​​

​​ಕರ್ನಾಟಕ ಸರ್ಕಾರದ ನಡೆವಳಿಗಳು​

ವಿಷಯ: ಆಯುಷ್ ಇಲಾಖೆಯ ಆರೋಗ್ಯ ವಲಯದ 2011-12ನೇ ಸಾಲಿನಲ್ಲಿ ಜಿಲ್ಲಾ/ತಾಲ್ಲೂಕು ಆಸ್ಪತ್ರೆಗಳನ್ನು ಪ್ರಾರಂಭಿಸುವ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

ಓದಲಾಗಿದೆ:

  1. ಸರ್ಕಾರದ ಆದೇಶ ಸಂಖ್ಯೆ ಆಕುಕ 169 ಪಿ ಐ ಎಂ 2011 (II) ದಿನಾಂಕ 25.05.2011.
  2. ನಿರ್ದೇಶಕರು, ಆಯುಷ್ ನಿರ್ದೇಶನಾಲಯ ಇವರ ಪತ್ರ ಸಂಖ್ಯೆ ಆಯುಷ್ 100 ಆಯವ್ಯಯ 2011-12 ದಿನಾಂಕ 20.08.2011

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಸರ್ಕಾರದ ಆದೇಶದಲ್ಲಿ, ಆಯುಷ್ ಇಲಾಖೆಯ ಹೊಸ ಯೋಜನೆಯಂತೆ ಪ್ರಾಥಮಿಕ ಹಂತವಾಗಿ ಆಯ್ದ 05 ಜಿಲ್ಲೆಗಳಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆಗಳನ್ನು ಪ್ರಾರಂಭಿಸುವುದಕ್ಕೆ 2011-12ನೇ ಸಾಲಿನಲ್ಲಿ ಒಟ್ಟು ರೂ. 164.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸುವುದಕ್ಕೆ ಕೆಲವೊಂದು ಷರತ್ತುಗಳನ್ನೊಳಪಡಿಸಿ ಅನುಮೋದನೆ ನೀಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಪತ್ರದಲ್ಲಿ ಆಯುಷ್ ಇಲಾಖೆಗೆ ಸಂಬಂಧಿಸಿದಂತೆ 2011-12ನೇ ಸಾಲಿನ ಆಯವ್ಯಯದ ಭಾಷಣದ ಕಂಡಿಕೆ 104ರಲ್ಲಿ "ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ ಘಟಕಗಳನ್ನು ಪ್ರಾರಂಭಿಸಲಾಗುವುದು ಹಾಗೂ ಇದಕ್ಕಾಗಿ ರೂ. 5.00 ಕೋಟಿಗಳನ್ನು ಒದಗಿಸಲಾಗುವುದು ಎಂದು ಘೋಷಿಸಲಾಗಿದೆ.  ಅದರಂತೆ ಆಯುಷ್ ನಿರ್ದೇಶಕರು ಪ್ರಸ್ತಾವನೆಯನ್ನು ಸಲ್ಲಿಸುತ್ತಾ, ಈ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಸೃಜಿಸಿದ ಲೆಕ್ಕ ಶೀರ್ಷಿಕೆ 2210-02-101-2-04 ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಯುಷ್ ಆಸ್ಪತ್ರೆಗಳನ್ನು ಪ್ರಾರಂಭ ಮತ್ತು ನಿರ್ವಹಣೆ ಅಡಿಯಲ್ಲಿ ರೂ. 575.00 ಲಕ್ಷಗಳ ಅನುದಾನ ಒದಗಿಸಿದ್ದು, ಅದರಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಪ್ರಾರಂಭಿಸುವ ಹೊಸ ಯೋಜನೆಗೆ ರೂ. 450.00 ಲಕ್ಷಗಳ ಅನುದಾನವನ್ನು ಒದಗಿಸಿಕೊಳ್ಳಲಾಗಿದೆ ಎಂದು ವರದಿ ನೀಡಿದ್ದಾರೆ.

ಅದರಂತೆ, ಈ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಪ್ರಾರಂಭ ಮತ್ತು ನಿರ್ವಹಣೆಗೆ ಒದಗಿಸಿರುವ ರೂ. 450.00 ಲಕ್ಷ ಗಳ ಅನುದಾನದಲ್ಲಿ ಪ್ರಾಥಮಿಕ ಹಂತವಾಗಿ 02 ಜಿಲ್ಲಾ ಮಟ್ಟದಲ್ಲಿ ಹಾಗೂ 16 ತಾಲ್ಲೂಕು ಮಟ್ಟದಲ್ಲಿ ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಹಂತದ ಆಸ್ಪತ್ರೆಗಳ ಕಟ್ಟಡಗಳಲ್ಲಿ 10 ಹಾಸಿಗೆಗಳ ಆಯುಷ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಆಸ್ಪತ್ರೆಗಳನ್ನು ಪ್ರಾರಂಭಿಸಲು ಅವಶ್ಯವಿರುವ  ಕಟ್ಟಡ ವಿಸ್ತರಣೆ, ನವೀಕರಣ, ಸಿಬ್ಬಂದಿ ಸೃಜನೆ, ವೈದ್ಯಕೀಯ ಉಪಕರಣ, ಪೀಠೋಪಕರಣಗಳು, ಔಷಧಿ ಬಾಬ್ತು, ಸಿಬ್ಬಂದಿ ವೇತನ ಇತ್ಯಾದಿಗಳು ಸೇರಿದಂತೆ 2011-12ನೇ ಸಾಲಿನಲ್ಲಿ ಪ್ರತಿ ಆಸ್ಪತ್ರೆಗೆ ರೂ. 25.00 ಲಕ್ಷಗಳು ವೆಚ್ಚವಾಗಲಿದೆ ಎಂದು ತಿಳಿಸಿದ್ದು, ಅದರಂತೆ 10 ಹಾಸಿಗೆಗಳ 18 ಆಸ್ಪತ್ರೆಗಳಿಗೆ ಒಟ್ಟು ರೂ. 450.00 ಲಕ್ಷಗಳು ವೆಚ್ಚವಾಗುವುದೆಂದು ಈ ಆಸ್ಪತ್ರೆಗಳ ಸಿಬ್ಬಂದಿ ಸೃಜನೆ ಸೇರಿದಂತೆ ಪ್ರಸ್ತಾವನೆಗೆ ಅನುಮೋದನೆ ನೀಡುವ ಬಗ್ಗೆ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆಕುಕ 307 ಪಿಐಎಂ 2011 ದಿನಾಂಕ 15.02.2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂಖ್ಯೆ ಆಕುಕ 169 ಪಿಐಎಂ 2011 (II) ದಿನಾಂಕ 25.05.2011ರ ಆದೇಶವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.  ಆಯುಷ್ ಇಲಾಖೆಯು ಪ್ರಸ್ತಾಪಿಸಿದಂತೆ ಉಡುಪಿ ಮತ್ತು ಬೆಳಗಾಂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರ ಆಯುಷ್ ಘಟಕಗಳನ್ನು ಪ್ರಾರಂಭಿಸಲು ಮತ್ತು ಪ್ರತಿ ಆಸ್ಪತ್ರೆಗೆ ಈ ಕೆಳಕಂಡ ಕೋಷ್ಟಕದಲ್ಲಿ ಹುದ್ದೆಗಳನ್ನು ಕೆಳಕಾಣಿಸಿದ ಷರತ್ತುಗಳನ್ನು ವಿಧಿಸಿ ಸೃಜಿಸಲು ಅನುಮೋದನೆ ನೀಡಿದೆ.

Sl No​DesignationPostsPay Scale
1Physician Grade-I (Ayurveda)One (1)14050-25050
2Staff NurseOne (1) 8825-16000
3Pharmacist (Ayurveda)One (1)7275-13350
4Panchakarma TherapistsOne (1)5200-8200
5F.D.A.One (1)7275-13350
6Ward Attendar/AyahOne (1) 4800-7275
7PeonOne (1)4800-7275
 TotalSeven (07) 

 

  1. ಇದಕ್ಕಾಗಿ ಪ್ರತ್ಯೇಕ ಕಟ್ಟಡವನ್ನುಪ್ರಸ್ತಾಪಿಸದೇ ಈಗಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಟ ಅಗತ್ಯ ಮಾರ್ಪಾಡು/ವಿಸ್ತರಣಾ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಹಾಗೂ ಅದಕ್ಕೆ ಆಡಳಿತಾತ್ಮಕ ಮತ್ತು ಸಕ್ಷಮ ಪ್ರಾಧಿಕಾರದ ತಾಂತ್ರಿಕ ಅನುಮೋದನೆ ಪಡೆಯುವುದರೊಂದಿಗೆ ಆಸ್ಪತ್ರೆಗಳನ್ನು ಪ್ರಾರಂಭಿಸುವುದು.
  2. ಹುದ್ದೆಗಳನ್ನು ಭರ್ತಿ ಮಾಡುವಾಗ ಪಾರದರ್ಶಕ ವಿಧಾನಗಳನ್ನು ಅನುಸರಿಸಬೇಕು.
  3. ಹುದ್ದೆಗಳಿಗೆ ನಿಯಮಾನುಸಾರ ವಿಧಿಸಿದ ಅರ್ಹತೆಗಳನ್ನು ಅನುಸರಿಸಬೇಕು.
  4. ಕ್ರಮಸಂಖ್ಯೆ 5 ರಿಂದ 7ರಲ್ಲಿನ ಹುದ್ದೆಗಳನ್ನು ಬಾಹ್ಯ ಮೂಲದಿಂದ ಪಡೆಯುವುದು.
  5. ಈ ಹುದ್ದೆಗಳಿಗೆ ತಗುಲುವ ವೆಚ್ಚವನ್ನು ಇಲಾಖೆಗೆ ಒದಗಿಸಿದ ಅನುದಾನದಲ್ಲಿ ಭರಿಸುವುದು.

ಈ ಆದೇಶವನ್ನು ಅರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 1357/ವೆಚ್ಚ-5/2011 ದಿನಾಂಕ 25.01.2012 ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಪಿಡಿ 31 ಎಂ ಮತ್ತು ಇ 2011 ದಿನಾಂಕ 15.10.2011ರಲ್ಲಿ ನೀಡಿರುವ ಸಹಮತಿಯನುಸಾರ ಹೊರಡಿಸಿದೆ.

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಕೆ.ಎನ್. ಹರಿಣಿಯಮ್ಮ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ದತಿ)

ದೂರವಾಣಿ ಸಂಖ್ಯೆ : 22034292

ಇವರಿಗೆ:

  1. ಮಹಾಲೇಖಪಾಲರು (ಲೆಕ್ಕಪತ್ರ: ಲೆಕ್ಕಪರಿಶೋಧನೆ) ಕರ್ನಾಟಕ, ಬೆಂಗಳೂರು-1
  2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದರಾವ್ ವೃತ್ತ