ಚಟುವಟಿಕೆಗಳು

ನಮ್ಮ ಪ್ರಮುಖ ಸೇವೆಗಳು

. ಒಳನಾಡು ವಲಯ

 • ಪುರ್ಣಕಾಲಿಕ ಮತ್ತು ಅರೆಕಾಲಿಕ ಕೆರೆಗಳ ಮೀನು ಪಾಶುವಾರು ಹಕ್ಕಿನ ವಿಲೇವಾರಿಯನ್ನು ಗುತ್ತಿಗೆ/ ಟೆಂಡರ್-ಕಂ-ಹರಾಜು ಮುಖಾಂತರ ನೀಡುವುದು.
 • ಉತ್ತಮ ಮೀನು ಮರಿಗಳ ಉತ್ಪಾದನೆ ಮತ್ತು ಸರಬರಾಜು.
 • ನಿಗಧಿತ ಶುಲ್ಕವನ್ನು ಪಾವತಿಸಿ ಜಲಸಂಪನ್ರ್ಮಲಗಳಾದ ಜಲಾಶಯಗಳು, ನದಿ ಭಾಗಗಳ ಮೀನು ಸಂಪತ್ತನ್ನು ಹಿಡಿಯಲು ಪರವಾನಿಗೆ ನೀಡುವುದು.
 • ಜೌಗು ಭೂಮಿ ಮತ್ತು ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೈಗೊಳ್ಳಲು ಮೀನು ಕೊಳ ನಿರ್ಮಾಣಕ್ಕಾಗಿ ಸಹಾಯ.
 • ಮೀನು ಮರಿ ಖರೀದಿಗೆ ಸಹಾಯ.
 • ಅಲಂಕಾರಿಕ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಅಕ್ವಾಪಾರ್ಕ್ ಸ್ತಾಪಿಸುವುದು.
 • ಮೀನು ಮರಿ ಕೇಂದ್ರಗಳ ನವೀಕರಣ.
 • ಜಲಾಶಯದಲ್ಲಿ ಮೀನು ಮರಿ ಬಿತ್ತನೆ.
 • ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಣೆ.
 • ಮಣ್ಣು ಮತ್ತು ನೀರಿನ ಗುಣಮಟ್ಟ ಪರೀಕ್ಷೆ ಸೌಲಭ್ಯವನ್ನು ಜಿಲ್ಲಾ ಮಟ್ಟದ ಕಛೇರಿಗಳಲ್ಲಿ ಉಚಿತವಗಿ ನೀಡಲಾಗುವುದು.

. ಕರಾವಳಿ ವಲಯ

  • ಮೀನುಗಾರಿಕೆ ದೋಣಿಗಳ ನೋಂದಾಣಿ.
  • ನಾಡದೋಣಿಗಳ ಮೋಟರೀಕರಣ.
  • ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿ.
  • ಮೀನುಗಾರಿಕೆ ಬಂದರುಗಳ ಮತ್ತು ಮೀನು ಇಳಿದಾಣ ಜಟ್ಟಿಗಳ ನಿರ್ಮಾಣ ಮತ್ತು ನಿರ್ವಹಣೆ.
  • ಮೀನುಗಾರಿಕೆ ರಸ್ತೆ, ಸೇತುವೆ, ಮಾರುಕಟ್ಟೆ, ಇತ್ಯಾದಿಗಳ ಅಭಿವೃದ್ಧಿ, ನಿರ್ಮಾಣ ಮತ್ತು ಉತ್ತಮಗೊಳಿಸುವುದು.
  • ಮಂಜುಗಡ್ಡೆ ಸ್ಥಾವರ/ ಶೈತ್ಯಾಗಾರ, ಫಿಷ್ ಮೀಲ್ ಘಟಕ ಮತ್ತು ಮೀನು ಮಾರುಕಟ್ಟೆಗಳ ಸ್ಥಾಪನೆಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವುದು.
  • ಮಂಜುಗಡ್ಡೆ ಘಟಕಗಳು ಉಪಯೋಗಿಸುವ ವಿದ್ಯುತ್ ಮೇಲೆ ಸಹಾಯಧನ.
  • ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆ.
  • ಮೀನುಗಾರಿಕೆ ಬಂದರುಗಳ ಹೂಳೆತ್ತುವಿಕೆ.
  • ಮೀನು ಮಾರಾಟವನ್ನು ಬಲಪಡಿಸುವುದು.
  • ಕರಾವಳಿ ಮೀನುಗಾರರಿಗೆ ಎಸ್.ಎಮ್.ಎಸ್. ಸೇವೆಯನ್ನು ಉಚಿತ "ಸಿಮ್ ಕಾರ್ಡ್" ನೊಂದಿಗೆ ನೀಡುವುದು.

. ಮೀನುಗಾರರ ಕಲ್ಯಾಣ ಯೋಜನೆ

 • ಸಾಮೂಹಿಕ ಅಪಘಾತ ವಿಮಾ ಯೋಜನೆಯ ಮೂಲಕ ನೈಸರ್ಗಿಕ ವಿಕೋಪಗಳ ವಿಪತ್ತುಗಳಿಗೆ ಒಳಪಡುವ ಮೀನುಗಾರರಿಗೆ ವಿಮಾ ಸೌಲಭ್ಯವನ್ನು ನೀಡುವುದು.
 • ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ ಮನೆ ನೀಡುವುದು.
 • ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ಮೀನುಗಾರರಿಗೆ ಮೀನುಗಾರಿಕೆ ಇಲ್ಲದ ತಿಂಗಳುಗಳಲ್ಲಿ ಆರ್ಥಿಕ ನೆರವು ನೀಡುವುದು.
 • ಮೀನುಗಾರರಿಗೆ ಸಂಕಷ್ಠ ಪರಿಹಾರ ನಿದಿ.ü
 • ಮೀನುಗಾರರಿಗೆ ಶೇ.2 ರಷ್ಟು ಸಾಲ ನೀಡುವ ವಾಣಿಜ್ಯ ಬ್ಯಾಂಕುಗಳಿಗೆ ವ್ಯತ್ಯಾಸದ ಬಡ್ಡಿ ಮರುಪಾವತಿಸುವುದು.
 • ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ.
 • ಮೀನುಗಾರಿಕೆ ಮತ್ತು ಮೀನು ಮಾರಾಟ ಉಪಕರಣಗಳಿಗೆ ಸಹಾಯಧನ ನೀಡುವುದು.

ಸಕಾಲ ಸೇವೆಗಳಲ್ಲಿ ಅಳವಡಿಸಲಾದ ನಮ್ಮ ಭದ್ಧತೆಗಳು

ಕ್ರ.ಸಂಸೇವೆಯ ಹೆಸರುನಮ್ಮ ಸೇವೆಯ ಮಟ್ಟ
1.ಬೋಟುಗಳ ನೋಂದಣಿ / ಪರವಾನಿಗೆ ಯನ್ನು ನೀಡುವುದು15 ಕೆಲಸದ ದಿನಗಳು
2.ಜಲಾಶಯದಲ್ಲಿ ಮೀನುಗಾರಿಕೆ ಮಾಡಲು ಪರವಾನಿಗೆ ನೀಡುವುದು10 ಕೆಲಸದ ದಿನಗಳು
3.ಮೀನು ಪಾಶುವಾರು ವಿಲೇವಾರಿ ಹಕ್ಕು ಆದೇಶವನ್ನು ಜಿಲ್ಲಾ ಮಟ್ಟದ ಅಧಿಕಾರಿ ವ್ಯಾಪ್ತಿಯಲ್ಲಿ ನೀಡುವುದು45 ಕೆಲಸದ ದಿನಗಳು
4.ಮೀನು ಮರಿ ಖರೀದಿಗೆ ಸಹಾಯಧನ ನೀಡುವುದು70 ಕೆಲಸದ ದಿನಗಳು
5.ಮೀನುಗಾರಿಕೆ ಕಿಟ್ ವಿತರಣೆಗೆ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡುವುದು.60 ಕೆಲಸದ ದಿನಗಳು
6.ಮೀನು ಮರಿ ಉತ್ಪಾದನೆ ಮತ್ತು ಪಾಲನ ಕೇಂದ್ರಗಳ ನೋಂದಣಿ ಮಾಡುವುದು60 ಕೆಲಸದ ದಿನಗಳು
7.ಅಲಂಕಾರಿಕ ಮೀನು ಉತ್ಪಾದನೆ ಮತ್ತು ಪಾಲನಾ ಕೇಂದ್ರಗಳ ಮತ್ತು ಅಂಗಡಿಗಳ ನೋಂದಣಿ ಮಾಡುವುದು60 ಕೆಲಸದ ದಿನಗಳು
8.ಸಂಕಷ್ಟದಲ್ಲಿರುವ ಮೀನುಗಾರರಿಗೆ ಪರಿಹಾರ ನೀಡುವುದು ಮರಣ ಪ್ರಕರಣ90 ಕೆಲಸದ ದಿನಗಳು

 

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಮೀನುಗಾರಿಕೆ ನಿರ್ದೇಶನಾಲಯ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top