​​​

ಕರ್ನಾಟಕ ಸರ್ಕಾರದ ನಡೆವಳಿಗಳು

 

ವಿಷಯ: ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 2008-09ನೇ ಸಾಲಿಗೆ ರಸಶಾಸ್ತ್ರ ಮತ್ತು ರೋಗನಿಧಾನ ವಿಷಯಗಳಲ್ಲಿ ಹೊಸದಾಗಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪ್ರಾರಂಭಿಸಿ, ಸದರಿ ಕೋರ್ಸುಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಹಾಗೂ ಸಿಸಿಐಎಂ  ನಾರ್ಮ್ಸ್ ಅನ್ವಯ ಅಗತ್ಯವಿರುವ 08 ಬೋಧಕ ಹಾಗೂ 07 ಬೋಧಕೇತರ ಹುದ್ದೆಗಳ ಸೃಜನೆಗೆ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ:

ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಆಯುಷ್/19/ಬಿಯುಡಿ (1)/2008-09, ದಿನಾಂಕ 23.08.2008 ಮತ್ತು 19.01.2009

ಪ್ರಸ್ತಾವನೆ

ಮೆಲೆ ಓದಲಾದ ಪ್ರಸ್ತಾವನೆಗಳಲ್ಲಿ, ನಿರ್ದೇಶಕರು, ಆಯುಷ್ ನಿರ್ದೇಶನಾಲಯ ಇವರು ಬೆಂಗಳೂರಿನ ಸರ್ಕಾರಿ ಆಯುವ್ಯಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2008-09 ನೇ ಸಾಲಿಗೆ ರಸ ಶಾಸ್ತ್ರ ಮತ್ತು ರೋಗ ನಿಧಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ಸಿ.ಸಿ.ಐ.ಎಂ., ನವದೆಹಲಿ ಇವರು ಅನುಮೋದನೆ ನೀಡಿದ್ದು, ಅದರಂತೆ 2008-09ನೇ ಸಾಲಿನಲ್ಲಿ ಪ್ರತಿ ವಿಷಯದಲ್ಲಿ 06 ವಿದ್ಯಾರ್ಥಿಗಳಿಗೆ 12 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ.  ಸದರಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಬೇಕಾಗಿರುತ್ತದೆ.  ಆದುದರಿಂದ ಸ್ನಾತಕೋತ್ತರ ಪದವಿಗೆ ಅವಶ್ಯಕವಿರುವ ಸಿ.ಸಿ.ಐ.ಎಂ. ನಾರ್ಮ್ಸ್ ನ ಅನುಸಾರ 08 ಬೋಧಕ ಹಾಗೂ 07 ಬೋಧಕೇತರ ಹುದ್ದೆಗಳ ಸೃಜನೆಯು ಅವಶ್ಯಕವಿರುವುದಾಗಿ ಪ್ರಾರಂಭಿಸಲು, ಸಿ.ಸಿ.ಐ.ಎಂ. ನಾರ್ಮ್ಸ್ ನನುಸಾರ 08 ಬೋಧಕ ಹಾಗೂ 07 ಬೋದಕೇತರ ಹುದ್ದೆಗಳ ಸೃಜನೆಗೆ ಮತ್ತು ಶಿಷ್ಯವೇತನವನ್ನು ಲೆಕ್ಕ ಶೀರ್ಷಿಕೆ 2210-05-101-1-03-117 ಶಿಷ್ಯವೇತನ ಮತ್ತು ಪ್ರೋತ್ಸಾಹ ಯೋಜನೆಯಡಿಯಲ್ಲಿ ಪೂರಕ ಅಂದಾಜು ಅನುದಾನದಲ್ಲಿ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. 

ಈಗಾಗಲೇ ಆಯುಷ್ ಇಲಾಖೆಯು ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ರಸಶಾಸ್ತ್ರ ಹಾಗೂ ರೋಗ ನಿಧಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಿರುವುದರಿಂದ, ಸದರಿ ಕೋರ್ಸುಗಳನ್ನು ಸರ್ಕಾರದ ಪೂರ್ವಭಾವಿ ಅನುಮತಿಯನ್ನು ಪಡೆಯದೇ ಪ್ರಾರಂಭಿಸಿದ್ದು, ಹೊಸ ಕೋರ್ಸುಗಳನ್ನು ಸರ್ಕಾರದ ಪೂರ್ವಭಾವಿ ಅನುಮೋದನೆ ಪಡೆಯದೇ ಪ್ರಾರಂಭಿಸಬಾರದೆಂದು ತಿಳಿಸಿ, ಸದರಿ ಕೋರ್ಸುಗಳನ್ನು ಪ್ರಾರಂಭಿಸಿರುವ ಬಗ್ಗೆ ಘಟನೋತ್ತರ ಅನುಮೋದನೆಯನ್ನು ನೀಡಲು ಹಾಗೂ ಪ್ರಸಕ್ತ ಸಾಲಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಲೆಕ್ಕ ಶೀರ್ಷಿಕೆ 2210-02-101-1-03-059 (ಯೋಜನೆ) ಅಡಿ ಲಭ್ಯವಿರುವ ರೂ. 5.20 ಲಕ್ಷದಿಂದ ಭರಿಸಲು ಮತ್ತು ಸಿ.ಸಿ.ಐ.ಎಂ. ನಾರ್ಮ್ಸ್ ಅನ್ವಯ ಅಗತ್ಯವಿರುವ 08 ಬೋಧಕ ಹಾಗೂ 07 ಬೋದಕೇತರ ಹುದ್ದೆಗಳ ಸೃಜನೆಗೆ ಅನುಮೋದನೆಯನ್ನು ನೀಡುತ್ತಾ, ಹಂತ ಹಂತವಾಗಿ ಈ ಹುದ್ದೆಗಳನ್ನು ಅಗತ್ಯಕ್ಕನುಸಾರ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಭರ್ತಿ ಮಾಡಲಿ ತೀರ್ಮಾನಿಸಿ ಈ ಕೆಳಕಂಡಂತೆ ಆದೇಶ.

ಸರ್ಕಾರದ ಆದೇಶ ಸಂಖ್ಯೆ ಆಕುಕ 324 ಪಿಟಿಡಿ 2008, ಬೆಂಗಳೂರು, ದಿನಾಂಕ 21.03.2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಆಯುಷ್ ಇಲಾಖೆಯು ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ರಸಶಾಸ್ತ್ರ ಹಾಗೂ ರೋಗ ನಿಧಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಿರುವುದರಿಂದ, ಸದರಿ ಕೋರ್ಸುಗಳನ್ನು ಸರ್ಕಾರದ ಪೂರ್ವ ಭಾವಿ ಅನುಮತಿಯನ್ನು ಪಡೆಯದೇ ಪ್ರಾರಂಭಿಸಿದ್ದು, ಹೊಸ ಕೋರ್ಸುಗಳನ್ನು ಸರ್ಕಾರದ ಪೂರ್ವಭಾವಿ ಅನುಮೋದನೆ ಪಡೆಯದೇ ಪ್ರಾರಂಭಿಸಿದ್ದು, ಹೊಸ ಕೋರ್ಸುಗಳನ್ನು ಸರ್ಕಾರದ ಪೂರ್ವಭಾವಿ ಅನುಮೋದನೆ ಪಡೆಯದೇ ಪ್ರಾರಂಭಿಸಬಾರದೆಂದು ತಿಳಿಸಿ, ಸದರಿ ಕೋರ್ಸುಗಳನ್ನು ಪ್ರಾರಂಭಿಸಿರುವ ಬಗ್ಗೆ ಘಟನೋತ್ತರ ಅನುಮೋದನೆಯನ್ನು ನೀಡಿದೆ.  ಹಾಗೂ ಪ್ರಸಕ್ತ ಸಾಲಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಲೆಕ್ಕ ಶೀರ್ಷಿಕೆ 2210-02-101-1-03-059 (ಯೋಜನೆ) ಅಡಿ ಲಭ್ಯವಿರುವ ರೂ. 5.20 ಲಕ್ಷದಿಂದ (ಐದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು ಮಾತ್ರ) ಭರಿಸಲು ಅನುಮತಿಸಿದೆ ಮತ್ತು ಸಿ.ಸಿ.ಐ.ಎಂ. ನಾರ್ಮ್ಸ್ ಅನ್ವಯ ಅಗತ್ಯವಿರುವ 08 ಬೋಧಕ ಹಾಗೂ 07 ಬೋಧಕೇತರ ಹುದ್ದೆಗಳ ಸೃಜನೆಗೆ ಅನುಮೋದನೆಯನ್ನು ನೀಡಿದೆ ಹಾಗೂ ಹಂತ ಹಂತವಾಗಿ ಈ ಹುದ್ದೆಗಳನ್ನು ಅಗತ್ಯಕ್ಕೆ ಅನುಸಾರ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಭರ್ತಿ ಮಾಡುವುದು.

 

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ : ಆಇ 160 ವೆಚ್ಚ-5/2009, ದಿನಾಂಕ 03.03.2009 ಹಾಗೂ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 431 ವೆಚ್ಚ-5/2009, ದಿನಾಂಕ 20.03.2009ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಎನ್. ಮಹಾಲಕ್ಷಮ್ಮ), ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ದತಿ)​