಿಕೃತ ಹಣ ಬಟವಾಡೆ ಅಧಿಕಾರಿ/ನಿಯಂತ್ರಣ ಅಧಿಕಾರಿ/ಇಲಾಖಾ ಮುಖ್ಯಸ್ಥರು ಹಾಗೂ ಸಚಿವಾಲಯದ ಉನ್ನತ ಅಧಿಕಾರಿಗಳ ವಿವರಗಳ ಮಾಸ್ಟರ್ ನಿರ್ವಹಣೆ.

 1. ಆರ್ಥಿಕ ಸಾಲಿನಲ್ಲಿ ಜಾರಿಯಲ್ಲಿರುವ ಲೆಕ್ಕ ಶೀರ್ಷಿಕೆಗಳಲ್ಲಿ ಮಾತ್ರ ವ್ಯವಹಾರಕ್ಕೆ ಅನುವು. ಆಯವ್ಯಯದಲ್ಲಿ ನಿಗದಿಯಾಗಿರುವ ಮೊತ್ತಕ್ಕೆ ಸೀಮಿತಗೊಂಡಂತೆ ಆರ್ಥಿಕ ವಹಿವಾಟುಗಳ ನಿರ್ವಹಣೆ.

 1. ಖಜಾನೆಗಳಲ್ಲಿ ಬಿಲ್ಲು ಸಂಸ್ಕರಣೆ ಸಂಬಂಧಿಸಿದಂತೆ ಗಣಕಜಾಲದಲ್ಲಿ ಮಾಸ್ಟರ್‍ಗಳ ನಿರ್ವಹಣೆ, ಸಿಬ್ಬಂದಿ ವೃಂದಬಲ ಮಾಹಿತಿ, ಮಾದರಿ ಸಹಿಗಳು ಹಾಗೂ ಬಿಲ್ಲು ಕ್ಲೇಮ್‍ಗಳಿಗೆ ಅನ್ವಯವಾಗುವ ಸಿಂಧುತ್ವ ಹಾಗೂ ಕಡಿತಗಳ ಪರಿಶೀಲನೆಗೆ ಸಂಬಂಧಿಸಿದಂತೆ ಮೌಲ್ಯಾಂಶಗಳ ಲಭ್ಯತೆ.

 1. ಕಟ್ಟುನಿಟ್ಟಿನ ಆಯವ್ಯಯ ನಿಯಂತ್ರಣ ಹಾಗೂ ವೆಚ್ಚಗಳ ನಿರ್ವಹಣೆ. ಪರಿಣಾಮಕಾರಿ ಆಯವ್ಯಯ ನಿಯಂತ್ರಣದ ಮೂಲಕ ವಿತ್ತೀಯ ಶಿಸ್ತು ಪರಿಪಾಲನೆ ಹಾಗೂ ಆಯವ್ಯಯ ಲಭ್ಯತೆ ಕುರಿತು ಮಾಹಿತಿ ಲಭ್ಯ.

 1. ಆಯವ್ಯಯ ಹಂಚಿಕೆ ಮೀರಿ ಹೆಚ್ಚುವರಿ ಪಾವತಿಗಳ ನಿಯಂತ್ರಣ. ಅಪ ವರ್ಗೀಕರಣ ಚಾಲ್ತಿಯಲ್ಲಿಲ್ಲದ ಲೆಕ್ಕ ಶೀರ್ಷಿಕೆಗಳಲ್ಲಿ ವಹಿವಾಟು ಹಾಗೂ ಮೋಸದ ಪ್ರಕರಣಗಳ ನಿವಾರಣೆ.

 1. ಎಲ್ಲಾ ಬಟವಾಡೆ ಅಧಿಕಾರಿ/ನಿಯಂತ್ರಣ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ವೆಚ್ಚ ಹಾಗೂ ರಾಜಸ್ವ ವಿವರಗಳು ನಿಜ ಸಮಯದಲ್ಲಿ ಲಭ್ಯ.

 1. ಸುಲಲಿತ ಲೆಕ್ಕ ಸಮನ್ವಯ ಕಾರ್ಯದ ಅನುಷ್ಟಾನ. ರಾಜ್ಯದ ಸಮಗ್ರವಾದ ಏಕೀಕೃತ ಆರ್ಥಿಕ ಮಾಹಿತಿಗಳು ಖಜಾನೆ ಗಣಕಜಾಲ ನಿರ್ವಹಣಾ ಕೇಂದ್ರದಲ್ಲಿ ಲಭ್ಯ.

 1. ಮಹಾಲೇಖಪಾಲರಿಗೆ ಕ್ರೂಡೀಕೃತ, ವರ್ಗೀಕೃತ ಮಾಸಿಕ ಲೆಕ್ಕ ಸಲ್ಲಿಕೆ. ಸುರಕ್ಷಿತ ಹಾಗೂ ತ್ವರಿತವಾಗಿ ಆರ್ಥಿಕ ವ್ಯವಹಾರವನ್ನು ನಿರ್ವಹಿಸಿ ಮಹಾಲೇಖಪಾಲರಿಗೆ ನಿಗದಿತ ಅವಧಿಯಲ್ಲಿ ಲೆಕ್ಕ ಸಲ್ಲಿಕೆ. ಲೆಕ್ಕಶೀರ್ಷಿಕೆವಾರು ಎಂ.ಐ.ಎಸ್. ವರದಿಗಳ ಲಭ್ಯತೆ.

ಖಜಾನೆ ಯೋಜನೆಯಲ್ಲಿ ಖಜಾನೆ ಕಾರ್ಯಚಟುವಟಿಕೆಗಳಿಗೆ ಅನುಸಾರವಾಗಿ ಈ ಕೆಳಗಿನ ಮಾಡ್ಯೂಲ್‍ಗಳ ಸಿದ್ದಪಡಿಸಲಾಗಿದೆ:

 1. ಪಾವತಿಗಳು
 2. ರಾಜಸ್ವ ಜಮೆಗಳು
 3. ಠೇವಣಿ ಖಾತೆಗಳು
 4. ಪಿಂಚಣಿ ಪಾವತಿ
 5. ಮುದ್ರಾಂಕ ಮಾರಾಟ
 6. ಸಾಮಾಜಿಕ ಭದ್ರತಾ ಯೋಜನಾ ಪಿಂಚಣಿ 
 7. ವರದಿಗಳು
 8. ಲೆಕ್ಕಗಳು
 9. ಹೌಸ್ ಕೀಪಿಂಗ್.
 10. ಮಾಸ್ಟರ್‍ಗಳ ನಿರ್ವಹಣೆ

“ಖಜಾನೆ” ತಂತ್ರಾಂಶದ ಲಾಭಗಳು :

 1. ಖಜಾನೆ ವ್ಯವಹಾರದಲ್ಲಿ ರಾಜ್ಯಾದ್ಯಂತ ಏಕರೂಪ ಪ್ರಕ್ರಿಯೆ ಜಾರಿ.

 1. ಒಮ್ಮೆ ಮಾಹಿತಿ ಮಾಡಿದ ಮಾಹಿತಿಯನ್ನು ಹಲವಾರು ವಿವಿಧ ವರದಿಗಳ ತಯಾರಿಕೆ ಹಾಗೂ ಲೆಕ್ಕಗಳಿಗೆ ಉಪಯೋಗ.

 1. ಲೆಕ್ಕ ವರ್ಗೀಕರಣದ ಬಗ್ಗೆ ಖಜಾನೆ ತಂತ್ರಾಂಶದಲ್ಲಿ ಪರಿಶೀಲಿಸಲನೆ

 1. ಸಮಗ್ರ ಆಯವ್ಯಯ ನಿಯಂತ್ರಣದಿಂದ ಖಜಾನೆ ವಹಿವಾಟುಗಳಲ್ಲಿ ಪಾರದರ್ಶಕತೆ.

 1. ಸರ್ಕಾರಕ್ಕೆ ವೆಚ್ಚ ಹಾಗೂ ರಾಜಸ್ವ ವಿವರಗಳು ನಿಜ ಸಮಯದಲ್ಲಿ ಲಭ್ಯ.

 1. ಉತ್ತಮ ಆರ್ಥಿಕ ವಹಿವಾಟು ನಿರ್ವಹಣೆಗೆ ಆರ್ಥಿಕ ವಹಿವಾಟಿನ ವರದಿ, ಧನಾದೇಶ ವಿತರಣೆ ಹಾಗೂ ಪಾವತಿಗಳ ವರದಿ, ದೈನಂದಿನಬಾಕಿ ಇರುವ ಬಿಲ್ಲು ವಿವರಗಳ ಪಟ್ಟಿ.

 1. ಯೋಜನೆಗಳ ಉತ್ತಮ ನಿರ್ವಹಣೆಗೆ ಆರ್ಥಿಕ ವರದಿಗಳು. ಮುಖ್ಯ ಲೆಕ್ಕ ಶೀರ್ಷಿಕೆ.. ಆಯವ್ಯಯ ಹಾಗೂ ವೆಚ್ಚಗಳ ವರದಿ.

 1. ಸಮರ್ಪಕ ಅಗ್ರೀಮ ಧನ ಹಾಗೂ ಆರ್ಥೋಪಾಯ ನಿಯಂತ್ರಣ.

 1. ಮಹಾಲೇಖಪಾಲರಿಗೆ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಕಾಲಮಿತಿಯೊಳಗೆ ಲೆಕ್ಕ ಸಲ್ಲಿಸುವಿಕೆ. 

 1. ಸರ್ಕಾರ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಠೇವಣಿಗಳ ಲೆಕ್ಕ ನಿರ್ವಹಣೆ ಹಾಗೂ ಮಾಸಿಕ ವಿಶೇಷ ವರದಿಗಳು.

 1. ಆದ್ಯತೆ ಮೇರೆಗೆ ಪಾವತಿ ಪದ್ದತಿ ಹಾಗೂ ತಂತ್ರಾಂಶದ ಇ.ಸಿ.ಎಸ್. –ವಿದ್ಯುನ್ಮಾನ ಪಾವತಿ ಪದ್ದತಿ ಮೂಲಕ ಪಾವತಿಗಳ ವಿವರಣೆ

 1. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್‍ಗಳ I, II, III ನಿಧಿಗಳ ನಿಯಂತ್ರಣ.

 1. ಕೇಂದ್ರಸ್ಥಾನದಿಂದ ರಾಜ್ಯದ ವಿವಿದೆಡೆಗೆ ಗಣಕೀಕೃತ ನಿಧಿ ವರ್ಗಾವಣೆ.
 2. ಲೆಕ್ಕಶೀರ್ಷಿಕೆವಾರು ಎಂ.ಐ.ಎಸ್. ವರದಿಗಳ ತಯಾರಿಕೆ.

 1. ಬಟವಾಡೆ ಅಧಿಕಾರಿಗಳ ಹಂತದಲ್ಲಿ ವೆಚ್ಚಗಳ ವರದಿ, ಯೋಜನಾ ವೆಚ್ಚದ ವರದಿ ಹಾಗೂ ವಿಶೇಷ ವರದಿಗಳು.

ಖಜಾನೆ - I

ಯೋಜನೆ ಪರಿಕಲ್ಪನೆ ಹಾಗೂ ಅನುಷ್ಟಾನ :       

ಖಜಾನೆ ಯೋಜನೆಯು ಸರ್ಕಾರದ ಕಾರ್ಯದರ್ಶಿಗಳು (ಆ. & ಸಂ.), ಆರ್ಥಿಕ ಇಲಾಖೆ, ಏಜಾನೆ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಐ.ಐ.ಎಂ.ಬಿ., ಸಂಸ್ಥೆಗಳ ಸಾಫ್ಟ್‍ವೇರ್ ಹಾಗೂ ನೆಟ್‍ವರ್ಕ್ ಪರಿಣಿತರು ಒಳಗೊಂಡಂತೆ ರಚಿಸಲಾದ ಸಮಿತಿಯ ಪರಿಕಲ್ಪನೆಯಾಗಿದೆ. ಇದನ್ನು ಎಸ್.ಟಿ.ಪಿ.ಐ., ಬೆಂಗಳೂರು, ಸಿ.ಎಂ.ಸಿ. ಹಾಗೂ ಕೆ.ಎಲ್.ಎ.ಸಿ. ಸಹಕಾರದೊಂದಿಗೆ 2002ರಿಂದ ಅನುಷ್ಟಾನಗೊಳಿಸಲಾಗಿದೆ. 

“ಖಜಾನೆ” ತಂತ್ರಾಂಶದ ಪ್ರ್ರಮುಖ ಅಂಶಗಳು :

 1. ರಾಜ್ಯಾದ್ಯಂತ ಒಂದೇ ಪದ್ದತಿಯ ಖಜಾನೆ ಕಾರ್ಯವಿಧಾನದ ಜಾರಿ. ಎಲ್ಲಾ ಖಜಾನೆಗಳಲ್ಲಿ ಸಾಮಾನ್ಯ ತಂತ್ರಾಂಶದ ಕಾರ್ಯವಿಧಾನ ದಿಂದ ವೆಚ್ಚ ಹಾಗೂ ಜಮೆಗಳ ವಹಿವಾಟುಗಳಲ್ಲಿ ವ್ಯವಹಾರದಲ್ಲಿ ರಾಜ್ಯಾದ್ಯಂತ ಏಕರೂಪ ಪ್ರಕ್ರಿಯೆ ಜಾರಿ.

 1. ಖಜಾನೆ ವ್ಯವಹಾರಗಳ ಸಂಪೂರ್ಣ ಗಣಕೀಕರಣ. ಪಾರದರ್ಶಕ ಆರ್ಥಿಕ ವಹಿವಾಟುಗಳ ನಿರ್ವಹಣೆ. ವೆಚ್ಚದ ಶಿಸ್ತುಬದ್ಧ ಕಾರ್ಯ ನಿರ್ವಹಣೆ.

 1. ಖಜಾನೆಯೊಂದಿಗೆ ವ್ಯವಹರಿಸುವ ಎಲ್ಲಾ ಅಧಿಕೃತ ಹಣ ಬಟವಾಡೆ ಅಧಿಕಾರಿ/ನಿಯಂತ್ರಣ ಅಧಿಕಾರಿ/ಇಲಾಖಾ ಮುಖ್ಯಸ್ಥರು ಹಾಗೂ ಸಚಿವಾಲಯದ ಉನ್ನತ ಅಧಿಕಾರಿಗಳ ವಿವರಗಳ ಮಾಸ್ಟರ್ ನಿರ್ವಹಣೆ.

 1. ಆರ್ಥಿಕ ಸಾಲಿನಲ್ಲಿ ಜಾರಿಯಲ್ಲಿರುವ ಲೆಕ್ಕ ಶೀರ್ಷಿಕೆಗಳಲ್ಲಿ ಮಾತ್ರ ವ್ಯವಹಾರಕ್ಕೆ ಅನುವು. ಆಯವ್ಯಯದಲ್ಲಿ ನಿಗದಿಯಾಗಿರುವ ಮೊತ್ತಕ್ಕೆ ಸೀಮಿತಗೊಂಡಂತೆ ಆರ್ಥಿಕ ವಹಿವಾಟುಗಳ ನಿರ್ವಹಣೆ.

 1. ಖಜಾನೆಗಳಲ್ಲಿ ಬಿಲ್ಲು ಸಂಸ್ಕರಣೆ ಸಂಬಂಧಿಸಿದಂತೆ ಗಣಕಜಾಲದಲ್ಲಿ ಮಾಸ್ಟರ್‍ಗಳ ನಿರ್ವಹಣೆ, ಸಿಬ್ಬಂದಿ ವೃಂದಬಲ ಮಾಹಿತಿ, ಮಾದರಿ ಸಹಿಗಳು ಹಾಗೂ ಬಿಲ್ಲು ಕ್ಲೇಮ್‍ಗಳಿಗೆ ಅನ್ವಯವಾಗುವ ಸಿಂಧುತ್ವ ಹಾಗೂ ಕಡಿತಗಳ ಪರಿಶೀಲನೆಗೆ ಸಂಬಂಧಿಸಿದಂತೆ ಮೌಲ್ಯಾಂಶಗಳ ಲಭ್ಯತೆ.

 1. ಕಟ್ಟುನಿಟ್ಟಿನ ಆಯವ್ಯಯ ನಿಯಂತ್ರಣ ಹಾಗೂ ವೆಚ್ಚಗಳ ನಿರ್ವಹಣೆ. ಪರಿಣಾಮಕಾರಿ ಆಯವ್ಯಯ ನಿಯಂತ್ರಣದ ಮೂಲಕ ವಿತ್ತೀಯ ಶಿಸ್ತು ಪರಿಪಾಲನೆ ಹಾಗೂ ಆಯವ್ಯಯ ಲಭ್ಯತೆ ಕುರಿತು ಮಾಹಿತಿ ಲಭ್ಯ.

 1. ಆಯವ್ಯಯ ಹಂಚಿಕೆ ಮೀರಿ ಹೆಚ್ಚುವರಿ ಪಾವತಿಗಳ ನಿಯಂತ್ರಣ. ಅಪ ವರ್ಗೀಕರಣ ಚಾಲ್ತಿಯಲ್ಲಿಲ್ಲದ ಲೆಕ್ಕ ಶೀರ್ಷಿಕೆಗಳಲ್ಲಿ ವಹಿವಾಟು ಹಾಗೂ ಮೋಸದ ಪ್ರಕರಣಗಳ ನಿವಾರಣೆ.

 1. ಎಲ್ಲಾ ಬಟವಾಡೆ ಅಧಿಕಾರಿ/ನಿಯಂತ್ರಣ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ವೆಚ್ಚ ಹಾಗೂ ರಾಜಸ್ವ ವಿವರಗಳು ನಿಜ ಸಮಯದಲ್ಲಿ ಲಭ್ಯ.

 1. ಸುಲಲಿತ ಲೆಕ್ಕ ಸಮನ್ವಯ ಕಾರ್ಯದ ಅನುಷ್ಟಾನ. ರಾಜ್ಯದ ಸಮಗ್ರವಾದ ಏಕೀಕೃತ ಆರ್ಥಿಕ ಮಾಹಿತಿಗಳು ಖಜಾನೆ ಗಣಕಜಾಲ ನಿರ್ವಹಣಾ ಕೇಂದ್ರದಲ್ಲಿ ಲಭ್ಯ.

 1. ಮಹಾಲೇಖಪಾಲರಿಗೆ ಕ್ರೂಡೀಕೃತ, ವರ್ಗೀಕೃತ ಮಾಸಿಕ ಲೆಕ್ಕ ಸಲ್ಲಿಕೆ. ಸುರಕ್ಷಿತ ಹಾಗೂ ತ್ವರಿತವಾಗಿ ಆರ್ಥಿಕ ವ್ಯವಹಾರವನ್ನು ನಿರ್ವಹಿಸಿ ಮಹಾಲೇಖಪಾಲರಿಗೆ ನಿಗದಿತ ಅವಧಿಯಲ್ಲಿ ಲೆಕ್ಕ ಸಲ್ಲಿಕೆ. ಲೆಕ್ಕಶೀರ್ಷಿಕೆವಾರು ಎಂ.ಐ.ಎಸ್. ವರದಿಗಳ ಲಭ್ಯತೆ.

ಖಜಾನೆ ಯೋಜನೆಯಲ್ಲಿ ಖಜಾನೆ ಕಾರ್ಯಚಟುವಟಿಕೆಗಳಿಗೆ ಅನುಸಾರವಾಗಿ ಈ ಕೆಳಗಿನ ಮಾಡ್ಯೂಲ್‍ಗಳ ಸಿದ್ದಪಡಿಸಲಾಗಿದೆ.

1.ಪಾವತಿಗಳು

2.ರಾಜಸ್ವ ಜಮೆಗಳು

3.ಠೇವಣಿ ಖಾತೆಗಳು

4.ಪಿಂಚಣಿ ಪಾವತಿ

5.ಮುದ್ರಾಂಕ ಮಾರಾಟ

6.ಸಾಮಾಜಿಕ ಭದ್ರತಾ ಯೋಜನಾ ಪಿಂಚಣಿ 

7.ವರದಿಗಳು

8.ಲೆಕ್ಕಗಳು

9.ಹೌಸ್ ಕೀಪಿಂಗ್

10.ಮಾಸ್ಟರ್‍ಗಳ ನಿರ್ವಹಣೆ

“ಖಜಾನೆ” ತಂತ್ರಾಂಶದ ಲಾಭಗಳು :

 1. ಖಜಾನೆ ವ್ಯವಹಾರದಲ್ಲಿ ರಾಜ್ಯಾದ್ಯಂತ ಏಕರೂಪ ಪ್ರಕ್ರಿಯೆ ಜಾರಿ.

 1. ಒಮ್ಮೆ ಮಾಹಿತಿ ಮಾಡಿದ ಮಾಹಿತಿಯನ್ನು ಹಲವಾರು ವಿವಿಧ ವರದಿಗಳ ತಯಾರಿಕೆ ಹಾಗೂ ಲೆಕ್ಕಗಳಿಗೆ ಉಪಯೋಗ.

 1. ಲೆಕ್ಕ ವರ್ಗೀಕರಣದ ಬಗ್ಗೆ ಖಜಾನೆ ತಂತ್ರಾಂಶದಲ್ಲಿ ಪರಿಶೀಲಿಸಲನೆ

 1. ಸಮಗ್ರ ಆಯವ್ಯಯ ನಿಯಂತ್ರಣದಿಂದ ಖಜಾನೆ ವಹಿವಾಟುಗಳಲ್ಲಿ ಪಾರದರ್ಶಕತೆ.

 1. ಸರ್ಕಾರಕ್ಕೆ ವೆಚ್ಚ ಹಾಗೂ ರಾಜಸ್ವ ವಿವರಗಳು ನಿಜ ಸಮಯದಲ್ಲಿ ಲಭ್ಯ.

 1. ಉತ್ತಮ ಆರ್ಥಿಕ ವಹಿವಾಟು ನಿರ್ವಹಣೆಗೆ ಆರ್ಥಿಕ ವಹಿವಾಟಿನ ವರದಿ, ಧನಾದೇಶ ವಿತರಣೆ ಹಾಗೂ ಪಾವತಿಗಳ ವರದಿ, ದೈನಂದಿನಬಾಕಿ ಇರುವ ಬಿಲ್ಲು ವಿವರಗಳ ಪಟ್ಟಿ.

 1. ಯೋಜನೆಗಳ ಉತ್ತಮ ನಿರ್ವಹಣೆಗೆ ಆರ್ಥಿಕ ವರದಿಗಳು. ಮುಖ್ಯ ಲೆಕ್ಕ ಶೀರ್ಷಿಕೆ.. ಆಯವ್ಯಯ ಹಾಗೂ ವೆಚ್ಚಗಳ ವರದಿ.

 1. ಸಮರ್ಪಕ ಅಗ್ರೀಮ ಧನ ಹಾಗೂ ಆರ್ಥೋಪಾಯ ನಿಯಂತ್ರಣ.

 1. ಮಹಾಲೇಖಪಾಲರಿಗೆ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಕಾಲಮಿತಿಯೊಳಗೆ ಲೆಕ್ಕ ಸಲ್ಲಿಸುವಿಕೆ. 

 1. ಸರ್ಕಾರ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಠೇವಣಿಗಳ ಲೆಕ್ಕ ನಿರ್ವಹಣೆ ಹಾಗೂ ಮಾಸಿಕ ವಿಶೇಷ ವರದಿಗಳು.

 1. ಆದ್ಯತೆ ಮೇರೆಗೆ ಪಾವತಿ ಪದ್ದತಿ ಹಾಗೂ ತಂತ್ರಾಂಶದ ಇ.ಸಿ.ಎಸ್. –ವಿದ್ಯುನ್ಮಾನ ಪಾವತಿ ಪದ್ದತಿ ಮೂಲಕ ಪಾವತಿಗಳ ವಿವರಣೆ

 1. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್‍ಗಳ I, II, III ನಿಧಿಗಳ ನಿಯಂತ್ರಣ.

 1. ಕೇಂದ್ರಸ್ಥಾನದಿಂದ ರಾಜ್ಯದ ವಿವಿದೆಡೆಗೆ ಗಣಕೀಕೃತ ನಿಧಿ ವರ್ಗಾವಣೆ.

 2. ಲೆಕ್ಕಶೀರ್ಷಿಕೆವಾರು ಎಂ.ಐ.ಎಸ್. ವರದಿಗಳ ತಯಾರಿಕೆ.

 1. ಬಟವಾಡೆ ಅಧಿಕಾರಿಗಳ ಹಂತದಲ್ಲಿ ವೆಚ್ಚಗಳ ವರದಿ, ಯೋಜನಾ ವೆಚ್ಚದ ವರದಿ ಹಾಗೂ ವಿಶೇಷ ವರದಿಗಳು.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಖಜಾನೆ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
CM Karnataka logo
Top