​​​

​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 175ರಿಂದ 200ಕ್ಕೆ ಹೆಚ್ಚಿಸಿರುವ ತತ್ಸಂಬಂಧದಲ್ಲಿ ಅಗತ್ಯವಿರುವ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ಓದಲಾಗಿದೆ:

  1. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಆಯುಷ್/44/ಬಿಯುಡಿ (1)/2010-11, ದಿನಾಂಕ 10.01.2012 ಮತ್ತು ದಿನಾಂಕ 30.7.2012.
  2. ಸರ್ಕಾರದ ಆದೇಶ ಸಂಖ್ಯೆ ಆಕುಕ 223 ಪಿಟಿಡಿ 2010 ದಿನಾಂಕ 31.07.2010.

 

ಪ್ರಸ್ತಾವನೆ:

ಮೆಲೆ ಓದಲಾದ ಕ್ರಮ ಸಂಖ್ಯೆ (1) ಆಯುಷ್ ನಿರ್ದೇಶಕರ ಪತ್ರದಲ್ಲಿ ಆಯುಷ್ ನಿರ್ದೇಶಕರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 175 ರಿಂದ 200ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದ್ದು, ಸದರಿ ಆದೇಶದಲ್ಲಿ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಲಾಗಿರುವುದಿಲ್ಲವೆಂದು, ಪ್ರತಿದಿನ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿರುವುದರಿಂದ, ಸಾರ್ವಜನಿಕರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸುವ ಅಗತ್ಯತೆಯಿದ್ದು, ಹೆಚ್ಚುವರಿಯಾದ ಹಾಸಿಗೆಗಳಿಗೆ ಅನುಗುಣವಾಗಿ ಈ ಕೆಳಕಂಡ ಹುದ್ದೆಗಳ ಸೃಜನೆಗೆ ಪ್ರಸ್ತಾಪಿಸಿರುತ್ತಾರೆ ಹಾಗೂ ಇದಕ್ಕೆ ತಗಲಬಹುದಾದ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2210-05-101-1-03 ಯೋಜನೇತರ ಅಡಿಯಲ್ಲಿ ಭರಿಸಲಾಗುವುದೆಂದು ತಿಳಿಸಿರುತ್ತಾರೆ.

ಕ್ರಮ ಸಂಖ್ಯೆ​ಹುದ್ದೆಗಳ ವಿವರಹೆಚ್ಚುವರಿಯಾಗಿ ಬೇಕಾಗಿರುವ ಹುದ್ದೆಗಳ ಸಂಖ್ಯೆ
1ಉಪ ವೈದ್ಯಕೀಯ ಅಧೀಕ್ಷಕರು01
2ವೈದ್ಯರು ದರ್ಜೆ-1 (ಆಯುರ್ವೇದ)03
3ಶುಶ್ರೂಷಕಿ ಅಧೀಕ್ಷಕರು06
4ಶುಶ್ರೂಷಕಿ 05
5ಔಷಧಿ ವಿತರಕರು05
6ಪ್ರಥಮ ದರ್ಜೆ ಸಹಾಯಕರು02
7ದ್ವಿತೀಯ ದರ್ಜೆ ಸಹಾಯಕರು03
8ಮಸಾಜಿಸ್ಟ್ (ಥೆರಪಿಸ್ಟ್) ಪುರುಷರು08
9ಮಸಾಜಿಸ್ಟ್ (ಧೆರಪಿಸ್ಟ್) ಮಹಿಳೆಯರು10
10ಗ್ರೂಪ್ ಡಿ02

 

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 175ರಿಂದ 200ಕ್ಕೆ ಹೆಚ್ಚಿಸಲಾಗಿದೆ.

 

ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿನ ಹಾಸಿಗಗಳ ಸಂಖ್ಯೆಯನ್ನು 175ರಿಂದ 200ಕ್ಕೆ ಹೆಚ್ಚಿಸಿರುವ ತತ್ಸಂಬಂಧದಲ್ಲಿ ಅಗತ್ಯವಿರುವ 19 ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಲು ನಿರ್ಧರಿಸಿದೆ.  ಆದುದರಿಂದ ಈ ಕೆಳಕಂಡ ಆದೇಶ.

 

​​​ಸರ್ಕಾರದ ಆದೇಶ ಸಂಖ್ಯೆ ಆಕುಕ 223 ಪಿಟಿಡಿ 2010 ಬೆಂಗಳೂರು, ದಿನಾಂಕ 07-12-2012

 

ಪ್ರಸ್ತಾವನೆಯಲ್ಲಿ ವಿವಿರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 175ರಿಂದ 200ಕ್ಕೆ ಹೆಚ್ಚಿಸಿರುವ ಕಾರಣ, ಆಡಳಿತದ ಹಿತದೃಷ್ಟಿಯಿಂದ ಈ ಕೆಳಕಂಡ ವಿವಿಧ ವೃಂದದ ಒಟ್ಟು 19 (ಹತ್ತೊಂಬತ್ತು) ಹುದ್ದೆಗಳನ್ನು ಸೃಜಿಸಿದೆ.

ಕ್ರ.ಸಂ.​ಹುದ್ದೆಗಳ ವಿವರಹೆಚ್ಚುವರಿಯಾಗಿ ಬೇಕಾಗಿರುವ ಹುದ್ದೆಗಳ ಸಂಖ್ಯೆ
1ಉಪ ವೈದ್ಯಕೀಯ ಅಧೀಕ್ಷಕರು01 (ಒಂದು)
2ವೈದ್ಯರು ದರ್ಜೆ-1 (ಆಯುರ್ವೇದ)02 (ಎರಡು)
3ಶುಶ್ರೂಷಕಿ ಅಧೀಕ್ಷಕರು ದರ್ಜೆ-101 (ಒಂದು)
4ಶುಶ್ರೂಷಕಿ04 (ನಾಲ್ಕು)
5ಔಷಧಿ ವಿತರಕರು03 (ಮೂರು)
6ಪ್ರಥಮ ದರ್ಜೆ ಸಹಾಯಕರು01 (ಒಂದು)
7ದ್ವಿತೀಯ ದರ್ಜೆ ಸಹಾಯಕರು02 (ಎರಡು)
8ಮಸಾಜಿಸ್ಟ್ (ಥೆರಪಿಸ್ಟ್) ಪುರುಷರು03 (ಮೂರು)
9ಒಟ್ಟು19 (ಹತ್ತೊಂಬತ್ತು)

 

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 978 ವೆಚ್ಚ-5/2012 ದಿನಾಂಕ 15.11.2012ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಿದೆ.

 

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಕೆ.ಎನ್. ಹರಿಣಿಯಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ಧತಿ)