​​

​​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಔಷಧ ಪರೀಕ್ಷಾ ಪ್ರಯೋಗಾಲಯ (ಡಿ.ಟಿ.ಎಲ್.) ಕಛೇರಿಗೆ ನೌಕರರನ್ನು (Ministerial staff) ಹಾಗೂ ಇತರೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ಓದಲಾಗಿದೆ:

ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ : ಆಯುಷ್/99/ಬಿಯುಡಿ(3)/2012-13 ದಿನಾಂಕ 03.01.2013

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ನಿರ್ದೇಶಕರು, ಆಯುಷ್ ಇಲಾಖೆ, ಬೆಂಗಳೂರು ಇವರು ಸರ್ಕಾರಿ ಕೇಂದ್ರೀಯ ಔಷಧಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಔಷಧ ಪರೀಕ್ಷಾ ಪ್ರಯೋಗಾಲಯವನ್ನು ಸೈಂಟಿಫಿಕ್ ಆಫೀಸರ್-01 ಹುದ್ದೆ, ಸೈಂಟಿಫಿಕ್ ಅಸಿಸ್ಸಟೆಂಟ್-01 ಹುದ್ದೆ, ಮ್ಯಾನೇಜರ್ (ಕಛೇರಿ ಅಧೀಕ್ಷಕ)-1 ಹುದ್ದೆ ಮತ್ತು ಲ್ಯಾಬ್ ಅಟೆಂಡರ್ಸ್-2 ಹುದ್ದೆಗಳೊಂದಿಗೆ ಪ್ರತ್ಯೇಕಿಸಿ ನಿರ್ದೇಶಕರು, ಆಯುಷ್ ಇಲಾಖೆ ಇವರ ನೇರ ನಿಯಂತ್ರಣಕ್ಕೆ ಒಳಪಡಿಸಿದೆಯೆಂದು, ಇದರಲ್ಲಿ ಮ್ಯಾನೇಜರ್ ಹುದ್ದೆಯನ್ನು ಸಹಾಯಕ ಆಡಳಿತಾಧಿಕಾರಿಗಳ ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿದ್ದು, ಪ್ರಸ್ತುತ ಈ ಹುದ್ದೆಯು ಸರ್ಕಾರಿ ಕೇಂದ್ರೀಯ ಔಷಧಾಗಾರ, ಜಯನಗರ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿದೆಯೆಂದು ತಿಳಿಸಿರುತ್ತಾರೆ.

ಮುಂದುವರಿದು, ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ 04 ಔಷಧ ವಿಷ್ಲೇಷಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಗುತ್ತಿಗೆ ಸೇವಾವಧಿಯು ಮುಕ್ತಾಯಗೊಂಡಿದ್ದರಿಂದ, ಅವರುಗಳ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆಯೆಂದು ಪ್ರಸ್ತುತ ಸರ್ಕಾರಿ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ವೈಜ್ಞಾನಿಕ ಸಹಾಯಕರೊಬ್ಬರೇ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸುತ್ತಾ, ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಆಯುರ್ವೇದ ಮತ್ತು ಯುನಾನಿ ಔಷಧ ತಯಾರಿಕೆಗೆ ಸಂಬಂಧಪಟ್ಟಂತೆ ಸುಮಾರು 500 ಕಚ್ಛಾ ಔಷಧಗಳ ದ್ರವ್ಯಗಳು ಹಾಗೂ 250 ತಯಾರಿಸಲ್ಪಟ್ಟ ಔಷಧಗಳ ಗುಣಮಟ್ಟವನ್ನು ವಿಶ್ಲೇಷಿಸಿ ಪರೀಕ್ಷಾ ವರದಿ ನೀಡುವುದಲ್ಲದೆ, ಔಷಧ ನಿರೀಕ್ಷಕರಿಂದ ಹಾಗೂ ಪೋಲೀಸ್ ಇಲಾಖೆಯಿಂದ ಬರುವ ಕಚ್ಛಾ ಔಷಧಗಳ ಮತ್ತು ತಯಾರಾದ ಔಷಧಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸ್ವೀಕರಿಸಿ ಕಾಲಮಿತಿಯೊಳಗೆ ವರದಿಯನ್ನು ನೀಡಲಾಗುತ್ತದೆ.  ಪ್ರಸ್ತುತ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಲಿಪಿಕ ವೃಂದದ ಹುದ್ದೆಗಳು ಹಾಗೂ ಇತರೆ ಹುದ್ದೆಗಳು ಇಲ್ಲದೆ ಇರುವುದರಿಂದ, ದಿನನಿತ್ಯದ ಕಛೇರಿ ಅಧೀಕ್ಷಕರು, ಬೆರಳಚ್ಚುಗಾರ, ರಾತ್ರಿ ಕಾವಲುಗಾರ ಮತ್ತು ನೈರ್ಮಲ್ಯ ಪಾಲಕರ ತಲಾ ಒಂದು ಹುದ್ದೆ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಕಛೇರಿ ಅನುಚರರ ತಲಾ ಎರಡು ಹುದ್ದೆಗಳನ್ನು ಒಟ್ಟಾರೆ 11 ಹುದ್ದೆಗಳನ್ನು ಸೃಜಿಸಿ ಕೊಡುವಂತೆ ಕೋರಿರುತ್ತಾರೆ.  ಹಾಗೂ ಇದಕ್ಕೆ ತಗಲಬಹುದಾದ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2210-05-101-03-01 ಅಡಿಯಲ್ಲಿ ಒದಗಿಸಿಕೊಳ್ಳಲಾಗುವುದೆಂದು ತಿಳಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದೆ.

​​ಸರ್ಕಾರಿ ಆದೇಶ ಸಂಖ್ಯೆ : ಆಕುಕ 173 ಪಿಐಎಂ 2013 ಬೆಂಗಳೂರು, ದಿನಾಂಕ 20.03.2014

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು ಕಛೇರಿಗೆ ಹೆಚ್ಚುವರಿಯಾಗಿ ಈ ಕೆಳಕಂಡ 04 ಔಷಧ ಹುದ್ದೆಗಳನ್ನು ಸೃಜಿಸಿದೆ.

ಕ್ರ.ಸಂ.​ವೃಂದಗಳು/ಹುದ್ದೆಗಳುಹುದ್ದೆಗಳ ಸಂಖ್ಯೆವೇತನ ಶ್ರೇಣಿ
1234​
1ಪ್ರಥಮ ದರ್ಜೆ ಸಹಾಯಕರು0114450-26700
2ದ್ವೀತೀಯ ದರ್ಜೆ ಸಹಾಯಕರು0211600-21000
3ಬೆರಳಚ್ಚುಗಾರರು0111600-21000

 

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 634 ವೆಚ್ಚ-5/2013 ದಿನಾಂಕ 13.03.2014ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಟಿ.ಎನ್. ನರಸಿಂಹರಾಜು)

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾ.ವೈ.ಪದ್ದತಿ ಮತ್ತು ಸಮನ್ವಯ)

ಇವರಿಗೆ:

 1. ಪ್ರಧಾನ ಮಹಾಲೇಖಪಾಲರು (ಜಿ & ಎಸ್.ಎಸ್.ಎ.) ಮತ್ತು (ಇ & ಆರ್.ಎಸ್.ಎ.) ಕರ್ನಾಟಕ, ಹೊಸಕಟ್ಟಡ, ಆಡಿಟ್ ಭವನ, ಅಂಚೆಪೆಟ್ಟಿಗೆ ಸಂಖ್ಯೆ 5398, ಬೆಂಗಳೂರು 560 001.

ಮೇಲ್ಕಂಡ ಸರ್ಕಾರದ ಆದೇಶ ಸಂಖ್ಯೆ ಆಕುಕ 173 ಪಿಐಎಂ 2013 ಬೆಂಗಳೂರು, ದಿನಾಂಕ 20.03.2014ನ್ನು ಮಾಹಿತಿಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಈ ಕೆಳಕಂಡವರಿಗೆ ಕಳುಹಿಸಿದೆ.

ಗೆ:

 1. ವೈಜ್ಞಾನಾಧಿಕಾರಿಗಳು, ಔಷಧ ಪರೀಕ್ಷಾ ಪ್ರಯೋಗಾಲಯ, ಜಯನಗರ, ಬೆಂಗಳೂರು.
 2. ಆಡಳಿತಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 3. ಯೋಜನಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 4. ಉಪ ನಿರ್ದೇಶಕರು, ಸರ್ಕಾರಿ ಕೇಂದ್ರೀಯ ಔಷಧಾಗಾರ, ಜಯನಗರ ಬೆಂಗಳೂರು.
 5. ಲೆಕ್ಕಾಧಿಕಾರಿಗಳು, ಲೆಕ್ಕ ಅಧೀಕ್ಷಕರು, ಲೆಕ್ಕ ವಿಭಾಗ, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 6. ಸಹಾಯಕ ಸಂಖ್ಯಿಕ ಅಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 7. ನಿರ್ದೇಶಕರ ಆಪ್ತ ಸಹಾಯಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 8. ಮುಖ್ಯ ಆಡಳಿತಾಧಿಕಾರಿಗಳ ಆಪ್ತ ವಿಭಾಗ, ಆಯುಷ್ ನಿರ್ದೇಶನಾಲಯ, ಬೆಂಗಳೂರು.
 9. ಆಯವ್ಯಯ ವಿಭಾಗ (2) ಆಯುಷ್ ನಿರ್ದೇಶನಾಲಯ, ಬೆಂಗಳೂರು.
 10. ಹೆಚ್ಚುವರಿ ಪ್ರತಿ : ಕಛೇರಿ ಪ್ರತಿ.​