​​

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ಮೈಸೂರು ಇಲ್ಲಿಗೆ ಅವಶ್ಯಕವಾಗಿ ಬೇಕಾಗುವ ಹುದ್ದೆಗಳನ್ನು ಸೃಜಿಸುವ ಬಗ್ಗೆ

ಓದಲಾಗಿದೆ

ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ : ಆಯುಷ್/20/ಸಿಬ್ಬಂದಿ (6)/2011-12 ದಿನಾಂಕ 23.01.2012 ಮತ್ತು 01.08.2012

​ಪ್ರಸ್ತಾವನೆ

 

ಮೇಲೆ ಓದಲಾದ ಪತ್ರದಲ್ಲಿ, ಆಯುಷ್ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರು ಸರ್ಕಾರದ ಆದೇಶ ಸಂಖ್ಯೆ ಆಕುಕ 159 ಪಿಐಎಂ 82, ದಿನಾಂಕ 27.09.1983ರಲ್ಲಿ ಆಯುರ್ವೇದ ಪದವಿ ಹೊಂದಿದವರಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ 2 ವರ್ಷದ ಡಿಪ್ಲೋಮಾ ಕೋರ್ಸ್ ಪಡೆಯಲನುವಾಗುವಂತೆ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ, ಮೈಸೂರು ಇಲ್ಲಿ 12 ವಿದ್ಯಾರ್ಥಿಗಳ ಪ್ರವೇಶಮಿತಿಯೊಂದಿಗೆ ಡಿ.ಎನ್.ವೈ. ಡಿಪ್ಲೋಮಾ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆಯೆಂದು ತತ್ಸಂಬಂಧವಾಗಿ 16 ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಸೃಜಿಸಲಾಗಿತ್ತೆಂದು ತದನಂತರದಲ್ಲಿ ಸರ್ಕಾರದ ಆದೇಶ ಸಂಖ್ಯೆ ಆಕುಕ 233 ಪಿಐಎಂ 1997, ದಿನಾಂಕ 18.03.1998ರಲ್ಲಿ 1998-99ನೇ ಸಾಲಿನಿಂದ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದವಿ ಕಾಲೇಜನ್ನು 25 ವಿದ್ಯಾರ್ಥಿಗಳ ಪ್ರವೇಶಮಿತಿಯೊಂದಿಗೆ ಪ್ರಾರಂಭಿಸಲು ಅನುಮತಿ ನೀಡಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾರ್ಯಾರಂಭ ಮಾಡಿದ್ದ, ಡಿ.ಎನ್.ವೈ. ಡಿಪ್ಲೋಮಾ ಕೋರ್ಸ್ ಗಾಗಿ ಸೃಜನೆಗೊಂಡಿದ್ದ 16 ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 12 ವಿವಿಧ ಹುದ್ದೆಗಳನ್ನು ಸ್ಥಳಾಂತರಿಸಲಾಗಿದೆಯೆಂದು ತಿಳಿಸಿರುತ್ತಾರೆ.

 

ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ ಆಕುಕ 233 ಪಿಐಎಂ 2009 ದಿನಾಂಕ 13.10.1999 ಹಾಗೂ ಸರ್ಕಾರದ ಆದೇಶ ಸಂಖ್ಯೆ ಆಕುಕ 128 ಪಿಐಎಂ 2006, ದಿನಾಂಕ 05.09.2006ರಲ್ಲಿ ಒಟ್ಟು 06 ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಸೃಜಿಸಲಾಗಿದೆಯೆಂದು ತಿಳಿಸುತ್ತಾ, ಈ ಹುದ್ದೆಗಳು ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಪದವಿ ಕೋರ್ಸ್ ನ ಬೋಧನೆಗೆ ಸಾಕಾಗುವುದಿಲ್ಲವೆಂದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆ ಪಡೆಯುವಲ್ಲಿ ಅಗತ್ಯವಾಗಿ 12 ತಜ್ಞತೆ/ವಿಭಾಗಗಳಿಗೆ ಪ್ರತ್ಯೇಕವಾಗಿ ಬೋಧಕ ಹುದ್ದೆಗಳನ್ನು ಹೊಂದುವುದು ಅಗತ್ಯವಾಗಿರುವುದರಿಂದ 10 ಪ್ರಾಧ್ಯಾಪಕರು, 11 ಸಹಾಯಕ ಪ್ರಾಧ್ಯಾಪಕರು ಹಾಗೂ 07 ಉಪನ್ಯಾಸಕರ ಹುದ್ದೆಗಳನ್ನು ಮತ್ತು 24 ವಿವಿಧ ಬೋಧಕೇತರ ಹುದ್ದೆಗಳನ್ನು ಸೃಜಿಸುವಂತೆ ಹಾಗೂ ಈ ಹುದ್ದೆಗಳ ಸೃಜನೆಯಿಂದ ತಗಲುವ ವೆಚ್ಚವನ್ನು ಲೆಕ್ಕಶೀರ್ಷಿಕೆ 2210-05-200-0-01 (ಯೋಜನೆ)/ಯೋಜನೇತರ ಅಡಿಯಲ್ಲಿ ಭರಿಸಲಾಗುವುದೆಂದು ತಿಳಿಸುತ್ತಾ, ಅಗತ್ಯವಿರುವ ಹುದ್ದೆಗಳ ಸೃಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

 

ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದೆ.

​​ಸರ್ಕಾರದ ಆದೇಶ ಸಂಖ್ಯೆ 283 ಪಿಟಿಡಿ 2012, ಬೆಂಗಳೂರು, ದಿನಾಂಕ 27.12.2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ಮೈಸೂರು ಇಲ್ಲಿಗೆ ಈ ಕೆಳಕಂಡ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಸೃಜಿಸಿದೆ.

ಅ) ಬೋಧಕ ಹುದ್ದೆಗಳು

(i) ಉಪನ್ಯಾಸಕರು                                      07 ಹುದ್ದೆಗಳು

(ii) ಸಹಾಯಕ ಉಪನ್ಯಾಸಕರು                       03 ಹುದ್ದೆಗಳು

          ಒಟ್ಟು                                             12 ಹುದ್ದೆಗಳು

b) ಬೋಧಕೇತರ ಹುದ್ದೆಗಳು

(i)​ಗ್ರಂಥಪಾಲಕ01 ಹುದ್ದೆ
(ii)ಸಹಾಯಕ ಗ್ರಂಥಪಾಲಕ01 ಹುದ್ದೆ
(iii)ಪ್ರಯೋಗಶಾಲಾ ಸಹಾಯಕ01 ಹುದ್ದೆ
(iv)ಆರ್ಟಿಸ್ಟ್ ಕಂ ಫೋಟೋಗ್ರಾಫರ್01 ಹುದ್ದೆ

 

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಕೆ.ಎನ್. ಹರಿಣಿಯಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ದತಿ)