​​

​​​ಕರ್ನಾಟಕ ಸರ್ಕಾರದ ನಡೆವಳಿಗಳು

ವಿಷಯ: ಬೆಂಗಳೂರಿನ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು 25ರಿಂದ 40 ಹಾಸಿಗೆಗಳಿಗೆ ಹೆಚ್ಚಿಸುವ ಬಗ್ಗೆ.

ಓದಲಾಗಿದೆ:

  1. ಸರ್ಕಾರಿ ಆದೇಶ ಸಂಖ್ಯೆ : ಆಕುಕ 57 ಪಿಐಎಂ 92 ದಿನಾಂಕ 31.3.1992
  2. ಭಾವೈಪ ಮತ್ತು ಹೋಮಿಯೋಪತಿ ನಿರ್ದೇಶಕರ ಪತ್ರ ಸಂಖ್ಯೆ ಭಾವೈಪ;2:ಬಿಯುಡಿ:1:92:ದಿನಾಂಕ 25.8.1992.

 

ಪ್ರಸ್ತಾವನೆ:

ಉಲ್ಲೇಖ (1)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ ಬೆಂಗಳೂರು ಇದನ್ನು 40 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿದೆ.  ಆದರೆ ಸದರಿ ಮೇಲ್ದರ್ಜೆಗನ್ವಯ ಪೂರಕ ಸಿಬ್ಬಂದಿಯನ್ನು ಮಂಜೂರು ಮಾಡಿರುವುದಿಲ್ಲವಾದ್ದರಿಂದ ಈ ಕೆಳಕಂಡ ಹುದ್ದೆಗಳನ್ನು ಅತ್ಯವಶ್ಯಕವಾಗಿ ಮಂಜೂರು ಮಾಡಲು ಸಾರ್ವಜನಿಕ ಹಿತದೃಷ್ಟಿಯಿಂದ ಉಲ್ಲೇಖ (2)ರ ಪತ್ರದಲ್ಲಿ ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ನಿರ್ದೇಶಕರು, ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕ್ರ.ಸಂ.​ಪದನಾಮಸಂಖ್ಯೆವೇತನ ಶ್ರೇಣಿ
1ವೈದ್ಯಾಧಿಕಾರಿ ದರ್ಜೆ-211900-3650
2ಕಛೇರಿ ಅಧೀಕ್ಷಕರು11600-2950
3ಸ್ಟಾಫ್ ನರ್ಸ್21400-2750
4ಗ್ರೂಪ್ ಡಿ ನೌಕರರು2780-1040
5ಲ್ಯಾಬೋರೇಟರಿ ಟೆಕ್ನಿಷಿಯನ್11190-2200
6ಲ್ಯಾಬ್ ಅಟೆಂಡರ್1810-1310

 

ನಿರ್ದೇಶಕರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡ ಆದೇಶವನ್ನು ಹೊರಡಿಸಿರುತ್ತಾರೆ.

​​ಸರ್ಕಾರಿ ಆದೇಶ ಸಂಖ್ಯೆ ಆಕುಕ 57 ಸಿಐಎಂ 92 ಬೆಂಗಳೂರು ದಿನಾಂಕ 7.10.1992

ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ ಬೆಂಗಳೂರು ಇದನ್ನು ಆದೇಶ ಸಂಖ್ಯೆ ಆಕುಕ 57 ಪಿಐಎಂ 92 ದಿನಾಂಕ 31.3.1992ರಲ್ಲಿ 40 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಹಿನ್ನೆಲೆಯಲ್ಲಿ ಸದರಿ ಆಸ್ಪತ್ರೆಗೆ ಈ ಕೆಳಕಂಡ ಹುದ್ದೆಗಳನ್ನು ಸೃಜಿಸಲು ಸರ್ಕಾರವು ಒಪ್ಪಿದೆ.

ಕ್ರಮ ಸಂಖ್ಯೆಹುದ್ದೆಯ ಹೆಸರುಹುದ್ದೆಗಳ ಸಂಖ್ಯೆವೇತನ ಶ್ರೇಣಿ
1ವೈದ್ಯಾಧಿಕಾರಿ ದರ್ಜೆ-21 (ಒಂದು)1900-3650
2ಸ್ಟಾಫ್ ನರ್ಸ್2 (ಎರಡು)1400-2750
3ಲ್ಯಾಬ್ ಟೆಕ್ನಿಷಿಯನ್1 (ಒಂದು)1900-2200

ಆವರ್ತ ಸಿಬ್ಬಂದಿ ವೆಚ್ಚ : ರೂ. 1,01,000.00

ಅನಾವರ್ತ ವೆಚ್ಚ :  ರೂ. ---

ಒಟ್ಟು ವೆಚ್ಚ : ರೂ. 1,01,000.00

ಮೇಲ್ಕಂಡ ಹುದ್ದೆಗಳ ಸೃಜನೆಯು ಈ ಕೆಳಕಂಡ ಷರತ್ತಿಗೊಳಪಟ್ಟಿದೆ.

  1. ಪ್ರಾರಂಭಿಕವಾಗಿ ಈ ಹುದ್ದೆಗಳನ್ನು ಎರಡು ವರ್ಷದ ಅವಧಿಗೆ ಮಾತ್ರ ಸೃಜಿಸಲಾಗಿದೆ ಮತ್ತು ಹುದ್ದೆಗಳನ್ನು ಮುಂದಿನ ಅವಧಿಗೆ ಮುಂದುವರೆಸಲು ಸರ್ಕಾರದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.
  2. ಹುದ್ದೆಗಳನ್ನು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾನುಸಾರ ಭರ್ತಿ ಮಾಡತಕ್ಕದ್ದು.

ಈ ಸಂಬಂಧಿಸಿದ ವೆಚ್ಚವನ್ನು 2210-05-101-1-71 ಯೋಜನೆ ವೆಚ್ಚ ಶೀರ್ಷಿಕೆಯಡಿಯಲ್ಲಿ ಭರಿಸುವುದು.

ಈ ಆದೇಶವನ್ನು ಯೋಜನೆ ಇಲಾಖೆ ಮತ್ತು ಸಿಬ್ಬಂದಿ ಪರಿಶೀಲನಾ ಸಮಿತಿಯ ಸಹಮತಿಯನ್ನು ಅನುಕ್ರಮವಾಗಿ ಅನಧಿಕೃತ ಟಿಪ್ಪಣಿ ಸಂಖ್ಯೆ : ಪಿವಿ : 88 : ಪಿಒಪಿ: 88: 92 ದಿನಾಂಕ 13.03.1992 ಹಾಗೂ 03.9.1992 ಮತ್ತು ಎಫ್ಡಿ: 151: ಎಸ್.ಎನ್.ಸಿ. ಪಿಆರ್ ಸಿ : (ಸೇ-ನಿ) 92 ದಿನಾಂಕ 18.09.1992ರಲ್ಲಿ ಪಡೆದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

(ಬಿ. ಪ್ರಸನ್ನಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.​