ಇಡಿಸಿಎಸ್ ಬಗ್ಗೆ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಅಡಿಯಲ್ಲಿ ಸೃಜಿತಗೊಂಡಿರುವ ನಾಗರೀಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯವು ದಿನಾಂಕ 17-01-2007ರ ಸರ್ಕಾರದ ಆದೇಶ ಸಂ. ಸಿಆಸುಇ 32 ಇಜಿಎಂ 2006 ರನ್ವಯ ಸ್ಥಾಪಿತವಾಗಿ, ನಾಗರೀಕರಿಗೆ ವಿದ್ಯುನ್ಮಾನ ರೀತಿಯಲ್ಲಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪೋಷಿತ ಕೇಂದ್ರಗಳು, ಪೋರ್ಟಲ್ ಗಳು, ಇತ್ಯಾದಿಗಳ ಮೂಲಕ ಸೇವೆಗಳನ್ನು ನೀಡಿ ಇ-ಆಡಳಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿದೆ.
ಇಡಿಸಿಎಸ್ ನೇತೃತ್ವವನ್ನು ನಿರ್ದೇಶಕರು ವಹಿಸಿಕೊಂಡಿದ್ದು, ಈ ಮೇಲೆ ತಿಳಿಸಿದಂತೆ ಸೇವೆಗಳನ್ನು ಒದಗಿಸಲು ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ದೇಶನಾಲಯವು ಬದ್ಧವಾಗಿರುತ್ತದೆ.
ಪ್ರಸ್ತುತ, ಇಡಿಸಿಎಸ್ ನಿರ್ದೇಶನಾಲಯವು ಬೆಂಗಳೂರ್ ಒನ್ ಮತ್ತು ಕರ್ನಾಟಕ ಒನ್ ಯೋಜನೆಗಳನ್ನು ಚಾಲನೆಗೊಳಿಸಿದ್ದು ರಾಜ್ಯದಲ್ಲಿ ಇ-ಜಿಲ್ಲಾ ಯೋಜನೆಯೊಂದನ್ನು ಜಾರಿಗೊಳಿಸಲು ಕಾರ್ಯೋನ್ಮುಖವಾಗಿದೆ. ರಾಜ್ಯದಲ್ಲಿ
ಸಾಮಾನ್ಯ ಸೇವಾ ಕೇಂದ್ರಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಸೇವಾ ಕೇಂದ್ರ ಸಂಸ್ಥೆಯನ್ನು ಆಯ್ಕೆ ಮಾಡುವಲ್ಲಿ ನಿರ್ದೇಶನಾಲಯವು ಕಾರ್ಯೋನ್ಮುಖವಾಗಿದೆ.
ಈ ಮೇಲಿನ ಯೋಜನೆಗಳಲ್ಲದೆ, ವೆಬ್ ಪೋರ್ಟಲ್ ಯೋಜನೆಯನ್ನು ನಿರ್ವಹಿಸುವ ಕಾರ್ಯವನ್ನೂ ಅಂತೆಯೇ ರಾಜ್ಯ ಸೇವಾ ವಿತರಣಾ ರಹದಾರಿ (ಎಸ್ಎಸ್ ಡಿಜಿ – ಸ್ಟೇಟ್ ಸರ್ವೀಸ್ ಡೆಲಿವರಿ ಗೇಟ್ ವೇ) ಯೋಜನೆಯನ್ನು ಅನುಷ್ಠಾನಗೊಳಿಸುವ ಕಾರ್ಯವನ್ನೂ ಇಡಿಸಿಎಸ್ ನಿರ್ದೇಶನಾಲಯಕ್ಕೆ ವಹಿಸಲಾಗಿದೆ.