ಆಡಳಿತಾತ್ಮಕ ವ್ಯವಸ್ಥೆ


ಇಲಾಖೆಯು ಇ-ಆಡಳಿತದ ಮೂಲಭೂತ ಸೌಕರ್ಯಗಳ ಯೋಜನೆ ಮತ್ತು ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಲು ವಿಶೇಷವಾದ 2 ಸಂಸ್ಥೆಗಳನ್ನು ಹೊಂದಿದೆ. ಎಲ್ಲಾ ಇಲಾಖೆಗಳು ಆಯಾಯ ಇಲಾಖೆಯ ಇ-ಆಡಳಿತದ ಉಪಕ್ರಮಿಕೆಗಳನ್ನು ಯೋಜಿಸಿ ಅನುಷ್ಠಾನಗೊಳಿಸಲು ಈ ಸಂಸ್ಥೆಗಳನ್ನು ಬಳಸಿಕೊಳ್ಳಬಹುದಿದೆ.

egovernance-project ಡೌನ್ಲೋಡ್:ಇ-ಆಡಳಿತ ಇಲಾಖೆ ಆಡಳಿತಾತ್ಮಕ ವ್ಯವಸ್ಥೆ


​ಇ-ಆಡಳಿತ ಕೇಂದ್ರ

ಇ-ಆಡಳಿತ ಕೇಂದ್ರವು 2006 ರಲ್ಲಿ ಸಂಘಗಳ ನೋಂದಣಿ ಅಧಿನಿಯಮದಡಿ ನೋಂದಾಯಿಸಲಾದ ಸಂಸ್ಥೆಯಾಗಿದೆ. ಈ ಸಂಸ್ಥೆಯ ಆದ್ಯಾದೇಶವು ಮೂಲಭೂತ ಸೌಕರ್ಯಗಳಾದ ದತ್ತ ಕೇಂದ್ರ, ಜಾಲ, ಮೂಲ ತಂತ್ರಾಂಶಗಳು, ಸಾಮರ್ಥ್ಯ ವರ್ಧನೆ ಚಟುವಟಿಕೆಗಳು ಇತ್ಯಾದಿಗಳ ಸೃಷ್ಟಿ ಮತ್ತು ನಿರ್ವಹಣೆ ಆಗಿರುತ್ತದೆ.

egovernance-project ಡೌನ್ಲೋಡ್ಇ-ಆಡಳಿತ ಕೇಂದ್ರ ಆಡಳಿತಾತ್ಮಕ ವ್ಯವಸ್ಥೆ


​ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್)

ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ವು ಒಂದು ಸರ್ಕಾರಿ ಇಲಾಖೆಯಾಗಿದ್ದು, ಇದರ ಆದ್ಯಾದೇಶವು ಸಾಮಾನ್ಯ ನಾಗರೀಕ ಸೇವಾ ವಿತರಣ ಕೇಂದ್ರಗಳಾದ ಬೆಂಗಳೂರು-ಒನ್, ಕರ್ನಾಟಕ –ಒನ್ ಇವುಗಳ ನಿರ್ವಹಣೆಯನ್ನು ಮಾಡುವುದಾಗಿರುತ್ತದೆ.