​​ರಾಜ್ಯದಲ್ಲಿ ಆಯುಷ್ ಪದ್ದತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ / ಘಟಕಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಆಕುಕ 207 ಪಿಐಎಂ 2012 ದಿನಾಂಕ 31.8.2012

​​​​​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ರಾಜ್ಯದಲ್ಲಿ ಆಯುಷ್ ಪದ್ದತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ / ಘಟಕಗಳನ್ನು ಪ್ರಾರಂಭಿಸುವ ಬಗ್ಗೆ.

ಓದಲಾಗಿದೆ: ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ: ಆಯುಷ್ 06/ಆಯವ್ಯಯ(1)/ 2012-13, ದಿನಾಂಕ: 26.04.2012. 

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಆಯುಷ್ ನಿರ್ದೇಶಕರು, 2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಂತಹಂತವಾಗಿ ಆಯುಷ್ ಘಟಕಗಳನ್ನು ಪ್ರಾರಂಭಿಸುವುದಾಗಿ ಮತ್ತು 2012-13ನೇ ಸಾಲಿನಲ್ಲಿ 15 ಅಂತಹ ಘಟಕಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸುತ್ತಾ, ಪ್ರಾರಂಭಿಕವಾಗಿ ರಾಜ್ಯದಲ್ಲಿ ಆಯುಷ್ ಪದ್ಧತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯ ಪದ್ಧತಿಗಳನ್ನು ಒಳಗೊಂಡ ಆಯುಷ್ ಘಟಕ / ಆಸ್ಪತ್ರೆಗಳನ್ನು ಪ್ರಾರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ಕಟ್ಟಡಗಳನ್ನು ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಪ್ಪಿಗೆ ಸೂಚಿಸಿರುತ್ತದೆ.  ಈ ಕಟ್ಟಡಗಳಿಗೆ ಅವಶ್ಯ ನವೀಕರಣ / ವಿಸ್ತರಣೆಯೊಂದಿಗೆ ಆಯುಷ್ ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆಯೆಂದು ಹಾಗೂ ಈ ಉದ್ದೇಶಕ್ಕಾಗಿ 2012-13ನೇ ಸಾಲಿಗೆ ಸರ್ಕಾರವು ರೂ.700.00 ಲಕ್ಷಗಳ ಅನುದಾನವನ್ನು ಒದಗಿಸಿದೆ.  ಮಾನ್ಯ ಮುಖ್ಯಮಂತ್ರಿಗಳು 2012-13ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿರುವಂತೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ / ಘಟಕಗಳನ್ನು ಪ್ರಾರಂಭಿಸಲು ಅಗತ್ಯ ಸಿಬ್ಬಂದಿಯ ಸೃಜನೆಯೊಂದಿಗೆ ಸರ್ಕಾರದ ಮಂಜೂರಾತಿ ಆದೇಶ ಹೊರಡಿಸುವಂತೆ ಶಿಫಾರಸ್ಸು ಮಾಡಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. 

ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ. 

ಸರ್ಕಾರದ ಆ​ದೇಶ ಸಂಖ್ಯೆ: ಆಕುಕ 207 ಪಿಐಎಂ 2012, ಬೆಂಗಳೂರು ದಿನಾಂಕ: 31.08.2012. 

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈ ಆದೇಶದ ಅನುಬಂಧದಲ್ಲಿ ತಿಳಿಸಿರುವ ಒಟ್ಟು 15 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದರಂತೆ 15 ಆಯುಷ್ ಘಟಕಗಳನ್ನು ಪ್ರಾರಂಭಿಸಲು ಹಾಗೂ ಪ್ರತಿ ಘಟಕಕ್ಕೆ ಕೆಳಕಂಡಂತೆ 04 ಹುದ್ದೆಗಳಂತೆ, ಒಟ್ಟು 60 ಹುದ್ದೆಗಳನ್ನು ಸೃಜಿಸಲು ಮಂಜೂರಾತಿ ನೀಡಿದೆ. 

​Sl No​Designation​Posts​Pay Scale
​1​Physician Grade-11(One)28100-50100
​2Staff Nurse1(One)17650-32000
​3​Pharmacist​1 (One)​10400-16400
​4​Panchakarma Therapist​1 (One)​10400-16400
​4 x 15 Taluks (60) (Sixty Posts)

ಪ್ರತಿ ಘಟಕಕ್ಕೆ ಒಂದು ಪ್ರಥಮ ದರ್ಜೆ ಸಹಾಯಕ ಹುದ್ದೆ, ಒಂದು ವಾರ್ಡ್ ಅಟೆಂಡರ್ / ಆಯಾ ಹುದ್ದೆ ಮತ್ತು ಒಂದು ಜವಾನ ಹುದ್ದೆಯ ಸೇವೆಯನ್ನು ಬಾಹ್ಯ ಮೂಲದಿಂದ ಪಡೆಯುವುದು. 

ಇದಕ್ಕಾಗಿ ತಗಲುವ ವೆಚ್ಚವನ್ನು ಲೆಕ್ಕಶೀರ್ಷಿಕೆ 2210-02-101-2-04 ರಲ್ಲಿ “ತಾಲ್ಲೂಕು ಮತ್ತು ಜಿಲ್ಲಾ ಹಂತದ ಆಸ್ಪತ್ರೆ ಪ್ರಾರಂಭ ಹಾಗೂ ನಿರ್ವಹಣೆ” ಅಡಿಯಲ್ಲಿ ಭರಿಸತಕ್ಕದ್ದು.  ಇದಕ್ಕಾಗಿ ಯಾವುದೇ ಹೆಚ್ಚುವರಿ ಅನುದಾನ ಬೇಡಿಕೆ ಸಲ್ಲಿಸತಕ್ಕದ್ದಲ್ಲ. 

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ : ಆಇ/601/ವೆಚ್ಚ-5/2012, ದಿನಾಂಕ: 26.7.2012ರಲ್ಲಿ  ಹಾಗೂ ಯೋಜನಾ ಇಲಾಖೆಯು ಟಿಪ್ಪಣಿ ಸಂಖ್ಯೆ: ಯೋಇ/30/ಜಶ/2012, ದಿನಾಂಕ: 27.08.2012ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಲಾಗಿದೆ. 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಕೆ.ಎನ್. ಹರಿಣಿಯಮ್ಮ)
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ಧತಿ)
(ದೂರವಾಣಿ ಸಂಖ್ಯೆ: 22034292)
ಇವರಿಗೆ:
1) ಮಹಾಲೇಖಪಾಲರು (ಲೆಕ್ಕಪತ್ರ : ಲೆಕ್ಕಪರಿಶೋಧನೆ) ಕರ್ನಾಟಕ, ಬೆಂಗಳೂರು-1.
2) ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದರಾವ್ ವೃತ್ತ, ಬೆಂಗಳೂರು-9. 
3) ನಿರ್ದೇಶಕರು, ಆಯುಷ್ ಇಲಾಖೆ, ಧನ್ವಂತರಿ ರಸ್ತೆ, ಬೆಂಗಳೂರು.