​​

​ಕರ್ನಾಟಕ ಸರ್ಕಾರದ ನಡವಳಿಗಳು​

ವಿಷಯ: ಆಯುಷ್ ಇಲಾಖೆಗೆ ಸಂಬಂಧಿಸಿದಂತೆ ಯೋಜನಾ ಘಟಕ ಹಾಗೂ ಆಡಿಟ್ ಸೆಲ್ ನ್ನು ಪ್ರಾರಂಭಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಹುದ್ದೆಗಳನ್ನು ಸೃಜಿಸಲು ಅನುಮತಿ ನೀಡುವ ಬಗ್ಗೆ.

ಓದಲಾಗಿದೆ:

 1. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಆಯುಷ್/100/ಬಿಯುಡಿ (1)/2010-11 ದಿನಾಂಕ 30.03.2011, 6.07.2011, 05.11.2011 ಮತ್ತು 16.02.2012

 

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಆಯುಷ್ ಇಲಾಖೆಯಲ್ಲಿ ಯೋಜನಾ ಕಾರ್ಯಕ್ರಮಗಳ ಶಾಖೆಯನ್ನು ಪ್ರಾರಂಭಿಸಲು ಒಅಟ್ಟು 39 ಹುದ್ದೆಗಳ ಸೃಜನೆಯೊಂದಿಗೆ ವಾರ್ಷಿಕ ರೂ. 85.83 ಲಕ್ಷಗಳ ಆವರ್ತಕ ಯೋಜನಾ ವೆಚ್ಚದ ಪ್ರಸ್ತಾವನೆಯನ್ನು ಆಯುಷ್ ನಿರ್ದೇಶಕರು ಕಳುಹಿಸಿರುತ್ತಾರೆ.  ಆಯುಷ್ ನಿರ್ದೇಶನಾಲಯದಲ್ಲಿ ಯೋಜನಾ ವೆಚ್ಚ ಹೆಚ್ಚುತ್ತಿದ್ದು, ಯೋಜನಾ ವೆಚ್ಚಕ್ಕೆ ಸಮನಾಗಿ ಹುದ್ದೆಗಳ ಸೃಜನೆ ಆಗಿರುವುದಿಲ್ಲವೆಂದು, ಯೋಜನೆಗಳ ಅನುಷ್ಠಾನದಲ್ಲಿ ಆಗಿತ್ತಿರುವ ಪ್ರಗತಿ ಇತ್ಯಾದಿಯನ್ನು ಪರಿಶೀಲಿಸಲು ಇಲಾಖೆಯಲ್ಲಿ ಒಂದು ಯೋಜನಾ ಘಟಕದ ಅವಶ್ಯಕತೆ ಇರುವುದರಿಂದ ಯೋಜನಾ ಘಟಕ ಸೃಜಿಸಿ ಅದಕ್ಕೆ ಸಂಬಂಧಪಟ್ಟಂತೆ ಹುದ್ದೆಗಳನ್ನು ಸೃಜನೆ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ.

ಆಯುಷ್ ನಿರ್ದೇಶಕರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

​​ಸರ್ಕಾರದ ಆದೇಶ ಸಂಖ್ಯೆ ಆಕುಕ 153 ಪಿಐಎಂ 2011, ಬೆಂಗಳೂರು ದಿನಾಂಕ 21.02.2012

​ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಯುಷ್ ಇಲಾಖೆಯಲ್ಲಿ ಯೋಜನಾ ಘಟಕವನ್ನು (ಪಿ.ಎಂ.ಯು.) ಮತ್ತು ಆಡಿಟ್ ಸೆಲ್ ನ್ನು ಸ್ಥಾಪಿಸುವ ಕುರಿತಂತೆ ಈ ಕೆಳಕಂಡ 07 ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.

ಕ್ರಮ ಸಂಖ್ಯೆ​ಹುದ್ದೆಗಳ ವಿವರವೇತನ ಶ್ರೇಣಿಹುದ್ದೆಗಳ ಸಂಖ್ಯೆ
1ಮುಖ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿಗಳು18150-2692501
2ಕಾರ್ಯಕ್ರಮ ಅಧಿಕಾರಿಗಳು (ಯೋಜನಾ) (planning officer)14050-2505001
3ಕಾರ್ಯಕ್ರಮ ಅಧಿಕಾರಿಗಳು, ಕೇಂದ್ರ ಪುರಸ್ಕೃತ ಯೋಜನೆಗಳು14050-2505001
4ಕಾರ್ಯಕ್ರಮ ಅಧಿಕಾರಿಗಳು (ತರಬೇತಿ, ಸಂಶೋಧನೆ ಮತ್ತು ಐ.ಇ.ಸಿ.)13000-2385001
5ಕಾರ್ಯಕ್ರಮ ಅಧಿಕಾರಿಗಳು (ಎನ್.ಆರ್.ಹೆಚ್.ಎಂ.)13000-2385001
6ಪ್ರಥಮ ದರ್ಜೆ ಸಹಾಯಕರು (ಎಲ್ಲಾ ವಿಭಾಗಗಳೂ ಸೇರಿ)7275-1335002
 ಒಟ್ಟು 07

 

ಈ ಹುದ್ದೆಗಳ ಸೃಜನೆಯಿಂದಾಗುವ ವಾರ್ಷಿಕ ವೆಚ್ಚವನ್ನು ಪ್ರಸಕ್ತ ಸಾಲಿನ ಲೆಕ್ಕ ಶೀರ್ಷಿಕೆ 2210-02-101-1-03 ಯೋಜನೆ ಅಡಿಯಲ್ಲಿ ರೂ. 300.00 ಲಕ್ಷಗಳ ಅನುದಾನದಿಂದ ಭರಿಸುವುದು.

ಈ ಹುದ್ದೆಗಳನ್ನು ಭರ್ತಿ ಮಾಡುವ ವಿಧಿವಿಧಾನದ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು.

 

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಯೋಇ 55 ಜಶ 2011 ದಿನಾಂಕ 12.10.2011 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ: 1229/ವೆಚ್ಚ-5/2011 ದಿನಾಂಕ 30.12.2011ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

 

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಕೆ.ಎನ್. ಹರಿಣಿಯಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ದತಿ)

ಸಂಖ್ಯೆ: ಆಯುಷ್ 100 ಬಿಯುಡಿ (1) 2010-11                                                                                                     ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ

 

ಮೇಲ್ಕಂಡ ಆದೇಶ ಸಂಖ್ಯೆ ಆಕುಕ 153 ಪಿಐಎಂ 2011 ಬೆಂಗಳೂರು ದಿನಾಂಕ 21.02.2012ಅನ್ನು ಮಾಹಿತಿಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಈ ಕೆಳಕಂಡವರಿಗೆ ಕಳುಹಿಸಿದೆ.

ಗೆ:

 1. ಜಂಟಿ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 2. ಉಪ ನಿರ್ದೇಶಕರು (ಆ), (ಯು), (ಹೋ) ಆಯುಷ್ ನಿರ್ದೇಶನಾಲಯ
 3. ಲೆಕ್ಕಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 4. ಆಡಳಿತಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 5. ಸಹಾಯಕ ಆಡಳಿತಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 6. ಸಿಬ್ಬಂದಿ (1) (2) ವಿಭಾಗ, ಅಭಿವೃದ್ಧಿ ವಿಭಾಗ, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 7. ಲೆಕ್ಕ ವಿಭಾಗ 1 ಮತ್ತು 2, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 8. ಮುಖ್ಯ ಆಡಳಿತಾಧಿಕಾರಿಗಳು ಆಪ್ತ ಸಹಾಯಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು
 9. ನಿರ್ದೇಶಕರ ಆಪ್ತ ಸಹಾಯಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 10. ಹೆಚ್ಚುವರಿ ಪ್ರತಿ : ಕಛೇರಿ ಪ್ರತಿ

​