​​

​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಶಿವಮೊಗ್ಗದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಪ್ರಾರಂಭಿಸುವ ಸಲುವಾಗಿ ಹಾಲಿ ಇರುವ 60 ಹಾಸಿಗೆಗಳ ಸಂಯುಕ್ತ ಆಸ್ಪತ್ರೆಯನ್ನು 100 ಹಾಸಿಗೆಗಳ ಬೋಧಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ, ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲು ಅನುಮತಿ ನೀಡುವ ಬಗ್ಗೆ.

 ​

ಓದಲಾಗಿದೆ:

 1. ಸರ್ಕಾರದ ಆದೆಶ ಸಂಖ್ಯೆ 314 ಪಿಐಎಂ 2007 ದಿನಾಂಕ 11.03.2008
 2. ಸರ್ಕಾರದ ಆದೇಶ ಸಂಖ್ಯೆ ಆಕುಕ 337 ಪಿಐಎಂ 2008 ದಿನಾಂಕ 13.03.2008
 3. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಆಯುಷ್/43/ಬಿಯುಡಿ (1)/2008-09 ದಿನಾಂಕ 21.05.2010

   

ಪ್ರಸ್ತಾವನೆ

 

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಸರ್ಕಾರದ ಆದೇಶದಲ್ಲಿ, ಶಿವಮೊಗ್ಗ ಆಯುರ್ವೇದ ಆಸ್ಪತ್ರೆಯ 100 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ರೂ. 200 ಲಕ್ಷಗಳ ಅಂದಾಜಿನಲ್ಲಿ ಲೋಕೋಪಯೋಗಿ ಇಲಾಖೆಯ ಮುಖೇನ ಪ್ರಾರಂಭಿಸಲು ಸರ್ಕಾರದ ಆಡಳಿತಾತ್ಮಕ ಅನೊಮೋದನೆ ನೀಡಲಾಗಿದೆ.  ಸದರಿ ಕಟ್ಟಡ ಕಾಮಗಾರಿಗೆ 2007-08ನೇ ಸಾಲಿನ ಲೆಕ್ಕ ಶೀರ್ಷಿಕೆ 4210-03-101-1-139 (ಯೋಜನೆ) ಅಡಿಯಲ್ಲಿ ರೂ. 88.00 ಲಕ್ಷಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಲಾಗಿತ್ತು.

 

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರದ ಆದೇಶದಲ್ಲಿ, ಶಿವಮೊಗ್ಗ ಆಯುರ್ವೇದ ಆಸ್ಪತ್ರೆಯ 100 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ರೂ. 112.00 ಲಕ್ಷಗಳನ್ನು ಮಂಜೂರು ಮಾಡಿ, ಸದರಿ ಅನುದಾನವನ್ನು 2008-09ನೇ ಸಾಲಿನ ಲೆಕ್ಕ ಶೀರ್ಷಿಕೆ 4210-03-101-1-01 ಯೋಜನೆಯ ಸವಿವರ ಲೆಕ್ಕ ಶೀರ್ಷಿಕೆ 139 ಪ್ರಧಾನ ಕಾಮಗಾರಿಗಳ ಅಡಿಯಲ್ಲಿ ಒದಗಿಸಿರುವ ಅನುದಾನದಲ್ಲಿ ಭರಿಸತಕ್ಕದ್ದು ಎಂದು ತಿಳಿಸಲಾಗಿತ್ತು.

 

ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ನಿರ್ದೇಶಕರ ಪತ್ರಗಳಲ್ಲಿ, ಸನ್ಮಾನ್ಯ ಮುಖ್ಯ ಮಂತ್ರಿಗಳು 2008-09ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಿವಮೊಗ್ಗ ನಗರದಲ್ಲೆ ಒಂದು ಆಯುರ್ವೇದ ಕಾಲೇಜು ಪ್ರಾರಂಭಿಸಲು ಘೋಷಿಸಿರುವ ಹಿನ್ನೆಲೆಯಲ್ಲಿ, ಈಗಾಗಲೇ 40 ಆಯುರ್ವೇದ, 10 ಹೋಮಿಯೋಪತಿ ಮತ್ತು 10 ಯುನಾನಿ ಒಟ್ಟು 60 ಹಾಸಿಗೆಗಳ ಸಂಯುಕ್ತ ಆಸ್ಪತ್ರೆಯು ಜಿಲ್ಲಾ ಪಂಚಾಯತಿ ಅಡಿ ನಿರ್ವಹಿಸುತ್ತಿದ್ದು, ಸದರಿ ಆಸ್ಪತ್ರೆಗೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ತನ್ನದೇ ಒಂದು ಕಟ್ಟಡವನ್ನು ಹೊಂದಿದ್ದು, ಸದರಿ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಮೇಲೆ ತಿಳಿಸಿದಂತೆ ರೂ. 200 ಲಕ್ಷಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಸದರಿ ಕಟ್ಟಡ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಈ ಆಸ್ಪತ್ರೆಯನ್ನು ಆಯುರ್ವೇದ ಕಾಲೇಜಿಗೆ ಬೋಧಕ ಆಸ್ಪತ್ರೆಯನ್ನಾಗಿ ಉಪಯೋಗಿಸಿಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸುತ್ತಾ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 60 ಹಾಸಿಗೆಗಳ ಆಸ್ಪತ್ರೆಯನ್ನು ಲೆಕ್ಕ ಶೀರ್ಷಿಕೆ 2210-04-101-0-01 ಭಾವೈಪ ಮತ್ತು ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗೀ ಆಸ್ಪತ್ರೆಗಳಿಗೆ ಸಹಾಯನುದಾನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ರಾಜ್ಯ ವಲಯದ 2210-05-101-1-03 ಆಸ್ಪತ್ರೆಯನ್ನೊಳಗೊಂಡ ಕಾಲೇಜುಗಳು ಯೋಜನೆ ಲೆಕ್ಕ ಶೀರ್ಷಿಕೆಗೆ ವರ್ಗಾಯಿಸುವುದರೊಂದಿಗೆ, ಶಿವಮೊಗ್ಗದಲ್ಲಿರುವ 40 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಹೆಚ್ಚಿಸಿ, ಅನುಬಂಧದಲ್ಲಿ ಕೋರಿರುವಂತೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವಂತೆ ಶಿಫಾರಸ್ಸನ್ನು ಮಾಡಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

​ಸರ್ಕಾರದ ಆದೇಶ ಸಂಖ್ಯೆ ಆಕುಕ 155 ಪಿಟಿಡಿ 2010 ಬೆಂಗಳೂರು, ದಿನಾಂಕ 30.03.2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶಿವಮೊಗ್ಗ ಆಯುರ್ವೇದ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಹೆಚ್ಚಿಸಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅದರನ್ವಯ 49 ಹೆಚ್ಚುವರಿ ಹುದ್ದೆಗಳನ್ನು ಕೆಳಕಂಡ ಷರತ್ತಿಗೊಳಪಡಿಸಿ ಸೃಷ್ಟಿಸಲು ಮಂಜೂರಾತಿ ನೀಡಿದೆ.

ಕ್ರಮ ಸಂಖ್ಯೆಹುದ್ದೆಯ ಹೆಸರುಹುದ್ದೆಗಳ ಸಂಖ್ಯೆವೇತನ ಶ್ರೇಣಿ (ರೂಗಳಲ್ಲಿ)
1ಕ್ಲಿನಿಕಲ್ ರಿಜಿಸ್ಟ್ರಾರ್114050-25050
2ಕ್ಯಾಷುಯಾಲಿಟಿ ಮೆಡಿಕಲ್ ಆಫೀಸರ್114050-25050
3ವೈದ್ಯರು ದರ್ಜೆ-2113000-23850
4ವೈದ್ಯರು ದರ್ಜೆ-2 (ಪಂಚಕರ್ಮ)213000-23850
5ಫಾರ್ಮಾಸಿಸ್ಟ್27275-13350
6ನರ್ಸಿಂಗ್ ಸೂಪರಿಂಟೆಂಡೆಂಟ್111400-21600
7ಮೇಟ್ರನ್110800-20025
8ಸ್ಟಾಫ್ ನರ್ಸ್710000-18150
9ಕುಕ್15200-8200
10ಡಯಟ್ ಡಿಸ್ಟ್ರಿಬ್ಯೂಟರ್34800-7275
11ಸ್ವೀಪರ್ಸ್44800-4275
12ಮಸಾಜಿಸ್ಟ್124800-7275
13ಎಕ್ಸ್ – ರೇ ಟೆಕ್ನಿಷಿಯನ್17275-13350
14ಅಸಿಸ್ಟೆಂಟ್ ಲ್ಯಾಬ್ ಟೆಕ್ನಿಷಿಯನ್16800-13000
15ಲ್ಯಾಬ್ ಅಟೆಂಡರ್25200-8200
16ವಾರ್ಡ್ ಆಯಾ64800-7275
​ಕಛೇರಿ ಸಿಬ್ಬಂದಿ
1ಲೇ ಕಾರ್ಯದರ್ಶಿ110800-20025
2ದ್ವಿತೀಯ ದರ್ಜೆ ಸಹಾಯಕರು15800-10500
3ಬೆರಳಚ್ಚುಗಾರರು15800-10500

 

ಷರತ್ತುಗಳು:

 1. ಮೆಲೆ ನಮೂದಿಸಿರುವ ಹುದ್ದೆಗಳನ್ನು ಉನ್ನತೀಕರಣದ ಕಾಮಗಾರಿ 80 ರಷ್ಟು ಮುಗಿದ ನಂತರ ಮಾತ್ರ ಸಂಬಂಧಪಟ್ಟ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳತಕ್ಕದ್ದು.

   
 2. ಅಲ್ಲದೇ, ಡಿ-ದರ್ಜೆ ಹುದ್ದೆಗಳು ಹಾಗೂ ತಾಂತ್ರಿಕ ಹುದ್ದೆಗಳನ್ನು ನಿಯಮಾನುಸಾರ ಸಂಬಂಧಪಟ್ಟ ಪ್ರಾಧಿಕಾರದ ಅನುಮೋದನೆ ಪಡೆದು ಹೊರಗುತ್ತಿಗೆ ಮೂಲಕ ಮಾತ್ರ ನೇಮಕಾತಿ ಮಾಡಿಕೊಳ್ಳತಕ್ಕದ್ದು.

  ಸದರಿ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 114 ವೆಚ್ಚ-5/2011 ದಿನಾಂಕ 10.02.2011ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಆರ್.ಎಸ್. ಇಟಗಿ)

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ದತಿ)​