​​​​​​​ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆಯ ಭರವಸೆಗಳಿಗೆ ನೀಡಿದ ಉತ್ತರವನ್ನು ಪರಿಶೀಲಿಸಿ ಬಾಕಿಯಿಟ್ಟಿರುವ ನಿರ್ಣಯಗಳು


​ಕ್ರ.ಸಂ.​
ಆಶ್ವಾಸನೆ ಸಂಖ್ಯೆ
ಆಧಾರ ಮತ್ತು ದಿನಾಂಕ​
ವಿಷಯ
ಆಶ್ವಾಸನೆ
​​ನಿರ್ಣಯ
2160/12/2006
ಚುಗುಪ್ರ: 1321       ಶ್ರೀ. ಪ್ರಭಾಕರ್ ಬಂಗೇರ .ಕೆ  ವಿಸನದಿ: 06-07-2006

 


ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರವನ್ನು 70 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದಜೇಗೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆ
ವಿಶೇಷ ನೇಮಕಾತಿ  ನಿಯಮಗಳ ಮೂಲಕ 500 ವೈದ್ಯರನ್ನು ಹಾಗೂ 2007 ವೈದ್ಯೇತರ ಹುದ್ದೆಗಳನ್ನು ಭರ್ತಿ ಮಾಡಲು ಶೀ್ರ ಕ್ರಮ ಕೈಗೊಳ್ಳಲಾಗುವುದೆಂದು ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
​ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರವನ್ನು 70 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸಾರ್ವಜನಿಕ ಅನುಕೂಲ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಕೆ. ಪ್ರಭಾಕರ ಬಂಗೇರರವರು ದಿನಾಂಕ 06.07.2006ರಂದು ಚುಕ್ಕೆ ಗುರುತಿನ ಪ್ರಶ್ನೆ 1321ಅನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ಸದರಿ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು ಉಳಿದ ಕಾಮಗಾರಿಗಳು ಹೆಚ್ಚುವರಿ ಅನುದಾನ ಬಿಡುಗಡೆಗೆ ಕೋರಿಕೆ ಸಲ್ಲಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ.  ಇಂತಹ ಕಾಮಗಾರಿಗಳಿಗೆ ರೂ. 180 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಈ ಪೈಕಿ ರೂ. 5 ಕೋಟಿ ಮಾತ್ರ ಬಿಡುಗಡೆಯಾಗಿರುತ್ತದೆ.  ಬಾಕಿ ಹಣ ಬಿಡುಗಡೆಯಾದ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದಾಗಿ ಉತ್ತರ ನೀಡಿದರು.  ಸಮಿತಿಯು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಾ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಆಸ್ಪತ್ರೆಗಳ ನಿರ್ವಹಣೆ ಮತ್ತು ಮೇಲ್ದರ್ಜೆಗೇರಿಸುವ ವಿಷಯಗಳಿಗೆ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸೂಚಿಸುತ್ತಾ ಸದರಿ ಭರವಸೆ ಬಗ್ಗೆ ಹೆಚ್ಚಿನ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
3
164/12/2006
ಚ.ರ.ಪ್ರ: 1024      ಶ್ರೀ ಬಸವರಾಜು ಎ.ಎಸ್      ವಿಸನದಿ: 06-07-2006
ಅರಸೀಕೆರೆ ಸಾರ್ವಜನಿಕ ಜೆ.ಸಿ.ಆಸ್ಪತ್ರೆ ನಿರ್ಮಾಣಕ್ಕೆ ಕೌಂಪೌಂಡನ್ನು ನಿರ್ಮಿಸುವ ಬಗ್ಗೆ
ಇಲಾಖೆಯ ವತಿಯಿಂದ ಹಣಕಾಸಿನ ಲಭ್ಯತೆಯನ್ನಾದರಿಸಿ ಕ್ರಮ ಕೈಗೊಳ್ಳಲಾಗುವುದೆಂದು ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು  ಭರವಸೆ ನೀಡಿರುತ್ತಾರೆ.​​
ಅರಸೀಕೆರೆ ಸಾರ್ವಜನಿಕ ಜೆ.ಸಿ. ಆಸ್ಪತ್ರೆ ನಿರ್ಮಾಣ ಮತ್ತು ಕಾಂಪೌಂಡ್ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಎ.ಎಸ್. ಬಸವರಾಜು ರವರು ದಿನಾಂಕ 06.07.2006ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 1024ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ಸದರಿ ಆಸ್ಪತ್ರೆಯ ದುರಸ್ತಿ ಕಾಮಗಾರಿ ಚಾಲನೆಯಲ್ಲಿದ್ದು, ಕಾಂಪೌಂಡ್ ನಿರ್ಮಾಣಕ್ಕೆ ಅನುದಾನವು ಲಭ್ಯತೆಯಿರುವುದಿಲ್ಲವೆಂದು ತಿಳಿಸಿದರು.  ಸಮಿತಿಯ ಈ ವಿಚಾರವನ್ನು ಪುನರ್ ಪರಿಶೀಲಿಸಿ, ಸದರಿ ಆಸ್ಪತ್ರೆಗೆ ಕಾಂಪೌಂಡ್ ನಿರ್ಮಿಸುವುದರ ಬಗ್ಗೆ ಕ್ರಮ ಕೈಗೊಂಡು ಸಮಿತಿಗೆ ಮಾಹಿತಿ ನೀಡುವಂತೆ ಸೂಚಿಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು  ಕಾಯ್ದಿರಿಸಿತು.
4178/12/2006
ಚು.ಗು.ಪ್ರ: 1543     ಶ್ರೀ ಶ್ರೀನಿವಾಸ್ ಎಂ       ವಿಸನದಿ: 13-07-2006
ಮಂಡ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹನಕೆರೆ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸುವುದರ ಜೊತೆಗೆ 10 ಹಾಸಿಗೆಯ ಹೆರಿಗೆ ಆಸ್ಪತ್ರೆಯನ್ನು ಸಹ ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಬಗ್ಗೆ
ಆರೋಗ್ಯ ಕೇಂದ್ರಗಳನ್ನು ಅಪ್ಗ್ರೇಡ್ ಮಾಡುವುದಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ ಆಸಂದರ್ಭದಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡು ಅದನ್ನು ಅಪ್ಗ್ರೇಡ್   ಮಾಡುವಂತಹ ಸಂದರ್ಭ ದಲ್ಲಿ ನಿಯಮಾನುಸಾರ ಕನ್ಸೀಡರ್ಮಾಡುತ್ತೇನೆಂದು ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹನಕೆರೆ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುದರ ಜೊತೆಗೆ 10 ಹಾಸಿಗೆಯ ಹೆರಿಗೆ ಆಸ್ಪತ್ರೆಯನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಎಂ. ಶ್ರೀನಿವಾಸ್ ರವರು ದಿನಾಂಕ 13.07.2006ರಂದು ಚುಕ್ಕೆ  ಗುರುತಿನ ಪ್ರಶ್ನೆ ಸಂಖ್ಯೆ 1543ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗಳಿಗೆ ಇಲಾಖೆಯವರು ಮಾಹಿತಿ ನೀಡುತ್ತಾ, ಮಂಡ್ಯ ತಾಲ್ಲೂಕಿನ ಜನಸಂಖ್ಯೆ ಆಧಾರದ ಮೇಲೆ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಅವಕಾಶವಿದ್ದು, ಈಗಾಗಲೇ 25 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಹಾಗೂ ಪ್ರತ್ಯೇಕ ಹೆರಿಗೆ ಆಸ್ಪತ್ರೆ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಭರವಸೆಯನ್ನು ಕಾಯ್ದಿರಿಸಿತು.
5181/12/2006
ಚು.ಗು.ಪ್ರ: 690  ಶ್ರೀ ಕ್ಯಾತ್ಸಂದ್ರ ಎನ್. ರಾಜಣ್ಣ, ವಿಸಪ ದಿನಾಂಕ 13-07-2006
ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ವೈದ್ಯರ ಕೊರತೆ ಬಗ್ಗೆ
ವೈದ್ಯರುಗಳನ್ನು ನೇಮಕಾತಿ ಮಾಡಿಕೊಳ್ಳು ವಾಗ ಸರ್ಕಾರಿ ಆದೇಶದ ಪ್ರಕಾರಮಹಿಳಾಮೀಸಲಾತಿಯಂತೆ ಶೇಕಡ 30%ರಷ್ಟು ಮಹಿಳಾ ವೈದ್ಯರನ್ನು   ಖಾಲಿಯಿರುವ ಹುದ್ದೆಗಳಿಗೆ ಭರ್ತಿ ಮಾಡಲಾಗುವುದೆಂದು ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.​
ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ವೈದ್ಯರ ಕೊರತೆಗೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಕೆ.ಎನ್. ರಾಜಣ್ಣರವರು ದಿನಾಂಕ 13.07.2006ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 690ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ​
6186/12/2007
ಚು.ಗು.ಪ್ರ: 216 ಶ್ರೀ ಪಾಟೀಲ್ ಎಸ್.ಎಸ್  ವಿಸನ ದಿನಾಂಕ 
01-02-2007
ಮುಂಡರಗಿ ಕ್ಷೇತ್ರದ ಡಂಬಳ ಬಾಗೇವಾಡಿ ಲಕ್ಕುಂಡಿ ಹಾಗೂ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ
ಪ್ರಸ್ತಾವನೆಗಳು ಬಂದಿದ್ದು ಮಾರ್ಗ ಸೂಚಿ ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು   ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
ಮುಂಡರಗಿ ಕ್ಷೇತ್ರದ ಡಂಬಳ ಬಾಗೇವಾಡಿ ಲಕ್ಕುಂಡಿ ಹಾಗೂ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಎ.ಎಸ್. ಪಾಟೀಲ್ ರವರು ದಿನಾಂಕ 01.07.2007ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 216ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ನೀಡಿದ ಉತ್ತರವನ್ನು ಪರಿಶೀಲಿಸಿದ ಸಮಿತಿಯು ಹೆಚ್ಚಿನ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
7196/12/2007
ಚು.ರ.ಪ್ರ. 964
ಶ್ರೀ ಶಿವಶಂಕರ ರೆಡ್ಡಿ ಎನ್.ಹೆಚ್.
​ವಿಸನದಿ:08.02.2007

ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವ ಔಷಧಿಗಳ ಬೆಲೆ ಒಂದು ಅಂಗಡಿಗಿಂತ ಇನ್ನೊಂದು ಅಂಗಡಿಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದು

ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವ ಔಷಧಿಗಳ ಬೆಲೆ ಒಂದು ಅಂಗಡಿಗಿಂತ ಇನ್ನೊಂದು ಅಂಗಡಿಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಎನ್. ಹೆಚ್. ಶಿವಶಂಕರರೆಡ್ಡಿರವರು ದಿನಾಂಕ 08.02-2007ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 964ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ಔಷಧ ಬೆಲೆಗಳ ನಿಯಂತ್ರಣ ಆದೇಶ 2013ರ ಪ್ರಕಾರ ಔಷಧಗಳ ಲೇಬಲ್ ಮೇಲೆ ಗರಿಷ್ಠ ಬೆಲೆ ನಮೂದಿಸಬೇಕಾಗಿರುತ್ತದೆ.
8197/12/2007
ಚು.ರ.ಪ್ರ: 1063      ಶ್ರೀ ಮೋಹನ್ ಕೃಷ್ಣ ಶೆಟ್ಟಿ               ವಿಸನದಿ: 08-02-2007
ಕುಮಟಾ ತಾಲ್ಲೂಕಿನ ಗೋಕರ್ಣ ಹಾಗೂ ಆಸುಪಾಸಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ ಬಗ್ಗೆ
ಮಾರ್ಗಸೂಚಿ ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು  ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
ಕುಮುಟಾ ತಾಲ್ಲೂಕಿನ ಗೋಕರ್ಣ ಹಾಗೂ ಆಸುಪಾಸಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಮೋಹನ್ ಕೃಷ್ಣ ಶೆಟ್ಟಿರವರು ದಿನಾಮಕ 08.02.2007
9199/2007
ಚು.ರ.ಪ್ರ.ಸಂ.521 ಶ್ರೀ ಮಾಮನಿ ವಿಶ್ವನಾಥ ಕರಿಬಸಪ್ಪ
​ವಿಸಸದಿ: 08.02.2007

ಸವದತ್ತಿ ತಾ:ನ ಹಂಚಿನಾಳಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವ ಬಗ್ಗೆ​


ಸವದತ್ತಿ ತಾಲ್ಲೂಕಿನ ಹಂಚಿನಾಳಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಮಾಮನಿ ವಿಶ್ವನಾಥ ಕರಿಬಸಪ್ಪರವರು ದಿನಾಂಕ 08.02.2007ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 521ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ನೀಡಿದ ಉತ್ತರವನ್ನು ಪರಿಶೀಲಿಸಿದ ಸಮಿತಿಯು ಹೆಚ್ಚುವರಿ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
10​​204/12/2007​
ಚು.ರ.ಪ್ರ.ಸ: 1695 ಶ್ರೀ ಕ್ಯಾತಸಂದ್ರ ಎನ್ ರಾಜಣ್ಣ       ವಿಸನದಿ: 29-03-2007​
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ದೊಡ್ಡೇರಿಹೋಬಳಿಯ ಬಡವನಹರ್ಳಳಿ ಮತ್ತು ದೊಡ್ಡೇರಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ವಹಿಸಲಾಗಿರುವುದರಿಂದ ಇದನ್ನು ಹಿಂದಕ್ಕೆ ಪಡೆಯಲು ಕ್ರಮ ಕೈಗೊಳ್ಳುವ ಬಗ್ಗೆ​

ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಲಾಗುವುದೆಂದು ಮಾನ್ಯ ಆರೋಗ್ಯ  ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.​

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಡೊಡ್ಡೇರಿನ ಹೋಬಳಿಯ ಬಡವನಹಳ್ಳಿ ಮತ್ತು ದೊಡ್ಡೇರಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ವಹಿಸಲಾಗಿರುವುದರಿಂದ ಇದನ್ನು ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಕೆ.ಎನ್. ರಾಜಣ್ಣರವರು ದಿನಾಂಕ 23.09.2007ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 1695ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ಆರೋಗ್ಯ ಬಂಧು ಯೋಜನೆಯಡಿಯಲ್ಲಿ ಇದನ್ನು ಖಾಸಗಿಯವರಿಗೆ ನೀಡಲಾಗಿದ್ದು, ನಿರ್ವಹಣೆ ಸರಿಯಲ್ಲದೇ ಇರುವುದರಿಂದ ಪುನ: ವಾಪಸ್ಸು ಪಡೆಯಲಾಗಿದೆ.  ರಾಜ್ಯದಲ್ಲಿ ಒಟ್ಟು 52 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜಿಲ್ಲಾ ಆರೋಗ್ಯ ಸೊಸೈಟಿ ಮೂಲಕ ಻ನುಮೋದನೆ ಪಡೆದು, ಆರೋಗ್ಯ ಬಂಧು ಯೋಜನೆಯಲ್ಲಿ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿರುತ್ತದೆ.  ಈ ಬಗ್ಗೆ ದೂರುಗಳಿದ್ದು, ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಿತಿಗೆ ವರದಿ ನೀಡುವುದಾಗಿ ನೀಡಿದ ಉತ್ತರವನ್ನು ಪರಿಶೀಲಿಸಿದ ಸಮಿತಿಯು ಹೆಚ್ಚಿನ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
11216/2007ಚು.ರ.ಪ್ರ: 635 ಶ್ರೀ ಕೆ.ಪ್ರಭಾಕರ ಬಂಗೇರ ವಿಸನದಿ: 19-07-2007
ಬೆಳ್ತಂಗಡಿ ತಾಲ್ಲೂಕಿನ ಆಸ್ಪತ್ರೆಗೆ ಆದ್ಯತೆ ಮೇರೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ​
ಆದ್ಯತೆಯ ಮೇರೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾನ್ಯ ಆರೋಗ್ಯ  ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
​ಬೆಲ್ತಂಗಡಿ ತಾಲ್ಲೂಕಿನ ಆಸ್ಪತ್ರೆಗೆ ಆದ್ಯತೆ ಮೇರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಕೆ. ಪ್ರಭಾಕರ ಬಂಗೇರರವರು ದಿನಾಂಕ 19.07.2007ರಂದು ಚುಕ್ಕೆ ರಹಿತ ಪ್ರಶ್ನೆ 635ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ಅನುದಾನದ ಲಭ್ಯತೆ ಕಡಿಮೆಯಿರುವುದರಿಂದ ಹೆಚ್ಚುವರಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಗೊಂಡ ನಂತರ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು.  ಇದೇ ರೀತಿಯ ಸುಮಾರು 200 ಕಾಮಗಾರಿಗಳು ರಾಜ್ಯದಲ್ಲಿ ಬಾಕಿಯಿದ್ದು, ಅನುದಾನ ಬಂದ ನಂತರ ಪೂರ್ಣಗೊಳಿಸುವುದಾಗಿ ನೀಡಿದ ಉತ್ತರವನ್ನು ಪರಿಶೀಲಿಸಿದ 200 ಕಾಮಗಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಸಭೆಯನ್ನು ಕಾಯ್ದಿರಿಸಿತು.
1206/2008
ಚು.ರ.ಪ್ರ. 276 ಶ್ರೀ ಆರ್.ರೋಷನ್ ಬೇಗ್ ವಿಸನದಿ:31.7.2008

ರಾಜ್ಯದಲ್ಲಿ ನಿಷೇಧಿಸಲ್ಪಟ್ಟ ಔಷಧಿಗಳನ್ನು ಔಷಧಿ ಅಂಗಡಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟುವ ಬಗ್ಗೆ

ರಾಜ್ಯದಲ್ಲಿ ನಿಷೇಧಿಸಲ್ಪಟ್ಟ ಔಷಧಿಗಳನ್ನು ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಆರ್. ರೋಷನ್ ಬೇಗ್ ರವರು ದಿನಾಂಕ 31​.07.2008ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 276ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ರಾಜ್ಯದಲ್ಲಿ ನಿಷೇಧಿಸಲ್ಪಟ್ಟ Gro Gro Syrup ಅನ್ನು ತಯಾರಿಸಿ ಮಾರಾಟ ಮಾಡಿರುವುದಕ್ಕಾಗಿ ದಿನಾಂಕ 24.02.2011ರಂದು M/s Syncom Healthcare Ltd and M/s Piramal Healthcare Limited ಇವರುಗಳ ವಿರುದ್ಧ ಬೆಳಗಾವಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಕ್ರನಾಟಕ ಉಚ್ಚ ನ್ಯಾಯಾಲಯ ಧಾರವಾಡ ಸಂಚಾರಿ ಪೀಠವು ಇದಕ್ಕೆ ತಡೆಯಾಜ್ಞೆ ನೀಡಿರುತ್ತದೆಂದು ತಿಳಿಸಿದರು.  ಇಂತಹ ಗಂಭೀರ ಪ್ರಕರಣಗಳಲ್ಲಿ ಇಲಾಖೆಯವರು ಆಗಿಂದಾಗ್ಗೆ ಪ್ರಕರಣದ ಸತ್ಯಾಂಶಗಳನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಸಮಿತಿಯ ತೀವ್ರ ಅಸಮಧಾನ ವ್ಯಕ್ತಪಡಿಸುತ್ತದೆ.  ಬ್ಯಾನ್ ಆಗಿರುವ ಔಷಧಿಯನ್ನು ರಾಜ್ಯದಲ್ಲಿ ಪುನ: ಮಾರಾಟ ಮಾಡುತ್ತಿರುವ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ರವರ ಗಮನಕ್ಕೆ ತರಬೇಕಾಗಿತ್ತು.  ಈಗಾಗಲೇ ಸುಮಾರು 5 ವರ್ಷಗಳು ಕಳೆದಿದ್ದು, ಇಲಾಖೆಯವರು ಈಗಲಾದರೂ ಸಂಪೂರ್ಣ ಕಾಳಜಿವಹಿಸಿ ಅವಶ್ಯವಿರುವ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಜರುಗಿಸಿ, ಈ ಪ್ರಕರಣವನ್ನು ಇತ್ಯರ್ಥಗೊಳ್ಳುವ ಬಗ್ಗೆ ನೋಡಿಕೊಳ್ಳುವುದರ ಜೊತೆಗೆ ಇದರಲ್ಲಿ ಭಾಗಿಯಾಗಿರುವ ತಪ್ಪಿತಸ್ಠರಿಗೆ ಕಠಿಣ ಶಿಕ್ಷೆಯಾಗುವ ಹಾಗೆ ಇಲಾಖೆ ಕ್ರಮವಹಿಸಬೇಕೆಂದು ಸೂಚಿಸುತ್ತಾ ಈ ಪ್ರಕರಣದ ಸಂಪೂರ್ಣ ವರದಿಯನ್ನು ಸಮಿತಿಯ ಅವಗಾಹನೆಗೆ ಸಲ್ಲಿಸಬೇಕೆಂದು ಸೂಚನೆ ನೀಡುತ್ತಾ ದಿನಾಂಕ 14.10.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.

1310/2008
ಚು.ಗು.ಪ್ರ: 277     ಶ್ರೀ ಆರ್. ರೋಷನ್ ಬೇಗ್ ಉಪ ಪ್ರಶ್ನೆ ಡಾ|| ಹೆಚ್.ಸಿ.ಮಹಾದೇವಪ್ಪ                ವಿಸನದಿ: 31-07-2008
ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿಕೂನ್ಗುನ್ಯಾ ಕಾಯಿಲೆಗೆ ಹಲವಾರು ಜನರು ತುತ್ತಾಗಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ
ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ತೆಗೆದುಕೊಳ್ಳುತ್ತೇನೆಂದು ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿಕನ್ ಗುನ್ಯ ಖಾಯಿಲೆಗೆ ಹಲವಾರು ಜನರು ತುತ್ತಾಗಿದ್ದು, ಇದನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರುಗಳಾದ ಶ್ರೀ ಆರ್. ರೋಷನ್ ಬೇಗ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪರವರುಗಳು ದಿನಾಂಕ 31.07.2008ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 277ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಮಾಹಿತಿ ನೀಡುತ್ತಾ ರಾಜ್ಯದಲ್ಲಿರುವ ಕೆರೆಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿದರು ಬಹಳಷ್ಟು ಮಟ್ಟಿಗೆ ಈ ಖಾಯಲೆಯನ್ನು ತಡೆಗಟ್ಟಬಹುದಾಗಿದೆ.   ಖಾಯಿಲೆ ಗುಣಪಡಿಸಲು ಮಾಡುವ ಖರ್ಚಿಗಿಂಗ ಕಡಿಮೆ ಖರ್ಚಿನಲ್ಲಿ ಕೆರೆಗಳನ್ನು ಸ್ವಚ್ಛಗೊಳಿಸಬಹುದಾಗಿದೆಯೆಂದು ಸಮಿತಿಯ ಗಮನಕ್ಕೆ ತಂದರು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆಯ ಜೊತೆಗೆ ನಗರಾಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಹಾಗೂ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖಾಧಿಕಾರಿಗಳ ಜೊತೆಗೆ ಜಂಟಿ ಸಭೆ ನಡೆಸಬೇಕೆಂದು ತೀರ್ಮಾನಿಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
1425/2009
ಚು.ಗು.ಪ್ರ: 381     ಶ್ರೀ ಕುಲಕರ್ಣಿ ಶ್ರೀಕಾಂತ್ ಸುಬ್ಬರಾವ್                ವಿಸನದಿ: 26-02-2009
ಜಮಖಂಡಿಯಲ್ಲಿರುವ ನೂರು ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಮತ್ತು ಇಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಭರ್ತಿ ಮಾಡುವ ಬಗ್ಗೆ ಹಾಗೂ ಈ ಆಸ್ಪತ್ರೆಯ ಆಡಳಿತ ದಲ್ಲಿ ಅವ್ಯವಹಾರ ನಡೆದಿದ್ದು, ಹಣ ದುರುಪಯೋಗವಾಗಿದ್ದು, ಈ ಸಂಬಂಧ ಕೈಗೊಂಡ ಕ್ರಮದ ಬಗ್ಗೆ
ಜಮಖಂಡಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂಬ ಪ್ರಸ್ತಾವದ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ಮಾಡಿ, ಆದಷ್ಟು ಬೇಗನೆ   ಮೇಲ್ದರ್ಜೆಗೇರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಹಾಗೂ ಹಣ ದುರುಪಯೋಗ ಮಾಡಿರುವವರ ವಿರುದ್ಧ ತನಿಖೆ ಮಾಡಿ, ದಿನಾಂಕ: 02-02-2009 ರಂದು ಅಮಾನತ್ತಿನಲ್ಲಿಡಲಾಗಿದೆ ಎಂದು ಮಾನ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
​ಜಮಖಂಡಿಯಲ್ಲಿರುವ 100 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಮತ್ತು ಇಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಭರ್ತಿ ಮಾಡುವ ಬಗ್ಗೆ ಹಾಗೂಐ ಈ ಆಸ್ಪತ್ರೆಯ ಆಡಳಿತದಲ್ಲಿ ಅವ್ಯವಹಾರ ನಡೆದಿದ್ದು, ಹಣ ದುರುಪಯೋಗವಾಗಿರುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಕುಲಕರ್ಣಿ ಶ್ರೀಕಾಂತ್ ಸುಬ್ಬರಾವ್ ರವರು ದಿನಾಂಕ 26.02.2009ರಮದು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 381ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ನೀಡಿದ ಉತ್ತರವನ್ನು ಪರಿಶೀಲಿಸಿದ ಸಮಿತಿಯು ಹೆಚ್ಚಿನ ಮಾಹಿತಿ ಬಯಸಿ ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
1528/2009
ಉಪ ಪ್ರಶ್ನೆ.1084    ಶ್ರೀ ಎ. ಮಂಜು

ಮತ್ತು ಶ್ರೀ ಎಸ್.ವಿ. ರಾಮಚಂದ್ರ

ವಿಸನದಿ:23/7/2009


ಅರಸಿಕೆರೆಯಲ್ಲಿ ಡೆಂಗಿ ಜ್ವರ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಕ್ರಮ

ಕೈಗೊಳ್ಳುವುದು.


ಅರಸಿಕ್ವರೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗಿ ಜ್ವರ ಸಂಬಂದಿಸಿದಂತೆ, ಔಷಧ, ಉಪಚಾರ ಕ್ರಮಗಳ ಬಗ್ಗೆ, ಕ್ರಮ ಕೈಗೊಳ್ಳುತ್ತೇನೆಚಿದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
ಅರಸೀಕೆರೆ ಡೆಂಗಿ ಜ್ವರ ವ್ಯಾಪಕವಾಗಿ ಹರಡುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರುಗಳಾದ ಶ್ರೀಯುತರಾದ ಎ.ಮಂಜು ಹಾಗೂ ಎಸ್.ವಿ. ರಾಮಚಂದ್ರರವರುಗಳು ದಿನಾಂಕ 23.07.2009ರಂದು ಉಪ ಪ್ರಶ್ನೆ ಸಂಖ್ಯೆ 1084ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆಗೆ ನಗರಾಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾಧಿಕಾರಿಗಳ ಜೊತೆಗೆ ಜಂಟಿ ಸಭೆ ನಡೆಸಬೇಕೆಂದು ತೀರ್ಮಾನಿಸಿ, ದಿನಾಂಕ 05.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಿತು.
 16
05/2010 ಹಾಗೂ 01/2011
ಚು.ರ.ಪ್ರ. 94/607
ಶ್ರೀ ಕೆ.ಜಿ.ಕುಮಾರಸ್ವಾಮಿ
ವಿಸನದಿ: 11.3.2010
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ
ಹಂತಹಂತವಾಗಿ ಕ್ರಮ ವಹಿಸಲಾಗುವುದೆಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಭರವಸೆ ನೀಡಿರುತ್ತಾರೆ.
​ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಕೆ.ಜಿ. ಕುಮಾರಸ್ವಾಮಿರವರು ದಿನಾಂಕ 11.03.2010 ಮತ್ತು 03.03.2011ರಂದು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 94/60ನ್ನು ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ಹೆಚ್ಚಿನ ಮಾಹಿತಿ ಬಯಸಿ ದಿನಾಂಕ 12.11.2014ರಂದು ನಡೆದ ಸಭೆಯಲ್ಲಿ ಸದರಿ ಭರವಸೆಗಳನ್ನು ಕಾಯ್ದಿರಿಸಿತು.
1705/2012
ಶೂನ್ಯ ವೇಳೆ
ದಿ:24.07.2012 ಶ್ರೀ ಸಿದ್ದರಾಮಯ್ಯ


ರಾಜ್ಯದಲ್ಲಿ ಹರಡುತ್ತಿರುವ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ​
 ರಾಜ್ಯದಲ್ಲಿ ಹರಡುತ್ತಿರುವ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಶ್ರೀ ಸಿದ್ದರಾಮಯ್ಯರವರು ದಿನಾಂಕ 24.07.20​12ರಂದು ಶೂನ್ಯ ವೇಳೆಯಲ್ಲಿ ಸದನದಲ್ಲಿ ಮಂಡಿಸಿದಾಗ ಮಾನ್ಯ ಸಚಿವರು ನೀಡಿದ ಭರವಸೆಗೆ ಇಲಾಖೆಯವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆಗೆ ನಗರಾಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾಧಿಕಾರಿಗಳ ಜೊತೆಗೆ ಜಂಟಿ ಸಭೆ ನಡೆಸಬೇಕೆಂದು ​ತೀರ್ಮಾನಿಸಿ ದಿನಾಂಕ 07.01.2015ರಂದು ನಡೆದ ಸಭೆಯಲ್ಲಿ ಸದರಿ ಭರವಸೆಯನ್ನು ಕಾಯ್ದಿರಿಸಲಾಯಿತು.​