​​​​ಆಯುಷ್ ವೈದ್ಯರ ವೇತನ ಪರಿಷ್ಕರಣೆ

ಆಯುಷ್ ಇಲಾಖೆಯ ವೈದ್ಯರುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರುಗಳಿಗೆ ನೀಡುತ್ತಿರುವ ಸರಿಸಮಾನ ವೇತನ ಶ್ರೇಣಿ, ಭತ್ಯೆ, ಇತರೆ ಸೌಲಭ್ಯಗಳು, ಸ್ಥಾನಮಾನಗಳು ಹಾಗೂ ಕಾಲ ಕಾಲಕ್ಕೆ ಅವರಿಗೆ ನೀಡಲಾಗುವ ಎಲ್ಲಾ ಸವಲತ್ತುಗಳನ್ನು ವಿಸ್ತರಿಸಿ, ಸರ್ಕಾರಿ ಆದೇಶ ಸಂಖ್ಯೆ ಆಕುಕ 357 ಪಿಐಎಂ 2012, ಬೆಂಗಳೂರು ದಿನಾಂಕ 24-01-2013ರಲ್ಲಿ ಆಯುಷ್ ಇಲಾಖೆಯ ವೈದ್ಯರು ದರ್ಜೆ-2 ವೃಂದದ ಹುದ್ದೆಯನ್ನು ಗ್ರೂಪ್-ಬಿ ವೃಂದದಿಂದ ಗ್ರೂಪ್-ಎ ವೃಂದಕ್ಕೆ ಮೇಲ್ದರ್ಜೆಗೇರಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಲೋಪತಿ ವೈದ್ಯರುಗಳಿಗೆ ಸರಿಸಮಾನವಾದ ವೇತನ ಶ್ರೇಣಿಗಳನ್ನು ಆಯುಷ್ ಇಲಾಖೆಯ ವೈದ್ಯರುಗಳಿಗೆ ಈ ಕೆಳಗಿನಂತೆ ನಿಗಧಿಪಡಿಸಲಾಗಿದೆ.

ಕ್ರಮ ಸಂಖ್ಯೆಪ್ರಸ್ತುತ ವೃಂದದ ಹೆಸರು/ವೇತನ ಶ್ರೇಣಿಪರಿಷ್ಕರಿಸಿದ ವೃಂದದ ಹೆಸರು/ವೇತನ ಶ್ರೇಣಿ
01ವೈದ್ಯರು ದರ್ಜೆ-2,  ರೂ. 26,000-47,000ವೈದ್ಯಾಧಿಕಾರಿ (ಆಯುಷ್) |ರೂ. 28,100-50,100
02ವೈದ್ಯರು ದರ್ಜೆ-1

ಹಿರಿಯ ವೈದ್ಯಾಧಿಕಾರಿ (ಆಯುಷ್) | ರೂ. 30,400-51,300

03

ಉಪ ನಿರ್ದೇಶಕರು | ರೂ. 36,500-53,850

ಉಪ ನಿರ್ದೇಶಕರು | ರೂ. 36,300-53,850

 

ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರುಗಳಿಗೆ ನೀಡಲಾಗುತ್ತಿರುವ 6,13 ಮತ್ತು 20 ವರ್ಷಗಳ ಕಾಲಬದ್ದ ಮುಂಬಡ್ತಿ ವೇತನಗಳನ್ನು ಆಯುಷ್ ವೈದ್ಯರುಗಳಿಗೂ ವಿಸ್ತರಿಸಿ ಈ ಕೆಳಗಿನಂತೆ ನಿಗಧಿಪಡಿಸಲಾಗಿದೆ.

ಅ) ವೈದ್ಯಾಧಿಕಾರಿಗಳು (ಆಯುಷ್) ಪ್ರಸ್ತುತ ವೈದ್ಯರು ದರ್ಜೆ-2 ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ 6 ವರ್ಷದೊಳಗಿನ ಸೇವೆಯನ್ನು ಪೂರ್ಣಗೊಳಿಸಿರುವ ವೈದ್ಯರುಗಳನ್ನು ವೈದ್ಯಾಧಿಕಾರಿಗಳು (ಆಯುಷ್) ಎಂದು ಪರಿಗಣಿಸಿ ಅವರುಗಳು ರೂ. 28,100-50,100 ವೇತನ ಶ್ರೇಣಿಯಲ್ಲಿ ಮುಂದುವರೆಸಿದೆ.

ಆ) ಹಿರಿಯ ವೈದ್ಯಾಧಿಕಾರಿಗಳು (ಆಯುಷ್) ಪ್ರಸ್ತುತ ವೈದ್ಯರು ದರ್ಜೆ-2 ವೃಂದದಲ್ಲಿ (ವೈದ್ಯಾಧಿಕಾರಿಗಳು (ಆಯುಷ್) ಎಂದು ಮರು ಪದನಾಮ ಹೊಂದಿರುವ) ಕಾರ್ಯನಿರ್ವಹಿಸುತ್ತಿರುವ 13 ವರ್ಷಗಳ ಸೇವೆ ಪೂರೈಸಿರುವ ವೈದ್ಯರುಗಳನ್ನು ಉಪ ನಿರ್ದೇಶಕರುಗಳೆಂದು ಪರಿಗಣಿಸಿ ಅವರುಗಳು ರೂ. 36,300-53,850 ವೇತನ ಶ್ರೇಣಿಯಲ್ಲಿ ಮುಂದುವರೆಸಿದೆ.

ಇ) ಉಪ ನಿರ್ದೇಶಕರು ಪ್ರಸ್ತುತ ವೈದ್ಯರು ದರ್ಜೆ-2 ವೃಂದದಲ್ಲಿ (ವೈದ್ಯಾಧಿಕಾರಿ) (ಆಯುಷ್) ಎಂದು ಮರು ಪದನಾಮ ಹೊಂದಿರುವ) ಕಾರ್ಯನಿರ್ವಹಿಸುತ್ತಿರುವ 13 ವರ್ಷಗಳ ಸೇವೆ ಪೂರೈಸಿರುವ ವೈದ್ಯರುಗಳನ್ನು ಉಪ ನಿರ್ದೇಶಕರುಗಳೆಂದು ಪರಿಗಣಿಸಿ ಅವರುಗಳು ರೂ. 36,300-53,850 ವೇತನ ಶ್ರೇಣಿಯಲ್ಲಿ ಮುಂದುವರೆಸಿದೆ.

ಈ) ಆಯುಷ್ ಇಲಾಖೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸಿ ಉಪ ನಿರ್ದೇಶಕರ ವೇತನ ಪಡೆಯುತ್ತಿರುವ ವೈದ್ಯರುಗಳು, ಉಪ ನಿರ್ದೇಶಕರು (ಆಯ್ಕೆ ಶ್ರೇಣಿ) ಎಂದು ಪರಿಗಣಿಸಿ ರೂ. 38,100-55,200 ವೇತನ ಶ್ರೇಣಿಯಲ್ಲಿ ಮುಂದುವರೆಸಿದೆ.

ಆಯುಷ್ ವೈದ್ಯರುಗಳಿಗೆ ಮಾಹಿಯಾನ ರೂ. 7000/- ಗ್ರಾಮೀಣ ಭತ್ಯೆಯನ್ನು ಮತ್ತು ಸ್ನಾತಕೋತ್ತರ ಪದವಿ ಪದೆದವರಿಗೆ ಮಾಹಿಯಾನ ರೂ. 8000/- ಸ್ನಾತಕೋತ್ತರ ಭತ್ಯೆಯನ್ನು ನಿಗಧಿಪಡಿಸಿದೆ.  ಇವುಗಳ ಪೈಕಿ ಯಾವುದಾದರು ಒಂದು ಭತ್ಯೆಯನನು ಪಡೆಯಲು ಈ ವೈದ್ಯರುಗಳು ಅರ್ಹರಿರುತ್ತಾರೆ.

ಸದರಿ ವೇತನ ಮತ್ತು ಭತ್ಯೆಗಳಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಇಲಾಖೆಗೆ ಒದಗಿಸಿರುವ ಆಯವ್ಯಯದ ಅನುದಾನದಿಂದಲೇ ಭರಿಸತಕ್ಕದ್ದು.

ಸದರಿ ಸೌಲಭ್ಯವು ದಿನಾಂಕ 10.01.2013ರಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಮಂಜೂರಾತಿ ನೀಡಲಾಗಿದೆ.