​​​​​ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ತರಬೇತಿ ವಿಧೇಯಕ​​​​​​, 2012 (2015ರ ಮೇ ತಿಂಗಳ ಸ್ನಾತಕೋತ್ತರ ಪದವಿಗಳು ಅಥವಾ ಡಿಪ್ಲೋಮಾಗಳನ್ನು ಪ್ರಧಾನ ಮಾಡುವುದಕ್ಕೆ ಮೊದಲು ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿಗಾಗಿ ಉಪ ಬಂದ ಕಲ್ಪಿಸಲು ಒಂದು ಅದಿನಿಯಮ​


1. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಯಮವನ್ನು ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ 2012 ಎಂದು ಕರೆಯ ತಕ್ಕದ್ದು.

(2) ಇದು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು.​

​(3) ಇದು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು,-​

(ಎ) "ಸರ್ಕಾರಿ ಆಸ್ಪತ್ರೆ" ಎಂದರೆ ಮತ್ತು ಜಿಲ್ಲಾ ಆಸ್ಪತ್ರೆ ಇದು ಇತರ ದೊಡ್ಡ ಆಸ್ಪತ್ರೆ, ನಗರ ಕುಟುಂಬ ಕಲ್ಯಾಣ ಕೇಂದ್ರ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರ, ಸಂಚಾರಿ ಆರೋಗ್ಯ ಘಟಕ, ಸಂಚಾರಿ ಟ್ರೈಬಲ್ ಘಟಕ, ಹೆರಿಗೆ ಕೇಂದ್ರ, ಸಂಸ್ಥೆ, ಕೇಂದ್ರ ಅಥವಾ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿರುವ ಯಾವುದೇ ಹೆಸರಿನಿಂದ ಕರೆಯಲ್ಪಡುವ ಯಾವುದೇ ಇತರ ಕೇಂದ್ರ ಒಳಗೊಳ್ಳುತ್ತದೆ.

(ಬಿ) "ವೈದ್ಯಕೀಯ ಕೋರ್ಸುಗಳು" ಎಂದರೆ, ಎಂಬಿಬಿಎಸ್ ಪದವಿಯನ್ನು ಪ್ರಧಾನ ಮಾಡುವುದಕ್ಕೆ ಸಂಬಂಧಿಸಿದ ಪದವಿ ಕೋರ್ಸುಗಳು;

(ಸಿ) "ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳು" ಎಂದರೆ, ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಧಾನ ಮಾಡುವುದಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಪದವಿ ಕೋರ್ಸುಗಳು;

(ಡಿ) "ಕೌನ್ಸಿಲಿಂಗ್ ಪ್ರಕ್ರಿಯೆ" ಎಂದರೆ, ಹಂಚಿಕೆಗಾಗಿ ಅಥವಾ ಸ್ಥಳನಿಯುಕ್ತಿಗಾಗಿ ಪರಿಗಣಿಸಿರುವ ವ್ಯಕ್ತಿಗೆ ನಿಯಮಿಸಬಹುದಾದ ಅಂಥ ನಿಯಮಗಳಿಗನುಸಾರವಾಗಿ ಮೆರಿಟಿನ ಆಧಾರದ ಮೇಲೆ ಆಧ್ಯತೆಯಲ್ಲಿ ಸ್ಥಾಳ ಮಾಡಲು ಒಬ್ಬ ವ್ಯಕ್ತಿಗೆ ಅವಕಾಶವನ್ನು ನೀಡುವ ಪ್ರಕ್ರಿಯೆ;

(ಇ) "ಗ್ರಾಮೀಣ ಪ್ರದೇಶ" ಎಂದರೆ, ನಗರ ಪ್ರದೇಶ ಆಗಿರದ ಒಂದು ಪ್ರದೇಶ;

(ಎಫ್) "ಸೂಪರ್ ಸ್ಪೆಷಾಲಿಟಿ ಕೋರ್ಸುಗಳು" ಎಂದರೆ, ವೈದ್ಯಕೀಯದಲ್ಲಿ ಸೂಪರ್ ಸ್ಪೆಷಾಲಿಟಿ ಪದವಿಯನ್ನು ಪ್ರಧಾನ ಮಾಡುವುದಕ್ಕೆ ಸಂಬಂಧಿಸಿದ ಕೋರ್ಸುಗಳು;

(ಜಿ) "ವಿಶ್ವವಿದ್ಯಾಲಯ" ಎಂದರೆ, ರಾಜ್ಯದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯ ಅಥವಾ ವಿಶ್ವ ವಿದ್ಯಾಲಯ ಅನುದಾನಗಳ ಆಯೋಗ ಅಧಿನಿಯಮ, 1956ರ (1956ರ ಕೇಂದ್ರ ಅಧಿನಿಯಮ 3) ಅಡಿಯಲ್ಲಿ ಭಾವಿತ ವಿಶ್ವವಿದ್ಯಾಲಯವೆಂದು ಘೋಷಿಸಲ್ಪಟ್ಟ ಒಂದು ವಿಶ್ವ ವಿದ್ಯಾಲಯ;​

(ಹೆಚ್) "ನಗರ ಪ್ರದೇಶ" ಎಂದರೆ, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಅಥವಾ ಕರ್ನಾಟಕ ಅಧಿನಿಯಮ, 1976 ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರಲ್ಲಿ ನಿರ್ದಿಷ್ಟಪಡಿಸಿದ ಇತರ ಅಧಿಸೂಚಿತ ಪ್ರದೇಶಗಳ ಮಿತಿಗಳೊಳಗೆ ಇರುವ ಯಾವುದೇ ಪ್ರದೇಶ ಮತ್ತು ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತೆ ಮೇಲೆ ಅಧಿಸೂಚಿಸಿದ ಪ್ರದೇಶಗಳ ಪರಿಮಿತಿಗಳಿಂದ ಅಂಥ ದೂರದವರೆಗೆ ಇರುವ ಪ್ರದೇಶ;

3. ವೈದ್ಯಕೀಯ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ.- (1) ಎಂ.ಬಿ.ಬಿ.ಎಸ್. ಪದವಿ ಕೋರ್ಸನ್ನು​​ ಮತ್ತು ಒಂದು ವರ್ಷದ ಇಂಟರ್ನ್ ಶಿಪ್ ಪೂರ್ಣಗೊಳಿಸಿದ ತರುವಾಯ ಪ್ರತಿಯೊಬ್ಬ


​​​

​​