​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದ 10 ಹಾಸಿಗೆಗಳ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ಓದಲಾಗಿದೆ:

  1. ಸರ್ಕಾರದ ಆದೇಶ ಸಂಖ್ಯೆ ಆಕುಕ 450 ಪಿಐಎಂ 2004 ದಿನಾಂಕ 27.12.2004
  2. ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ನಿರ್ದೇಶನಾಲಯ ಇವರ ಪತ್ರದ ಸಂಖ್ಯೆ: ಭಾವೈಪ 02 ಬಿಯುಡಿ (4) 05-06 ದಿನಾಂಕ 4.5.2005

ಪ್ರಸ್ತಾವನೆ:

ಮೇಲೆ ಓದಲಾದ (1) ರಲ್ಲಿನ ಸರ್ಕಾರಿ ಆದೇಶದಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು 10 ಹಾಸಿಗೆಗಳ ಸರ್ಕಾರಿ ಆಯುರ್ವೇದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಇದಕ್ಕೆ ಬೇಕಾಗುವ ಹೆಚ್ಚುವರಿ ಸಿಬ್ಬಂದಿಯನ್ನು ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತೆ ಇಲಾಖೆಯಿಂದ ಸೂಕ್ತ ಮರು ವಿನ್ಯಾಸ: ನಿಯೋಜನೆ ಮೂಲಕ ತುಂಬುವುದಕ್ಕೆ ಷರತ್ತನ್ನು ವಿಧಿಸಲಾಗಿದೆ.  ಮೇಲೆ ಓದಲಾದ (2) ರ ಪತ್ರದಲ್ಲಿ ನಿರ್ದೇಶಕರು, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಇಲಾಖೆ ಬೆಂಗಳೂರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸದರಿ ಆಸ್ಪತ್ರೆಯಲ್ಲಿ ಯಾವುದೇ ಹುದ್ದೆಯನ್ನು ನಿಯೋಜನೆ : ಮರುವಿನ್ಯಾಸಗೊಳಿಸಿ ತುಂಬಬೇಕಾದಲ್ಲಿ ಪ್ರಪ್ರಥಮವಾಗಿ ಹುದ್ದೆ ಅವಶ್ಯವಿರುವ ಸ್ಥಳಗಳಲ್ಲಿ ಸದರಿ ಹುದ್ದೆಗಳು ಮಂಜೂರಾಗಿಲ್ಲದೆ ಯಾವುದೇ ಹುದ್ದೆಗಳನ್ನು ನಿಯೋಜನೆ ಮರುವಿನ್ಯಾಸದ ಮೂಲಕ ಭರ್ತಿ ಮಾಡಲು ಅವಕಾಶವಿಲ್ಲವೆಂದು ತಿಳಿಸಿ, ಸದರಿ ಆಸ್ಪತ್ರೆಗೆ ಸೃಷ್ಟಿಸಬೇಕಾಗಿರುವ ಕೆಳಗಿನ ಹೆಚ್ಚುವರಿ ಸಿಬ್ಬಂದಿಯನ್ನು ಸೃಜಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಕ್ರಮ ಸಂಖ್ಯೆಸೃಷ್ಟಿಸಬೇಕಾಗಿರುವ ಹುದ್ದೆಯ ಹೆಸರುಸಂಖ್ಯೆ
1ವೈದ್ಯರು ದರ್ಜೆ-2 (ಮಹಿಳೆ)1 ಹುದ್ದೆ
2ಔಷಧಿ ವಿತರಕ1 ಹುದ್ದೆ
3ಶುಶ್ರೂಷಕಿ1 ಹುದ್ದೆ
4ದ್ವಿತೀಯ ದರ್ಜೆ ಸಹಾಯಕ1 ಹುದ್ದೆ
5ಗ್ರೂಪ್ ಡಿ ನೌಕರರು (ಅಟೆಂಡರ್, ಅಡಿಗೆಯವ, ದೋಬಿ)3 ಹುದ್ದೆಗಳು

 

ಸದರಿ ಹುದ್ದೆಗಳ ವೇತನ ಪಾವತಿ ಹಾಗೂ ಸಂಸ್ಥೆಯ ನಿರ್ವಹಣೆಗೆ ಆಯುವ್ಯಯ ಒದಗಿಸಲು ಜಿಲ್ಲಾ ಪಂಚಾಯತ್, ಮೈಸೂರು ಇವರು ದಿನಾಂಕ 12.09.2002ರ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯಲ್ಲಿ ಒಪ್ಪಿರುವುದರಿಂದ ಆಯವ್ಯಯ ಒದಗಿಸುವ ಪ್ರಶ್ನೆಯೇ ಇಲ್ಲವೆಂದು ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಹೆಚ್ಚುವರಿ ಹುದ್ದೆಗಳ ವೆಚ್ಚವನ್ನು ಜಿಲ್ಲಾ ಪಂಚಾಯತ್ ರವರು ಲೆಕ್ಕ ಶೀರ್ಷಿಕೆ 2210-04-101-1-72 ಯೋಜನೆಯಡಿ ಭರಿಸಲಾಗುವುದಾಗಿ ತಿಳಿಸಿ ಹುಣಸೂರು ತಾಲ್ಲೂಕು ಉಂಡವಾಡಿ ಗ್ರಾಮದ 10 ಹಾಸಿಗೆಗಳ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಮೇಲ್ಕಂಡಂತೆ ಕೋರಿರುವ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಿ ಸರ್ಕಾರದ ಮಂಜೂರಾತಿಗಾಗಿ ಆದೇಶ ನೀಡುವಂತೆ ಕೋರಿರುತ್ತಾರೆ.

ಸರ್ಕಾರವು ನಿರ್ದೇಶಕರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದೆ.  ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ ಆಕುಕ 226 ಪಿಐಎಂ 2005 ಬೆಂಗಳೂರು, ದಿನಾಂಕ 06.08.2005

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಈ ಕೆಳಕಂಡ ಹುದ್ದೆಗಳನ್ನು ಸೃಜಿಸಲುಯ ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.

ಕ್ರಮ ಸಂಖ್ಯೆಸೃಜಿಸಲಾಗಿರುವ ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
1ವೈದ್ಯರು ದರ್ಜೆ-2 (ಮಹಿಳೆ)1 ಹುದ್ದೆ
2ಔಷಧ ವಿತರಕರು1 ಹುದ್ದೆ
3ಶುಷ್ರೂಷಕಿ1 ಹುದ್ದೆ

 

ಇದಕ್ಕೆ ತಗಲುವ ವೆಚ್ಚವನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ 2210-04-101-1-72 ಯೋಜನೆಯಡಿಯಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : 1237.ವೆಚ್ಚ.5 2005 ದಿನಾಂಕ 18.07.2005ರ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಪ್ರಭಾಕರ್ ಎಂ. ಶೇಟ್)

ಸರ್ಕಾರಿ ಅಧೀನ ಕಾರ್ಯದರ್ಶಿ (ಪ್ರ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.​

​​​​