ಕಾರ್ಯಾಚರಣೆ
ಇ-ಆಡಳಿತ ಇಲಾಖೆಯು ಈ
ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ
ಮೊಬೈಲ್
ಆಡಳಿತ:-
ಈ ಯೋಜನೆಯ ಉದ್ಧೇಶ “ಯಾವುದೇ
ಸಮಯದಲ್ಲಿ ಯಾವುದೇ ಸ್ಥಳದಲ್ಲಿ ಮತ್ತು
ಹೇಗಾದರೂ” ಸರ್ಕಾರದ ಸೇವೆಗಳನ್ನು ಜನತೆಗೆ
ದೊರಕಿಸುವುದಾಗಿರುತ್ತದೆ. ಈ
ನಿಟ್ಟಿನಲ್ಲಿ ಮೊಬೈಲ್ ಉಪಕರಣ ಮುಖಾಂತರ
ಸೇವೆಗಳನ್ನು ಒದಗಿಸಲು ರೂಪಿಸಿದ್ದು, 3,000 ಕ್ಕೂ
ಹೆಚ್ಚಿನ ಸೇವೆಗಳು ಲಭ್ಯವಿದೆ.
ಬೆಂಗಳೂರು-ಒನ್:-
ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ನೀಡಬೇಕೆಂಬ
ಉದ್ಧೇಶದಿಂದ ಈ ಯೋಜನೆಯನ್ನು 2005 ರಲ್ಲಿ
ಪ್ರಾರಂಭಿಸಲಾಗಿದೆ. ಬಿಲ್ಲುಗಳ
ಪಾವತಿ, ಮಹಾನಗರ ಪಾಲಿಕೆಗಳ ತೆರಿಗೆ
ಪಾವತಿ, ಪ್ರಯಾಣದ ಟೆಕೆಟ್ ಗಳು,
ಪಿ.ಯು.ಸಿ. ಪರೀಕ್ಷೆಯ
ಉತ್ತರ ಪತ್ರಿಕೆಗಳ ಮರು ಎಣಿಕೆ ಇತ್ಯಾದಿಗಳು.
ಕರ್ನಾಟಕ-ಒನ್:-
ಬೆಂಗಳೂರುಒ-ಒನ್ ಕೇಂದ್ರಗಳ ಮಾದರಿಯಲ್ಲಿಯೇ
ಕರ್ನಾಟಕ-ಒನ್ ಕೇಂದ್ರಗಳನ್ನು ರಾಜ್ಯದ
9 ಮಹಾನಗರಗಳಾದ ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾಂ,
ಬಳ್ಳಾರಿ, ಮೈಸೂರು, ಮಂಗಳೂರು, ದಾವಣಗೆರೆ,
ಗುಲ್ಬರ್ಗಾ ಮತ್ತು ತುಮಕೂರು ನಗರಗಳಲ್ಲಿ
ಸ್ಥಾಪಿಸಲಾಗಿದೆ.
ಆಧಾರ್:-
ರಾಜ್ಯದ
ಸುಮಾರು 6 ಕೋಟಿ ನಿವಾಸಿಗಳಿಗೆ ಗುರುತಿನ
ಸಂಖ್ಯೆಯನ್ನು ನೀಡುವುದು ಈ ಯೋಜನೆಯ ಉದ್ಧೇಶವಾಗಿದೆ. ಈ
ಯೋಜನೆಯಿಂದಾಗಿ ನಾಗರೀಕ ಸೇವೆಗಳು ಬಹುಸಮರ್ಪಕವಾಗಿ
ಯಾರನ್ನು ತಲುಪಬೇಕಾಗಿದೆಯೋ ಅವರಿಗೆ ನೇರವಾಗಿ ತಲುಪಿಸುವ
ಕೆಲಸ ಅತ್ಯಂತ ಪರಿಣಾಮಕಾರಿ ಮತ್ತು
ವ್ಯವಸ್ಥಿತವಾಗಿ ಜರುಗಲಿದೆ.
ಕರ್ನಾಟಕ
ರೆಸಿಡೆಂಟ್ ಡೆಟಾ ಹಬ್ (KRDH):-
ಕರ್ನಾಟಕ
ರೆಸಿಡೆಂಟ್ ಡೆಟಾ ಹಬ್ (ಕೆ.ಆರ್.ಡಿ.ಹೆಚ್)
ಸರ್ಕಾರದ ಸೇವೆಗಳನ್ನು ಪಡೆಯುತ್ತಿರುವ ರಾಜ್ಯದ ಪ್ರತಿಯೊಬ್ಬ ನಾಗರೀಕನ
ಮಾಹಿತಿಯನ್ನೊಳಗೊಂಡ ಕಣಜವಾಗಲಿದೆ. ಇಲಾಖೆಗಳ
ಡೆಟಾ ಬೇಸ್ ನಲ್ಲಿ ಫಲಾನುಭವಿಗಳನ್ನು
ಗುರುತಿಸುವ ಅಂಶವನ್ನು ಅವರ ಯುಐಡಿ ಸಂಖ್ಯೆಯೊಡನೆ
ಕೆ.ಆರ್.ಡಿ.ಹೆಚ್
ನ ಡೆಟಾಬೇಸ್ ನಲ್ಲಿ
ಅಳವಡಿಸಲಾಗುವುದು.
ಇ-ಸಂಗ್ರಹಣೆ:-
ಇ-ಸಂಗ್ರಹಣೆ ಯೋಜನೆಯು ಸರ್ಕಾರದ ಎಲ್ಲಾ
ಸಂಗ್ರಹಣಾ ಚಟುವಟಿಕೆಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು
ನಿಖರತೆಯನ್ನು ಹೆಚ್ಚಿಸುವ ಉದ್ಧೇಶವನ್ನು ಹೊಂದಿದೆ. ಸರಕುಗಳನ್ನು
ಖರೀದಿಸುವ, ಸಂಗ್ರಹಿಸುವ ಮತ್ತು ಕಾಮಗಾರಿಗಳನ್ನು ಕೈಗೊಳ್ಳುವ
ರೂ.5.00 (ಐದು) ಲಕ್ಷಗಳು ಮೀರಿದ
ಮೌಲ್ಯದ ಪ್ರತಿಯೊಂದು ಸಂಗ್ರಹಣೆ ಟೆಂಡರ್ ಅನ್ನು ಇ-ಸಂಗ್ರಹಣಾ ವೇದಿಕೆಯ ಮೂಲಕವೇ ಕೈಗೊಳ್ಳತಕ್ಕದೆಂದು
ಸರ್ಕಾರದ ಎಲ್ಲಾ ಇಲಾಖೆ / ಸಂಸ್ಥೆಗಳಿಗೆ
ಸಂಬಂಧಿಸಿದಂತೆ ಕಡ್ಡಾಯಗೊಳಿಸಲಾಗಿದೆ.
ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿ (HRMS):-
ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿಯು ಸರ್ಕಾರಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ ಕಾರ್ಯಾಚರಣೆಗಳಾದ
ರಜೆ, ವರ್ಗಾವಣೆ, ವೇತನವಹಿ, ಆಡಳಿತ ಮತ್ತು ಸೇವಾ
ವಿಷಯಗಳನ್ನು ಸ್ವಯಂಚಾಲಿತವಾಗಿಸಿದೆ. ವಿಶ್ವಬ್ಯಾಂಕಿನ
ನೆರವಿನೊಂದಿಗೆ 2006 ರಲ್ಲಿ ಪ್ರಾರಂಭವಾದ ಈ
ಯೋಜನೆ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ.
ಕರ್ನಾಟಕ
ರಾಜ್ಯ ವಿಸ್ತೃತ ಜಾಲ ಯೋಜನೆ
(ಕೆಸ್ವಾನ್) (KSWAN)
:-
ಕರ್ನಾಟಕ
ರಾಜ್ಯ ವಿಸ್ತೃತ ಜಾಲ ಯೋಜನೆಯು
ಮಾಹಿತಿ ಬೇಡಿಕೆ ಮತ್ತು ಅದಕ್ಕೆ
ಅನುವಾಗುವ ಸೇವೆಗಳನ್ನು ಪಡೆಯಲು ಅನುಕೂಲವಾಗಿವಂತೆ ಒಂದು
ನಿಖರವಾದ ಮತ್ತು ರಕ್ಷಣಾಯುತವಾದ ಜಾಲದ
ವ್ಯವಸ್ಥೆಯನ್ನು ಕಲ್ಪಿಸಿದೆ. ಕರ್ನಾಟಕ
ರಾಜ್ಯ ವಿಸ್ತೃತ ಜಾಲ ಯೋಜನೆಯು
ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕುಮಟ್ಟದ
3 ಹಂತದಲ್ಲಿ ಜೋಡಣೆಯಾಗಿದೆ. ಈ
ಯೋಜನೆಯ ಪ್ರಾಥಮಿಕ ಉದ್ಧೇಶವು “ದತ್ತಾಂಶ”
“ಧ್ವನಿ” ಮತ್ತು “ದೃಷ್ಯ” ಸೇವೆಗಳಿಗೆ
ಆಧಾರ ಸ್ತಂಭವಾಗಿರುವುದೇ ಆಗಿರುತ್ತದೆ.
ರಾಜ್ಯ ದತ್ತ ಕೇಂದ್ರ (SDC):-
ರಾಜ್ಯ ದತ್ತ ಕೇಂದ್ರ ಯೋಜನೆಯು ಇ-ಆಡಳಿತ
ಉಪಕ್ರಮಿಕೆಗಳ ಬಹುಮುಖ್ಯ ಬೆಂಬಲ ಶಕ್ತಿಯಾಗಿದ್ದು, ಸಾರ್ವಜನಿಕರಿಗೆ
ಸೇವಾ ವಿತರಣೆಯಲ್ಲಿ ಹೆಚ್ಚಿನ ನಿಖರತೆ, ಲಭ್ಯತೆ
ಮತ್ತು ವಿತರಣಾರ್ಹತೆಯನ್ನು ವೃದ್ಧಿಸುವುದರಲ್ಲಿ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತದೆ. ರಾಜ್ಯದ
ವಿವಿಧ ಇಲಾಖೆಗಳಿಗೆ ತಮ್ಮ ಸೇವೆಗಳು / ತಂತ್ರಾಂಶಗಳನ್ನು
ಹೋಸ್ಟ್ ಮಾಡಲು ರಾಜ್ಯ ದತ್ತ
ಕೇಂದ್ರವು ಒಂದು ಸಾಮಾನ್ಯ ಮೂಲಭೂತ
ಸೌಕರ್ಯವಾಗಿದೆ. ರಾಜ್ಯದಲ್ಲಿ
2 ದತ್ತ ಕೇಂದ್ರಗಳಿದ್ದು, ಮೊದಲನೆ ದತ್ತ ಕೇಂದ್ರವು
2005 ರಲ್ಲಿ ಪ್ರಾರಂಭವಾಗಿದ್ದು, 2ನೇ ದತ್ತ ಕೇಂದ್ರವು
2010 ರಿಂದ ಕಾರ್ಯಾಚರಣೆಯಲ್ಲಿದೆ.
ಕರ್ನಾಟಕ
ಸರ್ಕಾರ ಸಚಿವಾಲಯದ ಸ್ಥಳೀಯ ನಿಸ್ತಂತು ಚಾಲನೆ
(ಸೆಕ್ ಲ್ಯಾನ್):-
ಸೆಕ್ ಲ್ಯಾನ್ ಯೋಜನೆಯು ವಿಧಾನ
ಸೌಧ, ವಿಕಾಸ ಸೌಧ ಮತ್ತು
ಬಹುಮಹಡಿ ಕಟ್ಟಡದ ಎಲ್ಲಾ ಆಡಳಿತಾತ್ಮಕ
ಇಲಾಖೆಗಳ ನಡುವೆ ಸಂಪರ್ಕ ಸಾಧಿಸಲು
ಅನುವು ಮಾಡುತ್ತದೆ. ಕರ್ನಾಟಕ
ಸಚಿವಾಲಯವು ವಿವಿಧ ಇ-ಆಡಳಿತ
ತಂತ್ರಾಂಶಗಳಾದ ಕಡತ
ನಿರ್ವಹಣಾ ವ್ಯವಸ್ಥೆ, ಪತ್ರ ನಿರ್ವಹಣಾ ವ್ಯವಸ್ಥೆ,
ಹಾಜರಿ ನಿರ್ವಹಣಾ ವ್ಯವಸ್ಥೆ, ಮತ್ತು ಅಂತರ್ಜಾಲ / ಇಲಾಖಾ
ಜಾಲ ಇವುಗಳನ್ನು ಬಳಸಲು ಸೆಕ್ ಲ್ಯಾನ್
ಅನ್ನು ಉಪಯೋಗಿಸುತ್ತದೆ.
ಸಾಮರ್ಥ್ಯ
ವರ್ಧನೆ (ಕೆಪಾಸಿಟಿ ಬಿಲ್ಡಿಂಗ್):-
ಸಾಮರ್ಥ್ಯ
ವರ್ಧನೆ ಯೋಜನೆಯ ಪ್ರಧಾನ ಉದ್ಧೇಶವು
ಸರ್ಕಾರದ ಆಂತರಿಕ ಸಂಪನ್ಮೂಲರ ಮೂಲ
ಗಣಕ ಕೌಶಲ್ಯ, ಇ-ಆಡಳಿತದ
ವಿಶಿಷ್ಟ ತಂತ್ರಾಂಶಗಳ ಬಳಕೆ ಮತ್ತು ಸಮಕಾಲೀನ
ಇ-ಆಡಳಿತದ ವಿಷಯಗಳ
ಬಗ್ಗೆ ಜಾಗೃತಿ ಹೆಚ್ಚಿವುಸುವುದೇ
ಆಗಿರುತ್ತದೆ. ಇಲಾಖೆಯು
ತರಬೇತಿ ಕಾರ್ಯಕ್ರಮ, ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳನ್ನು
ಹಮ್ಮಿಕೊಂಡು ಇ-ಆಡಳಿತ ಮತ್ತು
ಮಾಹಿತಿ ತಂತ್ರಜ್ಞಾನದ ಆಯಾಮಗಳ ಬಗ್ಗೆ ಅಧಿಕಾರಿಗಳ
ಮತ್ತು ಸಿಬ್ಬಂದಿಗಳ ಕೌಶಲ್ಯವನ್ನು ಉನ್ನತೀಕರಿಸುತ್ತಿದೆ.
ಇ ಜಿಲ್ಲೆ:-
“ಇ-ಜಿಲ್ಲಾ” ಯೋಜನೆಯು ರಾಷ್ಟ್ರೀಯ
ಇ-ಆಡಳಿತ ಯೋಜನೆಯಡಿಯ
ಮಿಷನ್ ಮೋಡ್ ಯೋಜನೆಯ ಅಂಗವಾಗಿದೆ. ಕೇಂದ್ರ
ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು
ಇದರ ಸಮನ್ವಯ ಇಲಾಖೆಯಾಗಿದ್ದು, ರಾಜ್ಯ
ಸರ್ಕಾರ ಅಥವಾ ಅದರಿಂದ ನಾಮನಿರ್ದೇಶಿತವಾದ
ಸಂಸ್ಥೆಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ. ಜಿಲ್ಲಾ
ಮತ್ತು ಉಪವಿಭಾಗ ಮಟ್ಟದಲ್ಲಿ ಯಾವುದೇ
MMP ಯೋಜನೆಯ ಭಾಗವಾಗಿರದ ಬೃಹತ್ ಪ್ರಮಾಣದ ನಾಗರೀಕ
ಸೇವೆಗಳನ್ನು ಈ ಯೋಜನೆಯು ಎಲೆಕ್ಟ್ರಾನಿಕ್
ಮಾಧ್ಯಮದ ಮುಖಾಂತರ ವಿತರಣೆ ಮಾಡುತ್ತದೆ.
ಸಾಮಾನ್ಯ
ಸೇವಾ ಕೇಂದ್ರಗಳು (CSC):-
ಸಾಮಾನ್ಯ
ಸೇವಾ ಕೇಂದ್ರಗಳು ಉತ್ತಮ ಗುಣಮಟ್ಟದ ಮತ್ತು
ದುಬಾರಿಯಲ್ಲದ ಇ-ಆಡಳಿತ ವ್ಯಾಪ್ತಿಯ ದೃಶ್ಯ
ಧ್ವನಿ ಮತ್ತು ದತ್ತಾಂಶ ಸೇವೆಗಳನ್ನು
ಒದಗಿಸುತ್ತವೆ. ಸಾಮಾನ್ಯ
ಸೇವಾ ಕೇಂದ್ರಗಳ ಹೆಚ್ಚುಗಾರಿಕೆಯೆಂದರೆ ಗ್ರಾಮೀಣ ಮಟ್ಟದಲ್ಲಿ ವೆಬ್
ಆಧಾರಿತ ಇ-ಆಡಳಿತ ಸೇವೆಗಳನ್ನು
ನೀಡುವುದೇ ಆಗಿರುತ್ತದೆ.
ಇ-ಆಡಳಿತ ಯೋಜನೆಗಳ ಅನುಮೋದನೆ:-
ಆಯಾಯ ವರ್ಷದಲ್ಲಿ ಕೈಗೊಳ್ಳು
ವ ಗಣಕೀಕರಣ ಯೋಜನೆಯನ್ನೊಳಗೊಂಡ
ಪ್ರತಿ ಇಲಾಖೆಯ ಇ-ಆಡಳಿತ
ವಾರ್ಷಿಕ ಕ್ರಿಯಾ ಯೋಜನೆಯನ್ನು ಅನುಮೋದಿಸುವ
ಅಧಿಕಾರವನ್ನು ಇ-ಆಡಳಿತ ಇಲಾಖೆಯು
ಹೊಂದಿರುತ್ತದೆ.
(ಅ) ರೂ.
1.00 (ಒಂದು) ಕೋಟಿವರೆಗೆ ಮತ್ತು ಅದಕ್ಕೆ ಸಮಾನ
ವೆಚ್ಚವಾಗುವ ಇ-ಆಡಳಿತ ಯೋಜನೆಗಳನ್ನು
ಅನುಮೋದಿಸುವ ಅಧಿಕಾರವನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ
ಮತ್ತು ಆಡಳಿತ ಸುಧಾರಣಾ ಇಲಾಖೆ
(ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ
ರಚಿಸಲಾದ ಸಮಿತಿಗೆ ನೀಡಲಾಗಿದೆ: ಮತ್ತು
(ಆ) ರೂ. 1.00 (ಒಂದು) ಕೋಟಿಗಿಂತ ಹೆಚ್ಚಿನ
ವೆಚ್ಚವಾಗುವ ಇ-ಆಡಳಿತ ಯೋಜನೆಗಳನ್ನು
ಅನುಮೋದಿಸುವ ಅಧಿಕಾರವನ್ನು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿರುವ
ಸಮಿತಿಗೆ ನೀಡಲಾಗಿದೆ. (ಮುಖ್ಯ
ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿನ ಸಮಿತಿ ಪರಿಶೀಲಿಸಿ ಒಪ್ಪಿಕೊಂಡ
ಇ-ಆಡಳಿತ ಯೋಜನೆಯ
ವೆಚ್ಚ ರೂ.5.00 (ಐದು) ಕೋಟಿಗಳು ಮೀರುವುದಾದಲ್ಲಿ,
ಸಂಬಂಧಿಸಿದ ಆಡಳಿತ ಇಲಾಖೆ, ಅದನ್ನು
ಸಚಿವ ಸಂಪುಟದ ಮುಂದೆ ಅನುಮೋದನೆಗಾಗಿ
ತರತಕ್ಕದ್ದು).