ಪ್ರಸ್ತಾವನೆ :
ನಾರಾಯಣಪುರದ ಹತ್ತಿರ ಕೃಷ್ಣಾನದಿಗೆ ಆಣೆಕಟ್ಟನ್ನು ನಿರ್ಮಿಸಿರುವುದರಿಂದ ಬಸವಸಾಗರದ ಹಿನ್ನೀರಿನಲ್ಲಿ ಕೂಡಲಸಂಗಮದಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾದ ಸ್ಥಳದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಹಾಗೂ ಶ್ರೀ ಬಸವೇಶ್ವರರ ಐಕ್ಯ ಮಂಟಪ ಇವುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವದು ಹಾಗೂ ಈ ಕ್ಷೇತ್ರವನ್ನು ಅಧ್ಯಾತ್ಮಿಕ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿನಿಯಮ 1994ನ್ನು ಕರ್ನಾಟಕ ಸರಕಾರ ಜಾರಿಯಲ್ಲಿ ತಂದಿತು. ಸನ್ 1998 ರಿಂದ ಮಂಡಳಿಯ ಕಾರ್ಯಾಲಯ ಕಾರ್ಯಾರಂಭ ಮಾಡಿತು. ಕೆಳಕಂಡ ಕಾಮಗಾರಿಗಳನ್ನು ಕರ್ನಾಟಕ ಭೂಸೇನಾ ನಿಗಮದವರಿಗೆ ವಹಿಸಿಕೊಡಲಾಗಿತ್ತು. ಸದರಿ ಕಾಮಗಾರಿಗಳನ್ನು 1998ರಲ್ಲಿ ಪ್ರಾರಂಭಿಸಿ 2004ರಲ್ಲಿ ಮುಕ್ತಾಯಗೊಳಿಸಲಾಗಿರುತ್ತದೆ.
01. ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಮೊದಲ ಹಂತದಲ್ಲಿ ಅಂದರೆ 1999ನೇ ಸಾಲಿನಲ್ಲಿ ಸರಕಾರದಿಂದ 3058.27 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು. ಈ ಅನುದಾನವನ್ನು ಮತ್ತು ಬಂದಿರುವ ಬಡ್ಡಿ ಹಣದಲ್ಲಿ ಕೆಳಕಂಡ ಕಾಮಗಾರಿಗಳಿಗಾಗಿ ವಿನಿಯೋಗಿಸಿ ಕೆಲಸಗಳನ್ನು ಪೂರ್ತಿಗೊಳಿಸಲಾಗಿದೆ.
ಕ್ರ.ಸಂ | ಕಾಮಗಾರಿಗಳ ವಿವರ | ವೆಚ್ಚ (ಲಕ್ಷ ರೂಗಳಲ್ಲಿ) |
01 | ಮಹಾದ್ವಾರ ನಿರ್ಮಾಣ | 100.00 |
02 | ದಾಸೋಹ ಭವನ | 131.00 |
03 | ಉಪಹಾರ ಗೃಹ | 38.05 |
04 | ಯಾತ್ರಿನಿವಾಸ | 370.50 |
05 | ಸಭಾಭವನ | 1022.00 |
06 | ಬಸವ ಅಂತಾರಾಷ್ಟ್ರೀಯ ಕೇಂದ್ರ | 1550.00 |
07 | ಗ್ರಂಥಾಲಯ | 88.00 |
08 | ಬಸವ ವೃತ್ತದಲ್ಲಿ ಕಂಚಿನ ಮೂರ್ತಿ | 05.00 |
09 | ಶ್ರೀ ಸಂಗಮೇಶ್ವರ ದೇವಸ್ಥಾನ ಪುನರ್ತ್ಥಾನ | 120.00 |
10 | ರಾಜಗೋಪುರ, ಪೌಳಿಗಳು, ನೆಲಹಾಸಿಗೆ | 85.00 |
11 | ನೀರು ಸರಬರಾಜು ಯೋಜನೆ | 100.00 |
12 | ರಥದ ಮನೆ | 45.00 |
13 | ಜೋಡು ರಸ್ತೆ, ಚರಂಡಿ, ಪಾರದರ್ಶಕ ಕಂಪೌಂಡ ಗೋಡೆ | 150.00 |
| ಒಟ್ಟು ರೂ. | 3804.55 |
ಮಂಡಳಿಯಿಂದ ಇದಲ್ಲದೆ ಬೇರೆ ಬೇರೆ ಕಾಮಗಾರಿಗಳನ್ನು ಟೆಂಡರ್ ಮೂಲಕ ನಿರ್ವಹಿಸಲಾಗಿದ್ದು ಅವುಗಳನ್ನು ಪರಿಪೂರ್ಣಗೊಳಿಸಲಾಗಿದೆ.
ಕ್ರ.ಸಂ. | ಕಾಮಗಾರಿ ಹೆಸರು | ಮುಕ್ತಾಯಗೊಂಡ ವರ್ಷ | ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ) | ಷರಾ |
01 | ಶ್ರೀ ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ದಾರ ಭಾರತೀಯ ಪುರಾತತ್ವ, ಸವೇಕ್ಷಣಾ ಇಲಾಖೆ | 2000-01
| 50.00 | ಸರ್ಕಾರದ ಅನುದಾನ |
02 | ಪೂಜಾವನ ಗಾರ್ಡನ್ ನಿರ್ಮಾಣ, ಸಾಮಾಜಿಕ ಅರಣ್ಯ ಇಲಾಖೆ, ಆಣೆಕಟ್ಟು ವಿಭಾಗ, ಆಲಮಟ್ಟಿ
| 2000-01 | 19.79 | -ಸದರ- |
03 | ಸಂಗಮೇಶ್ವರ ಕಲ್ಯಾಣ ಮಂಟಪ, ಅಡುಗೆ ಕೋಣೆ, ಊಟದ ಮನೆ & ಕಂಪೌಂಡ ಗೋಡೆ ನಿರ್ಮಾಣ | 2005-06 | 74.00 | ಮಂಡಳಿಯಿಂದ |
04 | ಸೆಮಿನಾರ ಕಟ್ಟಡ, ವಚನ ಅಧ್ಯಯನ ಕೇಂದ್ರ
| 2010-11 | 15.00 | -ಸದರ- |
05 | 1.0ಲಕ್ಷ ಲೀಟರ್ ಸಾಮಥ್ರ್ಯ ಮೇಲ್ಮಟ್ಟದ ನೀರಿನ ಟ್ಯಾಂಕ ನಿರ್ಮಾಣ | 2010-11 | 19.00
| ಸರ್ಕಾರದ ಅನುದಾನ |
06 | ಸಭಾ ಭವನದ ಹಿಂದೆ ಊಟದ ಮನೆ ನಿರ್ಮಾಣ
| 2011-12
| 10.00 | -ಸದರ- |
07 | ದ್ವಿಮುಖ ರಸ್ತೆ ಪುಟ್ ಪಾತಕ್ಕೆ ಪೆವ್ಹಿಂಗ್ ಮಾಡಿದ್ದು
| 2011-12 | 10.50 | -ಸದರ- |
08 | ರಾಷ್ಟ್ರೀಯ ಹೆದ್ದಾರಿ-50ರ ಹತ್ತಿರ ಮಹಾದ್ವಾರ ನಿರ್ಮಾಣ | 2012-13
| 18.00 | ಸರ್ಕಾರದ ಅನುದಾನ |
09 | ಡಾರಮಿಟರಿ ಕಟ್ಟಡ ನಿಮಾಣ
| 2012-13 | 197.00
| ಪ್ರವಾಸೋದ್ಯಮ ಇಲಾಖೆ ಅನುದಾನ |
10 | ಆಂತರಿಕ ರಸ್ತೆಗಳಿಗೆ ಮರುಡಾಂಬರಿಕರಣ
| 2012-13 | 57.20 | ಸರ್ಕಾರದ ಅನುದಾನ |
11 | ದೇವಸ್ಥಾನದ ಆವರಣದಲ್ಲಿ ಮೆಟ್ಯಾಕ್ಯೂಲರ ಸೀಟ್ ಹಾಕಿದ್ | 2012-13 | 25.00 | ಮಂಡಳಿಯಿಂದ |
12 | ಐಕ್ಯಮಂಟಪದ ಮೇಲೆ ಪಾಲಿಥೀನ ಸೀಟ್ ಅಳವಡಿಕೆ ಹಾಗೂ ಗ್ರೀಲ್ ಅಳವಡಿಸುವುದು | 2013-14 | 27.00 | ಸರ್ಕಾರದ ಅನುದಾನ |
13 | ಬಸವನ ಬಾಗೇವಾಡಿಯಲ್ಲಿ ಶೌಚಾಲಯ ನಿರ್ಮಾಣ | 2013-14 | 35.00
| -ಸದರ- |
14 | 6 ಮಾರಾಟ ಮಳಿಗೆಗಳ ನಿರ್ಮಾಣ | 2014-15 | 28.00
| -ಸದರ- |
15 | ಅತಿಥಿ ಗೃಹ & ಕಲ್ಯಾಣ ಮಂಟಪದ ಹತ್ತಿರ ಶೌಚಾಲಯ ನಿರ್ಮಾಣ | 2014-15 | 10.00 | -ಸದರ- |
16 | ಅಥಿತಿ ಗೃಹದ ಹತ್ತಿರ ಕೇರ್ ಟೆಕರ್ ಮನೆ ನಿರ್ಮಾಣ | 2014-15 | 6.00 | -ಸದರ- |
17 | ಸಭಾ ಭವನ ಮತ್ತು ಡಾರಮಿಟರಿ ಹಿಂಭಾಗದಲ್ಲಿ ಚರಂಡಿ ನಿರ್ಮಾಣ
| 2015-16 | 26.00
| -ಸದರ- |
18 | ಯಾತ್ರಿ ನಿವಾಸದ ಹಿಂಭಾಗದಲ್ಲಿ ಆಶ್ರಮಕ್ಕೆ ಹೊಂದಿಕೊಂಡ ಸ್ಥಳದಲ್ಲಿ ಕಂಪೌಂಡ ಗೋಡೆ ನಿರ್ಮಾಣ | 2015-16 | 35.00
| -ಸದರ- |
19 | ಯಾತ್ರಿನಿವಾಸ ಹಿಂಭಾಗದಲ್ಲಿ 12 ಕೋಣೆಗಳ ಡಾರಮಿಟರಿ(ಛತ್ರ) ನಿರ್ಮಾಣ (ಸದರಿ ಕಾಮಗಾರಿಯು ಪ್ರಗತಿಯಲ್ಲಿದೆ.) | 2016-17 | 98.00 | -ಸದರ- |
| ಒಟ್ಟು ಮೊತ್ತ ರೂ | | 760.49 | |
ಕೆಳಗೆ ಕಾಣಿಸಿದ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ತಿಗೊಳಿಸಲಾಗಿದೆ.
2. ಬಸವನ ಬಾಗೇವಾಡಿ
ಬಸವನ ಬಾಗೇವಾಡಿಯಲ್ಲಿ ಶ್ರೀ ಬಸವೇಶ್ವರರ ಜನ್ಮಸ್ಥಳದಲ್ಲಿ ಬಸವ ಸ್ಮಾರಕ ಕಟ್ಟಡವನ್ನು ಅಂದಾಜು 155 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ 105 ವಾಣಿಜ್ಯ ಮಳಿಗೆಗಳನ್ನು ಬ್ಯಾಂಕ್ ಸಾಲ ಮತ್ತು ಬಾಡಿಗೆದಾರರಿಂದ ಪಡೆದ ಮುಂಗಡ ಠೇವಣಿ ಹಣದಲ್ಲಿ 2005-06ನೇ ಸಾಲಿನಲ್ಲಿ ನಿರ್ಮಿಸಲಾಗಿದೆ. ಹೆಣ್ಣು ಮಕ್ಕಳ ಸಲುವಾಗಿ ಕಿರಿಯ ಮಹಾವಿದ್ಯಾಲಯ ಕಟ್ಟಡವನ್ನು ರೂ. 117.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶ್ರೀ ಬಸವೇಶ್ವರ ದೇವಸ್ಥಾನದ ಪುನರ್ನಿರ್ಮಾಣಕ್ಕಾಗಿ ಸರಕಾರದಿಂದ ರೂ.476.15 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕಟ್ಟಡ ಪೂರ್ತಿಯಾಗಿರುತ್ತದೆ.
ಅ) ಚಿಕ್ಕ ಸಂಗಮ
ಬೀಳಗಿ ತಾಲೂಕಿನ ಚಿಕ್ಕ ಸಂಗಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ಹಾಗೂ ಅತಿಥಿ ಗೃಹ, ಮಾರಾಟ ಮಳಿಗೆಗಳನ್ನು ಅಂದಾಜು 418.74 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದಿನಾಂಕ:26-11-2012 ರಂದು ನೂತನ ದೇವಾಲಯವನ್ನು ಸನ್ಮಾನ್ಯ ಮುಖ್ಯ ಮಂತ್ರಿಗಳಿಂದ ಲೋಕಾರ್ಪಣೆ ಮಾಡಲಾಗಿದೆ.
ಆ) ಇಂಗಳೇಶ್ವರ
ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಶ್ರೀ ಬಸವೇಶ್ವರರ ತಾಯಿಯ ತವರು ಮನೆ ಸ್ಮಾರಕವನ್ನು ಸರಕಾರದಿಂದ ಬಿಡುಗಡೆಯಾದ ಅನುದಾನದಿಂದ ರೂ.150 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಇ) ತಂಗಡಗಿ
ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೃಷ್ಣಾನದಿ ತೀರದಲ್ಲಿ ತಂಗಡಗಿ ಗ್ರಾಮದ ಹತ್ತಿರ ಶರಣೆ ನೀಲಾಂಬಿಕಾ, ಹಡಪದ ಅಪ್ಪಣ್ಣ ಹಾಗೂ ಮಡಿವಾಳ ಮಾಚಿದೇವರ ಐಕ್ಯ ಮಂಟಪವನ್ನು ಸಂರಕ್ಷಿಸಿ ಪುನರ್ನಿರ್ಮಾಣ ಕೆಲಸವನ್ನು ಮಾಡಲಾಗಿದೆ. ರಸ್ತೆಯಿಂದ ಐಕ್ಯ ಮಂಟಪದವರೆಗೆ ಸಂಪರ್ಕ ಸೇತುವೆ ನವೀಕರಣ ಮತ್ತು ಮೇಲ್ಛಾವಣಿ ಕೆಲಸ ಪೂರ್ತಿಯಾಗಿರುತ್ತದೆ. ಈ ಕಾಮಗಾರಿಗಾಗಿ ಸರಕಾರದಿಂದ 151.70 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪೂರ್ತಿಗೊಂಡಿರುತ್ತದೆ.
ಈ) ಎಂ.ಕೆ.ಹುಬ್ಬಳ್ಳಿ
ಬೆಳಗಾವಿ ಜಿಲ್ಲೆಯ, ಬೈಲಹೊಂಗಲ ತಾಲೂಕಿನ, ಎಂ.ಕೆ.ಹುಬ್ಬಳ್ಳಿ ಗ್ರಾಮದ ಹತ್ತಿರ ಮಲಪ್ರಭಾ ನದಿಯಲ್ಲಿ ಗಂಗಾಬಿಂಕೆಯವರ ಐಕ್ಯ ಸ್ಥಳವಿದ್ದು ಅದನ್ನು ಸಂರಕ್ಷಿಸುವ ಹಾಗೂ ರಸ್ತೆಯಿಂದ ಐಕ್ಯ ಮಂಟಪದವರೆಗಿನ ಸಂಪರ್ಕ ಸೇತುವೆ, ಉದ್ಯಾನವನ, ಸಂರಕ್ಷಣಾ ತಡೆಗೋಡೆ, ನಿರ್ಮಾಣ ಕಾಮಗಾರಿಯನ್ನು ಸರಕಾರದಿಂದ ಬಿಡುಗಡೆಯಾದ ಅನುದಾನ 448.38 ಲಕ್ಷ ರೂಪಾಯಿಗಳು ಹಾಗೂ ಬಡ್ಡಿ ಹಣ ಸೇರಿದಂತೆ ಒಟ್ಟು 533 ಲಕ್ಷರೂಪಾಯಿಗಳ ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. ಹಾಗೂ ದಿ:14-01-2012 ರಂದು ಲೋಕಾರ್ಪಣೆ ಮಾಡಲಾಯಿತು.
ಕೂಡಲಸಂಗಮ : 2016-17ನೇ ಸಾಲಿನ ವಾರ್ಷಿಕ ವರದಿ
ಸನ್ 2016-17ನೇ ಸಾಲಿನಲ್ಲಿ ಮಂಜೂರಾದ ಆಯ್ಯವ್ಯಯ ಅಂದಾಜು ಪತ್ರದಂತೆ ಕಾಮಗಾರಿಗಳನ್ನು ಮತ್ತು ಶ್ರೀ ಸಂಗಮೇಶ್ವರ ದೇವಸ್ಥಾನ ಕೂಡಲಸಂಗಮ, ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಬಾಗೇವಾಡಿ ಇವುಗಳ ವಾರ್ಷಿಕ ನಿರ್ವಹಣೆಗಳನ್ನು ನಿರ್ವಹಿಸಲಾಗಿದೆ. ವಿವರ ಈ ಕೆಳಗಿನಂತಿದೆ.
ಕೂಡಲಸಂಗಮ ದೇವಸ್ಥಾನ
ಪ್ರಸಕ್ತಸಾಲಿನಲ್ಲಿ ಅಭಿಷೇಕ, ಇತರೆ ಸೇವೆಗಳು, ಕಟ್ಟಡಗಳ ಬಾಡಿಗೆ ಶುಲ್ಕ ಇತ್ಯಾದಿಗಳಿಂದ ಒಟ್ಟು 401.50 ಲಕ್ಷಗಳ ಆದಾಯ ಬಂದಿದೆ. ಅದೇ ತೆರನಾಗಿ ಜಾತ್ರಾ, ವಿಶೇಷ ಕಾರ್ಯಕ್ರಮಗಳು, ಕಟ್ಟಡಗಳ ವಾರ್ಷಿಕ ನಿರ್ವಹಣೆ, ಉದ್ಯಾನವನ, ಕ್ಷೇತ್ರದ ನೈರ್ಮಲ್ಲಿಕರಣ, ನಿರಂತರ ದಾಸೋಹ ಮುಂತಾದವುಗಳ ನಿರ್ವಹಣೆಗಾಗಿ ರೂ. 293.90 ಲಕ್ಷಗಳನ್ನು ವೆಚ್ಚಮಾಡಲಾಗಿದೆ.
ಶ್ರೀ ಬಸವೇಶ್ವರ ದೇವಸ್ಥಾನ ಬಾಗೇವಾಡಿ
ಸದರಿ ಆರ್ಥಿಕ ವರ್ಷದಲ್ಲಿ ಕಟ್ಟಡ ಬಾಡಿಗೆ ಮುಂತಾದವುಗಳಿಂದ ರೂ.135.03 ಲಕ್ಷಗಳ ಆದಾಯ ಬಂದಿರುತ್ತದೆ. ದೇವಸ್ಥಾನದ, ಇತರೆ ಕಟ್ಟಡಗಳ ನಿರ್ವಹಣೆ ಜಾತ್ರೆ ಮತ್ತು ಇತರೆ ವಿಶೇಷ ಕಾರ್ಯಕ್ರಮಗಳಿಗೆ ರೂ.109.17 ಲಕ್ಷಗಳನ್ನು ವೆಚ್ಚಮಾಡಲಾಗಿದೆ. ಹಾಗೂ ಇದರಲ್ಲಿ ಬಸವನ ಬಾಗೇವಾಡಿಯಲ್ಲಿ 2016-17ನೇ ಸಾಲಿನಲ್ಲಿ ದೇವಸ್ಥಾನ ಹಾಗೂ ಸಿ.ಬಿ.ಎಸ್.ಇ ಶಾಲೆಗೆ ಸಂಬಂಧಿಸಿದ ಕಾಮಗಾರಿಗಳಾದ ವಾಟರ್ ಪ್ರೋಫಿಂಗ್, ನೆಲಹಾಸು ನವೀಕರಣ, ಬಣ್ಣ ಲೇಪನ, ಮಳಿಗೆಗಳ ನವೀಕರಣ, ರಸ್ತೆ ಮತ್ತು ಸಿ.ಡಿ ನಿರ್ಮಾಣ, ಇಂಗಳೇಶ್ವರ ಹೋಗುವ ರಸ್ತೆಯಲ್ಲಿದ್ದ ಆರ್ಚಗೇಟ್ ರಿಪೇರಿ, ಕಿಟಕಿಗಳಿಗೆ ರೇಲಿಂಗ್ ಹಾಗೂ ಇತರೆ ಕಾಮಗಾರಿಗಳನ್ನು ಟೆಂಡರ್ ಆಧಾರದ ಮೇಲೆ ನಿರ್ವಹಿಸಲಾಗಿದೆ.
ಕಾಮಗಾರಿ ಖಾತೆ
2011-12ನೇ ಸಾಲಿನಲ್ಲಿ ಕಾಮಗಾರಿಗಳಿಗಾಗಿ ಸರಕಾರದಿಂದ ಅನುದಾನ ಬಂದಿರುವುದಿಲ್ಲ. ಆದರೆ 2006-07, 2007-08 ಹಾಗೂ 2010-11ರಲ್ಲಿ ಸರಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಕೆಳಕಂಡ ಕ್ರಮ ಸಂಖ್ಯೆ 2, 3 ಹಾಗೂ 4ರಲ್ಲಿನ ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗಿದೆ. ಕ್ರಮ ಸಂಖ್ಯೆ 1ರ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಂದಿರುವ 153.10ಲಕ್ಷ ರೂಪಾಯಿಗಳ ಅನುದಾನದಲ್ಲಿ ಪ್ರವಾಸಿಗರಿಗೆ ಡಾರ್ಮಿಟರಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು ಮುಕ್ತಾಯವಾಗಿದೆ.
ಕ್ರ.ಸಂ | ವಿವರ | ವೆಚ್ಚಗಳು (ರೂ ಲಕ್ಷಗಳಲ್ಲಿ) |
1 | ಕೂಡಲಸಂಗಮದಲ್ಲಿ ಡಾರಮಿಟರಿ ನಿರ್ಮಾಣ | 153.10 |
2 | ಎಂ.ಕೆ.ಹುಬ್ಬಳ್ಳಿಯಲ್ಲಿ ಗಂಗಾಬಿಂಕೆ ಐಕ್ಯಮಂಟಪ ಕಾಮಗಾರಿ | 533.00 |
3 | ತಂಗಡಗಿಯಲ್ಲಿ ನೀಲಾಂಬಿಕೆ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ ಐಕ್ಯ ಮಂಟಪ ಕಾಮಗಾರಿ | 151.70 |
4 | ಇಂಗಳೇಶ್ವರದಲ್ಲಿ ಶ್ರೀ ಬಸವೇಶ್ವರರ ತಾಯಿಯ ತವರು ಮನೆ ಸ್ಮಾರಕ ನಿರ್ಮಾಣ ಕಾಮಗಾರಿ | 150.00 |
5 | ಚಿಕ್ಕಸಂಗಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ಹಾಗೂ ಇತರೆ ಕಾಮಗಾರಿಗಳು | 418.74 |
6 | ಬಸವನ ಬಾಗೇವಾಡಿಯಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪುನರ್ನಿರ್ಮಾಣ ಕಾಮಗಾರಿ | 512.05 |
7 | ಬಾಗೇವಾಡಿಯಲ್ಲಿ ಬಸವಸ್ಮಾರಕದ ಇತರೆ ಕೆಲಸಗಳು | 26.68 |
8 | ಬಾಗೇವಾಡಿಯಲ್ಲಿ ಮಹಿಳಾ ಪದವಿಪೂರ್ವ ಕಾಲೇಜು ಕಾಮಗಾರಿ | 65.00 |
9 | ಬಾಗೇವಾಡಿಯಲ್ಲಿ ಸಿ.ಬಿ.ಎಸ್.ಸಿ ಶಾಲಾ ಕಟ್ಟಡ ಕಾಮಗಾರಿ | 196.00 |
| ಒಟ್ಟು ರೂ | 2206.27 |
ಸನ್ 2016-17 ನೇ ಸಾಲಿನಲ್ಲಿ ಕೈಕೊಳ್ಳಲಾದ ಕಾಮಗಾರಿಗಳ ವಿವರ.
ಅ.ನಂ
| ಕಾಮಗಾರಿಯ ವಿವರ | ಅಂದಾಜು ವೆಚ್ಚ (ರೂ.ಲಕ್ಷಗಳಲ್ಲಿ) |
1 | ಡಾರಮಿಟರಿ ನಿರ್ಮಾಣ | 100.00 |
| ಒಟ್ಟು ಮೊತ್ತ ರೂ. | 100.00 |
ಮೇಲ್ಕಾಣಿಸಿದ ಕಾಮಗಾರಿಗೆ ಸರ್ಕಾರದಿಂದ 2016-17 ನೇ ಸಾಲ್ಲಿನಲ್ಲಿ ಸರ್ಕಾರದಿಂದ ಅನುದಾನ ರೂ. 100.00 ಲಕ್ಷಗಳು ಹಾಗೂ ಅನುದಾನದ ಮೇಲಿನ ಬಡ್ಡಿ ಮತ್ತು ಅನುದಾನ ಸೇರಿ ಒಟ್ಟು 285.30 ಲಕ್ಷಗಳು ಮತ್ತು ಕಾಮಗಾರಿಗಳಿಗಾಗಿ ನಿರ್ವಹಣೆಗಾಗಿ ಒಟ್ಟು ರೂ. 110.74ಲಕ್ಷಗಳನ್ನು ವೆಚ್ಚ ಮಾಡಲಾಗಿದೆ.
ಸಿಬ್ಬಂದಿ ಖಾತೆ
ಸದರಿ ಸಾಲಿನಲ್ಲಿ ಸರಕಾರದಿಂದ ರೂ. 28.00ಲಕ್ಷ ಅನುದಾನದಿಂದ ಬಂದ ಬಡ್ಡಿ ಇತ್ಯಾದಿಗಳಿಂದ 5.00 ಲಕ್ಷ ಆದಾಯ ಪಡೆಯಲಾಗಿದೆ. ಸಿಬ್ಬಂದಿ ವೇತನ ಮತ್ತು ಭತ್ಯೆ, ವಾಹನಗಳ ಇಂಧನ/ನಿರ್ವಹಣೆ ಮತ್ತು ಸಾದಿಲ್ವಾರು ವೆಚ್ಚಗಳಿಗೆ ಒಟ್ಟು 62.70 ಲಕ್ಷಗಳನ್ನು ವೆಚ್ಚಮಾಡಲಾಗಿದೆ.
ಮೇಲಿನ ನಾಲ್ಕು ಖಾತೆಗಳ ಸನ್ 2016-17ರ ಆಯ್ಯವ್ಯಯದ ಘೋಷವಾರು (ಅಮಾನತ್ತು ಸಹಿತ) ಈ ಕೆಳಗಿನಂತಿದೆ.
ಘೋಷವಾರು
(ರೂಪಾಯಿ ಲಕ್ಷಗಳಲ್ಲಿ)
ಕ್ರ.ಸಂ.
| ಖಾತೆ
| ಪ್ರಾರಂಭಿಕ ಶಿಲ್ಕು | ಜಮೆ | ಒಟ್ಟು | ವೆಚ್ಚ | ಕೊನೆಯ ಶಿಲ್ಕು | ಷರಾ |
01 | ಕೂಡಲಸಂಗಮ ದೇವಸ್ಥಾನ
| 407.56 | 401.50 | 809.06 | 293.90 | 515.16 | |
02 | ಕಾಮಗಾರಿ | 532.04 | 285.30 | 817.34 | 110.74 | 706.60 | |
03 | ಬಸವನಬಾಗೇವಾಡಿ ದೇವಸ್ಥಾನ | 118.29 | 135.03 | 253.32
| 109.17 | 144.15 | |
04 | ಸಿಬ್ಬಂದಿ | 28.70 | 34.00 | 62.70
| 59.99 | 2.71 | |
| ಒಟ್ಟು ರೂ | 1086.59
| 855.83 | 1942.42 | 573.80 | 1368.62 | |
ಧಾರ್ಮಿಕ ಸಮಾರಂಭಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ
ಜಾತ್ರಾಮಹೋತ್ಸವ:
ಶ್ರೀ ಸಂಗಮೇಶ್ವರ ಜಾತ್ರಾಮಹೋತ್ಸವವನ್ನು ಚೈತ್ರಮಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾತ್ರಾ ಉತ್ಸವದ ಅಂಗವಾಗಿ ದಿನಾಂಕ 19-04-2016 ರಿಂದ 27-04-2016ರ ವರೆಗೆ 9 ದಿನಗಳ ವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಾಡಿನ ಪ್ರಸಿದ್ಧ ಕಲಾ ತಂಡಗಳು, ಗಾಯಕರು, ನಾಟಕಕಾರರು ನೇರವೇರಿಸಿಕೊಟ್ಟರು. ಹಾಗೂ ಜಾತ್ರಾ ಮಹೋತ್ಸವದಲ್ಲಿ ಈ ವರ್ಷ ವಿಶೇಷವಾಗಿ ಜಾನುವಾರ ಪ್ರದರ್ಶನ, ರಂಗೋಲಿ ಸ್ಪರ್ಧೆ, ವಚನ ಪಠಣ ಸ್ಪರ್ಧೆಗಳನ್ನು ಹಾಗೂ ವಸ್ತು ಪ್ರದರ್ಶವನ್ನು ಏರ್ಪಡಿಸಲಾಗಿತ್ತು. ದಿನಾಂಕ:27-04-2016 ರಂದು ರಥೋತ್ಸವವನ್ನು ವಿಜೃಂಭಣೆಯಿಂದ ನೇರವೇರಿಸಲಾಯಿತು.
ಜಾನುವಾರಗಳ ಜಾತ್ರೆ, ಪ್ರದರ್ಶನ ಮತ್ತು ಮಾರಾಟ :
ದಿನಾಂಕ:25-04-2016 ರಿಂದ 30-04-2016ರ ವರೆಗೆ ಜಾನುವಾರಗಳ ಪ್ರದರ್ಶನ ಮತ್ತು ಮಾರಾಟ ಸಮಾರಂಭ ಏರ್ಪಡಿಸಲಾಗಿತ್ತು. ದಿನಾಂಕ: 30-04-2016 ರಂದು ಸನ್ಮಾನ್ಯ ಶ್ರೀ ವಿಜಯಾನಂದ ಎಸ್. ಕಾಶಪ್ಪನವರ ಶಾಸಕರು, ಹುನಗುಂದ ಇವರ ಅಧ್ಯಕ್ಷತೆಯಲ್ಲಿ ಜಾನುವಾರಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಸವ ಜಯಂತಿ:
ಬಸವ ಜಯಂತಿ ಕಾರ್ಯಕ್ರಮದ ನಿಮಿತ್ತ ದಿ:09-05-2016 ರಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕೂಡಲಸಂಗಮ ಕ್ಷೇತ್ರದ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಸಂಗಮ ಗ್ರಾಮದ ಸುತ್ತಲೂ ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಹಾಗೂ ಬಸವನ ಬಾಗೇವಾಡಿಯಲ್ಲಿ ಮೈಸೂರು ಕಲಾವಿದರಿಂದ ಶರಣು ಶರಣಾರ್ಥಿ ಎಂಬ ರೂಪಕ ಹಾಗೂ ವಚನ ಸಂಗೀತ ಕಾರ್ಯಕ್ರಮ ನಡೆಸಲಾಯಿತು.
ಶ್ರಾವಣ ಮಾಸ:
ಶ್ರಾವಣ ಮಾಸದಲ್ಲಿ ದಿನಾಂಕ 05-08-2016 ರಿಂದ ಒಂದು ತಿಂಗಳ ಪರ್ಯಂತ ಶರಣ ಚರಿತಾಮೃತ ಎಂಬ ಪ್ರವಚನ ಕುರಿತು ಶ್ರೀ ಸಂಗಮೇಶ್ವರ ದೇವಸ್ಥಾದ ಆವರಣದಲ್ಲಿ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬಸವನ ಬಾಗೇವಾಡಿ ಶ್ರೀ ಬಸವೇಶ್ವರ ಜಾತ್ರೆಯನ್ನು ಸಹ ವಿಜ್ರಂಭಣೆಯಿಂದ ದಿನಾಂಕ 22-08-2016 ರಿಂದ 24-08-2016ರ ವರೆಗೆ ಆಚರಿಸಲಾಯಿತು.
01. ಕಾರ್ತಿಕೋತ್ಸವ ಶ್ರೀ ಸಂಗಮೇಶ್ವರ ದೇವರ ಕಾರ್ತಿಕೋತ್ಸವವನ್ನು ದಿನಾಂಕ 26-12-2016 ರಂದು ಧಾರ್ಮಿಕ ವಿಧಿ ವಿಧಾನಗಳ ಹಿನ್ನೆಲೆಯಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
02. ಶರಣಮೇಳ ಹಾಗೂ ಮಕರ ಸಂಕ್ರಮಣದ ತೀರ್ಥಸ್ನಾನ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ವ್ಯವಸ್ಥೆಯನ್ನು ಮಾಡಲಾಯಿತು.
03. ಕೂಡಲಸಂಗಮ ಅಭಿವೃದ್ಧಿ ಮಂಡಳಿಯ 12ನೇ ಸಭೆಯು ದಿನಾಂಕ: 21-06-2016 ರಂದು ಮಧ್ಯಾಹ್ನ 4-30 ಗಂಟೆಗೆ ವಿಧಾನ ಸೌಧದ ಸಮಿತಿ ಕೊಠಡಿ ಸಂಖ್ಯೆ: 313ರಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಯವರು, ಕರ್ನಾಟಕ ಸರ್ಕಾರ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
04. ದಿನಾಂಕ:05-11-2016ರಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭಾ ಭವನದಲ್ಲಿ ಬೆಳಗಾವಿ ವಿಭಾಗದ 10ನೇ ತರಗತಿಯಲ್ಲಿ ಅತಿ ಹೆಚ್ಚು ಪಡೆದ ಮಕ್ಕಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸನ್ಮಾನ ಅಮಾರಂಭವನ್ನು ಮಾನ್ಯ ಶ್ರೀ ಹೆಚ್ ವೈ. ಮೇಟಿ ಅಬಕಾರಿ ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರವರ ಅಧ್ಯಕ್ಷತೆಯಲ್ಲಿ ಜರುಗಿತು.
05. ಕೂಡಲಸಂಗಮದ ಬಸವ ಅಂತರರಾಷ್ಟ್ರೀಯ ಕೇಂದ್ರ ಕಟ್ಟಡದಲ್ಲಿ ಬಸವ ಮ್ಯುಜಿಯಂ ನಿರ್ಮಿಸುವ ಕುರಿತು ವಿಸ್ತ್ರತಾ ಯೋಜನಾ ವರದಿಯನ್ನು ತಾಂತ್ರಿಕವಾಗಿ ಪರಿಶೀಲಿಸುವ ಸಲುವಾಗಿ ಮುಖ್ಯ ಅಭಿಯಂತರರು, ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಇವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ಸಭೆಯು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ದಿನಾಂಕ : 18-04-2016 ರಂದು ಮಧ್ಯಾಹ್ನ 3.00 ಘಂಟೆಗೆ ಜರುಗಿತು.
06. ಕೂಡಲಸಂಗಮದ ಬಸವ ಅಂತರರಾಷ್ಟ್ರೀಯ ಕೇಂದ್ರ ಕಟ್ಟಡದಲ್ಲಿ ಬಸವ ಮ್ಯೂಜಿಯಂ ನಿರ್ಮಿಸುವ ಸಲುವಾಗಿ 1 ನೇ ತಾಂತ್ರಿಕ ಸಲಹಾ ಸಮಿತಿ ಸಭೆಯು ಮುಖ್ಯ ಅಭಿಯಂತರರು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಇವರ ಅಧ್ಯಕ್ಷತೆಯಲ್ಲಿ ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ದಿನಾಂಕ: 09-11-2016 ರಂದು ಮಧ್ಯಾಹ್ನ 12.00 ಗಂಟೆಗೆ ಜರುಗಿತು.
07. ದಾಸೋಹ ವ್ಯವಸ್ಥೆ: ಕೂಡಲಸಂಗಮದಲ್ಲಿ ನಿರಂತರ ಅನ್ನಸಂತರ್ಪಣೆಯನ್ನು ಮಾಡಲಾಗುತ್ತಿದೆ. ಪ್ರತಿದಿನ ಮಧ್ಯಾಹ್ನ 12-00 ರಿಂದ 2-30 ಮತ್ತು ರಾತ್ರಿ 7-30 ರಿಂದ 9.00 ರ ವರಗೆ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಪ್ರತಿವರ್ಷ ನವಂಬರ ತಿಂಗಳಿನಿಂದ ಜನವರಿವರೆಗೆ ಶಾಲಾ ಮಕ್ಕಳಿಗೂ ಸಹ ಈ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ.
ಕೂಡಲಸಂಗಮದಲ್ಲಿ ಶ್ರೀ ಬಸವೇಶ್ವರ ಮ್ಯೂಜಿಯಂನ್ನು ನವದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಸ್ಥಾಪಿಸಲು ಹಾಗೂ ಬಸವನ ಬಾಗೇವಾಡಿಯಲ್ಲಿ ಅವಶ್ಯಕವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರದ ಅನುದಾನದಲ್ಲಿ ಮೊದಲನೇ ಹಂತದಲ್ಲಿ ಕೈಗೊಳ್ಳಲು ಕರ್ನಾಟಕ ಸರ್ಕಾರದ ನಡವಳಿಗಳ ಆದೇಶ ಸಂಖ್ಯೆ :ಕಂಇ 91 ಆರ್ಇಹೆಚ್ 2015 ಬೆಂಗಳೂರು ದಿನಾಂಕ: 03-03-2017ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.