​​​​

​​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಗಳನ್ನು ಪದ್ದತಿವಾರು ಹಂಚಿಕೆ ಮಾಡಿ ಕಾರ್ಯಕಾರಿ ಆದೇಶ ಹೊರಡಿಸುವ ಬಗ್ಗೆ.

ಓದಲಾಗಿದೆ:

ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ : ಆಯುಷ್/25/ಸಾಆ/2011-12 ದಿನಾಂಕ 25.01.2012
ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಆಯುಷ್ ನಿರ್ದೇಶಕರು, ಆಯುಷ್ ಇಲಾಖೆಯಲ್ಲಿ ಹೊಸದಾಗಿ ಸೃಜನೆಯಾಗಿರುವ 29 ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಗಳನ್ನು ಪದ್ದತಿವಾರು (systemwise) ವಿಂಗಡಿಸಿ ಇದುವರೆಗೆ ಯಾವುದೇ ಆದೇಶಗಳನ್ನು ಹೊರಡಿಸಿಲ್ಲವಾದ್ದರಿಂದ, ಪದ್ದತಿವಾರು ಆಸ್ಪತ್ರೆ, ಚಿಕಿತ್ಸಾಲಯಗಳು ಮತ್ತು ವೃಂದಬಲವನ್ನಾಧಿರಿಸಿ, ಆಯುಷ್ ಅಧಿಕಾರಿ ಹುದ್ದೆಗಳನ್ನು ಈ ಕೆಳಕಂಡಂತೆ ಪದ್ದತಿವಾರು ಹಂಚಿಕೆ ಮಾಡಿ ಸೂಕ್ತ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
1. ಆಯುರ್ವೇದ - 24
2. ಯುನಾನಿ - 02
3. ಹೋಮಿಯೋಪತಿ - 02
4. ಯೋಗ ಮತ್ತು ಪ್ರಕೃತಿ - 01
ಒಟ್ಟು - 29 ಹುದ್ದೆಗಳು

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಗಳನ್ನು ಪದ್ದತಿವಾರು ಹಂಚಿಕೆ ಮಾಡಲು ತೀರ್ಮಾನಿಸಿ, ಈ ಕೆಳಗಿನ ಆದೇಶ ಹೊರಡಿಸಿದೆ.
ಸರ್ಕಾರ​ದ ಆದೇಶ ಸಂಖ್ಯೆ ಆಕುಕ 62 ಪಿಐಎಂ 2012 ದಿನಾಂಕ 21.02.2012
ಪ್ರಸ್ತಾವನೆಯಲ್ಲಿನ ಅಂಶಗಳ ಹಿನ್ನೆಲೆಯಲ್ಲಿ, ಆಯುಷ್ ಇಲಾಖೆಯಲ್ಲಿ ಹೊಸದಾಗಿ ಸೃಜಿಸಲ್ಪಟ್ಟಿರುವ 29 ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಗಳನ್ನು ಈ ಕೆಳಕಂಡಂತೆ ಪದ್ದತಿವಾರು ಹಂಚಿಕೆ ಮಾಡಲಾಗಿದೆ.
1 ಆಯುರ್ವೇದ - 24
2 ಯುನಾನಿ - 02
3 ಹೋಮಿಯೋಪತಿ - 02
4 ಯೋಗ ಮತ್ತು ಪ್ರಕೃತಿ 01
ಒಟ್ಟು 29 ಹುದ್ದೆಗಳು
ಸದರಿ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 29 ಸೇ-3/12 ದಿನಾಂಕ 19.1.2012ರಲ್ಲಿ ನೀಡಿದ ನಿರ್ದೇಶನದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಕೆ.ಎನ್. ಹರಿಣಿಯಮ್ಮ)
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ದತಿ)