ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್)

ಕರ್ನಾಟಕ ಸರ್ಕಾರ

GOK > EDCS > Kannada > e-Distric
New Icon ಸಿವಿಲ್ ಇಂಜಿನಿಯರ್ ಗಳ ಸೇವೆಯನ್ನು ಪಡೆಯಲು ಅಧಿಸೂಚನೆ
Last modified at 16/02/2021 11:37 by System Account

ಸೇವಾ ಸಿಂಧು (ಇ-ಜಿಲ್ಲೆ)


ಸೇವಾ ಸಿಂಧು (ಇ-ಜಿಲ್ಲೆ) ಯೋಜನೆಯು ರಾಷ್ಟ್ರೀಯ ಇ-ಆಡಳಿತ ಯೋಜನೆಯ (NeGP) 31 ಮಿಷನ್ ಮೋಡ್ ಯೋಜನೆಗಳ ಒಂದು ಭಾಗವಾಗಿದೆ. ಭಾರತ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸಲಿದ್ದು, ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರ ಗೊತ್ತುಪಡಿಸುವ ಏಜೆನ್ಸಿಗಳು ಈ ಯೋಜನೆÀಯನ್ನು ಅನುಷ್ಠಾನಗೊಳಿಸುವುವು. ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು ನಾಗರಿಕರಿಗೆ ತಡೆರಹಿತವಾಗಿ ನೀಡುಲು ಅನುವಾಗಲು ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ ಸಿಂಧು ಯೋಜನೆಯನ್ನು ಪರಿಕಲ್ಪಿಸಲಾಗಿದೆ.

ಇ-ಆಡಳಿತ ಇಲಾಖೆಯ ಇಡಿಸಿಎಸ್ ನಿರ್ದೇಶನಾಲಯವು ಇ-ಜಿಲ್ಲೆ ಮಿಷನ್ ಮೋಡ್ ಯೋಜನೆಯನ್ನು  ರಾಜ್ಯವ್ಯಾಪಿ ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾಗಿದೆ. ಇಲ್ಲಿಯವರೆವಿಗೆ ವಿವಿಧ ಇಲಾಖೆಗಳ 346 ನಾಗರೀಕ ಸೇವೆಗಳನ್ನು ಸೇವಾ ಸಿಂಧು ಯೋಜನೆಯಡಿ ಸಂಯೋಜಿಸಲು ಗುರುತಿಸಲಾಗಿದೆ. ಈ ಪೈಕಿ 71 ಸೇವೆಗಳು ರಾಷ್ಟೀಯ ಮಟ್ಟದ ಕಡ್ಡಾಯ ಸೇವೆಗಳಾಗಿದ್ದು, ಉಳಿದ 225 ಸೇವೆಗಳನ್ನು ರಾಜ್ಯವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಂದಾಯ ಇಲಾಖೆಯ 29 ಪ್ರಮಾಣ ಪತ್ರಗಳ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದೊಂದಿಗೆ ಸಂಯೋಜಿಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಇಲ್ಲಿಯವರೆವಿಗೆ 1,12,000 ವ್ಯವಹಾರಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದ ಮೂಲಕ ಯಶಸ್ವಿಯಾಗಿ ಮಾಡಲಾಗಿದ್ದು, 1.00 ಲಕ್ಷಕ್ಕೂ ಅಧಿಕ ಪ್ರಮಾಣ ಪತ್ರಗಳನ್ನು ನಾಗರಿಕರಿಗೆ ವಿತರಿಸಲಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಔಷದ ನಿಯಂತ್ರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯೋಜನಾ ಇಲಾಖೆಯ 18 ಹೆಚ್ಚುವರಿ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣಕ್ಕೆ ಸಂಯೋಜಿಸಲಾಗಿದೆ.

 

ಇಲಾಖೆಗಳಿಗೆ ಆಗುವ ಮುಖ್ಯ ಉಪಯೋಗಗಳು :

 • ಇಲಾಖೆಗಳು ತಮ್ಮ ತಮ್ಮ ಇಲಾಖೆಯ ಮುಖ್ಯ ಕಾರ್ಯಗಳತ್ತ ಕೇಂದ್ರೀಕರಿಸ   ಬಹುದಾಗಿದೆ. ಇದರಿಂದಾಗಿ ಇಲಾಖೆಗಳ ಮತ್ತು ಉದ್ಯೋಗಿಗಳ ದಕ್ಷತೆ ಹೆಚ್ಚಲು ಅನುಕೂಲವಾಗುವುದು.
 • ಇ-ಪೋರ್ಟಲ್ ಮೂಲಕ ಇಲಾಖೆಗಳಿಗೆ ವಾಸ್ತವಿಕ ಮತ್ತು ಅಸಾದಾರಣ ಮಾಹೆಯಾನ ವರದಿಗಳನ್ನು ನೀಡುವುದರ ಮೂಲಕ ಇಲಾಖೆಗಳು ಸರ್ಕಾರಿ ಸೇವೆಗಳ ಅನುಷ್ಠಾನಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳಬಹುದು.
 • ಸಕಾಲ ಯೋಜನೆಯಡಿ ಅರ್ಜಿಗಳನ್ನು ಸಂಯೋಜಿಸುವುದರಿಂದ, ನಿಗಧಿತ ಕಾಲ ಮಿತಿಯಲ್ಲಿ ಸೇವೆಗಳು ದೊರಕುವುವು.
 • ಇತ್ತೀಚಿನ ಮಾಹಿತಿ ವಿಶ್ಲೇಷಿತ ವರದಿಗಳ ಅಳವಡಿಕೆಯೊಂದಿಗೆ ಏರಿಳಿತಗಳನ್ನು ಊಹಿಸಲು ಮತ್ತು ನಾಗರೀಕರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಇಲಾಖೆಗಳಿಗೆ ನೆರವಾಗುತ್ತÀದೆ.
 • ಸೇವಾ ಸಿಂಧು ಜಾರಿಯಿಂದಾಗುವ ಉಪಯೋಗಗಳಿಂದ ನಾಗರಿಕರಿಗೆ ಅನುಕೂಲಕರ ಮತ್ತು
 • ಶೀಘ್ರವಾಗಿ ಸೇವೆಗಳು ದೂರೆಯುತ್ತವೆ.
 • ನಾಗರಿಕರಿಗೆ ಆಗುವ ಮುಖ್ಯ ಉಪಯೋಗಗಳು :
 • ನಾಗರೀಕರು ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯಲು ಸೇವಾ ಸಿಂಧು   ಅಂತರ್ಜಾಲ ತಾಣವು ಒಂದು ಏಕರೂಪ ವೇದಿಕೆಯನ್ನು ಒದಗಿಸುತ್ತದೆ.
 • ನಾಗರೀಕರು ಕಛೇರಿ ವೇಳೆ ಹೊರತಾಗಿಯೂ, ಈ ಜಾಲತಾಣಕ್ಕೆ ಆನ್‍ಲೈನ್‍ನಲ್ಲಿ ತಮಗೆ ಬೇಕಾಗಿರುವ ಸೇವೆಗೆ ಮನವಿ ಸಲ್ಲಿಸಬಹುದು.
 • ನಾಗರೀಕರು ತಮ್ಮ ಅರ್ಜಿಯ ಸ್ಥಿತಿ ಗತಿಗಳನ್ನು ಯಾವುದೇ ಸ್ಥಳದಲ್ಲಿ ಅಥವಾ  ಯಾವುದೇ ಸಮಯದಲ್ಲಿ ಪತ್ತೆ ಹಚ್ಚಬಹುದು.
 • ಪರ್ಯಾಯವಾಗಿ ನಾಗರೀಕರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಯಾವುದೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸೇವೆಗಳನ್ನು ಪಡೆಯಬಹುದು.
 • ಕೇಂದ್ರೀಕೃತ ಸಹಾಯವಾಣಿಯ ಮೂಲಕ ನಾಗರೀಕರು ಅನುಮಾನಗಳನ್ನು ಪರಿಹರಿಸಿಕೊಂಡು ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

 

ಭವಿಷ್ಯದ ಯೋಜನೆಗಳು :

 • ಇ-ಸೈನ್, ಡಿಜಿ ಲಾಕರ್ ಮತ್ತು ಎಸ್.ಎಸ್.ಡಿ.ಜಿ ತಂತ್ರಾಶದೊಂದಿಗೆ ಸೇವಾ ಸಿಂಧು ತಂತ್ರಾಶದ ಸಂಯೋಜನೆ.
 • ಸೇವಾ ಸಿಂಧು (ಇ-ಜಿಲ್ಲೆ) ತಂತ್ರಾಶದೊಂದಿಗೆ ಕಡ್ಡಾಯವಾಗಿ ಸರ್ಕಾರಿ ಸೇವೆಗಳನ್ನು ಸಂಯೋಜಿಸಲು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೀಡಲಾಗುವ ಸೇವೆಗಳಿಗೆ ನೀಡಬೇಕಾದ ಸೇವಾ ಶುಲ್ಕ ಕುರಿತು ರಾಜ್ಯ ಸರ್ಕಾರದ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುವುದು.
 • ವಿವಿಧ ಇಲಾಖೆಗಳ 100 ಕ್ಕೂ ಹೆಚ್ಚು ಸೇವೆಗಳೊಂದಿಗೆ ರಾಜ್ಯದಲ್ಲಿ ಸೇವಾ ಸಿಂಧು ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು.
 • ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್‍ಜಿ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಸಾಮಾನ್ಯ ಸೇವಾ ಕೇಂದ್ರ ಇತ್ಯಾದಿ ಸೇವಾ ವಿತರಣಾ ಮಾರ್ಗಗಳ ಜೊತೆ ಸೇವಾ ಸಿಂಧು ಜಾಲತಾಣದ ಸಂಯೋಜನೆ.

ಉದ್ದೇಶ

 • ಜಿಲ್ಲೆ ಹಾಗೂ ಅದಕ್ಕಿಂತ ಕೆಳಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೃಹತ್ ಗಾತ್ರದ ನಾಗರೀಕ ಕೇಂದ್ರಿತ ಸೇವೆಗಳನ್ನು ವಿದ್ಯುನ್ಮಾನ ಪ್ರಕ್ರಿಯೆಯ ಮೂಲಕ ವಿತರಣೆ ಮಾಡುವ ಗುರಿಯನ್ನು ಇ-ಜಿಲ್ಲಾ ಯೋಜನೆಯು ಹೊಂದಿದೆ.
 • CSC, SDC ಹಾಗೂ SWAN ಮುಂತಾದ ಇನ್ನಿತರ MMPಗಳೊಡನೆ ಈ ಕೆಳಗೆ ತಿಳಿಸಿರುವ NeGPಯ ಆಶಯವನ್ನು ಸಾಕಾರಗೊಳಿಸುವಲ್ಲಿ ಇ-ಜಿಲ್ಲಾ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ.

“ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ ಮತ್ತು ಪ್ರೋತ್ಸಾಹಿಸುವುದರ ಜೊತೆಗೆ ನಾಗರೀಕರಿಗೆ ಅಗತ್ಯ ಮಾಹಿತಿ ಹಾಗೂ ಸೇವೆಗಳನ್ನು ದಕ್ಷತೆಯೊಂದಿಗೆ ಅವಿರತವಾಗಿ ಆನ್ ಲೈನ್ ಮುಖಾಂತರ ಪೂರೈಸುವಿಕೆ ”.

ಸೇವೆಗಳು

ಭಾರತ ಸರ್ಕಾರದ “ಡೈಟಿ” ಇಲಾಖೆಯ ಮಾರ್ಗದರ್ಶನದನ್ವಯ ಸೇವೆಗಳನ್ನು ಇ-ಜಿಲ್ಲೆಯಡಿಯಲ್ಲಿ ಪರಿಗಣಿಸಲು ಅವುಗಳು “ಬೃಹತ್ ಪ್ರಮಾಣದ ಸೇವೆಗಳಾಗಿರಬೇಕು” ಹಾಗೂ ನಾಗರೀಕರಿಗೆ ವೆಚ್ಚ, ಸಮಯ, ಶ್ರಮ ಉಳಿತಾಯ ಆಗುವಂತಿರಬೇಕು. ಎರಡು ವರ್ಗದ ಸೇವೆಗಳನ್ನು ಭಾರತ ಸರ್ಕಾರದ “ಡೈಟಿ”ಯು ಕಡ್ಡಾಯ ಮಾಡಿದೆ, ಅವೆಂದರೆ: ರಾಷ್ಟ್ರೀಯ ಕಡ್ಡಾಯ ವರ್ಗ ಹಾಗೂ ರಾಜ್ಯ ಆಯ್ಕೆಯ ವರ್ಗ.

 

ಇ.ಡಿ.ಸಿ.ಎಸ್. ನಿರ್ದೇಶನಾಲಯವು 29 ಇಲಾಖೆಗಳ 346 ನಾಗರೀಕ ಸೇವೆಗಳನ್ನು ಪಟ್ಟಿಮಾಡಿ ಅವುಗಳ “ಸೇವೆಗಳ ಸಂಪುಟ”ವನ್ನು ಸಿದ್ಧಪಡಿಸಿದೆ. ಗಮನಾರ್ಹ ವಿಷಯವೆಂದರೆ 279 ಸೇವೆಗಳು ಈಗಾಗಲೇ ಗಣಕೀಕೃತಗೊಂಡಿರುತ್ತವೆ ಹಾಗೂ ಆಯಾ ಇಲಾಖೆಗಳಲ್ಲಿ ಬಳಕೆಯಲ್ಲಿವೆ.  ಇ-ಜಿಲ್ಲಾ ಯೋಜನೆಯು ಈ 279 ಸೇವೆಗಳನ್ನು ಒದಗಿಸಲು ಈಗಾಗಲೇ ಅಭಿವೃದ್ಧಿ ಪಡಿಸಿರುವ ಎಲ್ಲಾ ಅನ್ವಯಿಕಗಳ ಜೊತೆಗೂ ಸಮಗ್ರಗೊಳಿಸುತ್ತದೆ.  ಇದಲ್ಲದೇ, ಇನ್ನುಳಿದ 67 ಸೇವೆಗಳಿಗೆ ಅವಶ್ಯಕವಾದ ಬ್ಯಾಕ್ಎಂಡ್ ಕಾರ್ಯವಿಧಾನವನ್ನು ಇ-ಜಿಲ್ಲಾ ಯೋಜನೆಯು ಅಭಿವೃದ್ಧಿಪಡಿಸುತ್ತದೆ.  ಈ ಎಲ್ಲಾ ಸೇವೆಗಳೂ ನಾಗರೀಕರಿಗೆ ಇ-ಜಿಲ್ಲಾ ಜಾಲತಾಣದ ಮೂಲಕ ಲಭ್ಯವಾಗಲಿದೆ. ಜಾಲತಾಣವು ಎಲ್ಲಾ ಸೇವೆಗಳ ವಿತರಣೆಗೆ ಏಕೈಕ ವೇದಿಕೆಯಾಗಲಿದೆ.

 

ಸೇವೆಗಳ ವಿವರಗಳು:

ರಾಷ್ಟ್ರೀಯ ಕಡ್ಡಾಯ ವರ್ಗದ ಸೇವೆಗಳ ಅಡಿಯಲ್ಲಿನ ಉಪವರ್ಗಗಳು:

ಉಪವರ್ಗ

ಸೇವೆಗಳ ಸಂಖ್ಯೆ

ಪ್ರಮಾಣ ಪತ್ರಗಳು

32

ಸಮಾಜ ಕಲ್ಯಾಣ (ಪಿಂಚಣಿ)

7

ಕಂದಾಯ ನ್ಯಾಯಾಲಯ ಪ್ರಕರಣಗಳು

17

ಪಡಿತರ ಚೀಟಿ ಸೇವೆಗಳು

10

ಮಾಹಿತಿ ಹಕ್ಕು ಹಾಗೂ ಅಹವಾಲುಗಳು

5

 

ರಾಜ್ಯ ಆಯ್ಕೆಯ ವರ್ಗದ ಸೇವೆಗಳ ಅಡಿಯಲ್ಲಿನ ಉಪವರ್ಗಗಳು:

ಉಪವರ್ಗ

ಸೇವೆಗಳ ಸಂಖ್ಯೆ

ಆಯುಶ್ ಇಲಾಖೆ

3

ಕರ್ನಾಟಕ ಸ್ಲಮ್ ಅಭಿವೃದ್ಧಿ ಮಂಡಳಿ

3

ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ

2

ಕಂದಾಯ (MAG ನ್ಯಾಯಾಲಯ ಪ್ರಕರಣಗಳು)

2

ವಿದ್ಯುತ್ ನಿರೀಕ್ಷಣಾಲಯ ಇಲಾಖೆ

21

ಕೃಷಿ ಇಲಾಖೆ

3

ಸಮಾಜ ಕಲ್ಯಾಣ ಇಲಾಖೆ

4

ಬುಡಕಟ್ಟು ಕಲ್ಯಾಣ ಇಲಾಖೆ

4

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

12

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

9

ಕಂದಾಯ (ಸೇವೆಗಳು)

3

ವಾಣಿಜ್ಯ ತೆರಿಗೆಗಳ ಇಲಾಖೆ

6

ಅರಣ್ಯ ಇಲಾಖೆ

2

ನೋಂದಣಿಗಳ ಮಹಾನಿರೀಕ್ಷಕರು (ಐಜಿಆರ್)

13

ಕರ್ನಾಟಕ ರಾಜ್ಯ ಶಿಕ್ಷಣ ಪರೀಕ್ಷಾ ಮಂಡಳಿ

2

ಕಾರ್ಮಿಕ ಇಲಾಖೆ

20

ಉದ್ಯೋಗ ವಿನಿಮಯ ಇಲಾಖೆ

2

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ

3

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

1

ಅಬಕಾರಿ ಇಲಾಖೆ

8


ಗುಣ ಲಕ್ಷಣಗಳು

ಇ-ಜಿಲ್ಲಾ MMPಯಲ್ಲಿನ ಗುಣಲಕ್ಷಣಗಳು:


 • ವಿವಿಧ ಇಲಾಖೆಗಳು ನೀಡುವ ನಾಗರೀಕ ಸೇವೆಗಳನ್ನೊಳಗೊಂಡ ಕಾರ್ಯಾಧಾರಿತ ಅನ್ವಯಿಕೆಗಳ ಪೋರ್ಟಲ್.
 • ಇ-ಜಿಲ್ಲಾ ಅನ್ವಯಿಕೆಯನ್ನು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಹೋಸ್ಟ್ ಮಾಡಲಾಗುವುದು.
 • ಇಲಾಖಾ ಸಿಬ್ಬಂದಿಗಳಿಂದ ತಮ್ಮ ಇಲಾಖಾ ಸೇವೆಗಳಿಗೆ ಅನ್ವಯಿಸುವಂತೆ ಪಾತ್ರ ನಿರ್ವಹಣೆ.
 • ನಾಗರೀಕರು ಅಂತರ್ಜಾಲದ ಮುಖಾಂತರ ಇ-ಜಿಲ್ಲಾ ಅನ್ವಯಿಕೆಯ ಸಂಪರ್ಕಕ್ಕೆ ವಿವಿಧ ಇಲಾಖೆಗಳಲ್ಲಿರುವ ಸೇವೆಗಳನ್ನು ಆನ್-ಲೈನ್ ನಲ್ಲಿ ಪಡೆಯುವಿಕೆ.
 • ಪ್ರತಿಯೊಂದು ಜಿಲ್ಲೆಯೂ ಜಿಲ್ಲಾ ಇ-ಆಡಳಿತ ಸೊಸೈಟಿಯನ್ನು (ಡಿ.ಇ.ಜಿ.ಎಸ್.) ಹೊಂದಿದ್ದು ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಅದರ ಅಧ್ಯಕ್ಷರಾಗಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.
 • ಇ.ಡಿ.ಸಿ.ಎಸ್. ನಿರ್ದೇಶನಾಲಯದಿಂದ ನಿಯೋಜಿಸಲ್ಪಡುವ ಜಿಲ್ಲಾ ಯೋಜನಾ ನಿರ್ವಾಹಕರುಗಳು ಪ್ರತೀ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿಕೊಂಡು ಇ-ಜಿಲ್ಲಾ ಯೋಜನೆಯನ್ನು ಜಾರಿಗೊಳಿಸಲು ಸಹಾಯಕವಾಗುವುದು.
 • ನಾಗರೀಕ ಸೇವೆಗಳನ್ನು ವಿತರಿಸಲು ಗಣಕ ಪರಿಕರ ಇಲ್ಲದಿರುವ, ಭಾಗವಹಿಸುವ ಇಲಾಖೆಗಳಿಗೆ ಉಪಕರಣಗಳ ಪೂರೈಕೆ.
 • ಡಾಟಾ ಡಿಜಿಟಲೈಸೇಷನ್
 • ಕೆಪಾಸಿಟಿ ಬಿಲ್ಡಿಂಗ್


ಸ್ಥಿತಿ-ಗತಿ

 1. 27 ಜಿಲ್ಲೆಗಳಲ್ಲಿ ಜಿಲ್ಲಾ ಇ-ಆಡಳಿತ ಸೊಸೈಟಿಗಳನ್ನು (ಡಿ.ಇ.ಜಿ.ಎಸ್.) ಸ್ಥಾಪನೆ.
 2. ಎನ್.ಐ.ಸಿ. ಸಂಸ್ಥೆಯನ್ನು ಅನ್ವಯಿಕೆ ಅಭಿವೃದ್ಧಿ ಸಂಸ್ಥೆ (ಅಪ್ಲಿಕೇಷನ್ ಡೆವೆಲಪ್ಮೆಂಟ್ ಏಜೆನ್ಸಿ)ಯಾಗಿ ಆಯ್ಕೆ ಮಾಡಲಾಗಿದ್ದು, ಪ್ರಸ್ತುತವಿರುವ ಅನ್ವಯಿಕಗಳೊಡನೆ ಅಪ್ಲಿಕೇಷನ್ ಡೆವೆಲಪ್ಮೆಂಟ್ ಮತ್ತು ಇಂಟೆಗ್ರೇಷನ್ ಗೆ ಅವಶ್ಯಕ ಬೆಂಬಲವನ್ನು ನೀಡುತ್ತದೆ.
 3. ಪ್ರತೀ ಜಿಲ್ಲೆಗೆ ಒಂದರಂತೆ ಜಿಲ್ಲಾ ಯೋಜನಾ ನಿರ್ವಾಹಕರನ್ನು (ಡಿ.ಪಿ.ಎಂ) ಒದಗಿಸಲು ಮಾನವ ಸಂಪನ್ಮೂಲ ಏಜೆನ್ಸಿಯನ್ನು ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.


ಯೋಜನೆಯ ಒಟ್ಟಾರೆ ಸ್ಥಿತಿ-ಗತಿ :    ಅನುಷ್ಟಾನದಲ್ಲಿದೆ.ಸಂಪರ್ಕ:

ನಿರ್ದೇಶಕರು,

ಇಡಿಸಿಎಸ್ ನಿರ್ದೇಶನಾಲಯ,

ನಂ.13, ಸಿ ಆರ್ ಎನ್ ಚೇಂಬರ್ಸ್, 2ನೇ ಮಹಡಿ,

ಕಸ್ತೂರ್ಬಾ ರಸ್ತೆ, ಧನಲಕ್ಷ್ಮೀ ಬ್ಯಾಂಕ್ ಮೇಲೆ,

 ಬೆಂಗಳೂರು-560001

ದೂರವಾಣಿ: +91 80 2223 0281

ಇ-ಮೇಲ್: dir-edcs@karnataka.gov.in

ಅಂತರಜಾಲ ತಾಣ: www.karnatakaone.gov.in

 

ಯೋಜನಾ ನಿರ್ದೇಶಕರು, 

ಇಡಿಸಿಎಸ್ ನಿರ್ದೇಶನಾಲಯ,

ನಂ.13, ಸಿ ಆರ್ ಎನ್ ಚೇಂಬರ್ಸ್, 2ನೇ ಮಹಡಿ,

ಕಸ್ತೂರ್ಬಾ ರಸ್ತೆ, ಧನಲಕ್ಷ್ಮೀ ಬ್ಯಾಂಕ್ ಮೇಲೆ,

 ಬೆಂಗಳೂರು-560001

ದೂರವಾಣಿ: +91 80 2223 0281/  080-22279954

ಇ-ಮೇಲ್: sevasindhu@karnataka.gov.in

ಅಂತರ್ಜಾಲ ತಾಣ: https://sevasindhu.karnataka.gov.in


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್), ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top