​​

​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಶಿವಮೊಗ್ಗ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಯುನಾನಿ ವಿಭಾಗವನ್ನು ತೆರೆಯುವ ಬಗ್ಗೆ

 

ಓದಲಾಗಿದೆ:

ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ನಿರ್ದೇಶಕರವರ ಪತ್ರ ಸಂಖ್ಯೆ ಭಾವೈಪ: 067:ಬಿಯುಡಿ (1) 93: ದಿನಾಂಕ 27.06.1994.

ಪ್ರಸ್ತಾವನೆ

 

ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ರವರು ಮೇಲೆ ಓದಲಾಗಿರುವ ಪ್ರಸ್ತಾವನೆಯಲ್ಲಿ ಶಿವಮೊಗ್ಗ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಯುನಾನಿ ವಿಭಾಗವನ್ನು ಪ್ರಾರಂಭಿಸಲು ಮತ್ತು ಇದಕ್ಕೆ ಅಗತ್ಯವಿರುವ ಸಿಬ್ಬಂದಿ ವರ್ಗದ ಹುದ್ದೆಗಳ ಸೃಜನೆಗೆ ಸರ್ಕಾರದ ಮಂಜೂರಾತಿ ಆದೇಶ ಕೋರಿರುತ್ತಾರೆ.  1994-95ರ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ 2210-04-101-1-12 ಯೋಜನೆಯಡಿಯಲ್ಲಿ ಅಗತ್ಯ ಆಯವ್ಯಯ ಲಭ್ಯವಿದ್ದು, ಯುನಾನಿ ವೈದ್ಯ ಪದ್ದತಿಯಲ್ಲಿ ಸೇವೆಗಾಗಿ ಈ ವಿಭಾಗ ತೆರೆಯಲು ಅನುಮತಿಯನ್ನು ಕೋರಲಾಗಿದೆ.  ಆದುದರಿಂದ ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ 305 ಪಿಐಎಂ 94 ಬೆಂಗಳೂರು ದಿನಾಂಕ 20.12.1994

 

ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಶಿವಮೊಗ್ಗದಲ್ಲಿರುವ ಸರ್ಕಾರಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಯುನಾನಿ ವಿಭಾಗವನ್ನು ಪ್ರಾರಂಭಿಸಲು ಮತ್ತು ಈ ಉದ್ದೇಶಕ್ಕಾಗಿ ಕೆಳಗೆ ನಮೂದಿಸಿರುವ ಸಿಬ್ಬಂದಿ ವರ್ಗದ ಅಗತ್ಯ ಹುದ್ದೆಗಳ ಸೃಜನೆಗೆ ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಕ್ರಮ ಸಂಖ್ಯೆ​ಹುದ್ದೆಯ ಹೆಸರುಸಂಖ್ಯೆ
1ವೈದ್ಯರು ದರ್ಜೆ-II 1
2ಔಷಧ ವಿತರಕ (ಯುನಾನಿ)1
3ಶುಶ್ರೂಷಕಿ1
4ಡಿ ದರ್ಜೆ ನೌಕರ1

 

. . . . . . . . . .

ಈ ಆದೇಶದನ್ವಯ ತಗಲುವ ವೆಚ್ಚವನ್ನು 2210-05-101-1-12 ಯೋಜನೆ 94-95 ರಡಿಯಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಪಿಡಿ 293 ಪಿಒಪಿ 94 ದಿನಾಂಕ 31.8.1994 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ 3141: ವೆಚ್ಚ-5 94 ದಿನಾಂಕ 25.11.1994ರ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

(ಮಹಬೂಬ್ ಪಿ ದಾಸ್) ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ​