​​

ಕರ್ನಾಟಕ ಸರ್ಕಾರದ ನಡೆವಳಿಗಳು
ವಿಷಯ: ಭಾರತ ಸಂವಿಧಾನದ ಅನುಚ್ಛೇದ 16(4) ರ ಅನ್ವಯ ರಾಜ್ಯ ಸಿವಿಲ್ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ಮೀಸಲಾತಿ.
ಸರ್ಕಾರಿ ಆದೇಸ ಸಂಖ್ಯೆ: ಸಿಆಸುಇ 08 ಸೆಹಿಮ 95 ಬೆಂಗಳೂರು, ದಿನಾಂಕ 20.6.1995.
ಓದಲಾಗಿದೆ:
1) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 58 ಸೆಹಿಮ 94; ದಿನಾಂಕ 5-11-1994
2) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 19 ಸೆಹಿಮಾ 89 : ದಿನಾಂಕ 12-7-1989
3) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 19 ಸೆಹಿಮಾ 89 ; ದಿನಾಂಕ 22-7-1989
4) ಸರ್ಕಾರಿ ಆದೇಶ ಸಂಖ್ಯೆ : ಸಕಿ 251 ಬಿಸಿಎ 94 ದಿನಾಂಕ 31-1-1995
ಪ್ರಸ್ತಾವನೆ:
ಮೇಲೆ ಕಾಣಿಸಿದ ದಿನಾಂಕ 31-1-1995ರ ಸರ್ಕಾರಿ ಆದೇಶದಲ್ಲಿ ಹಿಂದುಳಿದ ವರ್ಗದವರ ಮೀಸಲಾತಿ ಪ್ರಮಾಣವನ್ನು ಶೇಕಡಾ 50ಕ್ಕೆ ನಿಗಧಿಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸಿವಿಲ್ ಸೇವೆಗಳ, ಸರ್ಕಾರದಲ್ಲಿ ಅಧೀನದಲ್ಲಿ ಬರುವ ಸೇವೆಗಳ ಅಥವಾ ಹುದ್ದೆಗಳ ನೇಮಕಾತಿಯಲ್ಲಿ ಭಾರತ ಸಂವಿಧಾನದ 16(4) ನೇ ಅನುಚ್ಛೇದದ ಪ್ರಕಾರ ಅಳವಡಿಸಬೇಕಾದ ರೋಸ್ಟರ್ ಬಗೆ ಪರಿಶೀಲಿಸಲಾಗಿದೆ.
ಅದರ ಪರಿಣಾಮವಾಗಿ ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.
ಆದೇಶ
ಮೇಲಿನ (1)ರಲ್ಲಿ ಓದಲಾದ ದಿನಾಂಕ 5-11-1994ರ ಆದೇಶವನ್ನು ರದ್ದುಪಡಿಸುತ್ತಾ ಪರಿಶಿಷ್ಟ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಗಳಲ್ಲಿ ಒದಗಿಸಲಾಗಿರುವ ಪರಿಶಿಷ್ಟ ಮೀಸಲಾತಿಯನ್ನು ಜಾರಿಗೆ ತರಲು ಈ ಕೆಳಕಂಡಂತೆ ಆದೇಶಿಸಲಾಗಿದೆ.
1. ಪ್ರವರ್ಗ-1, ಪ್ರವರ್ಗ-11(ಎ) ಪ್ರವರ್ಗ-11(ಬಿ), ಪ್ರವರ್ಗ-111(ಎ) ಮತ್ತು ಪ್ರವರ್ಗ-111(ಬಿ) ಮುಂತಾದ ಪದಸಮೂಹಗಳು ಸರ್ಕಾರಿ ಆದೇಶ ಸಮಖ್ಯೆ ಸಕಇ 150 ಬಿಸಿಎಂ 94, ದಿನಾಂಕ 17-9-1994ರಲ್ಲಿನ ವರ್ಗೀಕರಣದ ಅರ್ಥವನ್ನೇ ಹೊಂದಿರುತ್ತದೆ.  ಈ ಇತರೆ ಹಿಂದುಳಿದವರನ್ನು ವರ್ಗೀಕರಣದ ಉದ್ದೇಶಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಆಗಿಂದ್ದಾಗ್ಗೆ ಹೊರಡಿಸುವ ಆದೇಶಗಳಲ್ಲಿ ನೀಡುವ ವರ್ಗೀಕರಣವನ್ನೇ ಅನುಸರಿಸತಕ್ಕದ್ದು.  ನೇರ ನೇಮಕಗಳಲ್ಲಿ ಮೀಸಲಾತಿಯನ್ನು ಮೇಲಿನ (4) ರಲ್ಲಿ ಓದಲಾಗಿರುವ ಆದೇಸದಲ್ಲಿ ನಿಗಧಿಪಡಿಸಿದ ಶೇಕಡಾವಾರಿನಲ್ಲಿ ಪ್ರತಿಯೊಂದು ನೇಮಕಾತಿ ಪ್ರಾಧಿಕಾರದಡಿಯಲ್ಲಿನ ಪ್ರತಿಯೊಂದು ವೃಂದಕ್ಕೂ ಅನ್ವಯಿಸತಕ್ಕದ್ದು.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಸಮೂಹದವರಿಗೆ ಮೀಸಲಿಸಬೇಕಾದ ರಿಕ್ತ ಸ್ಥಾನಗಳ ಮೊತ್ತವನ್ನು ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ 100 ರಿಕ್ತ ಸ್ಥಾನಗಳ ರೋಸ್ಟರ್ ಆಧಾರದ ಮೇಲೆ ಲೆಕ್ಕ ಮಾಡತಕ್ಕದ್ದು. ಪ್ರತಿಯೊಂದು ನೇಮಕಾತಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವೃಂದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಈ ರೋಸ್ಟರಿನ ಒಂದನೇ ಬಿಂದುವಿನಿಂದ ಪ್ರಾರಂಭವಾಗುವಂತೆ ರೋಸ್ಟರನ್ನು ಅಳವಡಿಸಿಕೊಳ್ಳಬೇಕು.  ನೇರ ನೇಮಕಾತಿ ರಿಕ್ತ ಸ್ಥಾನಗಳನ್ನು ರೋಸ್ಟರಿನ ಒಂದನೇ ಬಿಂದುವಿನಿಂದ ಪ್ರಾರಂಭಿಸಿ 100 ನೇ ಬಿಂದುವಿನವರೆಗೂ ಸಂಬಂಧಿಸಿದ ಆಯಾ ಗುಂಪಿನ ಅಭ್ಯಗಳಿಂದ ಆಯ್ಕೆ ಮಾಡಿ ಭರ್ತಿ ಮಾಡತಕ್ಕದ್ದು.  ಉದಾಹರಣೆಗೆ, ಈ ಆದೇಶದ ನಂತರದ ಮೊದಲನೇ ನೇಮಕಾತಿಯಲ್ಲಿ 21ನೇ ರಿಕ್ತ ಸ್ಥಾನದವರೆವಿಗೆ ಭರ್ತಿ ಮಾಡಲ್ಪಟ್ಟಲ್ಲಿ, ಮಂದಿನ ನೇಮಕಾತಿಯಲ್ಲಿ ರೋಸ್ಟರನ್ನು 22ನೇ ಬಿಂದುವಿನಿಂದ ಚಾಲನೆಗೊಳಿಸತಕ್ಕದ್ದು.  ನಂತರದ ನೇಮಕಾತಿಗಳಲ್ಲಿಯೂ ಇದೇ ಪದ್ದತಿಯನ್ನು 100ನೇ ರಿಕ್ತ ಸ್ಥಾನ ಭರ್ತಿ ಆಗುವವರೆಗೂ ಅನುಸರಿಸತಕ್ಕದ್ದು.  100 ರಿಕ್ತ ಸ್ಥಾನಗಳನ್ನು ಭರ್ತಿ ಮಾಡಿದ ನಂತರ ರೋಸ್ಟರಿನ ಮೊದಲನೇ ಬಿಂದುವಿನಿಂದ ಪುನರಾರಂಭಿಸತಕ್ಕದ್ದು.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬ್ಯಾಕ್ ಲಾಗ್ಅನ್ನು ಹೊರತುಪಡಿಸಿ ದಿನಾಂಕ 5-11-1994 ಅಥವಾ ಅದಕ್ಕೆ ಹಿಂದೆ ಜಾರಿಯಲ್ಲಿದ್ದ ಸರ್ಕಾರಿ ಆದೇಶಗಳನುಸಾರ ವರ್ಗೀಕರಿಸಲ್ಪಟ್ಟು ಭರ್ತಿಯಾಗದೇ ಆ ಆದೇಶ ಜಾರಿಗೆ ಬಂದ ದಿನಾಂಕದಂದು ಉಳಿದುಕೊಂಡಿರುವ ಎಲ್ಲಾ ರಿಕ್ತ ಸ್ಥಾನಗಳೂ ಆ ವರ್ಗೀಕರಣವನ್ನು ಕಳೆದುಕೊಳ್ಳುತ್ತದೆ ಮತ್ತು ಅವುಗಳನ್ನು ಹೊಸ ರಿಕ್ತ ಸ್ಥಾನಗಳೆಂದು ಪರಿಗಣಿಸತಕ್ಕದ್ದು.  ಈ ಸರ್ಕಾರಿ ಆದೇಶದಲ್ಲಿ ನಿಗಧಿಪಡಿಸಲಾದ ರೋಸ್ಟರ್ ಅಂತಹ ರಿಕ್ತ ಸ್ಥಾನಗಳಿಗೆ ಮತ್ತು ಇನ್ನು ಮುಂದೆ ಉದ್ಭವಿಸುವ ರಿಕ್ತ ಸ್ಥಾನಗಳಿಗೆ ಅನ್ವಯಿಸತಕ್ಕದ್ದು.

2. ಪ್ರತಿಯೊಂದು ಸಮೂಹದಲ್ಲಿ ಅಂದರೆ ಸಾಮಾನ್ಯ ವರ್ಗ ಪರಿಶಿಷ್ಟ ಜಾತಿ : ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗಗಗಳ ಪ್ರತಿ ಸಮೂಹದಲ್ಲಿ ಪ್ರತಿ ಹತ್ತನೇ ರಿಕ್ತ ಸ್ಥಾನವನ್ನು ಕರ್ನಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9 ರ ಉದ್ದೇಶಕ್ಕಾಗಿ ಮಾಜಿ ಸೈನಿಕರ ಮೀಸಲಿಡತಕ್ಕದ್ದು.

3. ಆಯ್ಕೆ ಪ್ರಾಧಿಕಾರಿಯು ನೇಮಕಾತಿ ನಿಯಮನುಸಾರ ಒಂದೇ ವರ್ಗದ ಹುದ್ದೆಗಳ ಮುಖ್ಯ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿಯನ್ನು ಸಿಧ್ಧಪಡಿಸಬೇಕಾದ ಸಂದರ್ಭಗಳಲ್ಲಿ ರೋಸ್ಟರನ್ನು ಪ್ರತ್ಯೇಕವಾಗಿ ಅಳವಡಿಸುತ್ತಾ ಎರಡು ಪಟ್ಟಿಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸತಕ್ಕದ್ದು.  ಪರಿಶಿಷ್ಟ ಜಾತಿ : ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರತಿ ಗುಂಪಿಗೆ ಮೀಸಲಿರಿಸಬೇಕಾದ ರಿಕ್ತ ಸ್ಥಾನಗಳ ಸಂಖ್ಯೆಯನ್ನು ರೊಸ್ಟರ್ ಅನುಸಾರ ಲೆಕ್ಕಹಾಕತಕ್ಕದ್ದು ಮತ್ತು ಮುಖ್ಯ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆ ಮಾಡಬೇಕಾದ ಅಭ್ಯಗಳ ಸಂಖ್ಯೆಯನ್ನು ನೇಮಕಾತಿ ಪ್ರಾಧಿಕಾರಿ ಆಯ್ಕೆ ಪ್ರಾಧಿಕಾರಕ್ಕೆ ಸ್ಪಷ್ಟವಾಗಿ ತಿಳಿಸತಕ್ಕದ್ದು.

4. ಪ್ರಕಟಿತ ರಿಕ್ತ ಸ್ಥಾನಗಳ ಸಂಖ್ಯೆಗಿಂತ ಲಭ್ಯವಾಗುವ ಅಭ್ಯಗಳು ಕಡಿಮೆ ಇದ್ದಲ್ಲಿ ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯು ವಾಸ್ತವವಾಗಿ ಆಯ್ಕೆ ಮಾಡಿಕೊಳ್ಳಲಾದ ಅಭ್ಯಗನುಗುಣವಾಗಿರತಕ್ಕದ್ದು.

5. ಈ ಆದೇಶದಲ್ಲಿ ಒದಗಿಸಲಾದ ಮೀಸಲಾತಿಯನ್ನು ಸರಿಯಾಗಿ ಜಾರಿಗೊಳಿಸಲು ಅನುಸರಿಸಬೇಕಾದ ಆಯ್ಕೆ ವಿಧಾನವನ್ನು ಈ ಆದೇಶದ ಅನುಬಂಧ-2ರಲ್ಲಿ ವಿವರಿಸಲಾಗಿದೆ.  ಇದನ್ನು ಲೋಕ ಸೇವಾ ಆಯೋಗ ಮತ್ತು ಇತರೆ ಆಯ್ಕೆ ಪ್ರಾಧಿಕಾರಗಳು ಅನುಸರಿಸತಕ್ಕದ್ದು.

6. ಒಂದುವೇಳೆ ಯಾವುದೇ ವರ್ಗದ ಹುದ್ದೆಗೆ ಮಾಡಲಾದ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡದ ಸೂಕ್ತ ಅಭ್ಯಗಳು ಲಭ್ಯವಿಲ್ಲದಿದ್ದಲ್ಲಿ; ಅವರಿಗಾಗಿ ಮೀಸಲಾತ ರಿಕ್ತ ಸ್ಥಾನಗಳನ್ನು ಮೀಸಲಾತಿಯಿಂದ ವಿಮುಕ್ತಿಗೊಳಿಸುವಂತಿಲ್ಲ ಮತ್ತು ಈ ರಿಕ್ತ ಸ್ಥಾನಗಳನ್ನು ತುಂಬುವಲ್ಲಿ ಮೇಲೆ (2) ಮತ್ತು (3)ರಲ್ಲಿ ಓದಲಾಗಿರುವ ಸರ್ಕಾರಿ ಆದೇಶಗಳ ಸಂಖ್ಯೆ ಸಿಆಸುಇ 19 ಸೆಹಿಮ 89 ದಿನಾಂಕ 12-7-1989 ಮತ್ತು 22-2-1989ರಲ್ಲಿ ಹೇಳಲಾಗಿರುವ ಪದ್ದತಿಯನ್ನು ಯಥಾವತ್ತಾಗಿ ಅನುಸರಿಸತಕ್ಕದ್ದು.

7. ಈ ಆದೇಸದಲ್ಲಿ ಪ್ರವರ್ಗ-1, ಪ್ರವರ್ಗ-11(ಎ), ಪ್ರವರ್ಗ-11(ಬಿ), ಪ್ರವರ್ಗ-111(ಎ) ಮತ್ತು ಪ್ರವರ್ಗ-111(ಬಿ) ಇವರುಗಳಿಗಾಗಿ ಗುರುತಿಸಲ್ಪಟ್ಟ ಆದರೆ ಆಯಾ ವರ್ಗದ ಅರ್ಹ ಅಭ್ಯಗಳ ಲಭ್ಯತೆಯಲ್ಲಿನ ಕೊರತೆಯಿಂದಾಗಿ ಭರ್ತಿ ಮಾಡಲಾದ ರಿಕ್ತ ಸ್ಥಾನಗಳನ್ನು ಸಾಮಾನ್ಯ ವರ್ಗದ ಅಭ್ಯಗಳಿಂದ ಭರ್ತಿ ಮಾಡತಕ್ಕದ್ದು ಮತ್ತು ಈ ರೀತಿ ನಷ್ಟಗೊಂಡ ರಿಕ್ತ ಸ್ಥಾನಗಳನ್ನು ಮುಂದಿನ ಮತ್ತು ತದನಂತರದ ನೇಮಕಾತಿಗಳಲ್ಲಿ ಈ ಕೆಳಗೆ ಕಾನಿಸಿದಂತೆ ಮುಂದಕ್ಕೆ ಕೊಂಡೊಯ್ಯತಕ್ಕದ್ದು.

8. ಅದೇ ಕ್ಯಾಲೆಂಡರ್ ವರ್ಷದಲ್ಲಿ ಅಥವಾ ನಂತರದ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಅದೇ ವರ್ಗದ ಹುದ್ದೆಗಳಿಗೆ ಆಗುವ ನೇರ ನೇಮಕಾತಿಗಳಲ್ಲಿ ಈ ಆದೇಶದಲ್ಲಿ ನಿಗಧಿಪಡಿಸಿದ ರೋಸ್ಟರ್ ಅನ್ವಯ ಮತ್ತು ನಿರ್ದಿಷ್ಟಪಡಿಸಲಾದ ವಿಧಾನದಲ್ಲಿ ಹಿಂದುಳಿದ ವರ್ಗಗಳವರಿಗೆ ರಿಕ್ತ ಸ್ಥಾನಗಳಲ್ಲಿ ಮೀಸಲಾತಿಯನ್ನು ನಿಗಧಿಪಡಿಸತಕ್ಕದ್ದು.  ಆದರೆ ಇತರೆ ಹಿಂದುಳಿದ ವರ್ಗಗಳ ಅಭ್ಯಗಳ ಲಭ್ಯತೆಯಲ್ಲಿನ ಕೊರತೆಯಿಂದಾಗಿ ನೇಮಕಾತಿಯಲ್ಲಿ ಭರ್ತಿಯಾಗದೇ ಉಳಿದ ಮೇಲಿನ ಕಂಡಿಕೆ 7 ರನುಸಾರ ಮುಂದಕ್ಕೆ ಕೊಂಡೊಯ್ಯಲಾದ ರಿಕ್ತ ಸ್ಥಾನಗಳನ್ನು ಅನುಕ್ರಮವಾಗಿ ಸಂಬಂಧಿಸಿದ ಇತರೆ ಹಿಂದುಳಿದ ವರ್ಗಗಳ ಸಮೂಹಗಳಿಗೆ ಮುಂದಕ್ಕೆ ಕೊಂಡೊಯ್ಯಲಾದ ರಿಕ್ತ ಸ್ಥಾನಗಳನ್ನು ಅನುಕ್ರಮವಾಗಿ ಸಂಬಂಧಿಸಿದ ಇತರೆ ಹಿಂದುಳಿದ ವರ್ಗಗಳ ಸಮೂಹಗಳಿಗೆ ಮುಂದಿನ ಆಯ್ಕೆಯಲ್ಲಿ/ಗಳಲ್ಲಿ ಸರಿದೂಗಿಸತಕ್ಕದ್ದು.  ಈ ಉದ್ದೇಶಕ್ಕಾಗಿ ವಿವಿಧ ಇತರೆ ಹಿಂದುಳಿದ ವರ್ಗಗಗಳ ಸಮೂಹದವರಿಗೆ ಕಂಡಿಕೆ 7 ರನ್ನುಸಾರ ನಷ್ಟವಾದ ರಿಕ್ತ ಸ್ಥಾನವನ್ನು ಮುಂದಿನ ತಕ್ಷಣದ ಅಥವಾ ನಂತರದ ನೇರ ನೇಮಕಾತಿಗಳಲ್ಲಿ ಸಾಮಾನ್ಯ ವರ್ಗದ ಗುಂಪಿನಲ್ಲಿ ಲಭ್ಯವಾಗುವ ರಿಕ್ತ ಸ್ಥಾನಗಳನ್ನು ಅಂತಹಾ ಪ್ರತಿಯೊಂದು ಸಮೂಹಕ್ಕೂ ಒದಗಿಸುವ ಮೂಲಕ ನಷ್ಟವನ್ನು ಭರ್ತಿ ಮಾಡತಕ್ಕದ್ದು.

9. ಮೇಲಿನ ಕಂಡಿಕೆ 8 ರಲ್ಲಿ ಹೇಳಲಾದಂತೆ ಅಭ್ಯಗಳ ಕೊರತೆಯಿಂದಾಗಿ ಮೀಸಲಾತಿ ವರ್ಗಗಳ ರಿಕ್ತ ಸ್ಥಾನಗಳನ್ನು ಭರ್ತಿ ಮಾಡಲಾಗದೆಯೇ ಉಳಿದು ಹೋದ ಮತ್ತು ನಂತರದ ಆಯ್ಕೆಗಳಲ್ಲಿ ನಷ್ಟವನ್ನು ಭರ್ತಿಮಾಡಲು ಕೊಂಡೊಯ್ಯುವ ಪ್ರಕ್ರಿಯೆಯನ್ನು ಮೊದಲನೇ ಕ್ಯಾಲೆಂಡರ್ ವರ್ಷದ ಆಯ್ಕೆಗಳಲ್ಲಿ ಮತ್ತು ನಂತರದ ಎರಡು ಕ್ಯಾಲೆಂಡರ್ ವರ್ಷಗಳ ಆಯ್ಕೆಗಳಲ್ಲಿ ಮಾತ್ರ ಮುಂದುವರೆಸತಕ್ಕದ್ದು.  ಮೂರನೇ ಕ್ಯಾಲೆಂಡರ್ ವರ್ಷದ ಅಂತ್ಯದಲ್ಲಿ ಯಾವುದೇ ಮೀಸಲಾತಿ ರಿಕ್ತ ಸ್ಥಾನವು ಹೊಂದಾಣಿಕೆಯಾಗದೆಯೇ ಉಳಿದುಕೊಂಡರೆ, ಅವು ವರ್ಗೀಕರಣವನ್ನು ಕಳೆದುಕೊಳ್ಳುತ್ತದೆ ಮತ್ತು ಮುಂದಿನ (ನಾಲ್ಕನೆಯ) ಕ್ಯಾಲೆಂಡರ್ ವರ್ಷದಲ್ಲಿ ಅವುಗಳನ್ನು ಹೊಸ ರಿಕ್ತ ಸ್ಥಾನಗಳೆಂದು ಪರಿಗಣಿಸಿ ರೋಸ್ಟರನ್ನು ಮುಂದುವರೆಸತಕ್ಕದ್ದು.

10. ಆಯ್ಕೆಯಾದ ಅಭ್ಯಗಳು ಕರ್ತವ್ಯಕ್ಕೆ ಹಾಜರಾಗದ ಕಾರಣ ಭರ್ತಿಯಾಗದೆಯೇ ಉಳಿದ ರಿಕ್ತ ಸ್ಥಾನಗಳನ್ನು ಹೊಸ ರಿಕ್ತ ಸ್ಥಾನಗಳೆಂದು ಪರಿಗಣಿಸತಕ್ಕದ್ದು.

11. ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಮತ್ತು ಪರಿಶೀಲಿಸುವ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಗಿಂದಾಗ್ಯೆ ಹೊರಡಿಸುವ ಮಾರ್ಗಸೂಚನೆಗಳನ್ನು ಅನುಸರಿಸತಕ್ಕದ್ದು.

12. ಸಂಬಂಧಿಸಿದ ಸರ್ಕಾರದ ಕಾರ್ಯದರ್ಶಿಗಳು:

(i) ಸ್ಥಳೀಯ ಸಂಸ್ಥೆಗಳು
(ii) ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣಕ್ಕೊಳಪಡುವ ಹಾಗೂ ಕಂಪನಿ ಅಧಿನಿಯಮ, ಇತರೆ ಅಧಿನಿಯಮ; ನಿಯಮ ಇತ್ಯಾದಿಗಳಡಿ ಸ್ಥಾಪಿಸಲಾದ ಕಂಪನಿ, ಕಾರ್ಪೋರೇಷನ್, ಬೋರ್ಡ್ ನಿಗಮ ಇತ್ಯಾದಿ
(iii) ಅಲ್ಪ ಸಂಖ್ಯಾತರ ಸಂಸ್ಥೆಗಳನ್ನು ಹೊರತುಪಡಿಸಿ ಸರ್ಕಾರದಿಂದ ಅನುದಾನ ಅಥವಾ ಸಹಾಯ ಪಡೆಯುವ ಸಂಸ್ಥೆಗಳು (ಇಲ್ಲಿ 'ಅನುದಾನ' ಅಥವಾ 'ಸಹಾಯ' ಎಂದರೆ ಸರ್ಕಾರ ನೀಡುವ ಆಕ ಮತ್ತು ಇತರ ನೆರವು ಒಳಗೊಳ್ಳುವುದು.
ಇವುಗಳಿಗೆ ಅನ್ವಯವಾಗುವ ಸಂಬಂಧಿಸಿದ ಕಾನೂನುಗಳಡಿಯಲ್ಲಿ ಸೂಕ್ತ ಸೂಚನೆ ಆದೇಶಗಳನ್ನು ಹೊರಡಿಸತಕ್ಕದ್ದು.
ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ.  ಆದರೆ ಯಾವುದೇ ವೃಂದದ ಹುದ್ದೆಗಳ ಸಂಬಂಧದಲ್ಲಿ ಈಗಾಗಲೇ ನೇರ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈ ಆದೇಶ ಹೊರಡಿಸುವ ವೇಳೆಗೆ ಬಾಕಿಯಿದ್ದಲ್ಲಿ, ಆ ನೇರ ನೇಮಕಾತಿ ಪ್ರಕ್ರಿಯೆಯನ್ನು ಸಮಾಜ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಹೊರಡಿಸುವ ಆದೇಶದನ್ವಯ ಪೂರ್ಣಗೊಳಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎ.ಕೆ.ಎಂ. ನಾಯಕ್)
ಸರ್ಕಾರದ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ಗೆ:
ಸಂಕಲನಕಾರರು, ಕರ್ನಾಟಕ ರಾಜ್ಯ ಪತ್ರ, ದಿನಾಂಕ 21-6-1995ರ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಣೆಗಾಗಿ.

ಪ್ರತಿ:
1) ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು
2) ಸರ್ಕಾರದ ಎಲ್ಲಾ ವಿಶೇಷ/ಅಪರ/ಸಹ ಕಾರ್ಯದರ್ಶಿಗಳು
3) ಸರ್ಕಾರದ ಎಲ್ಲಾ ಉಪ/ಅಧೀನ ಕಾರ್ಯದರ್ಶಿಗಳು
4) *ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು.
5) *ಕಾರ್ಯದರ್ಶಿ, ಕರ್ನಾಟಕ ವಿಧಾನ ಮಂಡಲ, ಬೆಂಗಳೂರು.
6) *ರಿಜಿಸ್ಟ್ರಾರ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.
7) *ರಿಜಿಸ್ಟ್ರಾರ್, ಕರ್ನಾಟಕ ಆಡಳಿತ ಮಂಡಳಿ, ಬೆಂಗಳೂರು.
8) *ರಿಜಿಸ್ಟ್ರಾರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು.
9) ವಾರ ಪತ್ರಿಕೆ
(*ಪತ್ರದ ಮೂಲಕ)
ಅನುಬಂಧ-1
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 08 ಸೆಹಿಮ 95 ದಿನಾಂಕ 20ನೇ ಜೂನ್ 1995

 
1.ಪ.ಜಾ.26.ಸಾ.ಅ.51.11(ಎ)76.ಸಾ.ಅ.
2.ಸಾ. ಅ.27.ಪ.ಜಾ.52.ಸಾ.ಅ.77.11(ಎ)
3.ಪ.ಪಂ.28.ಸಾ.ಅ.53.ಪ.ಜಾ.78.ಸಾ.ಅ.
4.ಸಾ.ಅ.29.11(ಎ)54.ಸಾ.ಅ.79.1
5.130.ಸಾ.ಅ.55.11 (ಎ)80.ಸಾ.ಅ.
6.ಸಾ.ಅ.31.156.ಸಾ.ಅ.81.ಪ.ಜಾ.
7.11(ಎ)32.ಸಾ.ಅ.57.182.ಸಾ.ಅ.
8.ಸಾ.ಅ.33.ಪ.ಜಾ.58.ಸಾ.ಅ.83.111(ಬಿ)
9.ಪ.ಜಾ.34.ಸಾ.ಅ.59.ಪ.ಜಾ.84.ಸಾ.ಅ.
10.ಸಾ.ಅ.35.11(ಬಿ)60.ಸಾ.ಅ.85.11(ಎ)
11.11(ಬಿ)36.ಸಾ.ಅ.61.11(ಬಿ)86.ಸಾ.ಅ.
12.ಸಾ.ಅ.37.11(ಎ)62.ಸಾ.ಅ.87.11(ಬಿ)
13.11(ಎ)38.ಸಾ.ಅ.63.11(ಎ)88.ಸಾ.ಅ.
14.ಸಾ.ಅ.39.ಪ.ಪಂ.64.ಸಾ.ಅ.89.ಪ.ಜಾ.
15.ಪ.ಜಾ.40.ಸಾ.ಅ.65.111 (ಬಿ)90.ಸಾ.ಅ.
16.ಸಾ.ಅ.41.ಪ.ಜಾ.66.ಸಾ.ಅ.91.11(ಎ)
17.111(ಎ)42.ಸಾ.ಅ.67.ಪ.ಜಾ.92.ಸಾ.ಅ.
18.ಸಾ.ಅ.43.111(ಬಿ)68.ಸಾ.ಅ.93.ಪ.ಜಾ.
19.111(ಬಿ)44.ಸಾ.ಅ.69.11(ಎ)94.ಸಾ.ಅ.
20.ಸಾ.ಅ.45.11(ಎ)70.ಸಾ.ಅ.95.111(ಎ)
21.11(ಎ)46.ಸಾ.ಅ.71.ಪ.ಪಂ.96.ಸಾ.ಅ.
22.ಸಾ.ಅ.47.111(ಎ)72.ಸಾ.ಅ.97.11(ಎ)
23.ಪ.ಜಾ.48.ಸಾ.ಅ.73.111(ಎ)98.ಸಾ.ಅ.
24.ಸಾ.ಅ.49.ಪ.ಜಾ.74.ಸಾ.ಅ.99.111(ಬಿ)
25.11(ಎ)50.ಸಾ.ಅ.75.ಪ.ಜಾ.100.ಸಾ.ಅ.

​ಸ್ಪಷ್ಟೀಕರಣ

1              ಪ್ರವರ್ಗ-1                              ಶೇಕಡ 4

11(ಎ)       ಪ್ರವರ್ಗ-11(ಎ)                      ಶೇಕಡ 15

11(ಬಿ)       ಪ್ರವರ್ಗ-11(ಬಿ)                      ಶೇಕಡ 4

111(ಎ)     ಪ್ರವರ್ಗ 111(ಎ)                    ಶೇಕಡ 4

111 (ಬಿ)     ಪ್ರವರ್ಗ 111(ಬಿ)                   ಶೇಕಡ 5

ಪ.ಜಾ         ಪರಿಶಿಷ್ಟ ಜಾತಿ                        ಶೇಕಡ 15

ಪ.ಪಂ.        ಪರಿಶಿಷ್ಟ ಪಂಗಡ                     ಶೇಕಡ 3