​​

​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಔಷಧಿ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ, ಕೃಷಿ ಹಾಗೂ ನಿರ್ವಹಣೆ ಮಾಡಲು ಹುದ್ದೆಗಳನ್ನು ಸೃಜಿಸುವ ಬಗ್ಗೆ

ಪ್ರಸ್ತಾವನೆ:

ಆಯುಷ್ ನಿರ್ದೇಶಕರು ದಿನಾಂಕ 01.02.2010ರ ತಮ್ಮ ಪ್ರಸ್ತಾನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಆಯುಷ್ ಚಿಕಿತ್ಸಾಲಯ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಭಾಗಗಳಲ್ಲಿ ಔಷಧಿಯ ಗಿಡಮೂಲಿಕೆಗಳನ್ನು ಬೆಳಸಿ ಸಂರಕ್ಷಿಸುವ ಕಾರ್ಯವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸಲು ಸಮರ್ಥರಿರುತ್ತಾರೆ.  ಅಲ್ಲದೇ ಆಯುಷ್ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಅನುಕೂಲವಾಗುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಸಂರಕ್ಷಣಾಧಿಕಾರಿಗಳು, ವನಪಾಲಕ, ಅರಣ್ಯ ರಕ್ಷಕರು, ಕಛೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು ಹಾಗೂ ಶೀಘ್ರಲಿಪಿಗಾರರ ಹುದ್ದೆಗಳನ್ನು ಸೃಜಿಸುವಂತೆ ಕೋರಿರುತ್ತಾರೆ.  ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಹುದ್ದೆಗಳನ್ನು ಸೃಜಿಸಲು ಸರ್ಕಾರವು ನಿರ್ಧರಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆಕುಕ 502 ಪಿಐಎಂ 2011 ಬೆಂಗಳೂರು ದಿನಾಂಕ 30.09.2013

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಯುಷ್ ಇಲಾಖೆಯಲ್ಲಿ ಔಷಧಿ ಸಸ್ಯಗಳ ಸಂರಕ್ಷಣೆ – ಕೃಷಿ ಹಾಗೂ ನಿರ್ವಹಣೆ ಮಾಡಲು ಈ ಕೆಳಕಂಡ 9 ಹುದ್ದೆಗಳನ್ನು ಸೃಜಿಸಲು ಸರ್ಕಾರದ ಮಂಜೂರಾತಿ ನೀಡಿದೆ.

ಕ್ರಮ ಸಂಖ್ಯೆಹುದ್ದೆಗಳನ್ನು ಸೃಜಿಸಬೇಕಾದ ಸ್ಥಳಹುದ್ದೆಯ ವಿವರಗಳುವೇತನ ಶ್ರೇಣಿಸೃಜಿಸಿರುವ ಹುದ್ದೆಗಳ ಸಂಖ್ಯೆ
1ಆಯುಷ್ ನಿರ್ದೇಶನಾಲಯ, ಬೆಂಗಳೂರು
  1. ವಲಯ ಸಂರಕ್ಷಣಾಧಿಕಾರಿಗಳು
  2. ವನಪಾಲಕರು
  3. ಅರಣ್ಯ ರಕ್ಷಕರು

21600-40050

12500-24000

10400-16400

1

1

2

2ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಭೋಧಕ ಆಸ್ಪತ್ರೆ, ಶಿವಮೊಗ್ಗ
  1. ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು
  2. ವನ ಪಾಲಕರು
  3. ಅರಣ್ಯ ರಕ್ಷಕರು

21600-40050

 12500-24000

10400-16400

1

1

2

3ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ
  1. ಅರಣ್ಯ ರಕ್ಷಕರು

10400-16400

1
 ಒಟ್ಟು ಹುದ್ದೆಗಳು  9

ಈ ಹುದ್ದೆಗಳನ್ನು ನಿಯಮಾನುಸಾರ ಅರಣ್ಯ ಇಲಾಖೆಯಿಂದ ನಿಯೋಜನೆ ಮೇಲೆ ತುಂಬತಕ್ಕದ್ದು.

ಈ ಪ್ರಸ್ತಾವನೆಗೆ ತಗುಲುವ ವೆಚ್ಚವನ್ನು 2013-14ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ 2210-05-101-6-00 ಗಿಡಮೂಲಿಕೆಗಳ ಬೇಸಾಯದ ಅಡಿಯಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ 400 ವೆಚ್ಚ-5/2013, ದಿನಾಂಕ 06.09.2013ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಕೆ.ಎನ್. ಹರಿಣಿಯಮ್ಮ), ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ದತಿ ಮತ್ತು ಸಮನ್ವಯ)