​​

​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ರಾಜ್ಯದಲ್ಲಿ ಆಯುಷ್ ಪದ್ದತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ/ಘಟಕಗಳನ್ನು ಪ್ರಾರಂಭಿಸುವ ಬಗ್ಗೆ.

ಓದಲಾಗಿದೆ:

  1. ಸರ್ಕಾರದ ಆದೇಶ ಸಂಖ್ಯೆ ಆಕುಕ 207 ಪಿಐಎಂ 2012 ದಿನಾಂಕ 31.08.2012
  2. ಸರ್ಕಾರದ ಆದೇಶ ಸಂಖ್ಯೆ ಆಕುಕ 06 ಪಿಐಎಂ 2013 ದಿನಾಂಕ 18.12.2013.
  3. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಆಯುಷ್/06/ಆಯವ್ಯಯ (1)/2012-13 ದಿನಾಂಕ 02.01.2014

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ: (1) ರ ಸರ್ಕಾರಿ ಆದೇಶದಲ್ಲಿ ಒಟ್ಟು 15 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದರಂತೆ 15 ಆಯುಷ್ ಘಟಕಗಳನ್ನು ಪ್ರಾರಂಭಿಸಲು ಹಾಗೂ ಪ್ರತಿ ಘಟಕಕ್ಕೆ ತಲಾ ಒಂದೊಂದು ವೈದ್ಯಾಧಿಕಾರಿ ದರ್ಜೆ-1, ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್ ಮತ್ತು ಪಂಚಕರ್ಮ ಥೆರಪಿಸ್ಟ್ ಹುದ್ದೆ ಸೇರಿ ಒಟ್ಟು 60 ಹುದ್ದೆಗಳನ್ನು ಸೃಜಿಸಲು ಮಂಜೂರಾತಿ ನೀಡಲಾಗಿತ್ತು ಹಾಗೂ ಪ್ರತಿ ಘಟಕಕ್ಕೆ ಒಂದು ಪ್ರಥಮ ದರ್ಜೆ ಸಹಾಯಕ ಹುದ್ದೆ, ಒಂದು ವಾರ್ಡ್ ಅಟೆಂಡರ್/ಆಯಾ ಹುದ್ದೆ ಮತ್ತು ಜವಾನ ಹುದ್ದೆಯ ಸೇವೆಯನ್ನು ಬಾಹ್ಯ ಮೂಲದಿಂದ ಪಡೆಯಲು ಮಂಜೂರಾತಿ ನೀಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರಿ ಆದೇಶದಲ್ಲಿ ಸರ್ಕಾರದ ಆದೇಶ ಸಂಖ್ಯೆ ಆಕುಕ 207 ಪಿಐಎಂ 2012 ದಿನಾಂಕ 31.08.2012ರಲ್ಲಿ ಸೂಚಿಸಲಾದ 15 ತಾಲ್ಲೂಕು ಕೇಂದ್ರಗಳಲ್ಲಿನ ಆಯುಷ್ ತಾಲ್ಲೂಕು ಕೇಂದ್ರಗಳಲ್ಲಿನ ಆಯುಷ್ ಘಟಕ/ಆಸ್ಪತ್ರೆಗಳಿಗೆ ಅಗತ್ಯವಿರುವ ಪ್ರಥಮ ದರ್ಜೆ ಸಹಾಯಕರು 01 ಹುದ್ದೆ, ವಾರ್ಡ್ ಅಟೆಂಡರ್/ಆಯಾ 01 ಹುದ್ದೆ ಮತ್ತು ಜವಾನ 01 ಹುದ್ದೆಯನ್ನು redployment ಮುಖಾಂತರ ತುಂಬಲು ಮಂಜೂರಾತಿ ನೀಡಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಪತ್ರದಲ್ಲಿ ಆಯುಷ್ ನಿರ್ದೇಶಕರು, ಸರ್ಕಾರದ ಆದೇಶ ಸಂಖ್ಯೆ ಆಕುಕ 207 ಪಿಐಎಂ 2012 ದಿನಾಂಕ 31.08.2012ರಲ್ಲಿ ಒಟ್ಟು 15 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದರಂತೆ 15 ಆಯುಷ್ ಘಟಕಗಳನ್ನು ಪ್ರಾರಂಭಿಸಲು ಹಾಗೂ ಪ್ರತಿ ಘಟಕಕ್ಕೆ ತಲಾ ಒಂದೊಂದು ವೈದ್ಯಾಧಿಕಾರಿ ದರ್ಜೆ-1, ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್ ಮತ್ತು ಪಂಚಕರ್ಮ ಥೆರಪಿಸ್ಟ್ ಹುದ್ದೆ ಸೇರಿ ಒಟ್ಟು 60 ಹುದ್ದೆಗಳನ್ನು ಸೃಜಿಸಲು ಮಂಜೂರಾತಿ ನೀಡಲಾಗಿತ್ತು ಹಾಗೂ ಪ್ರತಿ ಘಟಕಕ್ಕೆ ಒಂದು ಪ್ರಥಮ ದರ್ಜೆ ಸಹಾಯಕ ಹುದ್ದೆ, ಒಂದು ವಾರ್ಡ್ ಅಟೆಂಡರ್/ಆಯಾ ಹುದ್ದೆ ಮತ್ತು ಜವಾನ ಹುದ್ದೆಯ ಸೇವೆಯನ್ನು ಬಾಹ್ಯ ಮೂಲದಿಂದ ಪಡೆಯಲು ಮಂಜೂರಾತಿ ನೀಡಲಾಗಿತ್ತೆಂದು ತಿಳಿಸುತ್ತಾ, ಹುದ್ದೆಗಳು ಸೇವೆಯನ್ನು ಬಾಹ್ಯ ಮೂಲದಿಂದ ಪಡೆಯಲು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೆಂಬ ಅಂಶವನ್ನು ಹಾಗೂ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಲ್ಲಿ ಆಗಬಹುದಾದ ಆಡಳಿತಾತ್ಮಕ ತೊಂದರೆಗಳನ್ನು ವಿವರಿಸಿ ಪ್ರಥಮ ದರ್ಜೆ ಸಹಾಯಕರು 01 ಹುದ್ದೆ, ವಾರ್ಡ್ ಅಟೆಂಡರ್/ಆಯಾ 01 ಹುದ್ದೆ ಮತ್ತು ಜವಾನ 01 ಹುದ್ದೆಯನ್ನು ಸೃಜಿಸುವಂತೆ ಆಯುಷ್ ನಿರ್ದೇಶನಾಲಯದ ದಿನಾಂಕ 24.12.2012ರ ಪತ್ರದಲ್ಲಿ ಕೋರಲಾಗಿತ್ತೆಂದು ತಿಳಿಸಿರುತ್ತಾರೆ.  ಆದರೆ ಸರ್ಕಾರವು ಸರ್ಕಾರದ ಆದೇಶ ಸಂಖ್ಯೆ ಆಕುಕ 06 ಪಿಐಎಂ 2013 ದಿನಾಂಕ 18.12.2013ರಲ್ಲಿ 15 ತಾಲ್ಲೂಕು ಕೇಂದ್ರಗಳಲ್ಲಿನ ಆಯುಷ್ ಘಟಕ/ಆಸ್ಪತ್ರೆ ಘಟಕ ಆಗತ್ಯವಿರುವ ಪ್ರಥಮ ದರ್ಜೆ ಸಹಾಯಕರು 01 ಹುದ್ದೆ, ವಾರ್ಡ್ ಅಟೆಂಡರ್/ಆಯಾ 01 ಹುದ್ದೆ ಮತ್ತು ಜವಾನ 01 ಹುದ್ದೆಯನ್ನು Redeployment  ಮುಖಾಂತರ ತುಂಬಲು ಮಂಜೂರಾತಿ ನೀಡಲಾಗಿತ್ತೆಂದು ತಿಳಿಸುತ್ತಾ, ಆಯುಷ್ ಇಲಾಖೆಯಲ್ಲಿ ಲಿಪಿಕ ನೌಕರರ ವರ್ಗದ ಹುದ್ದೆಗಳು ಅಗತ್ಯತೆಗೆ ತಕ್ಕಂತೆ ಸೃಜನೆಯಾಗಿರುವುದಿಲ್ಲವಾದ್ದರಿಂದ, ಪ್ರಸ್ತುತ ಇಲಾಖೆಯಲ್ಲಿ ಕಾರ್ಯದ ಒತ್ತಡ ಅಧಿಕವಾಗಿರುವುದರಿಂದ ಮತ್ತು ಎಲ್ಲಾ ವೃಂದದ ಹುದ್ದೆಗಳು ಕನಿಷ್ಠ ಪ್ರಮಾಣದಲ್ಲಿರುವುದರಿಂದ Redeployment ಮುಖಾಂತರ ಹುದ್ದೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸುತ್ತಾ, ಸರ್ಕಾರದ ಆದೇಶ ಆಕುಕ 06 ಪಿಐಎಂ 2013, ದಿನಾಂಕ 18.12.2013ನ್ನು ಮಾರ್ಪಡಿಸಿ 15 ಆಯುಷ್ ಘಟಕಗಳಿಗೆ ಪ್ರಥಮ ದರ್ಜೆ ಸಹಾಯಕರು 01 ಹುದ್ದೆ, ವಾರ್ಡ್ ಅಟೆಂಡರ್/ಆಯಾ 01 ಹುದ್ದೆ ಮತ್ತು ಜವಾನ 01 ಹುದ್ದೆಗಳನ್ನು ಹೊಸದಾಗಿ ಸೃಜಿಸಲು ಹಾಗೂ ಪ್ರಥಮ ದರ್ಜೆ ಸಹಾಯಕ ಹುದ್ದೆಗಳನ್ನು ಪದೋನ್ನತಿ ಮತ್ತು ನೇರ ನೇಮಕಾತಿ ಮುಖಾಂತರ, ಜವಾನ ಮತ್ತು ವಾರ್ಡ್ ಅಟೆಂಡರ್/ಆಯಾ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮಂಜೂರಾತಿ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

​ಸರ್ಕಾರದ ಆದೇಶ ಸಂಖ್ಯೆ 35 ಪಿಐಎಂ 2014, ಬೆಂಗಳೂರು, ದಿನಾಂಕ 25.06.2014

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಈ ಆದೇಶದ ಅನುಬಂಧದಲ್ಲಿ ನಮೂದಿಸಲಾದ 15 ತಾಲ್ಲೂಕುಗಳಲ್ಲಿ 10 ಹಾಸಿಗೆಗಳ ಆಯುಷ್ ಆಸ್ಪತ್ರೆ/ಘಟಕಗಳಿಗೆ ಈ ಕೆಳಕಂಡಂತೆ ಹುದ್ದೆಗಳನ್ನು ಸೃಜಿಸಿ, ನಿಯಮಾನುಸಾರ ಭರ್ತಿ ಮಾಡಲು ಸರ್ಕಾರದ ಮಂಜೂರಾತಿ ನೀಡಿದೆ.

ಕ್ರಮ ಸಂಖ್ಯೆಹುದ್ದೆಗಳುಪ್ರತಿಘಟಕ್ಕೆ ಹುದ್ದೆಗಳ ಸಂಖ್ಯೆನೇಮಕಾತಿ ವಿಧಾನ
1ಪ್ರಥಮ ದರ್ಜೆ ಸಹಾಯಕರು1ನಿಯಮಾನುಸಾರ
2ವಾರ್ಡ್ ಅಟೆಂಡರ್/ಆಯಾ1ಹೊರಗುತ್ತಿಗೆ
3ಜವಾನ1ಹೊರಗುತ್ತಿಗೆ
​15 ಘಟಕ್ಕೆ45 

 

ಈ ಆದೇಶವನ್ನು ಇಲಾಖೆಯು ಟಿಪ್ಪಣಿ ಸಂಖ್ಯೆ: ಆಇ 99 ವೆಚ್ಚ-5/2014ದಿನಾಂಕ 10.06.2014ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಬಿ. ಕಮಲಮ್ಮ), ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾವೈಪ ಮತ್ತು ಸಮನ್ವಯ)​​