​​​

​​ಕರ್ನಾಟಕ ಸರ್ಕಾರದ ನಡಾವಳಿಗಳು

ವಿಷಯ: 1991-92ನೇ ಸಾಲಿನಲ್ಲಿ ಬೆಳಗಾಂ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 6 ಗ್ರಾಮಗಳಲ್ಲಿ 6 ಸರ್ಕಾರಿ ಆಯುರ್ವೇದ ಔಷಧಾಲಯಗಳನ್ನು ಪ್ರಾರಂಭಿಸುವ ಬಗ್ಗೆ.

ಓದಲಾಗಿದೆ:

ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿಗಳು ಮತ್ತು ಹೋಮಿಯೋಪತಿ ಇವರ ಪತ್ರ ಸಂಖ್ಯೆ : ಭಾವೈಪ : 482 ಆಯವ್ಯಯ : 1 : 31 : ದಿನಾಂಕ 2.11.91 ಮತ್ತು ದಿನಾಂಕ 19.12.91.

ಪ್ರಸ್ತಾವನೆ:

ನಿರ್ದೇಶಕರು ಭಾರತೀಯ ವೈದ್ಯ ಪದ್ದತಿಗಳು ಮತ್ತು ಹೋಮಿಯೋಪತಿ ಇಲಾಖೆ ಇವರು ಮೇಲೆ ಓದಲಾಗಿರುವ ಪತ್ರಗಳಲ್ಲಿ 1991-92ನೇ ಸಾಲಿನಲ್ಲಿ ಬೆಳಗಾಂ ಜಿಲ್ಲೆಯ 6 ಗ್ರಾಮಗಳಲ್ಲಿ ಅಂದರೆ ಅಥಣಿ ತಾಲ್ಲೂಕು, ಕೊಟ್ಟಲಗಿ, ಚಿಕ್ಕೋಡಿ ತಾಲ್ಲೂಕು ಮಜಲಟ್ಟಿ, ಖಾನಾಪುರ ತಾಲುಕು ಗಂಡಿಗವಾಡ, ಬೆಳಗಾಂ ತಾಲ್ಲೂಕು ಭೊಕನೂರು, ಬೈಲಹೊಂಗಲ ತಾಲ್ಲೂಕು ಸಂಪಗಾಂವ, ಸವದತ್ತಿ ತಾಲ್ಲೂಕು ಕಾಗದಾಳ ಗ್ರಾಮಗಳಿಗೆ ಆಯುರ್ವೇದ ಔಷದಾಲಯಗಳನ್ನು ಈ ಕೆಳಕಂಡಂತೆ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಪ್ರಾರಂಭಿಸುವಂತೆ ಕೋರಿರುತ್ತಾರೆ.

ಕ್ರಮ ಸಂಖ್ಯೆಪದನಾಮಒಂದು ಔಷದಾಲಯಕ್ಕೆ ಬೇಕಾಗುವ ಹುದ್ದೆ6 ಔಷದಾಲಯಗಳಿಗೆ ಬೇಕಾಗುವ ಹುದ್ದೆವೇತನ ಶ್ರೇಣಿ
1ವೈದ್ಯರು ದರ್ಜೆ-2 (ಆಯುರ್ವೇದ)161720-3170
2ಔಷಧ ವಿತರಕರು161190-2200
3ಎ.ಎನ್.ಎಂ.161040-1900
4ಗ್ರೂಪ್ ಡಿ ನೌಕರರು16780-1040
 ಒಟ್ಟು ಹುದ್ದೆಗಳು 24 

 

ಮತ್ತು ಈ ಸಂಬಂಧದಲ್ಲಿ ಆವರ್ತ ಮತ್ತು ಅನಾವರ್ತ ವೆಚ್ಚ ಒಟ್ಟು ರೂ. 6,02,000.00ಗಳಾಗುತ್ತವೆ ಎಂದು ತಿಳಿಸಿರುತ್ತಾರೆ.  ಅದರಂತೆ ಈ ಆದೇಶ.

​​​​ಸರ್ಕಾರಿ ಆದೇಶ ಸಂಖ್ಯೆ: ಆಕುಕ 589 ಪಿಐಎಂ 91 ಬೆಂಗಳೂರು ದಿನಾಂಕ 31.03.1992

ನಿರ್ದೇಶಕರು, ಭಾರತೀಯ ವೈದ್ಯಪದ್ದತಿಗಳು ಮತ್ತು ಹೋಮಿಯೋಪತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಬೆಳಗಾಂ ಜಿಲ್ಲೆಯ ಅಥನಿ ತಾಲ್ಲೂಕು ಕೊಟ್ಟಲಗಿ, ಚಿಕ್ಕೋಡಿ ತಾಲ್ಲೂಕು ಮಜಲಟ್ಟಿ, ಖಾನಾಪುರ ತಾಲ್ಲೂಕು ಗಂಡಿಗವಾಡ, ಬೆಳಗಾಂ ತಾಲ್ಲೂಕು ಬೊಕನೂರು, ಬೈಲಹೊಂಗಲ ತಾಲ್ಲೂಕು ಸಂಪಗಾಂವ, ಸವದತ್ತಿ ತಾಲ್ಲೂಕು ಕಾಗದಾಳ ಗ್ರಾಮಗಳಿಗೆ 1991-92ನೇ ಸಾಲಿನಲ್ಲಿ ಒಟ್ಟು 6 ಸರ್ಕಾರಿ ಆಯುರ್ವೇದ ಔಷದಾಲಯಗಳನ್ನು ತೆರೆಯಲು ಮತ್ತು ಸದರಿ ಔಷದಾಲಯಗಳಿಗೆ ಪ್ರತಿಯೊಂದು ಔಷದಾಲಯಗಳಿಗೆ ತಲಾ 1 ಹುದ್ದೆಯಂತೆ ಕ್ರಮವಾಗಿ ಈ ಕೆಳಕಂಡಂತೆ ಸೃಷ್ಟಿಸಲು ಸರ್ಕಾರ ಮಂಜೂರಾತಿ ನೀಡಿದೆ.

ಕ್ರಮ ಸಂಖ್ಯೆ​ಪದನಾಮಒಂದು ಔಷದಾಲಯಕ್ಕೆ ಬೇಕಾಗುವ ಹುದ್ದೆ6 ಔಷದಾಲಯಗಳಿಗೆ ಬೇಕಾಗುವ ಹುದ್ದೆವೇತನ ಶ್ರೇಣಿ
1ವೈದ್ಯರು ದರ್ಜೆ-2 (ಆಯುರ್ವೇದ)161720-3170
2ಔಷಧ ವಿತರಕರು161190-2200
3ಎ.ಎನ್.ಎಂ.161040-1900
4ಗ್ರೂಪ್ ಡಿ ನೌಕರರು16780-1040
 ಒಟ್ಟು ಹುದ್ದೆಗಳು 24 

 

ಸದರಿ ಹುದ್ದೆಗಳ ಸೃಷ್ಟಿಗೆ ಆವರ್ತ ಮತ್ತು ಅನಾವರ್ತ ವೆಚ್ಚ ಈ ಕೆಳಕಂಡಂತೆ ಇದೆ.

  1. ಸದರಿ ಹುದ್ದೆಗಳನ್ನು ಈ ಕೆಳಕಂಡ ಷರತ್ತುಗಳೊಂದಿಗೆ 2 ವರ್ಷದ ಅವಧಿಗೆ ಸೃಷ್ಟಿಸತಕ್ಕದ್ದು ಮತ್ತು ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.
  2. ಪ್ರಸ್ತಾವನೆಯಲ್ಲಿ ಒಳಗೊಂಡಿರುವ ವೆಚ್ಚವನ್ನು ಆಯುವ್ಯಯದಲ್ಲಿ ನಿಗಧಿಪಡಿಸಿರುವ ಮೊತ್ತಕ್ಕೆ ಮಿತಿಗೊಳಿಸತಕ್ಕದ್ದು.
  3. ಹೊಸದಾಗಿ ಪ್ರಾರಂಭಿಸುವ ಔಷದಾಲಯಗಳಲ್ಲಿ ಕಟ್ಟಡ ಪೀಠೋಪಕರಣ ಹಾಗೂ ಔಷಧ ಸಾಮಗ್ರಿ ಇವುಗಳ ಸಂಪೂರ್ಣ ವ್ಯವಸ್ಥೆಯನ್ನು ಸಜ್ಜುಗೊಳಿಸಿದ ನಂತರವೇ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಭರ್ತಿ ಮಾಡತಕ್ಕದ್ದು.
  4. ಗ್ರೋಪ್ ಡಿ ಹುದ್ದೆಗಳನ್ನು ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿರುವ ಸರ್ಕಾರದ ಅಂದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಮೇರೆಗೆ ಸರ್ಕಾರಿ ನೌಕರರು ಪರಿಗಣಿಸಬೇಕಾಗಿರುವ ದಿನಗೂಲಿ ನೌಕರರಿಂದ ಭರ್ತಿ ಮಾಡತಕ್ಕದ್ದು.

ಇದರಿಂದಾಗುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2210-04-101-02-71ರಡಿಯಲ್ಲಿ (ಯೋಜನೆ) ಭರಿಸತಕ್ಕದ್ದು.

ಈ ಆದೇಶವನ್ನು ಯೋಜನೆ ಇಲಾಖೆ ಆರ್ಥಿಕ ಇಲಾಖೆ, ಸಿಬ್ಬಂದಿ ಪರಿಶೀಲನಾ ಸಮಿತಿಗಳ ಸಹಮತಿಯೊಂದಿಗೆ ಕ್ರಮವಾಗಿ ಟಿಪ್ಪಣಿ ಸಂಖ್ಯೆ : ಪಿಡಿ 414 ಪೊಪಿ 91 ದಿನಾಂಕ 14.1.92 ಎಫ್.ಡಿ. 290 ವೆಚ್ಚ-5 92 ದಿನಾಂಕ 21.2.1992 ಮತ್ತು ಸಂಖ್ಯೆ 68 ಎಸ್.ಎಸ್.ಸಿ. (ಸಿಆರ್.ಸಿ.:ಸೇ-2) ದಿನಾಂಕ 31.3.1992ರ ಅನ್ವಯ ಸಹಮತಿ ಪಡೆದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

(ಇ. ಕೃಷ್ಣ ಮೂರ್ತಿ) ಸರ್ಕಾರದ ಅಧೀನ ಕಾರ್ಯದರ್ಶಿ

​