ಇಂದಿನ ಮತ್ತು ಮುಂದಿನ ಪೀಳಿಗೆಗಳಿಗಾಗಿ ನಿರಂತರವಾಗಿ ಅರಣ್ಯಗಳನ್ನು ಸಂರಕ್ಷಿಸುವುದು, ನಿರ್ವಹಿಸುವುದು
ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮರಗಳನ್ನು ಬೆಳೆಸುವುದು, ಹಾಗು ರಾಜ್ಯದ ಅತ್ಯಮೂಲ್ಯ ವನ್ಯ ಸಂಪತ್ತನ್ನು
ಸಂರಕ್ಷಿಸುವುದು ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯೋದ್ದೇಶವಾಗಿದೆ.
|
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತವು ಕರ್ನಾಟಕ ಸರ್ಕಾರದ ಸ್ವಾಮ್ಯದ ಉದ್ಯಮವಾಗಿದೆ.
ಅರಣ್ಯ ುತ್ಪನ್ನಗಳನ್ನು ಕಟಾವು ಮಾಡಿ ಪಲ್ಪ್ ವುಡ್ ಮತ್ತು ರೇಯಾನ್ ಕೈಗಾರಿಕೆಗಳಿಗೆ ಸರಬರಾಜು ಮಾಡುವುದು,
ಮರ ಸಂಸಕ್ಕರಣೆ, ಪೀಠೋಪಕರಣ ತಯಾರಿಕೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರಾಧಾರಿತ ವಸ್ತುಗಳ ತಯಾರಿಕೆ
ಮಾಡುವ ಮೂಲಕ ಪರಿಸರ ಉದ್ಯೋಗ ಸಂಭಾವ್ಯತೆಯು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಪ್ರಮುಖ ಉದ್ದೇಶವಾಗಿದೆ.
|
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ ನಿಯಮಿತವು ಗೋಡಂಬಿ ತೋಟಗಳ ನಿರ್ವಹಿಸುವ ಸಲುವಾಗಿ ಮತ್ತು
ರಾಜ್ಯದ ಗೋಡಂಬಿ ಕೃಷಿ ಪ್ರದೇಶಗಳಲ್ಲಿ ಹೆಚ್ಚಿಸಲು ಹಾಗು ಸರ್ಕಾರಿ ಸ್ವಾಮ್ಯದಲ್ಲಿ ಗೋಡಂಬಿ ಕೃಷಿ
ನಿರ್ವಹಿಸುವ ಉದ್ದೇಶದೊಂದಿಗೆ ಕಂಪನಿ ಕಾಯಿದೆ 1956 ಅಡಿಯಲ್ಲಿ 14 ಫೆಬ್ರವರಿ 1978 ರಲ್ಲಿ ಸಂಘಟಿತವಾಯಿತು.
|
|
ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮತ್ತು ತಡೆಗಡ್ಡುವಿಕೆ ಕಾಯ್ದೆಗಳಡಿಯಲ್ಲಿ ಕರ್ನಾಟಕ ರಾಜ್ಯ
ಮಾಲಿನ್ಯ ನಿಯಂತ್ರಣ ಮಂಡಳಿಯು 1974ರಲ್ಲಿ ರಚಿತವಾಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ವೆಬ್ಸೈಟ್
|
ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆಗಳ ತೀವ್ರ ಮಾಲಿನ್ಯ ಮತ್ತು ನಶಿಸುವಿಕೆಯನ್ನು ಗಮನಿಸಿ, ಇದರಿಂದಾಗಿ
ಪರಿಸರ ಮತ್ತು ಜೀವಜಂತುಗಳ ಮೇಲೆ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಹಾಗು ನೀರು ಮತ್ತು ಕುಗ್ಗುತ್ತಿರುವ
ಅಂತರ್ಜಲದ ಮೇಲೆ ನಿಗಾವಹಿಸಿ, ಅಂತರ್ಜಲದ ಪುನಶ್ಚೇತನಕ್ಕಾಗಿ, ನಾಶವಾಗುತ್ತಿರುವ ಕೆರೆಗಳ ಜೀರ್ಣೋದ್ದಾರ
ಮಾಡಲು ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ.
|
EMPRI - ಪರಿಸರದ ಬಗ್ಗೆ ಅನ್ವಯಿಕ ಸಂಶೋಧನೆ ನಡೆಸುವ ಸ್ಪೂರ್ತಿದಾಯಕ ಜ್ಞಾನ ಸ್ವಾಯತ್ತ ಸಂಸ್ಥೆಯಾಗಿದ್ದು,
ಸರ್ಕಾರ, ಕೈಗಾರಿಕಾ ಉದ್ಯಮ ಮತ್ತು ನಾಗರಿಕ ಸಂಸ್ಥೆಗಳಿಗೆ ಪರಿಸರ ಮತ್ತು ವಾತಾವರಣದ ಬಗ್ಗೆ ಸಲಹಾ
ಸೇವೆ ಮತ್ತು ತರಬೇತಿಗಳನ್ನು ಒದಗಿಸುತ್ತಿರುತ್ತದೆ. ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮರಸ್ಯ
ವಾತಾವರಣವನ್ನು ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿದೆ.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ
ವೆಬ್ಸೈಟ್
|
|
ವನ್ಯ ಪ್ರಾಣಿ/ಪಕ್ಷಿಗಳ ವೃದ್ಧಿ ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸುವ ಉದ್ದೇಶದೊಂದಿಗೆ
ಹಾಗೂ ವಿಶ್ವದ ಇತರೆ ಭಾಗಗಳಲ್ಲಿನ ಮತ್ತುಅಳಿವಿನಂಚಿನಲ್ಲಿರುವ ವನ್ಯಜಾತಿಗಳ ಮರುಸಂಗ್ರಹಣಾ ಮತ್ತುಅಂತಿಮವಾಗಿ
ಕಾಡಿನಲ್ಲಿ ಖಾಲಿಯಾದ ಪ್ರಾಣಿ ಉತ್ಕೃಷ್ಟಗೊಳಿಸುವ ಧ್ಯೇಯ ಹೊಂದಿರುತ್ತದೆ.
|
ರಾಜ್ಯದ ಶ್ರೀಮಂತ ಜೀವವೈವಿಧ್ಯ ಸುಸ್ಥಿರ ಬಳಕೆ ಮತ್ತು ಅಭಿವೃದ್ಧಿ, ಪೋಷಣೆಯು ಕರ್ನಾಟಕ ಜೀವ ವೈವಿದ್ಯ
ಮಂಡಳಿಯ ಮುಖ್ಯ ಗುರಿಯಾಗಿರುತ್ತದೆ..
|
ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರವು ಕರಾವಳಿ ಪರಿಸರದ ಗುಣಮಟ್ಟವನ್ನು ಸುಧಾರಿಸಲು
ಕ್ರಮಗಳನ್ನು ತೆಗೆದುಕೊಳ್ಳಲು ಆದೇಶ ಹೊಂದಿದೆ. ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ವಲಯದಲ್ಲಿ
ಪರಿಸರ ಮಾಲಿನ್ಯ ತಡೆಯುವ, ನಿಯಂತ್ರಿಸುವ ಆದೇಶವನ್ನು ಸಹ ಒಳಗೊಂಡಿದೆ.
ಕರ್ನಾಟಕ ರಾಜ್ಯ ಕರಾವಳಿ ಪ್ರದೇಶ ನಿರ್ವಹಣೆ ಪ್ರಾಧಿಕಾರ
ವೆಬ್ಸೈಟ್
|
|
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮವು ಭಾರತ ಸರ್ಕಾರದ ಅರಣ್ಯ ನೀತಿಯ ಅನುಸಾರ ನಾಲ್ಕನೇ ಪಂಚ ವಾರ್ಷಿಕ
ಯೋಜನೆಯಲ್ಲಿ ಸ್ಥಾಪಿತವಾಯಿತು. 1971 ರಲ್ಲಿ KSDCಯು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಅಳವಡಿಕೆಯಾಯಿತು.
|
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು (ಜೆ.ಎಲ್.ಆರ್) ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಪ್ರವಾಸೋದ್ಯಮವನ್ನು
ಸಾಧನವಾಗಿ ಬಳಸಿಕೊಂಡು ಬರುತ್ತಿದ್ದು, ವನ್ಯಜೀವಿ & ಪರಿಸರವನ್ನು ಜವಾಬ್ದಾರಿಯುತ ಮತ್ತು ಬದ್ಧತೆಯೊಂದಿಗೆ
ಪ್ರವಾಸೋದ್ಯಮವನ್ನು ಶೈಕ್ಷಣಿಕವಾಗಿ ಪಸರಿಸುತ್ತಿರುವ ಸಂಸ್ಥೆಗಾಗಿದೆ.
|
ಎನ್ವಿರಾನ್ಮೆಂಟಲ್ ಇನ್ಫರ್ಮೇಷನ್ ಸಿಸ್ಟಂ (ಇಎನ್ವಿಐಎಸ್) -ಪರಿಸರದ ಬಗ್ಗೆ ಮಾಹಿತಿ ಸೃಷ್ಟಿಸಲು
ಮತ್ತು ಪ್ರಸರಣ ಸೌಕರ್ಯಗಳನ್ನುಒಳಗೊಂಡ ಭಾರತ ಸರ್ಕಾರದ ಅರಣ್ಯ, ಪರಿಸರ ಸಚಿವಾಲಯದ ಒಂದು ಯೋಜನೆಯಾಗಿದೆ
|