​​

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಶಿವಮೊಗ್ಗದಲ್ಲಿ ಸರ್ಕಾರಿ ಆಯುರ್ವೇದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವ ಬಗ್ಗೆ.

ಓದಲಾಗಿದೆ

ನಿರ್ದೇಶಕರು, ಆಯುಷ್ ಇಲಾಖೆ, ಇವರ ಪತ್ರ ಸಂಖ್ಯೆ: ಆಯುಷ್/41/ಸಿಬ್ಬಂದಿ (5)/2010-11 ದಿನಾಂಕ 18.02.2011 ಮತ್ತು 06.07.2011

ಪ್ರಸ್ತಾವನೆ:

​ಮೇಲೆ ಓದಲಾದ ಆಯುಷ್ ನಿರ್ದೇಶಕರ ಪತ್ರಗಳಲ್ಲಿ, ಆಯುಷ್ ನಿರ್ದೇಶಕರು ಶಿವಮೊಗ್ಗ ನಗರದಲ್ಲಿ ಹಾಲಿ 40 ಹಾಸಿಗೆ ಒಳರೋಗಿಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆ ಎಂದು ಮಹಾವಿದ್ಯಾಲಯ ಪ್ರಾರಂಭವಾಗಿ ಐದು ವರ್ಷಗಳ ವಿದ್ಯಾರ್ಥಿಗಳ ಪ್ರವೇಶ ಪೂರ್ಣಗೊಂಡ ನಂತರ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆಯೆಂದು ಮಹಾವಿದ್ಯಾಲಯ ಪ್ರಾರಂಭವಾಗಿ ಐದು ವರ್ಷಗಳ ವಿದ್ಯಾರ್ಥಿಗಳ ಪ್ರವೇಶ ಪೂರ್ಣಗೊಂಡ ನಂತರ ಈ ಆಸ್ಪತ್ರೆಯನ್ನು Central Council of Indian Medicine (Minimum Standard of Education) Rules, 1989 ರೀತ್ಯ 120 ಹಾಸಿಗೆಗಳ ಭೋದನಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕಾಗಿರುತ್ತದೆಂದು ಪ್ರಸ್ತುತ 60 ಹಾಸಿಗೆಗಳ ಪ್ರವೇಶ ಮಿತಿಯೊಂದಿಗೆ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವಂತೆ ಹಾಗೂ ನಿಯಮಾವಳಿಯಂತೆ 01 ಪ್ರಾಚಾರ್ಯರ ಹುದ್ದೆ, 14 ಪ್ರಾಧ್ಯಾಪಕರ ಹುದ್ದೆ, 10 ಸಹಾಯಕ ಪ್ರಾಧ್ಯಾಪಕರು/ರೀಡರ್ ಹುದ್ದೆಗಳನ್ನು ಹಾಗೂ 16 ಉಪನ್ಯಾಸಕರುಗಳ ಹುದ್ದೆಗಳನ್ನು ಮತ್ತು 64 ವಿವಿಧ ಭೋದಕೇತರ ಹುದ್ದೆಗಳನ್ನು ಸೃಜಿಸಬೇಕಾಗಿರುತ್ತದೆಂದು ತಿಳಿಸಿ, ಇದಕ್ಕಾಗಿ ವಾರ್ಷಿಕ ರೂ. 1,06,26,126/- ವೆಚ್ಚವಾಗುವುದಾಗಿ ಹಾಗೂ ಪ್ರಥಮ ವರ್ಷಕ್ಕೆ ರೂ. 45.00 ಲಕ್ಷಗಳ ಅನಾವರ್ತಕ ವೆಚ್ಚವಾಗುವುದಾಗಿ ಹಾಗೂ ಪ್ರಥಮ ವರ್ಷಕ್ಕೆ ರೂ. 45 ಲಕ್ಷಗಳ ಅನಾವರ್ತ ವೆಚ್ಚವಾಗುವ ಸಾಧ್ಯತೆಯಿರುವುದಾಗಿ ಮತ್ತು ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಸೂಕ್ತ ಬಾಡಿಕೆ ಕಟ್ಟಡದಲ್ಲಿ ಸದರಿ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗುವುದೆಂದು ತಿಳಿಸುತ್ತಾ, ಈ ಪ್ರಸ್ತಾವನೆಗೆ ತಗುಲುವ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗುವುದೆಂದು ತಿಳಿಸುತ್ತಾ, ಈ ಪ್ರಸ್ತಾವನೆಗೆ ತಗುಲುವ ವೆಚ್ಚವನ್ನು 2011-12ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ 2210-05-101-1-1-03 ಯೋಜನೆಯಡಿಯಲ್ಲಿ ಭರಿಸಲಾಗುವುದೆಂದು ತಿಳಿಸಿರುತ್ತಾರೆ.

ಆಯುಷ್ ನಿರ್ದೇಶಕರ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇ ಸಂಖ್ಯೆ : ಆಕುಕ 119 ಪಿಟಿಡಿ 2011 ದಿನಾಂಕ 30.11.2011

ಪ್ರಸ್ತಾವನೆಯಲ್ಲಿ ವಿವಿರಿಸಿರುವ ಆಂಶಗಳ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 100 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು ಭೋಧಕ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, 60 ವಿದ್ಯಾರ್ಥಿಗಳ ಪ್ರವೇಶ ಮಿತಿಯೊಂದಿಗೆ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲು ಮಂಜೂರಾತಿ ನೀಡಲಾಗಿದೆ.

ಸದರಿ ಮಹಾವಿದ್ಯಾಲಯವು ಸ್ವಂತ ಕಟ್ಟಡ ಹೊಂದುವವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲು ಅನುಮತಿಸಿದೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಥಮಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಈ ಕೆಳಕಂಡಂತೆ ಹುದ್ದೆಗಳನ್ನು ಸೃಜಿಸಿ ಮಂಜೂರಾತಿ ನೀಡಿದೆ.

ಭೋಧಕ ಹುದ್ದೆಗಳು:

  1. ಪ್ರಾಚಾರ್ಯರು                       01 ಹುದ್ದೆ
  2. ಪ್ರಾಧ್ಯಾಪಕರು                        04 ಹುದ್ದೆ
  3. ಸಹಾಯಕ ಪ್ರಾಧ್ಯಾಪಕರು/ರೀಡರ್   06 ಹುದ್ದೆ
  4. ಉಪನ್ಯಾಸಕರು                      08 ಹುದ್ದೆ

ಭೋದಕೇತರ ಹುದ್ದೆಗಳು:

  1. ಶೀಘ್ರಲಿಪಿಗಾರರು                     01 ಹುದ್ದೆ
  2. ಗ್ರೂಪ್ ಡಿ ನೌಕರರು                  04 ಹುದ್ದೆ
  3. ಸಹಾಯಕ ಗ್ರಂಥಪಾಲಕರು           01 ಹುದ್ದೆ
  4. ಗ್ರಂಥಾಲಯ ಅನುಚರರು             01 ಹುದ್ದೆ

 

ಮೇಲ್ಕಾಣಿಸಿದ ಬೋಧಕೇತರ ಹುದ್ದೆಗಳ ಸೇವೆಯನ್ನು ನಿಯಮಾನುಸಾರ ಮ್ಯಾನ್ ಪವರ್ ಏಜನ್ಸಿ ಮುಖಾಂತರ ಹೊರಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳುವಂತೆ ಸೂಚಿಸಿದೆ.

 

ಮೇಲಿನಂತೆ ಸೃಜಿಸಲಾದ ಹೊಸ ಹುದ್ದೆಗಳೊಂದಿಗೆ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಪ್ರಥಮ ವರ್ಷಕ್ಕೆ ತಗಲುವ ಆವರ್ತಕ ಹಾಗೂ ಅನಾವರ್ತಕ ವೆಚ್ಚಗಳನ್ನು 2011-12ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ 2210-05-101-1-03 ಅಡಿಯಲ್ಲಿ ಭರಿಸಿಕೊಳ್ಳತಕ್ಕದ್ದು.

 

ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ : ಆಕುಕ 377 ಆಂಆಸ 2011 ದಿನಾಂಕ 10.03.2011ರಲ್ಲಿ ನೀಡಿದ ಅಭಿಪ್ರಾಯ ಹಾಗೂ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ : 772 ವೆಚ್ಚ-5/2011 ದಿನಾಂಕ 30.05.2011 ಮತ್ತು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಯೋಇ:45:ಜಶ:2011 ದಿನಾಂಕ 10.10.2011ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಿದೆ.

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ವಿಶ್ವನಾಥ ಪಿ. ಹಿರೇಮಠ)

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಭಾರತೀಯ ವೈದ್ಯ ಪದ್ದತಿ

​