​​

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಶಿವಮೊಗ್ಗದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವ ಬಗ್ಗೆ.

 

ಓದಲಾಗಿದೆ

 

  1. ನಿರ್ದೇಶಕರು, ಆಯುಷ್ ಇಲಾಖೆ ಇವರ ಪತ್ರ ಸಂಖ್ಯೆ: ಆಯುಷ್/41/ಸಿಬ್ಬಂದಿ (5)/2010-11 ದಿನಾಂಕ 18.12.2011, 06.07.2011 ಮತ್ತು 16.01.2012
  2. ಸರ್ಕಾರದ ಆದೇಶ ಸಂಖ್ಯೆ : ಆಕುಕ 119 ಪಿಟಿಡಿ 2011 ದಿನಾಂಕ 30.11.2012.

ಪ್ರಸ್ತಾವನೆ:

ಮೇಲೆ ಓದಲಾದ ಆಯುಷ್ ನಿರ್ದೇಶಕರ ಪತ್ರಗಳಲ್ಲಿ ಆಯುಷ್ ನಿರ್ದೇಶಕರು ಶಿವಮೊಗ್ಗ ನಗರದಲ್ಲಿ ಹಾಲಿ 40 ಹಾಸಿಗೆ ಒಳರೋಗಿಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆ ಎಂದು ಮಹಾವಿದ್ಯಾಲಯ ಪ್ರಾರಂಭವಾಗಿ ಐದು ವರ್ಷಗಳ ವಿದ್ಯಾರ್ಥಿಗಳ ಪ್ರವೇಶ ಪೂರ್ಣಗೊಂಡ ನಂತರ ಈ ಆಸ್ಪತ್ರೆಯನ್ನು Central Council of Indian Medicine (Minimum Standard of Education) Rules, 1989 ರೀತ್ಯಾ 120 ಹಾಸಿಗೆಗಳ ಭೋಧನಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕಾಗಿರುತ್ತದೆಂದು, ಪ್ರಸ್ತುತ 60 ವಿದ್ಯಾರ್ಥಿಗಳ ಪ್ರವೇಶ ಮಿತಿಯೊಂದಿಗೆ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವಂತೆ ಹಾಗೂ ನಿಯಮಾವಳಿಯಂತೆ 01 ಪ್ರಾಚಾರ್ಯರ ಹುದ್ದೆ, 14 ಪ್ರಾಧ್ಯಾಪಕರ ಹುದ್ದೆ, 10 ಸಹಾಯಕ ಪ್ರಾಧ್ಯಾಪಕರು/ರೀಡರ್ ಹುದ್ದೆಗಳನ್ನು ಹಾಗೂ 16 ಉಪನ್ಯಾಸಕರ ಹುದ್ದೆಗಳನ್ನು ಮತ್ತು 64 ವಿವಿಧ ಬೋಧಕೇತರ ಹುದ್ದೆಗಳನ್ನು ಸೃಜಿಸಬೇಕಾಗಿರುತ್ತದೆಂದು ತಿಳಿಸಿ, ಇದಕ್ಕಾಗಿ ವಾರ್ಷಿಕ ರೂ. 1,06,26,126 ವೆಚ್ಚವಾಗುವುದಾಗಿ ಹಾಗೂ ಪ್ರಥಮ ವರ್ಷಕ್ಕೆ ರೂ. 45.00 ಲಕ್ಷಗಳ ಅನಾವರ್ತಕ ವೆಚ್ಚವಾಗುವ ಸಾಧ್ಯತೆಯಿರುವುದಾಗಿ ಹಾಗೂ ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಸೂಕ್ತ ಬಾಡಿಗೆ ಕಟ್ಟಡದಲ್ಲಿ ಸದರಿ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗುವುದೆಂದು ತಿಳಿಸುತ್ತಾ, ಈ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

 

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರದ ಆದೇಶದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಥಮಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅನುವಾಗುವಂತೆ 19 ಬೋಧಕ ಹುದ್ದೆಗಳನ್ನು ಹಾಗೂ 07 ಬೋಧಕೇತರ ಹುದ್ದೆಗಳನ್ನು ಸೃಜಿಸಲು ಮಂಜೂರಾತಿ ನೀಡಲಾಗಿರುತ್ತದೆ.

 

ಮುಂದುವರೆದು, ಆಯುಷ್ ನಿರ್ದೇಶಕರು ದಿನಾಂಕ 16.01.2012ರ ತಮ್ಮ ಪತ್ರದಲ್ಲಿ ಪೂರ್ಣ ಪ್ರಮಾಣದ ಹುದ್ದೆಗಳ ಸೃಜನೆಯಾಗದ ಹೊರತು ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ನವದೆಹಲು ಇವರು ಅನುಮತಿಯನ್ನು ನೀಡುವುದಿಲ್ಲ.  ಅಗತ್ಯ ಸಿಬ್ಬಂದಿ ಆಗದಿದ್ದರೆ ಮಹಾವಿದ್ಯಾಲಯವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವುದು ಸಾಧ್ಯವಾಗುವುದಿಲ್ಲವೆಂದು ತಿಳಿಸುತ್ತಾ ಬಾಕಿ ಇರುವ 64 ಹುದ್ದೆಗಳನ್ನು ಸೃಜಿಸುವಂತೆ ಹಾಗೂ ಕಟ್ಟಡ ನಿರ್ಮಾಣ ಮತ್ತು ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ ರೂ. 15.00 ಕೋಟಿಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

 

ಆಯುಷ್ ನಿರ್ದೇಶಕರ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

​ಸರ್ಕಾರದ ಆದೇಶ ಸಂಖ್ಯೆ : ಆಕುಕ 119 ಪಿಟಿಡಿ 2011, ಬೆಂಗಳೂರು 24.05.2012

 

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶಿವಮೊಗ್ಗದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 100 ಹಾಸಿಗೆಗಳ ಆಯುರ್ವೇದ ಬೋಧಕ ಆಸ್ಪತ್ರೆಗೆ ಈ ಕೆಳಕಂಡ ಹುದ್ದೆಗಳನ್ನು ಸೃಜಿಸಿ ಮಂಜೂರಾತಿ ನೀಡಿದೆ.

ಕ್ರಮ ಸಂಖ್ಯೆಹುದ್ದೆಯ ಹೆಸರುಸೃಜಿಸಲಾದ ಹುದ್ದೆಗಳ ಸಂಖ್ಯೆ
ಬೋಧಕ ಹುದ್ದೆಗಳು ​
1ಪ್ರಾಚಾರ್ಯರು1
2ಪ್ರಾಧ್ಯಾಪಕರು05
3ಸಹಾಯಕ ಪ್ರಾಧ್ಯಾಪಕರು (ರೀಡರ್)09
4ಉಪನ್ಯಾಸಕರು09
 ಒಟ್ಟು24
ಬೋಧಕೇತರ ಹುದ್ದೆಗಳು ​
5ಪ್ರಯೋಗಾಲಯ ಸಂತ್ರಜ್ಞರು03
6ಲ್ಯಾಬ್ ಅಟೆಂಡರ್ಸ್04
7ಮ್ಯೂಸಿಯಂ ಕೀಪರ್ಸ್03
8ಗ್ರೂಪ್-ಡಿ06
9ಡಿಸಕ್ಷನ್ ಅಟೆಂಡರ್02
10ನೈರ್ಮಲ್ಯಪಾಲಕರು04
 ಒಟ್ಟು22
ಲೈಬ್ರರಿ ವಿಭಾಗ ​
11ಗ್ರಂಥಾಲಯ01
12ಸಹಾಯಕ ಗ್ರಂಥಪಾಲಕರು 
13ಗ್ರಂಥಾಲಯ ಅನುಚರರು 
14ಗ್ರೂಪ್ ಡಿ01
 ಒಟ್ಟು02
​ಆಡಳಿತ ವಿಭಾಗ   
15ಲೆ-ಸೆಕ್ರೆಟರಿ/ಸಹಾಯಕ ಆಡಳಿತಾಧಿಕಾರಿ01
16ಕಛೇರಿ ಅಧೀಕ್ಷಕರು01
17ಶೀಘ್ರಲಿಪಿಗಾರರು 
18ಪ್ರಥಮ ದರ್ಜೆ ಸಹಾಯಕರು02
19ಅಂತರಿಕ ಲೆಕ್ಕಪರಿಷೋಧಕರು01
20ದ್ವಿತೀಯ ದರ್ಜೆ ಸಹಾಯಕರು03
21ಹಿರಿಯ ಬೆರಳಚ್ಚುಗಾರರು01
22ಬೆರಳಚ್ಚುಗಾರರು/ಕಂಪ್ಯೂಟರ್ ಆಪರೇಟರ್01
23ಅನುಚರರು02
24ಗ್ರೂಪ್-ಡಿ04
 ಒಟ್ಟು16

 

ಮೇಲಿನಂತೆ ಸೃಜಿಸಲಾದ ಹುದ್ದೆಗಳಲ್ಲಿ ಗ್ರೂಪ್-ಡಿ, ಡೆಸೆಕ್ಷನ್ ಅಟೆಂಡರ್ ಮತ್ತು ನೈರ್ಮಲ್ಯ ಪಾಲಕರ ಸೇವೆಯನ್ನು ಬಾಹ್ಯಮೂಲದಿಂದ ಪಡೆದುಕೊಳ್ಳತಕ್ಕದ್ದು.

 

ಈ ಆದೇಶವನ್ನು ಅಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ : ಆಕುಕ 377 ಆಂಅಸ 2011 ದಿನಾಂಕ 10.03.2011 ರಲ್ಲಿ ನೀಡಿದ ಅಭಿಪ್ರಾಯ ಹಾಗೂ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 492 ವೆಚ್ಚ-5/2012, ದಿನಾಂಕ 10.05.2012ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಿದೆ.

 

ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ: ಆಕುಕ 377 ಆಂಆಸ 2011, ದಿನಾಂಕ 10.03.2011ರಲ್ಲಿ ನೀಡಿದ ಅಭಿಪ್ರಾಯ ಹಾಗೂ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 492 ವೆಚ್ಚ-5/2012 ದಿನಾಂಕ 10.05.2012ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಿದೆ.

 

ಕರ್ನಾಟಕ ಸರ್ಕಾರದ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಕೆ.ಎನ್.ಹರಿಣಿಯಮ್ಮ)

ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ದತಿ)​