​​

ಕರ್ನಾಟಕ ಸರ್ಕಾರ

ಸಂ. ಸಿಆಸುಇ 394 ಸ.ಆ.ಸೇ. 2012                                                                                                                                  ಕರ್ನಾಟಕ ಸರ್ಕಾರದ ಸಚಿವಾಲಯ,

ವಿಧಾನ ಸೌದ,

ಬೆಂಗಳೂರು, ದಿನಾಂಕ 31.08.2012

ಸುತ್ತೋಲೆ

ವಿಷಯ: ಹುದ್ದೆಗಳ ಸೃಜನೆಯ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವೆಗಳು (ಇ) ಶಾಖೆಗೆ ಸಲ್ಲಿಸುವ ಬಗ್ಗೆ.

ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977ರನ್ವಯ ಇಲಾಖೆಗಳ ಸಂಘಟನೆ, ನಮೂನೆಗಳ ಮತ್ತು ಕಾರ್ಯವಿಧಾನಗಳ ಸರಳೀಕರಣ ಮುಂತಾದ ವಿಷಯಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಆಡಳಿತ ಸುಧಾರಣೆಗಳು) ವಿಭಾಗದ ವ್ಯಾಪ್ತಿಗೆ ಬರುತ್ತಿದ್ದು, ಯಾವುದೇ ಹುದ್ದೆಗಳನ್ನು ಅಥವಾ ಶಾಖೆಗಳನ್ನು ಸೃಜಿಸುವ ವಿಷಯವನ್ನು ಸಿ.ಆ.ಸು.ಇ. (ಸೇವೆಗಳು-ಇ) ಶಾಖೆಯಲ್ಲಿ ನಿರ್ವಹಿಸಲಾಗುತ್ತಿದೆ.

 

ಆದರೆ, ಇತ್ತೀಚೆಗೆ ಹುದ್ದೆಗಳ ಸೃಜನೆ, ಇಲಾಖೆಗಳ ಮರುವಿಂಗಡಣೆ ಮುಂತಾದ ವಿಷಯಗಳಲ್ಲಿ ಆಡಳಿತ ಇಲಾಖೆಗಳು ತಮ್ಮ ಇಲಾಖೆಯ ಅಧಿಕಾರ ವ್ಯಾಪ್ತಿಯ ಅರಿವಿಲ್ಲದೆ ತಾವೇ ಆದೇಶ ಹೊರಡಿಸುತ್ತಿರುವುದು ಕಂಡುಬರುತ್ತಿದೆ.  ಇದರಿಂದ ಹುದ್ದೆಗಳ ಸೃಜನೆ, ಇಲಾಖೆಗಳ ಮರು ವಿಂಗಡಣೆ ಮುಂತಾದ ವಿಷಯಗಳಲ್ಲಿ ಸಮನ್ವಯತೆ ಇಲ್ಲದಂತಾಗುತ್ತದೆ.

 

ಇದಲ್ಲದೆ, ಹುದ್ದೆಗಳನ್ನು ಸೃಜಿಸುವ ಕೆಲವೊಂದು ಪ್ರಕರಣಗಳಲ್ಲಿ ಆಡಳಿತ ಇಲಾಖೆಗಳು ಆರ್ಥಿಕ ಇಲಾಖೆ ಹಾಗೂ ಸಚಿವ ಸಂಪುಟದ ಅನುಮೋದನೆಯನ್ನು ಪಡೆದ ನಂತರ ಸಿಆಸುಇ (ಸೇವೆಗಳು-ಇ) ಶಾಖೆಗೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿವೆ.  ಇದರಿಂದ ಹುದ್ದೆಗಳ ಸೃಜನೆಯ ಅಗತ್ಯತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲನೆಯನ್ನು ಮಾಡಲು ಸಾಧ್ಯವಾಗುವುದಿಲ್ಲ.

 

ಆದ್ದರಿಂದ ಇನ್ನು ಮುಂದೆ ಹುದ್ದೆಗಳ ಸೃಜನೆ ಇಲಾಖೆಗಳ ಮರುವಿಂಗಡಣೆ ಮುಂತಾದ ವಿಷಯಗಳಲ್ಲಿ ನೇರವಾಗಿ ಸಿಆಸುಇ (ಸೇವೆಗಳು-ಇ) ಶಾಖೆಗೆ ಪ್ರಸ್ತಾವನೆಗಳನ್ನು ಕಳುಹಿಸುವಂತೆ ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ.

 

(ಮಹಮ್ಮದ್ ಸನಾವುಲ್ಲ)

ಸರ್ಕಾರದ ಪ್ರಧಾನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

 ​