​​

ಕರ್ನಾಟಕ​ ಸರ್ಕಾರದ ನಡೆವಳಿಗಳು

ವಿಷಯ: ಬೆಂಗಳೂರಿನ ಇಂದಿರಾ ನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿರುವ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು "ಆಯುಷ್ ಸಂಯುಕ್ತ ಆಸ್ಪತ್ರೆ" ಎಂದು ಬದಲಾಯಿಸುವ ಬಗ್ಗೆ.

ಓದಲಾಗಿದೆ:

(1) ಸರ್ಕಾರದ ಆದೇಶ ಸಂಖ್ಯೆ ಆಕುಕ 354 ಪಿಐಎಂ 2011 ದಿನಾಂಕ 18.06.2012

(2) ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ : ಆಯುಷ್ / 40 /ಬಿಯುಡಿ (1) 2011-12 ದಿನಾಂಕ 24.07.2012

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು ವಿವಿಧ ವೃಂದದ 13 ಹುದ್ದೆಗಳೊಂದಿಗೆ ಸ್ಥಾಪಿಸಲು ಮಂಜೂರಾತಿ ನೀಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಪತ್ರದಲ್ಲಿ ಆಯುಷ್ ನಿರ್ದೇಶಕರು ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿರುವ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು ಪ್ರಾರಂಭಿಸಲು ಸೃಜನೆಯಾಗಿರುವ 02 ವೈದ್ಯರ​ ಹುದ್ದೆಗಳಲ್ಲಿ ವೈದ್ಯರು ದರ್ಜೆ-2 (ಆಯುರ್ವೇದ) ಹುದ್ದೆಯನ್ನು ವೈದ್ಯರು ದರ್ಜೆ-2 (ಹೋಮಿಯೋಪತಿ) ಎಂದು ಪುನರ್ ಪದನಾಮೀಕರಿಸುವುದರೊಂದಿಗೆ ಆ ಆಸ್ಪತ್ರೆಯಲ್ಲಿರುವ 10 ಹಾಸಿಗೆಗಳನ್ನು ಆಯುರ್ವೇದ ಆಸ್ಪತ್ರೆಯ ಬದಲಾಗಿ ಆಯುಷ್ ಸಂಯುಕ್ತ ಆಸ್ಪತ್ರೆ ಎಂದು ಬದಲಾಯಿಸಿ ಸರ್ಕಾರದ ಆದೇಶ ಹೊರಡಿಸುವಂತ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆಕುಕ 377 ಪಿಐಎಂ 2012 ಬೆಂಗಳೂರು, ದಿನಾಂಕ 22.09.2012

​ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ ಆಕುಕ 354 ಪಿಐಎಂ 2011 ದಿನಾಂಕ 18.06.2012ನ್ನು ಭಾಗಶ: ಮಾರ್ಪಡಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು ಪ್ರಾರಂಭಿಸಲು ಸೃಜನೆಯಾಗಿರುವ 02 ವೈದ್ಯರ ಹುದ್ದೆಗಳಲ್ಲಿ ವೈದ್ಯರು ದರ್ಜೆ-2 (ಆಯುರ್ವೇದ) ಹುದ್ದೆಯನ್ನು ವೈದ್ಯರು ದರ್ಜೆ-2 (ಹೋಮಿಯೋಪತಿ) ಎಂದು ಪುನರ್ ಪದನಾಮೀಕರಿಸುವುದರೊಂದಿಗೆ ಈ ಆಸ್ಪತ್ರೆಯಲ್ಲಿರುವ 10 ಹಾಸಿಗೆಗಳಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಪದ್ದತಿಗೆ ತಲಾ 05ರಂದೆ ಮೀಸಲಿಡಲಾಗಿದೆ ಹಾಗೂ ಈ ಆಸ್ಪತ್ರೆಯನ್ನು ಅಯುರ್ವೇದ ಆಸ್ಪತ್ರೆ ಎಂಬುದಕ್ಕೆ ಬದಲಾಗಿ "ಆಯುಷ್ ಸಂಯುಕ್ತ ಆಸ್ಪತ್ರೆ" ಎಂದು ಬದಲಾಯಿಸಲು ಮಂಜೂರಾತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೆಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಕೆ.ಎನ್. ಹರಿಣಿಯಮ್ಮ), ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇ​ಲಾಖೆ

(ಭಾರತೀಯ ವೈದ್ಯ ಪದ್ದತಿ)