​​

​​ಕರ್ನಾಟಕ ಸರ್ಕಾರದ ನಡೆವಳಿಗಳು

ವಿಷಯ: ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿಗಳು ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಮಾನದಂಡಗಳನ್ನು ನಿಗಧಿಗೊಳಿಸುವ ಬಗ್ಗೆ – ಆದೇಶ.

​​​ಓದಲಾಗಿದೆ:

 1. ಸರ್ಕಾರಿ ಆದೇಶ ಸಂಖ್ಯೆ ಆಕುಕ 82 ಎಂಎಸ್ಎಸ್ 2011 ದಿನಾಂಕ 02.06.2011.
 2. ನಿರ್ದೇಶಕರು, ಆಯುಷ್ ಇಲಾಖೆ, ಇವರ ಪತ್ರ ಸಂಖ್ಯೆ ಆಯುಷ್/200/ಸಿಬ್ಬಂದಿ (1)/2006-07 ದಿನಾಂಕ 22.03.2013

​​ಪ್ರಸ್ತಾವನೆ:

ಆಯುಷ್ ನಿರ್ದೇಶಕರು, ಮೇಲೆ ಓದಲಾದ ಕ್ರಮ ಸಮಖ್ಯೆ (2) ರಲ್ಲಿನ ದಿನಾಂಕ 22.03.2013ರ ಪ್ರಸ್ತಾವನೆಯಲ್ಲಿ, ಸರ್ಕಾರವು ಆದೇಶ ಸಮಖ್ಯೆ ಆಕುಕ 357 ಪಿಐಎಂ 2012 ದಿನಾಂಕ 24.01.2013ರಲ್ಲಿ ಗ್ರೂಪ್-ಬಿ ವೈದ್ಯರು ದರ್ಜೆ-2 ಹುದ್ದೆಗಳನ್ನು ಗ್ರೂಪ್-ಎ ವೈದ್ಯಾದಿಕಾರಿ (ಆಯುಷ್) ಎಂದು ಗ್ರೂಪ್-ಎ ವೈದ್ಯರು ದರ್ಜೆ-1 ಹುದ್ದೆಗಳನ್ನು ಗ್ರೂಪ್-ಎ (ಹಿರಿಯ ಶ್ರೇಣಿ)  ಹಿರಿಯ ವೈದ್ಯಾಧಿಕಾರಿ (ಆಯುಷ್) ಎಂದು ಪರಿಷ್ಕರಿಸಿದ್ದು, ಆಯುಷ್ ಇಲಾಖೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ವೃಂದದ ಹುದ್ದೆಗಳ ಇದ್ದು, ಈ ಹುದ್ದೆಗಳು ಗ್ರೂಪ್-ಎ ಹಿರಿಯ ಶ್ರೇಣಿಯ ಆಡಳಿತಾತ್ಮಕ ಹುದ್ದೆಗಳಾಗಿದ್ದು, ಸಂಬಂಧಪಟ್ಟ ಜಿಲ್ಲೆಯಲ್ಲಿರುವ ಆಯುಷ್ ಸಂಸ್ಥೆಗಳು ಈ ಅಧಿಕಾರಿಗಳ ಮೇಲ್ವಿಚಾರಣೆಗೆ ಒಳಪಡುತ್ತವೆ.  ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಅಧಿಕಾರಿಗಳ ಹುದ್ದೆಗಳನ್ನು ತುಂಬಲು ಸರ್ಕಾರವು ಮಾನದಂಡಗಳನ್ನು ನಿಗಧಿಪಡಿಸಿದೆ.  ಅದೇ ರೀತಿ ನೀತಿ ಸಂಹಿತೆ ಅವಶ್ಯಕತೆ ಇದ್ದು, ಆಯುಷ್ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ.  ಈ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಸಲುವಾಗಿ ಜಿಲ್ಲೆಯ ಆಯುಷ್ ಅಧಿಕಾರಿ ಹುದ್ದೆಗಳಿಗೆ ನಿಯುಕ್ತಿ ಮಾಡುವಾಗ ಕನಿಷ್ಠ ವಿದ್ಯಾರ್ಹತೆ, ಅನುಭವ, ಉನ್ನತ ವ್ಯಾಸಂಗ/ತರಬೇತಿ ಉತ್ತಮ ಸೇವಾ ದಾಖಲೆ ಇತ್ಯಾದಿ ಮಾನದಂಡಗಳನ್ನು ಅನುಸರಿಸಿ ವೈದ್ಯಾದಿಕಾರಿಗಳನ್ನು ಆಯ್ಕೆ ಮಾಡುವುದು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವಶ್ಯಕವಾಗಿರುವುದರಿಂದ ಜಿಲ್ಲಾ ಆಯುಷ್ ಅಧಿಕಾರಿಗಳನ್ನು ನೆಮಕ ಮಾಡಲು ಮಾನದಂಡಗಳನ್ನು ನಿಗಧಿಪಡಿಸುವಂತೆ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.  ಸರ್ಕಾರವು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದೆ.  ಜಿಲ್ಲಾ ಆಯುಷ್ ಅಧಿಕಾರಿಗಳ ನೇಮಕಾತಿಗೆ ಮಾನದಂಡಗಳನ್ನು ನಿಗಧಿಪಡಿಸಲು ಸರ್ಕಾರವು ನಿರ್ಧರಿಸಿದೆ. ಅದರಂತೆ ಈ ಆದೇಶ.

​​ಸರ್ಕಾರಿ ಆದೇಶ ಸಮಖ್ಯೆ : ಆಕುಕ 154 ಪಿಐಎಂ 2013 ಬೆಂಗಳೂರು, ದಿನಾಂಕ 17.01.2014

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಆಯುಷ್ ಇಲಾಖೆಯಲ್ಲಿನ ಜಿಲ್ಲಾ ಆಯುಷ್ ಅಧಿಕಾರಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಈ ಕೆಳಕಂಡ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸತಕ್ಕದ್ದು.

 1. ಆಯುಷ್ ವೈದ್ಯರಾಗಿ ನಿಯತಕಾಲಿಕವಾಗಿ (Regular) ನೇಮಕಗೊಂಡು ಹಾಗೂ ಹಿರಿಯ ವೈದ್ಯಾಧಿಕಾರಿ ಹುದ್ದೆಗಳಲ್ಲಿ ಕನಿಷ್ಠ 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
 2. ಮೂರು ವರ್ಷಗಳ ಮಾಸಿಕ ಕಾರ್ಯನಿರ್ವಹಣಾ ವರದಿಗಳಲ್ಲಿ ಕನಿಷ್ಠ "ಉತ್ತಮ" ಶ್ರೇಣಿಯನ್ನು (Very good) ಹೊಂದಿರಬೇಕು.
 3. ಅಧಿಕಾರಿಯ ಮೇಲೆ ಯಾವುದೇ ಇಲಾಖಾ/ಕ್ರಿಮಿನಲ್ ವಿಚಾರಣೆ ಇರಕೂಡದು.
 4. ಅಧಿಕಾರಿಯ ಸ್ನಾತಕೋತ್ತರ ಪದವಿ ಹೊಂದಿರುವುದು ಅಪೇಕ್ಷಣೀಯ.
 5. ಅಧಿಕಾರಿಯು ಒಂದು ತಿಂಗಳ ಅಥವಾ ಅಧಿಕ ಅವಧಿಯ ಆಡಳಿತಾತ್ಮಕ ತರಬೇತಿ ಹೊಂದಿರುವುದು ಅಪೇಕ್ಷಣೀಯ.
 6. ಆಯುಷ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ವೈದ್ಯರುಗಳು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಸಕ್ರಿಯವಾಗಿ ಭಾಗವಹಿಸಿರಬೇಕು.  ಈ ಆಸ್ಪತ್ರೆಗಳಲ್ಲಿ ಆರೋಗ್ಯ ಮೇಳ/ಪುನರ್ ಮನನ ತರಬೇತಿಗಳಲ್ಲಿ ಭಾಗವಹಿಸಿರಬೇಕು.  ಇವರುಗಳಿಗೆ ಹಂಚಿಕೆ ಮಾಡಿರುವ ಒಳರೋಗಿಗಳ ಹಾಸಿಗೆಗಳನ್ನು ಕನಿಷ್ಠ 80ರಷ್ಟು ತುಂಬಿರಬೇಕು.
 7. ಅಧಿಕಾರಿಯು ಸಾರ್ವಜನಿಕ ಆರೋಗ್ಯ/ಆಸ್ಪತ್ರೆ ನಿರ್ವಹಣೆ ಬಗ್ಗೆ ತರಬೇತಿ ಅಪೇಕ್ಷಣೀಯ.
 8. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಆಯುಷ್ ಅಧಿಕಾರಿಗಳನ್ನು ಮುಂದುವರಿಸಲು ಆಯುಷ್ ಇಲಾಖೆಯ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕನಿಷ್ಠ ಶೇ.80 ರಷ್ಟು ಪ್ರಗತಿ ಸಾಧಿಸಿರಬೇಕು.

   
  ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
  (ಟಿ.ಎನ್. ನರಸಿಂಹರಾಜು)
  ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  (ಭಾ.ವೈ.ಪ. ಮತ್ತು ಸಮನ್ವಯ)

  ಇವರಿಗೆ:
 1. ಪ್ರಧಾನ ಮಹಾಲೇಖಪಾಲರು (ಜಿ & ಎಸ್.ಎಸ್.ಎ.) ಮತ್ತು ಪ್ರಧಾನ ಮಹಾಲೇಖಪಾಲರು (ಇ ಮತ್ತು ಆರ್.ಎಸ್.ಎ.) ಕರ್ನಾಟಕ, ಹೊಸ ಕಟ್ಟಡ, "ಆಡಿಟ್ ಭವನ), ಬೆಂಗಳೂರು.
 2. ಪ್ರಧಾನ ಮಹಾಲೇಖಪಾಲರು (ಎ & ಇ) ಕರ್ನಾಟಕ, ಪಾರ್ಕ್ ಹೌಸ್ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ: 5329, ಬೆಂಗಳೂರು.
 3. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದರಾವ್ ವೃತ್ತ, ಬೆಂಗಳೂರು.
 4. ನಿರ್ದೇಶಕರು, ಆಯುಷ್ ಇಲಾಖೆ, ಧನ್ವಂತರಿ ರಸ್ತೆ, ಬೆಂಗಳೂರು 560 009.
 5. ಎಲ್ಲಾ ಜಿಲ್ಲಾ ಆಯುಷ್ ಅಧಿಕಾರಿಗಳು (ಆಯುಷ್ ನಿರ್ದೇಶಕರ ಮುಖಾಂತರ)
 6. ಅಧ್ಯಕ್ಷರು, ಕರ್ನಾಟಕ ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಖಗ, ಬೆಂಗಳೂರು.
 7. ಶಾಖಾ ರಕ್ಷ ಕಡತ/ಹೆಚ್ಚುವರಿ ಪ್ರತಿ​