​​ಕರ್ನಾಟಕ ಸರ್ಕಾರ​​​ದ ನಡವಳಿಗಳು

ವಿಷಯ: ಬೆಂಗಳೂರು ನಗರದ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿ ಆಯುಷ್ ಆಸ್ಪತ್ರೆಯನ್ನು ತೆರೆಯುವ ಬಗ್ಗೆ

ಓದಲಾಗಿದೆ:

ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ ಆಯುಷ್/40/ಬಿಯುಡಿ (1)/2011-12 ದಿನಾಂಕ 21.07.2011 ಮತ್ತು 24.11.2011

ಪ್ರಸ್ತಾವನೆ

ಮೇಲೆ ಓದಲಾದ ಪತ್ರಗಳಲ್ಲಿ ಆಯುಷ್ ನಿರ್ದೇಶಕರು ಇತ್ತೀಚಿನ ದಿನಗಳಲ್ಲಿ ಆಯುಷ್ ಪದ್ದತಿಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಒಲವು ಮೂಡುತ್ತಿದ್ದು, ಆಯುಷ್ ಚಿಕಿತ್ಸಾ ಪದ್ದತಿಯ ಬಗ್ಗೆ ಹೆಚ್ಚು ಬೇಡಿಕೆ ಬರುತ್ತಿದೆ.  ಆಯುಷ್ ಪದ್ಧತಿಗಳನ್ನು ಜನಪ್ರಿಯಗೊಳಿಸಿ ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡಲು ಹೆಚ್ಚು ಆಯುಷ್ ಆಸ್ಪತ್ರೆಗಳನ್ನು ತೆರೆಯುವುದು ಅವಶ್ಯಕವಾಗುತ್ತದೆ ಎಂದು ತಿಳಿಸುತ್ತಾ, ಬೆಂಗಳೂರು ನಗರದ ಸಾರ್ವಜನಿಕರಿಗೆ ಆಯುಷ್ ಪದ್ದತಿಗಳಾದ ಆಯುರ್ವೇದ, ಯುನಾನಿ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದ್ಧತಿಗಳಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ನೀಡುವ ಸಲುವಾಗಿ ಬೆಂಗಳೂರು ನಗರದ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಲ ಆಸ್ಪತ್ರೆಯು ಆವರಣದಲ್ಲಿ ಪ್ರಾರಂಭಿಕವಾಗಿ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು 13 ಮಂದಿ ವೈದ್ಯರು ಮತ್ತು ಸಿಬ್ಬಂದಿಗಳೊಳಗೂಡಿ ಸಾರ್ವಜನಿಕ ಹಿತದೃಷ್ಟಿಯಿಂದ ತೆರೆಯಲು ಉದ್ದೇಶಿಸಲಾಗಿದೆಯೆಂದು ಇದಕ್ಕಾಗಿ ಆವರ್ತ ಮತ್ತು ಅನಾವರ್ತ ವೆಚ್ಚ ಸೇರಿ ವಾರ್ಷಿಕವಾಗಿ ರೂ. 29.24 ಲಕ್ಷಗಳ ವೆಚ್ಚವಾಗಲಿದ್ದು ಇದನ್ನು 2011-12ನೇ ಸಾಲಿನ ಲೆಕ್ಕ ಶೀರ್ಷಿಕೆ  2210-02-101-2-04 ತಾಲ್ಲೂಕು ಮತ್ತು ಜಿಲ್ಲಾ ಹಂತದ ಆಸ್ಪತ್ರೆಗಳ ಪ್ರಾರಂಭ ಮತ್ತು ನಿರ್ವಹಣೆ, ಯೋಜನೆ ಅಡಿಯಲ್ಲಿ ಭರಿಸಲಾಗುವುದೆಂದು ತಿಳಿಸುತ್ತಾ 13 ಹುದ್ದೆಗಳ ಸೃಜನೆಯೊಂದಿಗೆ ಆಸ್ಪತ್ರೆಯನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆಕುಕ 354 ಪಿ ಐ ಎಂ 2011 ಬೆಂಗಳೂರು ದಿನಾಂಕ 18.06.2012

ಪ್ರಸ್ತಾವನೆಯಲ್ಲಿ ವಿವರಿಸಿದ ಆಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿ 10 ಹಾಸಿಗಗಳ ಆಯುರ್ವೇದ ಆಸ್ಪತ್ರೆಯನ್ನು ಈ ಕೆಳಕಂಡ ಹುದ್ದೆಗಳ ಸೃಜನೆಯೊಂದಿಗೆ ಸ್ಥಾಪಿಸಲು ಮಂಜೂರಾತಿ ನೀಡಿದೆ.

​Sl No​Designation​Posts
​1​Physician Grade-I (Ay)​1
​2​Physician Grade-II (Ay)​1
​3​Staff Nurse​2
​4​Pharmacist​1
​5​FDA​1
​6​Panchakarma Therapists (Male-1, Female-1)​2
​7​Ward attender​1
​8​Ward Aya​1
​9​Peon​1
​10​Sweepers​1
​11​Watchman​1
​Total​​13


ಮೇಲಿನ 13 ಹುದ್ದೆಗಳನ್ನು ಆರ್ಥಿಕ ಮಿತವ್ಯಯ ಆದೇಶ ಸಡಿಲಿಸಿ ಸೃಜಿಸುತ್ತಿರುವುದರಿಂದ ಇಲಾಖೆಯಲ್ಲಿ ಖಾಲಿ ಇರುವ ಅಷ್ಟೇ ಸಮ ಸಂಖ್ಯೆಯ ಮಂಜೂರಾತಿ ಹುದ್ದೆಗಳನ್ನು ಖಾಲಿ ಇಡಲು ಕ್ರಮ ತೆಗೆದುಕೊಳ್ಳತಕ್ಕದ್ದು ಹಾಗೂ ಅಗತ್ಯವಿರುವ ವೆಚ್ಚವನ್ನು ಇಲಾಖೆಯ ಅನುಮೋದಿತ ಆಯವ್ಯಯದಲ್ಲೇ ಭರಿಸತಕ್ಕದ್ದು.

ಹುದ್ದೆಗಳನ್ನು ಭರ್ತಿ ಮಾಡುವಾಗ ಪಾರದರ್ಶಕತೆ, ಹುದ್ದೆಗೆ ಅಗತ್ಯವಿರುವ ಅರ್ಹತೆ ಮತ್ತು ನೇಮಕಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.  ಮುಂದುವರೆದು ವೈದ್ಯಕೀಯ ಉಪಕರಣ, ಪೀಠೋಪಕರಣ, ಔಷಧಿ ಇತ್ಯಾದಿಗಳ ಖರೀದಿಗೆ ತಗುಲುವ ವೆಚ್ಚವನ್ನು 2012-13ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ  2210-00-101-2-04 (ಯೋಜನೆ) ಅಡಿಯಲ್ಲಿ ಒದಗಿಸಿರುವ ರೂ. 700.00 ಲಕ್ಷಗಳ ಅನುದಾನದಲ್ಲಿ ಭರಿಸಿಕೊಳ್ಳತಕ್ಕದ್ದು.

ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ ಆಕುಕ 1033 ಆಂಆಸಸ ದಿನಾಂಕ 2011 ದಿನಾಂಕ 05.09.2011ರಲ್ಲಿ ನೀಡಿರುವ ಅಭಿಪ್ರಾಯ ಹಾಗೂ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 315 ವೆಚ್ಚ-5/2012 ದಿನಾಂಕ 4.06.2012ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕೆ.ಎನ್. ಹರಿಣಿಯಮ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ.)​