2003 ರಲ್ಲಿ, ರಾಜ್ಯ ಸಚಿವಸಂಪುಟವು ಏಕೀಕೃತ ವಿದ್ಯುನ್ಮಾನ ಸಂಗ್ರಹಣಾ (ಇ-ಸಂಗ್ರಹಣೆ) ವೇದಿಕೆಯೊಂದನ್ನು ನಿರ್ಮಿಸಲು ಅನುಮೋದನೆ ನೀಡಿತ್ತು. ಇ-ಸಂಗ್ರಹಣಾ ಯೋಜನೆಗೆ ಒಟ್ಟಾರೆಯಾಗಿ ಮಾರ್ಗದರ್ಶನ ಮತ್ತು ದಿಕ್ಸೂಚನೆಗಳನ್ನು ನೀಡಲು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಮಾರ್ಗದರ್ಶನ ಸಮಿತಿಯನ್ನೂ ರಚಿಸಲಾಯಿತು. ನೀತಿ ನಿಯಮಗಳ ಅನುಷ್ಠಾನ ಹಾಗೂ ಮಾರ್ಗದರ್ಶನ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿಗಳು ಹಾಗೂ ಇ-ಆಡಳಿತ ಕೇಂದ್ರದ ಅಧ್ಯಕ್ಷರ ನೇತೃತ್ವದಲ್ಲಿ ಯೋಜನಾ ಸಮನ್ವಯ ಸಮಿತಿಯೊಂದನ್ನು ರಚಿಸಲಾಯಿತು.ಇ-ಆಡಳಿತ ಕೇಂದ್ರವು ಎಲ್ಲಾ ಇಲಾಖೆಗಳ ಅವಶ್ಯಕತೆಗನುಗುಣವಾಗಿ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಪಾರದರ್ಶಕವಾಗಿ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ತಂತ್ರಾಂಶ ಆಧಾರಿತ ಸಲಹೆ ಸೂಚನೆಗಳನ್ನು ನೀಡುವ ಸಂಸ್ಥೆಯಾಗಿದೆ. ಜೊತೆಗೆ ಯಾವುದೇ ಇಲಾಖೆ ಇ-ಆಡಳಿತವನ್ನು ಅಳವಡಿಸಲು ಅನುಕೂಲವಾಗುವಂತೆ ತಂತ್ರಜ್ಞರ ಸೇವೆಯನ್ನು ಕೂಡ ಒದಗಿಸಿಕೊಡುತ್ತದೆ. ಅಲ್ಲದೆ, ಎಲ್ಲಾ ಇಲಾಖೆಗಳಿಗೂ ಅನ್ವಯವಾಗುವಂಥ ಕೆಲವು ಯೋಜನೆಗಳನ್ನು ರೂಪಿಸಿ ಈ ನಿಟ್ಟಿನಲ್ಲಿ ಕಾರ್ಯವನ್ನು ಜರುಗಿಸುತ್ತಿವೆ. ಉದಾಹರಣೆಗೆ,