ನಮ್ಮ ಬಗ್ಗೆ
ಇ-ಆಡಳಿತ ಕೇಂದ್ರವು ಕರ್ನಾಟಕ ಸೊಸೈಟಿಗಳ
(ಸಂಘಗಳ) ನೋಂದಣಿ ಕಾಯ್ದೆ 1960 ರ ಅಡಿಯಲ್ಲಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ
ಇಲಾಖೆ (ಡಿಪಿಎಆರ್) ವತಿಯಿಂದ ಸೃಜಿತವಾದ ಒಂದು ಸೊಸೈಟಿ ಆಗಿದೆ. ಇದರ ಚಟುವಟಿಕೆಯ ವ್ಯಾಪ್ತಿಯು ಕರ್ನಾಟಕ
ರಾಜ್ಯವಾಗಿದೆ. ಈ ಸಂಸ್ಥೆಯು 2006 ರಲ್ಲಿ ಸ್ಥಾಪಿತವಾಯಿತು.
ಇ-ಆಡಳಿತ ಕೇಂದ್ರವು ಒಂದು ಸ್ವಾಯತ್ತ ಹಾಗೂ ಸ್ವತಂತ್ರ ಸಂಸ್ಥೆಯಾಗಿದ್ದು, ಕರ್ನಾಟಕದಲ್ಲಿ ವಿವಿಧ
ಇ-ಆಡಳಿತ ಉಪಕ್ರಮಿಕೆಗಳನ್ನು ಸಾಕಾರಗೊಳಿಸಿ, ಅನುಷ್ಠಾನಗೊಳಿಸಿ ಸಮನ್ವಯಿಸುತ್ತದೆ.
ಇ-ಆಡಳಿತ ಕೇಂದ್ರವು ನಿರ್ವಹಿಸುವ ಯೋಜನೆಗಳು
ಇ-ಆಡಳಿತ ಕೇಂದ್ರವು
(ಸಿ.ಇ.ಜಿ) ನಿರ್ವಹಿಸುವ ಯೋಜನೆಗಳನ್ನು ಒಟ್ಟಾರೆಯಾಗಿ ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ :
ಮೂಲ ಸೌಕರ್ಯ ಯೋಜನೆಗಳು
ರಾಜ್ಯ ದತ್ತಾಂಶ ಕೇಂದ್ರ (ಎಸ್.ಡಿ.ಸಿ),
ಕೆ-ಸ್ವಾನ್, ಸೆಕ್-ಲ್ಯಾನ್ - ಈ ಮೂಲ ಸೌಕರ್ಯಗಳನ್ನು ಒದಗಿಸಿದ್ದು ಇದರ ಮೂಲಕ ರಾಜ್ಯದ ಎಲ್ಲಾ ಇ-ಆಡಳಿತ
ಯೋಜನೆಗಳು ಕಾರ್ಯನಿರತವಾಗಿವೆ.
ಮೂಲ ಸಂಪನ್ಮೂಲ ಅನ್ವಯಿಕಗಳು
ಎಚ್.ಆರ್.ಎಂ.ಎಸ್.,
ಇ-ಸಂಗ್ರಹಣೆ, ಇತ್ಯಾದಿ ಸಂಪನ್ಮೂಲ ಅನ್ವಯಿಕಗಳನ್ನು ಇಲಾಖೆಗಳು, ಬಳಕೆದಾರರು ಮತ್ತು ನಾಗರೀಕರುಗಳು
ಬಳಸಬಹುದಿರುತ್ತದೆ.
ನಾಗರೀಕ ಸೇವೆಗಳು
ಇದು ರಾಜ್ಯದ ನಿವಾಸಿಗಳಿಗೆ
ಯು.ಐ.ಡಿ. (ಆಧಾರ್) ನೋಂದಣಿ ಕಾರ್ಯಕ್ರಮ.
ಕೆಪಾಸಿಟಿ ಬಿಲ್ಡಿಂಗ್
ಇ-ಆಡಳಿತ ಯೋಜನೆಗಳ
ನಿರ್ವಹಣೆಗೆ ಅವಶ್ಯಕವಾದ ನಿರ್ದಿಷ್ಟ ಸಾಮರ್ಥ್ಯಗಳು ಮತ್ತು ನಿಪುಣತೆಗಳನ್ನು ಲಭ್ಯಗೊಳಿಸಿ ಇಲಾಖೆಗಳಲ್ಲಿ
ಇ-ಆಡಳಿತ ಉಪಕ್ರಮಿಕೆಗಳನ್ನು ಯೋಜಿಸಲು ಮತ್ತು ಅನುಷ್ಠಾನಗೊಳಿಸಲು ಸಹಾಯ.