​​​

ಕರ್ನಾಟಕ ಸರ್ಕಾ​​ರದ ನಡೆವಳಿಗಳು

ವಿಷಯ: ಭಾರತೀಯ ವೈದ್ಯಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯಡಿಯಲ್ಲಿ 5 ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಪ್ರಾರಂಭಿಸುವ ಬಗ್ಗೆ.

ಪ್ರಸ್ತಾವನೆ:

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಪದ್ದತಿಯ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ.  ಆಯುರ್ವೇದ ಪದ್ದತಿಯನ್ನು ಅಭಿವೃದ್ದಿಪಡಿಸಲು ಹಾಗೂ ಜನರು ಆಯುರ್ವೇದ ಚಿಕಿತ್ಸೆಯನ್ನು ಪಡೆದು ರೋಗಗಳಿಂದ ವಿಮುಕ್ತರಾಗಲು, ಅನುಕೂಲವಾಗುವಂತೆ ತಾಲ್ಲೂಕು ಮಟ್ಟದಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ 6 ಹಾಸಿಗೆಗಳ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸರ್ಕಾರವು ನಿರ್ಧರಿಸಿದೆ.

  1. ಬೆಳಗಾಂ ಜಿಲ್ಲೆ                        ಸವದತ್ತಿ
  2. ಬೀದರ್ ಜಿಲ್ಲೆ                         ಬಸವ ಕಲ್ಯಾಣ
  3. ಬಳ್ಳಾರಿ ಜಿಲ್ಲೆ                         ಸಿರಗುಪ್ಪ
  4. ಚಾಮರಾಜನಗರ ಜಿಲ್ಲೆ                ಗುಂಡ್ಲು ಪೇಟಿ
  5. ಗುಲ್ಬರ್ಗಾ ಜಿಲ್ಲೆ                       ಸೇಡಂ

ಈ ಆಸ್ಪತ್ರೆಯನ್ನು ಪ್ರಾರಂಭಿಸಲು ಈ ಕೆಳಕಂಡ ಸಿಬ್ಬಂದಿ ವರ್ಗದ ಹುದ್ದೆಗಳನ್ನು ಸೃಜಿಸಬೇಕಾಗಿ ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯವರು ಕೋರಿರುತ್ತಾರೆ.

ಕ್ರಮ ಸಂಖ್ಯೆ​ಹುದ್ದೆಯ ಪದನಾಮಹುದ್ದೆಗಳ ಸಂಖ್ಯೆವೇತನ ಶ್ರೇಣಿ
1ವೈದ್ಯರು ದರ್ಜೆ-25ರೂ. 2050-3950
2ಔಷಧ ವಿತರಕರು5ರೂ. 1280-2375
3ಶುಶ್ರೂಷಕಿಯರು5ರೂ. 1520-2900
4ಗ್ರೂಪ್ ಡಿ5ರೂ. 840-1340

ಅಲ್ಲದೆ ಈ ಕೆಳಕಂಡಂತೆ ಆವರ್ತ ಮತ್ತು ಅನಾವರ್ತ ವೆಚ್ಚ ಮಂಜೂರು ಮಾಡಬೇಕಾಗಿ ಭಾರತೀಯ ವೈದ್ಯಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯವರು ಕೋರಿದ್ದಾರೆ.

ಆವರ್ತ ವೆಚ್ಚವೇತನಗಳುರೂ. 1,85,000-00
 ಪ್ರಯಾಣ ವೆಚ್ಚರೂ. 5,000-00
 ಕಛೇರಿ ವೆಚ್ಚರೂ. 5,000-00
 ಔಷಧ ವೆಚ್ಚರೂ. 30,000 (ಪ್ರತಿ ಹಾಸಿಗೆಗೆ ರೂ. 5,000ದಂತೆ)
ಅನಾವರ್ತ ವೆಚ್ಚ:ಪೀಠೋಪಕರಣ ಸಲಕರಣೆ ಇತ್ಯಾದಿರೂ. 46,000-00
 ಒಟ್ಟುರೂ. 2,81,000-00

         

ಈ ವಿಷಯವನ್ನು ಸರ್ಕಾರವು ಪರಿಶೀಲಿಸಿದೆ.

​ಸರ್ಕಾರಿ ಆದೇಶ ಸಂಖ್ಯೆ ಆಕುಕ 120 ಪಿಐಎಂ 98 (ಭಾಗ) ಬೆಂಗಳೂರು, ದಿನಾಂಕ 31.3.1998

1997-98ನೇ ಸಾಲಿನಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ತಲಾ ಒಂದು ತಾಲ್ಲೂಕು ಮಟ್ಟದ 6 ಹಾಸಿಗೆಗಳ ಸರ್ಕಾರಿ ಆಯುರ್ವೇದ ಆಸ್ಪತ್ರೆಯನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.

ಕ್ರಮ ಸಂಖ್ಯೆಜಿಲ್ಲೆಗಳ ಹೆಸರುಆಸ್ಪತ್ರೆ ಪ್ರಾರಂಭಿಸಬೇಕಾದ ಸ್ಥಳಗಳು
(1)ಬೆಳಗಾಂ ಜಿಲ್ಲೆಸವದತ್ತಿ
(2)ಬೀದರ್ ಜಿಲ್ಲೆಬಸವ ಕಲ್ಯಾಣ
(3)ಬಳ್ಳಾರಿ ಜಿಲ್ಲೆಸಿರಗುಪ್ಪ
(4)ಚಾಮರಾಜನಗರ ಜಿಲ್ಲೆಗುಂಡ್ಲು ಪೇಟೆ
(5)ಗುಲ್ಬರ್ಗಾ ಜಿಲ್ಲೆ    ಸೇಡಂ

 

ಅಲ್ಲದೆ ಪ್ರತಿ ಆಸ್ಪತ್ರೆಗೆ ಬೇಕಾಗುವ ಈ ಕೆಳಕಂಡ ಹುದ್ದೆಗಳನ್ನು ಸೃಜಿಸಲು ಸರ್ಕಾರವು ಮಂಜೂರಾತಿ ನೀಡಿದೆ.

ಕ್ರಮ ಸಂಖ್ಯೆಹುದ್ದೆಯ ಪದನಾಮಹುದ್ದೆಗಳ ಸಂಖ್ಯೆವೇತನ ಶ್ರೇಣಿ
1ವೈದ್ಯರು ದರ್ಜೆ-25ರೂ. 2050-3950
2ಔಷಧ ವಿತರಕರು5ರೂ. 1280-2375
3ಶುಶ್ರೂಷಕಿಯರು5ರೂ. 1520-2900
4ಗ್ರೂಪ್ ಡಿ5ರೂ. 840-1340

 

ಈ ಆಸ್ಪತ್ರೆಗೆ ತಗಲುವ ಆವರ್ತ ವೆಚ್ಚ ಹಾಗೂ ಅನಾವರ್ತ ವೆಚ್ಚಗಳು ಈ ಕೆಳಕಂಡಂತಿವೆ.

ಆವರ್ತವೆಚ್ಚ5 ಆಸ್ಪತ್ರೆಗಳಿಗೆಪ್ರತಿ ಆಸ್ಪತ್ರೆಗೆ
ವೇತನಗಳುರೂ. 6.75 ಲಕ್ಷಗಳುರೂ. 1.15 ಲಕ್ಷಗಳು
ಔಷಧಿಗಳ ವೆಚ್ಚರೂ. 1.50 ಲಕ್ಷಗಳುರೂ. 0.30 ಲಕ್ಷಗಳು
ಪಥ್ಯಾಹಾರ ವೆಚ್ಚರೂ. 0.75 ಲಕ್ಷಗಳುರೂ. 0.15 ಲಕ್ಷಗಳು
ಪ್ರಯಾಣ ವೆಚ್ಚರೂ. 0.25 ಲಕ್ಷಗಳುರೂ. 0.05 ಲಕ್ಷಗಳು
ಕಛೇರಿ ವೆಚ್ಚರೂ. 0.50 ಲಕ್ಷಗಳುರೂ. 0.10 ಲಕ್ಷಗಳು
ಅನಾವರ್ತ ವೆಚ್ಚಗಳುರೂ. 0.19 ಲಕ್ಷಗಳುರೂ. 0.38 ಲಕ್ಷಗಳು

 

ಈ ಕೆಳಕಂಡ ಷರತ್ತುಗಳನ್ನು ನಿರ್ದೇಶಕರು, ಭಾ.ವೈ.ಪ. ಇವರು ಪಾಲಿಸತಕ್ಕದ್ದು.

  1. ಹುದ್ದೆಗಳನ್ನು ಪ್ರಾರಂಭಿಕವಾಗಿ 2 ವರ್ಷಗಳ ಅವಧಿಗೆ ಸೃಜಿಸಲಾಗಿದೆ.
  2. ಹುದ್ದೆಗಳಿಗೆ ತಗಲುವ ವೆಚ್ಚವು ಯಾವುದೇ ಕಾರಣಕ್ಕೂ 97-98ನೇ ಸಾಲಿನಲ್ಲಿ ಒದಗಿಸಲಾಗಿರುವ ಮೊತ್ತಕ್ಕೆ ಸೀಮಿತವಾಗಿರತಕ್ಕದ್ದು.
  3. ಇಲಾಖಾ ನಾರ್ಮ್ಸ್ ಮತ್ತು ಸಿ & ಆಂಡ್ ಆರ್ ನಿಯಮಗಳನ್ನು ಪಾಲಿಸತಕ್ಕದ್ದು.

ಈ ವೆಚ್ಚವನ್ನು ಲೆಕ್ಕ ಶೀರ್ಷಿಕ 2210-04-101-1-1977 ಆಯಾ ಜಿಲ್ಲಾ ಪಂಚಾಯತ್ (ಯೋಜನೆ) ಅಡಿಯಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಸಂಖ್ಯೆ : ಎಫ್.ಡಿ. 1966 ವೆಚ್ಚ-5 97 ದಿನಾಂಕ 22-12-1997ರ ಅನುಬಂಧ-1ರ ಕ್ರಮ ಸಂಖ್ಯೆ 7ರನ್ವಯ ಹೊರಡಿಸಲಾಗಿದೆ.​ಕರ್ನಾಟಕ                                                                                                                     ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲ

​ಜೆ. ಶ್ರೀನಿವಾಸ್, ಸರ್ಕಾರದ ಅಧೀನ ಕಾರ್ಯದರ್ಶಿ, ಆ.ಕು.ಕ. ಇಲಾಖೆ                                            

                                      

 

         

                                                                                                                                                                   

                                                          ​