​​

​​​​​ಕರ್ನಾಟಕ ಸರ್ಕಾರದ ನಡೆವಳಿಗಳು

 

ವಿಷಯ: ಬೆಂಗಳೂರಿನ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೋಮಿಯೋಪತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ವಿದ್ಯಾಲಯದ ಆಸ್ಪತ್ರೆಯನ್ನು 40 ಹಾಸಿಗೆಯಿಂದ 100 ಹಾಸಿಗೆ ಮಟ್ಟಕ್ಕೆ ಉನ್ನತೀಕರಿಸಲು ಹುದ್ದೆಗಳನ್ನು ಸೃಜಿಸುವ ಬಗ್ಗೆ.

 

ಓದಲಾಗಿದೆ:

 

ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ : ಆಯುಷ್/24/ಬಿಯುಡಿ (1)/2007-08 ದಿನಾಂಕ 16-07-2008, 18-5-2009, 11-8-2009 ಹಾಗೂ ಸಂಖ್ಯೆ ಆಯುಷ್ 24 ಬಿಯುಡಿ (1)/2009-10 ದಿನಾಂಕ 18.11.2009.

 

ಪ್ರಸ್ತಾವನೆ

ಮೇಲೆ ಓದಲಾದ ಆಯುಷ್ ನಿರ್ದೇಶಕರ ಪತ್ರಗಳಲ್ಲಿ, ಕರ್ನಾಟಕದಲ್ಲಿ ಒಂದು ಸರ್ಕಾರಿ ಹೋಮಿಯೋಪತಿ ಮಹಾವಿದ್ಯಾಲಯವು ಕಾರ್ಯನಿರ್ವಹಿಸುತ್ತಿದ್ದು, ಸದರಿ ಮಹಾವಿದ್ಯಾಲಯದಲ್ಲಿ ಐದು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೇಂದ್ರದ ಸಿ.ಸಿ.ಹೆಚ್ಚ. (Central Council of Homoeopathy) ನಿಯಮದಂತೆ ಕನಿಷ್ಟ 100 ಹಾಸಿಗೆಗಳ ಆಸ್ಪತ್ರೆಯು ಅಗತ್ಯವಿರುತ್ತದೆ.  40 ಹಾಸಿಗೆಗಳ ಆಸ್ಪತ್ರೆಯಲ್ಲಿ ಮಂಜೂರಾಗಿರುವ ಹುದ್ದೆಗಳು ಮತ್ತು ಸಿ.ಸಿ.ಹೆಚ್ಚ.  ನಾರ್ಮ್ಸ್ ಪ್ರಕಾರ 100 ಹಾಸಿಗೆಗಳ ಆಸ್ಪತ್ರೆ ಅವಶ್ಯವಿರುವ ಹೆಚ್ಚುವರಿ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಪ್ರಸ್ತಾವನಾ ಪ್ರಪತ್ರ (ಪ್ರಿಪೋಸಿಷನ್ ಸ್ಟೇಟ್ ಮೆಂಟ್) ವನ್ನು ಸಲ್ಲಿಸುತ್ತಾ, ಇದಕ್ಕೆ ತಗುಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2210-05-102-0-02 ಯೋಜನೆಯಡಿಯಲ್ಲಿ ಭರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ 2010-11ನೇ ಸಾಲಿಗೆ ಅವಶ್ಯಕ ಅನುದಾನವನ್ನು ಒದಗಿಸಿಕೊಳ್ಳಲಾಗುವುದೆಂದು ತಿಳಿಸಿರುತ್ತಾರೆ.

ಮುಂದುವರೆಸುತ್ತಾ, ಸದರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಬೇಕಾದ ಸ್ಥಳಾವಕಾಶ ಹಾಗೂ ಇನ್ನಿತೆರೆ ಮೂಲಭೂತ ಸೌಕರ್ಯಗಳ ಲಭ್ಯತೆ ಬಗ್ಗೆ ಮಾಹಿತಿ ನೀಡುತ್ತಾ, ಪ್ರಿಪೋಸಿಷನ್ ಸ್ಟೇಟ್ ಮೆಂಟ್ ನಲ್ಲಿ ಕೋರಿರುಗ ಹುದ್ದೆಗಳಿಗೆ ಮಂಜೂರಾತಿ ನೀಡುವುದರೊಂದಿಗೆ ಸದರಿ ಆಸ್ಪತ್ರೆಯನ್ನು 40 ರಿಂದ 100 ಹಾಸಿಗೆಗಳ ಮೇಲ್ದರ್ಜೆಗೇರಿಸಲು ಸರ್ಕಾರದ ಮಂಜೂರಾತಿ ನೀಡಲು ಕೋರಿರುತ್ತಾರೆ.

ಸರ್ಕಾರವು ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

 

​​​​ಸರ್ಕಾರದ ಆದೇಶ ಸಂಖ್ಯೆ ಆಕುಕ 210 ಪಿಟಿಡಿ 2009 ಬೆಂಗಳೂರು ದಿನಾಂಕ 03.02.2010

 

ಪ್ರಸ್ತಾವನೆಯಲ್ಲಿ ವಿವರಿಸಿರುವ ಆಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ಸರ್ಕಾರಿ ಹೋಮಿಯೋಪತಿ ಮಹಾವಿದ್ಯಾಲಯದಲ್ಲಿ ಹೋಮಿಯೋಪತಿ ಶಿಕ್ಷಣ ಪಡೆಯುವ ವಿದ್ಯಾಕಾಂಕ್ಷಿಗಳ ಹಿತದೃಷ್ಟಿಯಿಂದ ಸ್ನಾತಕೋತ್ತರ ಪದವಿ ಆರಂಭಿಸಲು ಈಗಿರುವ 40 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಅನುಮತಿಸಿದೆ.

100 ಹಾಸಿಗೆಗಳ ಆಸ್ಪತ್ರೆಗೆ ಅನುಗುಣವಾಗಿ ಅಗತ್ಯವಿರುವ ಈ ಕೆಳಕಂಡ 39 ಹುದ್ದೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿಯಾಗಿ ಸೃಜಿಸಲು ಸರ್ಕಾರವು ಅನುಮತಿ ನೀಡಿದೆ.  ಸದರಿ ಹುದ್ದೆಗಳ ಪೈಕಿ 20 ಬೋಧಕ ಸಿಬ್ಬಂದಿಯ ವೇತನ ಭತ್ಯೆಯ ಪೂರ್ಣ ವೆಚ್ಚಗಳನ್ನು ಐದು ವರ್ಷದ ಅವಧಿಗೆ ಕೇಂದ್ರ ಸರ್ಕಾರದ

 

ಕ್ರ ಸಂ​ಹುದ್ದೆಗಳ ಪದನಾಮವೇತನ ಶ್ರೇಣಿ (ರೂಗಳಲ್ಲಿ)ಹುದ್ದೆಗಳ ಸಂಖ್ಯೆ
1ಉಪ ವೈದ್ಯಕೀಯ ಅಧೀಕ್ಷಕರು14300-192501
2ವೈದ್ಯಾಧಿಕಾರಿಗಳು ದರ್ಜೆ-213000-238504
3ಶಸ್ತ್ರ ಚಿಕಿತ್ಸಕರು14050-250501
4ಅನಸ್ತೆಟಿಸ್ಟ್14050-250501
5ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು14050-250501
6ಹಿರಿಯ ವೈದ್ಯರು (ಔಷಧಿ)14050-250501
7ಕ್ಷ ಕಿರಣ ತಜ್ಞರು (ರೇಡಿಯಾಲಜಸ್ಟ್)14050-250501
8ಪೆಥಾಲಜಿಸ್ಟ್14500-250501
9ಬಯೋಕೆಮಿಸ್ಟ್14050-250501
10ಹೌಸ್ ಸ್ಟಾಫ್/ ವೈದ್ಯರು ದರ್ಜೆ-213000-238508
11ರೇಡಿಯೋಗ್ರಾಫರ್7275-133501
12ಪ್ರಯೋಗ ಶಾಲಾ ತಂತ್ರಜ್ಷರು7275-133501
13ಕ್ಷ-ಕಿರಣ ತಂತ್ರಜ್ಷರು7275-133501
14ಡ್ರೆಸರ್5200-82002
15ಮೆಟ್ರನ್/ದಾದಿಯರ ಅಧೀಕ್ಷಕರು ದರ್ಜೆ-210800-200251
16ಶುಶ್ರೂಷಕಿಯರು8825-1600014
ಒಟ್ಟು40
ಈಗಾಗಲೇ ಮಂಜೂರಾಗಿರುವ ವೇತನ ಶ್ರೇಣಿ ರೂ. 7275-13350ರ ನಾಲ್ಕು ಔಷಧಿ ವಿತರಕರ ಹುದ್ದೆಗಳ ಪೈಕಿ ಒಂದು ಹುದ್ದೆಯನ್ನು ರದ್ದುಗೊಳಿಸಲಾಗಿದೆ. 

 

ಕ್ರಮ ಸಂಖ್ಯೆ (1) ನ್ನು ಹೊರತುಪಡಿಸಿ ಉಳಿದ ಮೇಲಿನ ಹುದ್ದೆಗಳನ್ನು ನೇರ ನೇಮಕಾತಿಯಿಂದ ತುಂಬತಕ್ಕದ್ದು.  The Karnataka Indian Systems of Medicine and Homoepathy (Collegiate Branch of Homoeopathy) (Recruitment) Rules, 1994 ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 1476 ವೆಚ್ಚ-5/2009, ದಿನಾಂಕ 02.1.2010ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಎನ್. ಮಹಾಲಕ್ಷ್ಮಮ್ಮ), ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ದತಿ)​