ಮುಖಪುಟ

Last modified at 24/02/2020 11:17 by System Account

​​​​​​​

ಕೆಪಾಸಿಟಿ ಬಿಲ್ಡಿಂಗ್ ( "ಜಿಒಐ"  ಮತ್ತು "ಜಿಒಕೆ")

ಸಾರ್ವಜನಿಕ ಸೇವೆಗಳನ್ನು ನೀಡುವಲ್ಲಿ ಪ್ರಗತಿ ಸಾಧಿಸಲು ರಾಜ್ಯ ಸರ್ಕಾರವು ರಾಷ್ಟ್ರಮಟ್ಟದ ಹಲವಾರು ಇ-ಆಡಳಿತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಷ್ಟ್ರದ ಭೂಪಟದಲ್ಲಿ ಮಂಚೂಣಿಯಲ್ಲಿದೆ.  ಈ ರೀತಿಯ ಕಾರ್ಯ ಮಾಡಲು ಸರ್ಕಾರದ ಆಂತರಿಕ ವ್ಯವಸ್ಥೆಯ ಇಲಾಖಾ ಮುಖ್ಯಸ್ಥರುದ್ವಿತೀಯ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಎಲ್ಲರ ಸಾಮರ್ಥ್ಯವನ್ನು ಬಲವರ್ಧನೆ ಮಾಡುವುದು ಅತ್ಯಂತ ಅವಶ್ಯಕ.  ವಿಶಿಷ್ಟವಾದ ಪರಿಣಿತಿ ಮತ್ತು ದಕ್ಷತೆಯನ್ನು ನಿರ್ಮಿಸುವುದು ಸರ್ಕಾರಕ್ಕೆ ಒಂದು ಪ್ರತಿಷ್ಠೆಯಾಗಿರುತ್ತದೆ.  ಆದ್ದರಿಂದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ –ಆಡಳಿತದ ವಿವಿಧ ಮಜಲುಗಳ ಮತ್ತು ಮಾಹಿತಿ ತಂತ್ರಜ್ಞಾನದ ಅರಿವು ಮತ್ತು ಕುಶಲತೆಯನ್ನು ಹೆಚ್ಚಿಸಲು ಹಲವಾರು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಆಯೋಜಿಸಿದೆ.

ಈ ನಿಟ್ಟಿನಲ್ಲಿ ಅರ್ಧದಿನ , ಒಂದು ದಿನ ಮತ್ತು ಮೂರು ದಿನಗಳ ಕಾರ್ಯಾಗಾರಗಳನ್ನು ಇ-ಆಡಳಿತ ಕೇಂದ್ರವು ವಿವಿಧ ಹಂತಗಳಲ್ಲಿ ಸಂಘಟಿಸುತ್ತಿದೆ.  ಇದನ್ನು ಮುಂದುವರೆಸುತ್ತಾ “ಸಿಡ್ಯಾಕ್” ಮತ್ತು “ಎನ್..ಎಸ್.ಜಿ” ಸಂಸ್ಥೆಗಳ ಸಹಯೋಗದೊಂದಿಗೆ “ಸ್ಟೆಪ್” (ವಿಶೇಷ ಇಆಡಳಿತ ಯೋಜನೆಗಳ ತರಬೇತಿತರಬೇತಿಗಳನ್ನು ನಡೆಸಲಾಗುತ್ತಿದೆ.  ರಾಜ್ಯ ಸರ್ಕಾರದ ವಿವಿಧ ವಲಯಗಳಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಇ-ಆಡಳಿತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಬೇಕಾಗುವ  ಕುಶಲತೆಗಳನ್ನು ರಾಜ್ಯ ಸರ್ಕಾರದ ಇಲಾಖೆಗಳ ವಿವಿಧ ಶ್ರೇಣಿಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒದಗಿಸುವ ಆಶಯವನ್ನು ಯೋಜನೆಯು ಹೊಂದಿದೆ.​


Content Owned and Maintained by: Capacity Building-CEG, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.