​​​

ಕರ್ನಾ​​ಟಕ ಸರ್ಕಾರದ ನಡೆವಳಿಗಳು

​​​​​​ವಿಷಯ: ತಾಲ್ಲೂಕು ಮಟ್ಟದ ಆಯುಷ್ ಇಲಾಖೆಯ ಆಯುರ್ವೇದ ಆಸ್ಪತ್ರೆಗಳಲ್ಲಿ ಬೇರೆ ಪದ್ದತಿಗಳ ವಿಭಾಗಗಳನ್ನು ತೆರೆಯುವುದು ಮತ್ತು ಅಗತ್ಯ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ.


ಓದಲಾಗಿದೆ:
(1) ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಆಯುಷ್ : 06 : ಬಿಯುಡಿ (4):2006-07 ದಿನಾಂಕ 20.04.2006
(2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ದಿನಾಂಕ 05.12.2006ರಂದು ಅಧಿಕಾರಯುಕ್ತ ಸಮಿತಿ ಸಭೆಯ ನಡೆವಳಿಗಳು.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ನಿರ್ದೇಶಕರ ಪತ್ರದಲ್ಲಿ ಆಯುಷ್ ಇಲಾಖೆಯು ಸಾರ್ವಜನಿಕರಿಗೆ ಆಯುರ್ವೇದ, ಹೋಮಿಯೋಪತಿ, ಯುನಾನಿ ಹಾಗೂ ಪ್ರಥಮ ಚಿಕಿತ್ಸೆ ಮತ್ತು ಯೋಗ ಪದ್ದತಿಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ  ತಾಲ್ಲೂಕು ಮಟ್ಟದ 10 ಹಾಸಿಗೆಗಳ 13 ಆಯುರ್ವೇದ ಆಸ್ಪತ್ರೆಗಳು ಮತ್ತು 6 ಹಾಸಿಗೆಗಳ 29 ಆಯುರ್ವೇದ ಆಸ್ಪತ್ರೆಗಳನ್ನು ಹೊಂದಿದೆ.  ತಾಲ್ಲೂಕು ಮಟ್ಟದ ಒಂದೇ ಸ್ಥಳದಲ್ಲಿ ಎಲ್ಲ ಪದ್ದತಿಗಳ ಆರೋಗ್ಯ ಸೇವಾ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಲು ಉದ್ದೇಶಿಸಿದ್ದು, ಇಲಾಖೆಯ ಆಯವ್ಯಯದ ಮಿತಿಗೆ ಒಳಪಟ್ಟು ಹಂತ-ಹಂತವಾಗಿ ಅನುಷ್ಠಾನಗೊಳಿಸಲು ಯೋಚಿಸಿದ್ದು, ಪ್ರಥಮ ಹಂತವಾಗಿ 2006-07ನೇ ಸಾಲಿನ್ಲ್ಲಿ ಕನಿಷ್ಟ 5 ತಾಲ್ಲೂಕು ಮಟ್ಟದ ಆಯುರ್ವೇದ ಆಸ್ಪತ್ರೆಗಳಲ್ಲಿ ಒಂದೊಂದು ಹೋಮಿಯೋಪತಿ, ಯುನಾನಿ ಮತ್ತು ಪ್ರಥಮ ಚಿಕಿತ್ಸಾ ವೈದ್ಯರುಗಳ ಹುದ್ದೆಯನ್ನು ಸೃಷ್ಠಿಸಿ, ತನ್ಮೂಲಕ 5 ಆಸ್ಪತ್ರೆಗಳಲ್ಲಿ ಎಲ್ಲಾ ಪದ್ದತಿಗಳ ಹೊರ ರೋಗಿ ವಿಭಾಗಗಳನ್ನು ತೆರೆಯಲು ಹಾಗೂ ಸರ್ಕಾರದ ಆದೇಶ ಸಂಖ್ಯೆ ಆಕುಕ 386 ಪಿಐಎಂ 2000 ದಿನಾಂಕ 31.03.2001ರಲ್ಲಿ ಮಂಜೂರಾದ 5 ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ತಲಾ 2 ರಂತೆ ಒಟ್ಟು 10 ಗ್ರೂಪ್ 'ಡಿ' ಹುದ್ದೆಗಳನ್ನು ಸೃಷ್ಟಿಸುವಂತೆ ಕೋರಿರುತ್ತಾರೆ.
ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ 05.12.2006ರಂದು ನಡೆದ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ, ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಚನ್ನರಾಯ ಪಟ್ಟಣ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ತುಮಕೂರು ಜಿಲ್ಲೆಯ ಶಿರಾದಲ್ಲಿರುವ ಸರ್ಕಾರಿ ಯುನಾನಿ ಚಿಕಿತ್ಸಾಲಯಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ತಲಾ ಒಂದು ಆಯುರ್ವೇದ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ ರೂ. 6000-11200ರ ವೇತನ ಶ್ರೇಣಿಯಲ್ಲಿ ತಲಾ ಒಂದು ವೈದ್ಯರು ದರ್ಜೆ-2 (ಅ) ಒಟ್ಟು ಆರು ವೈದ್ಯರು ದರ್ಜೆ-2 ರ ಹುದ್ದೆಗಳು) ಹುದ್ದೆಗಳನ್ನು ಸೃಜಿಸಲು ಮತ್ತು ಈ ಹೆಚ್ಚುವರಿ ಘಟಕಗಳಿಗೆ ವಾರ್ಷಿಕ ರೂ. 36,000 ಗಳ ಔಷಧ ವೆಚ್ಚ ಭರಿಸಲು ಅನುಮೋದಿಸಿದೆ.  ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ.  ಅದರಂತೆ ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ : ಆಕುಕ 195 ಪಿಐಎಂ 2006, ಬೆಂಗಳೂರು, ದಿನಾಂಕ 18.01.2007
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ, ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಚನ್ನರಾಯಪಟ್ಟಣ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ತುಮಕೂರು ಜಿಲ್ಲೆಯ ಶಿರಾದಲ್ಲಿರುವ ಸರ್ಕಾರಿ ಯುನಾನಿ ಚಿಕಿತ್ಸಾಲಯಗಳಲ್ಲಿ (ಲೆಕ್ಕ ಶೀರ್ಷಿಕೆ 2210-04-103-0-02 ಯೋಜನೆ ಜಿಲ್ಲಾ ವಲಯ) ಹಾಗೂ ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಸರ್ಕಾರಿ ಹೋಮಿಯೋಪತೆ ಆಸ್ಪತ್ರೆಯಲ್ಲಿ (ಲೆಕ್ಕ ಶೀರ್ಷಿಕೆ 2210-04-101-1-72 ಯೋಜನೆ ಜಿಲ್ಲಾ ವಲಯ) ತಲಾ ಒಂದು ಆಯುರ್ವೇದ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ ರೂ. 6000-11,2000ರ ವೇತನ ಶ್ರೇಣಿಯಲ್ಲಿ ತಲಾ ಒಂದು ವೈದ್ಯರ ದರ್ಜೆ-2 (ಆ) ಒಟ್ಟು ಆರು ವೈದ್ಯರು ದರ್ಜೆ-2 ರ ಹುದ್ದೆಗಳು) ಹುದ್ದೆಗಳನ್ನು ಸೃಜಿಸಲು ಮತ್ತು ಈ ಹೆಚ್ಚುವರಿ ಘಟಕಗಳಿಗೆ ವಾರ್ಷಿಕ ರೂ. 36,000.00ಗಳ (ಮೂವತ್ತಾರು ಸಾವಿರ ರೂಪಾಯಿಗಳು ಮಾತ್ರ ಔಷಧ ವೆಚ್ಚ ಭರಿಸಲು ಸರ್ಕಾರವು ಮಂಜೂರಾತಿಯನ್ನು ನೀಡಿದೆ.
ಈ ಆದೇಶವನ್ನು ದಿನಾಂಕ 5.12.2006ರಂದು ನಡೆಯ ಅಧಿಕಾರಯುಕ್ತ ಸಮಿತಿಯ ಅನುಮೋದನೆಯೊಂದಿಗೆ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

(ಎಸ್. ಎನ್. ಕೃಷ್ಣಕುಮಾರ್) 
ಸರ್ಕಾರದ ಅಧೀನ ಕಾರ್ಯಕರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಇವರಿಗೆ:
ಸಂಕಲನಕಾರರು, ಕರ್ನಾಟಕ ರಾಜ್ಯ ಪತ್ರ ಬೆಂಗಳೂರು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು ಹಾಗೂ 50 ಪ್ರತಿಗಳನ್ನು ಕಳುಹಿಸಲು ಕೋರಿದೆ.
ಪ್ರತಿ:
1. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು 9
2. ಮಹಾಲೇಖಪಾಲರು (ಲೆಕ್ಕಪತ್ರ/ಲೆಕ್ಕ ಪರಿಷೋಧನೆ), ಕರ್ನಾಟಕ ಬೆಂಗಳೂರು 1
3. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ ಮಂಡ್ಯ, ತುಮಕೂರು ಮತ್ತು ಕೊಡಗು ಜಿಲ್ಲೆ.
4. ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ, ಮಂಡ್ಯ, ತುಮಕೂರು ಮತ್ತು ಕೊಡಗು ಜಿಲ್ಲೆ.
5. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ.
6. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಪ್ತ ಕಾರ್ಯದರ್ಶಿಯವರಿಗೆ
7. ಸರ್ಕಾರಿ ಉಪಕಾರ್ಯದರ್ಶಿ-2 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇವರ ಆಪ್ತ ಸಹಾಯಕರಿಗೆ
8. ಶಾಖಾ ರಕ್ಷಾ ಕಡತ / ಹೆಚ್ಚುವರಿ ಪ್ರತಿಗಳು