​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯಲ್ಲಿರುವ

​ವೈದ್ಯರು ದರ್ಜೆ-2 ವೃಂದದ ಹುದ್ದೆಗಳನ್ನು ವೈದ್ಯರು ದರ್ಜೆ-1 ವೃಂದಕ್ಕೆ ಮೇಲ್ದರ್ಜೆಗೇರಿಸುವ ಬಗ್ಗೆ

​ಓದಲಾಗಿದೆ

ನಿರ್ದೇಶಕರು, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಇಲಾಖೆ ಇವರ ಪತ್ರ ಸಂಖ್ಯೆ: ಭಾವೈಪ:77:ಸಿಬ್ಬಂದಿ(1):99-2000, ದಿನಾಂಕ: 2.8.1999, 25.1.2000 ಮತ್ತು 17.6.2003.

​ಪ್ರಸ್ತಾವನೆ:

ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಇಲಾಖೆಯಲ್ಲಿ ವೈದ್ಯರು ದರ್ಜೆ-2 ವೃಂದದ ಶೇಕಡ 10 ರಷ್ಟು ಹುದ್ದೆಗಳನ್ನು ಅಂದರೆ 78 ಹುದ್ದೆಗಳನ್ನು ವೈದ್ಯರು ದರ್ಜೆ-1 ವೃಂದಕ್ಕೆ ಮೇಲ್ದರ್ಜೆಗೇರಿಸಲು ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

​ಪ್ರಸ್ತಾವನೆಯ ದಿನಾಂಕ:2.8.99 ಅನುಸಾರ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಇಲಾಖೆಯಲ್ಲಿ ವೈದ್ಯರು ದರ್ಜೆ-2 ವೃಂದದ 782 ಹುದ್ದೆಗಳು ವೈದ್ಯರು ದರ್ಜೆ-1 ವೃಂದದ 14 ಹುದ್ದೆಗಳು ಅಸ್ವಿತ್ವದಲ್ಲಿದ್ದು, ಪೋಷಕ ವೃಂದಕ್ಕಿಂತ ಬಡ್ತಿ ವೃಂದದ ಹುದ್ದೆಗಳ ಪ್ರಮಾಣ ಶೇಕಡ 10ಕ್ಕಿಂತ ಕಡಿಮೆ ಇರುವುದರಿಂದ ವೈದ್ಯರು  ದರ್ಜೆ-2 ವೃಂದದ ವೈದ್ಯರುಗಳಿಗೆ ಬಡ್ತಿ ಅವಕಾಶಗಳು ತೀರ ವಿರಳವಾಗಿರುವುದನ್ನು ಸರ್ಕಾರ ಗಮನಿಸಿದೆ.  ವೈದ್ಯರು ದರ್ಜೆ-2 ವೃಂದದ ವೈದ್ಯರುಗಳಿಗೆ ಹೆಚ್ಚಿನ ಬಡ್ತಿ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸಮರ್ಪಕವಾದ ವೃಂದ ಬಲ ನಿರ್ವಹಣೆಗಾಗಿ ಚಾಲ್ತಿಯಲ್ಲಿರುವ 782 ದರ್ಜೆ-2 ಹುದ್ದೆಗಳ ಪೈಕಿ 78 ಹುದ್ದೆಗಳನ್ನು ದರ್ಜೆ-1 ವೃಂದಕ್ಕೆ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ.

ಈ ರೀತಿ ಮೇಲ್ದರ್ಜೆಗೇರಿಸಿದ ಹುದ್ದೆಗಳನ್ನು ಹೆಚ್ಚುವರಿ ಹುದ್ದೆಗಳೆಂದು ಪರಿಗಣಿಸತಕ್ಕದ್ದಲ್ಲ, ಚಾಲ್ತಿಯಲ್ಲಿರುವ ಹುದ್ದೆಗಳಲ್ಲಿ ಸರಿಯಾಗಿಸತಕ್ಕದ್ದು.  ಆದ್ದರಿಂದ ವೈದ್ಯರು ದರ್ಜೆ-2 ವೃಂದದ ಹುದ್ದೆಗಳನ್ನು 704 ಎಂದು ವೈದ್ಯರು ದರ್ಜೆ-1 ವೃಂದದ ಹುದ್ದೆಗಳನ್ನು 92 ಎಂದು ವೃಂದ ಬಲ ಪರಿಷ್ಕರಿಸಿ ಪುನರ್ ನಿಗದಿಪಡಿಸಲು ತೀರ್ಮಾನಿಸಲಾಗಿದೆ.  ಆದ್ದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 449 ಪಿಐಎಂ 99, ಬೆಂಗಳೂರು ದಿನಾಂಕ: 20.11.2003

​ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಇಲಾಖೆಯಲ್ಲಿರುವ 782 ವೈದ್ಯರು ದರ್ಜೆ-2 ವೃಂದದ ಹುದ್ದೆಗಳ ಪೈಕಿ 78 ಹುದ್ದೆಗಳನ್ನು (ಅನುಬಂಧದಲ್ಲಿ ತೋರಿಸಿರುವಂತೆ) ಈ ಕೂಡಲೇ ಜಾರಿಗೆ ಬರುವಂತೆ ವೈದ್ಯರು ದರ್ಜೆ-1 ವೃಂದಕ್ಕೆ ಮೇಲ್ದರ್ಜೆಗೇರಿಸಿ ಆದೇಶಿಸಿದೆ.

​​ಮೇಲ್ದರ್ಜೆಗೇರಿಸಿದ ಹುದ್ದೆಗಳನ್ನು ಹೆಚ್ಚುವರಿ ಹುದ್ದೆಗಳೆಂದು ಪರಿಗಣಿಸತಕ್ಕದ್ದಲ್ಲ.  ಹಾಲಿ ಇರುವ ಹುದ್ದೆಗಳಲ್ಲಿ ಸರಿದೂಗಿಸತಕ್ಕದ್ದು.  ಆದ್ದರಿಂದ, ವೈದ್ಯರು ದರ್ಜೆ-2 ವೃಂದದ ಹುದ್ದೆಗಳನ್ನು 704 ಕ್ಕೆ ವೈದ್ಯರು ದರ್ಜೆ-1 ವೃಂದದ ಹುದ್ದೆಗಳನ್ನು 92 ಕ್ಕೆ ವೃಂದ ಬಲ ಪರಿಷ್ಕರಿಸಿ ಈ ಕೆಳಕಂಡಂತೆ ಪುನರ್ ನಿಗಧಿಪಡಿಸಲಾಗಿದೆ.

ವೈದ್ಯರು ದರ್ಜೆ-1
ವೈದ್ಯರು ದರ್ಜೆ-1 (ಆಯುರ್ವೇದ) 
​68
ವೈದ್ಯರು ದರ್ಜೆ-1 (ಯುನಾನಿ)​11
ವೈದ್ಯರು ದರ್ಜೆ-1 (ಹೋಮಿಯೋಪತಿ)​08
ವೈದ್ಯರು ದರ್ಜೆ-1 (ನ್ಯಾಚುರೋಪತಿ) ​03
ವೈದ್ಯರು ದರ್ಜೆ-1 (ಯೋಗ)   02​
​ಒಟ್ಟು​92
ವೈದ್ಯರು ದರ್ಜೆ-2
ವೈದ್ಯರು ದರ್ಜೆ-2 (ಆಯುರ್ವೇದ)​609
ವೈದ್ಯರು ದರ್ಜೆ-2 (ಯುನಾನಿ)  ​65
ವೈದ್ಯರು ದರ್ಜೆ-2 (ಹೋಮಿಯೋಪತಿ) ​21
ವೈದ್ಯರು ದರ್ಜೆ-2 (ನ್ಯಾಚುರೋಪತಿ)​02
ವೈದ್ಯರು ದರ್ಜೆ-2 (ಯೋಗ)  ​02
​ಒಟ್ಟು​704
 

ಈ ಆದೇಶದ ಮೂಲಕ ಮೇಲ್ದರ್ಜೆಗೇರಿಸಿದ ಹುದ್ದೆಯನ್ನು ಚಾಲ್ತಿಯಲ್ಲಿರುವ ವೃಂದ ನೇಮಕಾತಿ ನಿಯಮಗಳ ಅಡಿಯಲ್ಲಿ ಬಡ್ತಿ ಮೂಲಕ ಭರ್ತಿ ಮಾಡತಕ್ಕದ್ದು.

 

​ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ : ಆಇ/750/ವೆಚ್ಚ-5/2000, ದಿನಾಂಕ: 22.6.2000 ಮತ್ತು 2.7.2000 ಮತ್ತು ಯೋಜನಾ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಯೋಇ/44/ಜಶ/2000, ದಿನಾಂಕ:23.11.2000 ಮೂಲಕ ಸಹಮತಿ ಪಡೆದು ಹೊರಡಿಸಲಾಗಿದೆ.

​​​​​​​​​​​​ ​ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ 

(ಚೋಮಾನಾಯಕ್.ಜಿ)

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

 

ಇವರಿಗೆ:

ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ, ಬೆಂಗಳೂರು – ಪ್ರಕಟಣೆಗಾಗಿ.

 

ಪ್ರತಿ:

  1. ಮಹಾಲೇಖಪಾಲರು (ಲೆಕ್ಕಪತ್ರ : ಲೆಕ್ಕಪರಿಶೋಧನೆ) ಕರ್ನಾಟಕ, ಬೆಂಗಳೂರು-560 001.
  2. ನಿರ್ದೇಶಕರು, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪತಿ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು.
  3. ಉಪನಿರ್ದೇಶಕರು, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ವಿಭಾಗೀಯ ಕಚೇರಿ, ಮೈಸೂರು.
  4. ಉಪನಿರ್ದೇಶಕರು, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ವಿಭಾಗೀಯ ಕಚೇರಿ, ಗುಲ್ಬರ್ಗಾ.
  5. ಉಪನಿರ್ದೇಶಕರು, ಸರ್ಕಾರಿ ಕೇಂದ್ರೀಯ ಔಷಧಾಗಾರ, ಬೆಂಗಳೂರು.
  6. ಆರ್ಥಿಕ ಇಲಾಖೆ (ಸೇವೆಗಳು) (ವೆಚ್ಚ-5) ವಿಧಾನ ಸೌಧ, ಬೆಂಗಳೂರು.
  7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ, ಬೆಂಗಳೂರು.
  8. ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ರಾಜ್ಯ ಸಚಿವರ ಆಪ್ತ ಕಾರ್ಯದರ್ಶಿ, ಬೆಂಗಳೂರು.
  9. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು.
  10. ಶಾಖಾ ರಕ್ಷಾ ಕಡತ : ಹೆಚ್ಚುವರಿ ಪ್ರತಿಗಳು.

 ಅನುಬಂಧ​​

ಕ್ರಮ ​ಸಂಖ್ಯೆ ​​ಸಂಸ್ಥೆಗಳ ಹೆಸರು ​​​​ವೈದ್ಯರು ದ​ರ್ಜೆ-2 ಹುದ್ದೆಗಳನ್ನು ವೈದ್ಯರು ದರ್ಜೆ-1ರ ಹುದ್ದೆಗಳಾಗಿ ಮೇಲ್ದರ್ಜೆಗೇರಿಸುವುದು ​ ​ ​ ​
ಆಯುರ್ವೇದಹೋಮಿಯೋಪತಿಯುನಾನಿಪ್ರಕೃತಿ ಚಿಕಿತ್ಸೆಯೋಗ
1.       ಶ್ರೀ ಜಯಚಾಮರಾಜೇಂದ್ರ ಭಾರತೀಯ ವೈದ್ಯಕೀಯ ಸಂಸ್ಥೆ, ಬೆಂಗಳೂರು13-0501-
2. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು100103-01
3.      ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಬೆಂಗಳೂರು-03---
4.     ಸರ್ಕಾರಿ ಆಯುರ್ವೇದ ಆಸ್ಪತ್ರೆ, ತುಮಕೂರು01----
5.      ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮಂಡ್ಯ02----
6.     ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶಿವಮೊಗ್ಗ0301---
7.      ಸರ್ಕಾರಿ ಆಯುರ್ವೇದ ಆಸ್ಪತ್ರೆ, ಚಾಮರಾಜನಗರ02----
8.      ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹಾಸನ0301---
9.     ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮಡಿಕೇರಿ02----
10.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹುಬ್ಬಳ್ಳಿ0201---
11.     ಸರ್ಕಾರಿ ಆಯುರ್ವೇದ ಆಸ್ಪತ್ರೆ, ಗದಗ02----
12.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಬಾಗಲಕೋಟೆ02----
13.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಕಾರವಾರ03----
14.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಕೊಪ್ಪಳ01----
15.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ರಾಯಚೂರು01-01--
16.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಬಳ್ಳಾರಿ05----
17.     ಸರ್ಕಾರಿ ಆಯುರ್ವೇದ ಆಸ್ಪತ್ರೆ, ಬೀದರ್01-01--
18.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಬಿಜಾಪುರ0501---
19.    ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮೈಸೂರು---01-
 ಒಟ್ಟು5807100201​