​​​

​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶಿವಮೊಗ್ಗ ಇಲ್ಲಿಗೆದ 10 ಹಾಸಿಗೆಗಳ ಹೋಮಿಯೋಪತಿ ವಿಭಾಗ ಪ್ರಾರಂಭಿಸುವ ಬಗ್ಗೆ.

ಓದಲಾಗಿದೆ:

ನಿರ್ದೇಶಕರು, ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪತಿ ಇಲಾಖೆಯವರ ಪತ್ರ ಸಂಖ್ಯೆ : ಭಾವೈಪ: 29: ಬಿಯುಡಿ (1) 96-97

ಪ್ರಸ್ತಾವನೆ:

ಮೇಲೆ ಓದಲಾದ ಭಾರತೀಯ ವೈದ್ಯಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯವರ ಪತ್ರದಲ್ಲಿ ಶಿವಮೊಗ್ಗದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ 10 ಹಾಸಿಗೆಗಳ ಹೋಮಿಯೋಪತಿ ವಿಭಾಗ ಮಂಜೂರು ಮಾಡಲು ಪ್ರಸ್ತಾಪಿಸಿದ್ದು, 10 ಹಾಸಿಗೆಗಳ ಹೋಮಿಯೋಪತಿ ವಿಭಾಗ ಪ್ರಾರಂಭಿಸಲು ಈ ಕೆಳಕಂಡ ಹುದ್ದೆಗಳನ್ನು ಸೃಜಿಸಬೇಕಾಗಿ ನಿರ್ದೇಶಕರು, ಭಾರತೀಯ ವೈದ್ಯಪದ್ದತಿಯವರು ಕೋರಿರುತ್ತಾರೆ.

ಕ್ರಮ​ ಸಂಖ್ಯೆಹುದ್ದೆಗಳ ವಿವರಹುದ್ದೆಗಳ ಸಂಖ್ಯೆವೇತನ ಶ್ರೇಣಿಸರಾಸರಿ ವೆಚ್ಚ
1​ವೈದ್ಯರು ದರ್ಜೆ ಶ್ರೇಣಿ-2 (ಹೋಮಿಯೋಪತಿ)12050-385046,450.00
2ಶುಶ್ರೂಷಕಿ11320-290036,020.00
3ಔಷಧ ವಿತರಕ (ಹೋ)11280-237526,655.00
4ದ್ವಿತೀಯ ದರ್ಜೆ ಸಹಾಯಕ11040-190022,540.00
5ಕುಕ್1870-52017,120.00
6ಗ್ರೂಪ್ ಡಿ (ವಾರ್ಡ್ ನ ಅಟೆಂಡರ್)-1, ಆಯಾ-1, ಆಹಾರ ವಿತರಕ-13840-134044,520.00
 ಒಟ್ಟು  1,97,305.00

 

ಆದ್ದರಿಂದ ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ ಆಕುಕ 232 ಪಿಐಎಂ 96, ಬೆಂಗಳೂರು ದಿನಾಂಕ 30.1.1998

1997-98ನೇ ಸಾಲಿನಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶಿವಮೊಗ್ಗ ಇಲ್ಲಿ 10 ಹಾಸಿಗೆಗಳ ಹೋಮಿಯೋಪತಿ ವಿಭಾಗವನ್ನು ಪ್ರಾರಂಭಿಸಲು ಬೇಕಾಗಿರುವ ಈ ಕೆಳಕಂಡ ಹುದ್ದೆಗಳನ್ನು ಸೃಜಿಸಲು ಸರ್ಕಾರವು ಅನುಮತಿ ನೀಡಿದೆ.

 

ಕ್ರಮ ಸಂಖ್ಯೆಹುದ್ದೆಗಳ ವಿವರಹುದ್ದೆಗಳ ಸಂಖ್ಯೆವೇತನ ಶ್ರೇಣಿ
1ವೈದ್ಯರು ದರ್ಜೆ-2 (ಹೋಮಿಯೋಪತಿ)1ರೂ. 2050-3850
2ಔಷಧಿ ವಿತರಕರು (ಹೋಮಿಯೋಪತಿ)1ರೂ. 1520-2900
3ಶುಶ್ರೂಷಕಿ1ರೂ. 1520-2900

 

​