ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್)

ಕರ್ನಾಟಕ ಸರ್ಕಾರ

GOK > EDCS > Kannada > KarnatakaOne
New Icon ಸಿವಿಲ್ ಇಂಜಿನಿಯರ್ ಗಳ ಸೇವೆಯನ್ನು ಪಡೆಯಲು ಅಧಿಸೂಚನೆ
Last modified at 16/02/2021 11:34 by System Account

ಕರ್ನಾಟಕಒನ್ ಯೋಜನೆಯ ಪರಿಚಯ

ಬೆಂಗಳೂರು ಒನ್ ಯೋಜನೆಯ ಯಶಸ್ಸನ್ನು ಮನಗಂಡು ಬೆಂಗಳೂರು ಒನ್ ಮಾದರಿಯಲ್ಲಿಯೇ ರಾಜ್ಯದ ಉಳಿದ ನಗರಗಳಲ್ಲಿ ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಕರ್ನಾಟಕ ಒನ್ ಯೋಜನೆಯನ್ನು ಕೈಗೆತ್ತಿಗೊಂಡಿತು. ಕರ್ನಾಟಕಒನ್ ಯೋಜನೆಯ ಭಾಗವಾಗಿ ಹುಬ್ಬಳ್ಳಿ-ಧಾರವಾಡಒನ್ ಯೋಜನೆಯನ್ನು 04.02.2008ರಂದು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು.


ತದನಂತರ 2010ರಲ್ಲಿ 8 ನಗರಗಳಲ್ಲಿ ಕರ್ನಾಟಕ ಒನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಪ್ರಸ್ತುತ 9 ನಗರಗಳಲ್ಲಿ (ಬೆಳಗಾವಿ, ಬಳ್ಳಾರಿ, ದಾವಣಗೆರೆ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು) ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಒನ್ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸಲಾಗಿದೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಕೇಂದ್ರಗಳ ಜೊತೆಗೆ, ಕರ್ನಾಟಕ ಒನ್ ವೆಬ್ಸೈಟ್ ಮೂಲಕ ಕೂಡ ಆನ್‍ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ.

ಈ ಕೆಳಕಂಡ ನಗರಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

1.  ಬಳ್ಳಾರಿ

2.  ಬೆಳಾಗಾವಿ

3.  ದಾವಣಗೆರೆ

4.  ಕಲಬುರ್ಗಿ

5.  ಹುಬ್ಬಳ್ಳಿ-ಧಾರವಾಡ

6.  ಮಂಗಳೂರು

7.  ಮೈಸೂರು

8.  ಶಿವಮೊಗ್ಗ

9.  ತುಮಕೂರು


ಕರ್ನಾಟಕಒನ್ ಯೋಜನೆಯ ವೈಶಿಷ್ಟತೆಗಳು:

 

  1. ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ನೀಡಲಾಗುತ್ತಿದೆ. 

  2. ಸೇವೆಗಳನ್ನು ಎರಡು ಶಿಪ್ಟ್‍ನಲ್ಲಿ ಒದಗಿಸಲಾಗುತ್ತಿದ್ದು (ಮೊದಲನೇಯ ಶಿಪ್ಟ್‍ನಲ್ಲಿ ಬೆಳಿಗ್ಗೆ 08 ರಿಂದ ಮಧ್ಯಾಹ್ನ 1.30 ರವರೆಗೆ  ಹಾಗೂ ಎರಡನೇಯ ಶಿಪ್ಟ್‍ನಲ್ಲಿ ಮಧ್ಯಾಹ್ನ 2.00 ರಿಂದ ಸಂಜೆ 07.00 ರವರೆಗೆ) ವರ್ಷದ ಎಲ್ಲಾ ದಿನಗಳು ಕಾರ್ಯನಿರ್ವಹಿಸುತ್ತದೆ (ಸ್ವತಂತ್ರ ದಿನಾಚರಣಿ, ಗಣರಾಜ್ಯೋತ್ಸವ   ಮತ್ತು  ಚುನಾವಣೆ ಮತ ಚಲಾಯಿಸುವ ದಿನ ಹೊರತುಪಡಿಸಿ).

ಕರ್ನಾಟಕ ಒನ್ ವ್ಯವಹಾರದ ಬಗ್ಗೆ ಮಾಹಿತಿ:  

1. ಪ್ರಸ್ತುತ ಕರ್ನಾಟಕ ರಾಜ್ಯದ 9 ನಗರಗಳಲ್ಲಿ ಒಟ್ಟು 39 ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನಾಗರಿಕರಿಗೆ  54 ಸೇವೆಗಳನ್ನು ನೀಡಲಾಗುತ್ತಿದೆ. 54 ಸೇವೆಗಳಲ್ಲಿ 46 ಸೇವೆಗಳು ಸರ್ಕಾರಿ ಇಲಾಖೆಗಳಾಗಿದ್ದು, 8 ಸೇವೆಗಳು ಖಾಸಗಿ ಕಂಪನಿಗಳ ಸೇವೆಗಳಾಗಿರುತ್ತವೆ. ಸೇವೆಗಳ ವಿವರವಾದ ಪಟ್ಟಿಯನ್ನುಲಭ್ಯವಿರುವ ಸೇವೆಗಳುಎಂಬ ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ.

     2. ಕರ್ನಾಟಕ ಒನ್ ಯೋಜನೆಗೆ 2012-13ನೇ ಸಾಲಿನ ಸಿಎಸ್-ನಿಹಿಲಂಟ್ ರವರಿಂದ ಅವಾರ್ಡ ಆಫ್ ರಿಕಗ್ನಿಷನ್  ಪ್ರಶಸ್ತಿ ನೀಡಲಾಗಿದೆ.

ಭವಿಷ್ಯದ ಯೋಜನೆಗಳು:

ಕರ್ನಾಟಕ ಸರ್ಕಾರವು ಕರ್ನಾಟಕ ಒನ್ ಯೋಜನೆಯನ್ನು ಹಂತ ಹಂತವಾಗಿ 42 ಹೊಸ ನಗರಗಳಲ್ಲಿ ಅನುಷ್ಠಾನಗೊಳಿಸಲು ಯೋಜನೆ ಹಮ್ಮಿಕೊಂಡಿದೆ. ಇದರೊಂದಿಗೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸಭೆಗಳಲ್ಲಿ ಕರ್ನಾಟಕ ಒನ್ ಯೋಜನೆಯ ವ್ಯಾಪ್ತಿಗೆ ತರುವ ಉದ್ದೇಶವಿರುತ್ತದೆ. ಇದಲ್ಲದೆ ಮುಂಬರುವ ದಿನಗಳಲ್ಲಿ ಹೊಸ ಸೇವೆಗಳನ್ನು ಸೇರಿಸಲು ಉದ್ದೇಶಿಸಲಾಗಿದೆ.​

ಕರ್ನಾಟಕ ಒನ್ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳು​​​


ಸರ್ಕಾರಿ ಸೇವೆಗಳು

ನಂ

ಇಲಾಖೆ

ನಂ

ಸೇವೆಗಳು

1

ವಿದ್ಯತ್ ಸರಬರಾಜು ಕಂಪನಿಗಳು

1

ವಿದ್ಯುತ್ ಬಿಲ್ಲು ಪಾವತಿ

 

 

2

ಹೆಚ್ಚುವರಿ ಭದ್ರತಾ ಠೇವಣಿ ಪಾವತಿ

2

ಕರ್ನಾಟಕ ನೀರು ಸರಬರಾಜು ಮಂಡಳಿ/ ಮಹಾನಗರ ಪಾಲಿಕೆ

3

ನೀರಿನ ಬಿಲ್ಲು ಪಾವತಿ

 

 

4

ಹೊಸ ನಳ ಜೋಡಣೆಗಾಗಿ ಶುಲ್ಕ ಪಾವತಿ (ಹುಬ್ಬಳ್ಳಿ-ಧಾರವಾಡ ದಲ್ಲಿ ಮಾತ್ರ)

 

 

5

ಜಲಮಂಡಳಿಯ ಇತರೆ ಸೇವೆಗಳಿಗೆ ಅರ್ಜಿ (ಹುಬ್ಬಳ್ಳಿ-ಧಾರವಾಡ ದಲ್ಲಿ ಮಾತ್ರ)

 

 

6

ನಳದ ಖಾತ ಬದಲಾವಣೆಗಾಗಿ ಅರ್ಜಿ (ಹುಬ್ಬಳ್ಳಿ-ಧಾರವಾಡ ದಲ್ಲಿ ಮಾತ್ರ)

3

ಮಹಾನಗರ ಪಾಲಿಕೆ

7

ಆಸ್ತಿ ತೆರಿಗೆ ಪಾವತಿ

 

 

8

ಒಳ ಚರಂಡಿಗಾಗಿ ತೆರಿಗೆ ಪಾವತಿ (ತುಮಕೂರಿನಲ್ಲಿ ಮಾತ್ರ)

 

 

9

ಸ್ವಯಂ ಆಸ್ತಿ ತೆರಿಗೆ ಪೂರ್ವ ಭರ್ತಿ ಮಾಡಿದ ಆರ್ಜಿಗಳ ಮುದ್ರಿಸುವುದು10

ಅಕ್ರಮ-ಸಕ್ರಮ ಯೋಜನೆಯ ಆರ್ಜಿಗಳ ಮಾರಟ (ತುಮಕೂರಿನಲ್ಲಿ ಮಾತ್ರ)

4

ಬಿ ಎಸ್ ಎನ್ ಎಲ್

11

ಲ್ಯಾಂಡ್ ಲೈನ್ ಬಿಲ್ಲು ಪಾವತಿ

5

ಸೆಲ್ಒನ್

12

ಮೊಬೈಲ್ ಬಿಲ್ಲು ಪಾವತಿ

6

ಪೋಲಿಸ್

13

ಪೋಲಿಸ್ ವೆರೀಪಿಕೇಷನ್/ಕ್ಲೀಯರೆನ್ಸ/ಪ್ರಮಾಣ ಪತ್ರಕಾಗಿ ಶುಲ್ಕ ಪಾವತಿ

 

 

14

ಧ್ವನಿವರ್ಧಕ ವ್ಯವಸ್ಥೆ ಅಳವಡಿಸಲು ಶುಲ್ಕ ಪಾವತಿ

7

ಪೋಲಿಸ್ ಇಲಾಖೆ

15

ವಾಹನಗಳ ವಿಚಾರಣ ವರದಿಗಾಗಿ ಶುಲ್ಕ ಪಾವತಿ

8

ಎನ್ ಡಬ್ಲು ಕೆ ಆರ್ ಟಿ ಸಿ

16

ತಿಂಗಳ ಪಾಸ್ ವಿತರಣೆ

9

ಕೆ. ಎಸ್. ಆರ್. ಟಿ. ಸಿ

17

ಬಸ್ ಟಿಕೇಟ್ ಬುಕ್ಕಿಂಗ್18

ಟಿಕೇಟ್ ರದ್ದುಗಳಿಸುವಿಕೆ

10

 ಪಿ.ಯು.ಸಿ

19

ಉತ್ತರ ಪತ್ರಿಕೆ ಫೋಟೋಕಾಪಿಗಾಗಿ ಅರ್ಜಿ

 

 

20

ಮರುಏಣಿಕೆಗಾಗಿ ಅರ್ಜಿ

 

 

21

ಮರುಮೌಲ್ಯ ಮಾಪನಕ್ಕಾಗಿ ಅರ್ಜಿ

 

 

22

ಪಿ.ಯು.ಸಿ  ಫಲಿತಾಂಶ

11

ಬೆಂಗಳೂರು ವಿಶ್ವವಿದ್ಯಾನಿಲಯ

23

ಕರೆಸ್ಪಾಂಡೆನ್ಸ್ ಕೋರ್ಸ್ ಗಳಿಗಾಗಿ ಅರ್ಜಿ ಶಲ್ಕ ಪಾವತಿ

 

 

24

ಕರೆಸ್ಪಾಂಡೆನ್ಸ್ ಕೋರ್ಸ್ ಗಳಿಗಾಗಿ ಅರ್ಜಿ ವಿತರಣೆ

12

ಪಾಸ್ ಪೋರ್ಟ್ಇಲಾಖೆ

25

ಪಾಸ್ ಪೋರ್ಟ್ಗಾಗಿ ಆನ್ ಲೈನ್  ಅರ್ಜಿ ಸಲಿಕೆ (ವಾಕ್ ಇನ್ ಅರ್ಜಿದಾರರಿಗೆ) ಮಾತ್ರ

 

 

26

ಪೋಲಿಸ್ ಕ್ಲೀಯರೆನ್ಸ ಪ್ರಮಾಣ ಪತ್ರಕ್ಕಾಗಿ ಆನ್ ಲೈನ್  ಅರ್ಜಿ ಸಲ್ಲಿಕೆ

13

-ಸಂಗ್ರಹಣೆ

27

ಮೂಡ ಮತ್ತು ಬಿಡಿಎ ಸೈಟುಗಳ ವಿದ್ಯುನ್ಮಾನ ಹರಾಜಿಗಾಗಿ ಶುಲ್ಕ ಪಾವತಿ

14

ಸಾರಿಗೆ ಇಲಾಖೆ

28

ಆರ್ ಸಿ ಎಕ್ಸಟ್ರಾಕ್ಟ ವಿತರಣೆ

 

 

29

ಡಿ ಎಲ್ ಎಕ್ಸಟ್ರಾಕ್ಟ ವಿತರಣೆ

15

ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ ರವರ ಕಛೇರಿ

30

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಅರ್ಜಿ

 

 

31

ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸುವಿಕೆಗೆಗಾಗಿ ಅರ್ಜಿ

 

 

32

ಮತದಾರರ ಪಟ್ಟಿಯಲ್ಲಿ ಮತದಾರರ ವಿವರಗಳ ಬದಲಾವಣೆಗಾಗಿ ಅರ್ಜಿ

 

 

33

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ಸ್ಥಳಾಂತರ ಮಾಡುವುದಕ್ಕಾಗಿ  ಅರ್ಜಿ

16

ಆಧರ್

34

-ಆಧಾರ್ ಮುದ್ರಿಸುವುದು

 

 

35

ಆಧಾರ್ ನೊಂದಣಿ

 

 

36

ಆಧಾರ್ನಲ್ಲಿ ಇರುವ ವಿವರಗಳ ಬದಲಾವಣೆಗಾಗಿ ಅರ್ಜಿ ಸಲ್ಲಿಕೆ

17

ವಿವಿಧ ಸರ್ಕಾರಿ ಇಲಾಖೆಗಳು

37

ಸರ್ಕಾರಿ ಇಲಾಖೆಗಳ ವಿವಿಧ ಅರ್ಜಿಗಳನ್ನು ಮುದ್ರಿಸುವುದು

18

ಆಹಾರ ಮತ್ತು ನಾಗರಿಕ ಸರಭರಾಜು ಇಲಾಖೆ

38

ಪಡಿತರ ಚೀಟಿಗಾಗಿ ಅರ್ಜಿ

 

 

39

ಪಡಿತರ ಚೀಟಿಯೊಂದಿಗೆ ಆಧಾರ್ ಮತ್ತು ಮತದಾರ ಚೀಟಿಯ ವಿವರಗಳನ್ನು ಜೋಡಿಸಲು ಅರ್ಜಿ

 

 

40

ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ವಿವರಗಳನ್ನು ಸೇರಿಸಲು ಅರ್ಜಿ41

ಪಡಿತರ ಆದ್ಯತೆ ಪಟ್ಟಿಯಿಂದ ಕೈ ಬಿಡಲು ನೋಂದಣಿ

19

ಬೂಡಾ

42

ಬಳ್ಳಾರಿ ನಗರಾಭಿವೃದಿ ಪ್ರಾಧಿಕಾರದ ವಿವಿಧ ಸೇವೆಗಳಿಗಾಗಿ ಅರ್ಜಿ ಶುಲ್ಕ ಪಾವತಿ

20

ಎಸ್ ಎಸ್ ಎಲ್ ಸಿ

43

ಉತ್ತರ ಪತ್ರಿಕೆ ಫೋಟೋಕಾಪಿಗಾಗಿ ಅರ್ಜಿ

 

 

44

ಮರುಏಣಿಕೆಗಾಗಿ ಅರ್ಜಿ

 

 

45

ಮರುಮೌಲ್ಯ ಮಾಪನಕ್ಕಾಗಿ ಅರ್ಜಿ

21

 ಇ ಇ ಎಸ್ ಎಲ್

46

ಹೊಸ ಬೆಳಕು ಯೋಜನೆಯಡಿ ಎಲ್ ಇ ಡಿ ಬಲ್ಬ್ ಗಳ ಮಾರಾಟ

 


ಖಾಸಗಿ ಸೇವೆಗಳು

ನಂ

ಇಲಾಖೆ

ನಂ

ಸೇವೆಗಳು

1

ಏರ್ಟೆಲ್

1

ಮೊಬೈಲ್ ಬಿಲ್ಲು ಪಾವತಿ

2

ಏರ್ಟೆಲ್ ಲ್ಯಾಂಡ್ ಲೈನ್

2

ಲ್ಯಾಂಡ್ ಲೈನ್ ಬಿಲ್ಲು ಪಾವತಿ

3

ವೊಡಾಫೋನ್

3

ಮೊಬೈಲ್ ಬಿಲ್ಲು ಪಾವತಿ

4

ಎಕ್ಸೈಡ್ ಲೈಫ್ ಇನ್ಸೂರೆನ್ಸ್

4

ಜೀವವಿಮಾ ಕಂತು ಪಾವತಿ

5

ನಮ್ತಸೆ ಮೀಡಿಯಾ

5

ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನೊಂದಣಿ

6

ಐಡಿಯಾ

6

ಮೊಬೈಲ್ ಬಿಲ್ಲು ಪಾವತಿ

7

ಎಮ್ಟಿಎಸ್

7

ಮೊಬೈಲ್ ಬಿಲ್ಲು ಪಾವತಿ

8

ರಿಲಯನ್ಸ್

8

ಮೊಬೈಲ್ ಬಿಲ್ಲು ಪಾವತಿ

ನಿರ್ದೇಶಕರು,

ಇಡಿಸಿಎಸ್ ನಿರ್ದೇಶನಾಲಯ,

ನಂ.13, ಸಿ ಆರ್ ಎನ್ ಚೇಂಬರ್ಸ್, 2ನೇ ಮಹಡಿ,

ಕಸ್ತೂರ್ಬಾ ರಸ್ತೆ, ಧನಲಕ್ಷ್ಮೀ ಬ್ಯಾಂಕ್ ಮೇಲೆ,

 ಬೆಂಗಳೂರು-560001

ದೂರವಾಣಿ: +91 80 2223 0281

ಇ-ಮೇಲ್: dir-edcs@karnataka.gov.in

ಅಂತರಜಾಲ ತಾಣ: www.karnatakaone.gov.in

 

ಯೋಜನಾ ವ್ಯವಸ್ಥಾಪಕರು

ಕರ್ನಾಟಕ ಒನ್ ಯೋಜನೆ,

ಇಡಿಸಿಎಸ್ ನಿರ್ದೇಶನಾಲಯ,

ನಂ.13, ಸಿ ಆರ್ ಎನ್ ಚೇಂಬರ್ಸ್, 2ನೇ ಮಹಡಿ,

ಕಸ್ತೂರ್ಬಾ ರಸ್ತೆ, ಧನಲಕ್ಷ್ಮೀ ಬ್ಯಾಂಕ್ ಮೇಲೆ,

 ಬೆಂಗಳೂರು-560001

ದೂರವಾಣಿ: 080-22261935/22264577

ಇ-ಮೇಲ್: pmk1@karnataka.gov.in

ಅಂತರಜಾಲ ತಾಣ: www.karnatakaone.gov.in

 

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್), ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top